ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

June 28, 2008 - 6:46am — kalpana

ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.

ಪಲ್ಲವಿಯವರು ಹೇಳಿದ್ದು, ಮಹಿಳಾ ಲೇಖಕಿಯರು ಅಡುಗೆ ಮತ್ತು ಕುಟುಂಬದ ಬಗ್ಗೆ ಹೆಚ್ಚಾಗಿ ಬರೆದಿರುವುದರಿಂದ, ಇವು ತೆಳು ವಿಷಯಗಳಾದವು. ಅವರು ಇವುಗಳಿಗೆ ತಮ್ಮ ಲೇಖನ ಸಾಮರ್ಥ್ಯವನ್ನು ಸೀಮಿತಗೊಳಿಸದೆ, ರಾಜಕೀಯ ಇತ್ಯಾದಿಯ ಬಗ್ಗೆ ಬರೆದು, ಸಮಾಜವು ಮಹಿಳಾ ಲೇಖಕಿಯರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕೆಂದು.

ನನಗೆ ಹಲವು ಬಗೆಗಳಲ್ಲಿ ಇದು ತಪ್ಪು ಎನ್ನಿಸಿತು.
ಒಂದು, ಸಮಾಜದಲ್ಲಿ ಸಾಮಾನ್ಯ ಗೃಹಿಣಿಗೆ ಈ ನಡುವೆ ಬೆಲೆ ಬಹಳ ಕಡಿಮೆಯಾಗಿದೆ. ಅಡುಗೆ ಮಾಡಿಕೊಂಡು, ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿರುತ್ತಾಳೆಂದರೆ, ಅಯ್ಯೊ, ಅಷ್ಟೇನಾ? ಎಂದು ಹೆಂಗಸರೇ ಅವಳನ್ನು ಅಲ್ಲಗೆಳೆಯುತ್ತಾರೆ! ಒಂದು ಕುಟುಂಬವನ್ನು ಸರಿಯಾಗಿ ಪೋಷಿಸಬೇಕಾದರೆ ಒಬ್ಬ ಗೃಹಿಣಿ ಪಡುವ ಶ್ರಮವನ್ನು ದುಡ್ಡಿನಲ್ಲಿ ಅಳೆಯಲು ಸಾಧ್ಯವಿಲ್ಲ, ಅವಳಿಗೆ ದುಡ್ಡೂ ಸಿಗುವುದಿಲ್ಲ! ಇಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆದ ಯಾರ್ಯಾರಿದ್ದೀರೋ ಒಂದು ಕ್ಷಣ ನಿಮ್ಮ ಚಿಕ್ಕಂದಿನಲ್ಲಿ ತಾಯಿ ಮನೆಯಲ್ಲಿ ಇಲ್ಲದಿದ್ದರೆ ಹೇಗಿರುತ್ತಿತ್ತೆಂದು ನೆನೆಸಿಕೊಳ್ಳಿ. ಆಗ ಮನೆಯಲ್ಲಿರುವ ತಾಯಿಯ ಮಹಿಮೆ ಅರ್ಥವಾಗುತ್ತೆ. ಹೀಗಿರುವಾಗ, ಗೃಹಿಣಿಯ ಹಿರಿಮೆಯನ್ನು ಎತ್ತಿ ಹಿಡಿಯುವುದನ್ನು ಬಿಟ್ಟು, ಅಡುಗೆ, ಕುಟುಂಬದ ಬಗ್ಗೆ ಬರೆಯುವುದೂ ಸಹ ಕೀಳೆಂದರೆ ಹೇಗೆ?

ಎರಡು, ಮಹಿಳೆಗ್ಯಾಕೆ ತಾನು ಗಂಡಸರಿಗೆ ಸಮ ಎಂದು ತೋರಿಸುವ ಉತ್ಕಟ ಆಸೆ? ಪುರುಷರು ರಾಜಕೀಯ ಇತ್ಯಾದಿಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಾರೆ. ಹಾಗಂತ, ಅವರು ಅವು ತೆಳು ವಿಷಯಗಳು, ನಾವು ಅಡುಗೆಯ ಬಗ್ಗೆ ಬರೆಯಬೇಕು. ಹೆಂಗಸರಿಗೆ ಸಮ ಆಗಬೇಕು. ಇಲ್ಲದಿದ್ದರೆ, ನಾವು ಸಮಾಜದಲ್ಲಿ ಮುಖ ತೋರಿಸಲು ಲಾಯಕ್ಕಿಲ್ಲ ಎಂದೇನು ಎಣಿಸುವುದಿಲ್ಲ Smiling ಬದಲಿಗೆ, ಹೆಂಗಸರಿಗೂ ಅಡುಗೆ, ಸಂಸಾರ ವಿಷಯಗಳು ತೂಕದ್ದಲ್ಲ ಎನ್ನುವ ಭಾವನೆ ಬರಿಸುತ್ತಾರೆ! ಹೆಂಗಸರು, ಸಮಾಜದ ದೃಷ್ಟಿಕೋನದಲ್ಲಿರುವ ಡೊಂಕು ತಿದ್ದದೆ, ತಮ್ಮನ್ನು ತಾವು ಬದಲಿಸಿಕೊಳ್ಳಲು ಹೋಗುತ್ತಾರೆ. ಇದು ನೋಡಿ, ವಿಪರ್ಯಾಸ.

ಮೂರು, ಎರಡನೆಯ ಪಾಯಿಂಟನ್ನೆ ವಿಸ್ತರಿಸುತ್ತ, ಮಹಿಳೆ ತಾನು ಗಂಡಸಾಗಬೇಕೆಂದು ಬಯಸದೆ, ತನ್ನ ಹೆಣ್ತನಕ್ಕೆ ಗೌರವ ಕೊಡುವುದನ್ನು ಸಮಾಜಕ್ಕೆ ಕಲಿಸಬೇಕು. ಅಂದರೆ, ಪ್ರಕೃತಿ ಅವಳನ್ನು ಯಾವುದಕ್ಕಾಗಿ ಸೃಷ್ಟಿಸಿದೆಯೋ ಅದನ್ನು ಸಮಾಜ ಗುರುತಿಸಿ ಅದಕ್ಕೆ ಬೆಲೆ ಕೊಡುವಂತೆ ಕೇಳಬೇಕು. ಅದು ಬಿಟ್ಟು, ತಾನೂ ಗಂಡಸು ಮಾಡುವುದೆಲ್ಲವನ್ನೂ ಮಾಡಿದರೆ ತನಗೆ ಬೆಲೆ ಸಿಗುತ್ತೆಂಬ ಭ್ರಮೆಯ ಹಿಂದೆ ಹೋಗಬಾರದು. ಇದು ಅಡುಗೂಲಜ್ಜಿಯ ಉಪದೇಶದ ಹಾಗೆ ಅನ್ನಿಸಿದರೂ, ಸ್ವಲ್ಪ ವಿಶ್ಲೇಷಿಸಿದರೆ, ನಿಜದ ಅರಿವಾಗುತ್ತೆ.

ಕೆಲವು disclaimersಉ:
೧. ಹೆಣ್ಣು ತನ್ನ ಆಸಕ್ತಿ ಬೆಳೆಸಿಕೊಳ್ಳಲಿಕ್ಕೋಸ್ಕರ ರಾಜಕೀಯ, ಇತ್ಯಾದಿ ಬಗ್ಗೆ ಬರೆಯುವುದು ತಪ್ಪೇನಿಲ್ಲ.
೨. ನಾನೂ ಮನೆಯಲ್ಲಿ ದುಡಿಯುವ ಮಹಿಳೆಯೆಂಬ ಕಾರಣಕ್ಕಾಗಿ ಗೃಹಿಣಿಯನ್ನು ಬೆಂಬಲಿಸುತ್ತಿಲ್ಲ. ನಾನು ಆಫೀಸಿನಲ್ಲೂ ದುಡಿಯುತ್ತೇನೆ. ಆದರೆ, ಮನೆಯಲ್ಲಿಯೇ ದುಡಿಯುವ ಒಬ್ಬ ತಾಯಿಯ ಹಕ್ಕಿಗಾಗಿ ಎಂದಿಗೂ ಹೋರಾಡುತ್ತೇನೆ. ಇದು ಎಲ್ಲೋ ಓದಿದ ನೆನಪು - I don't agree with you, but I will fight for your right to disagree with me Smiling
೩. ನಾನು ಚಿತ್ರದಲ್ಲಿರುವಂತೆ ಇಲ್ಲ! ಅಂದರೆ, ಅಜ್ಜಿಯ ಹಾಗೆ ಮಾತಾಡಿದರೂ ಅಜ್ಜಿಯಲ್ಲ. Smiling

ಈಗ, ನಿಮಗೆ ಏನನ್ನಿಸಿತೋ ಬರೆಯಲು ಕೊನೆಗೂ ಅವಕಾಶ ಕೊಡುತ್ತಿದ್ದೇನೆ. Smiling

‹ ಈ ಹೂವು ಯಾವುದು ಹೇಳಿ ನೋಡೋಣ? vtu ಮೊಬೈಲ್ ರಾಮಾಯಣ ›
  • ಅರಳಿ ಕಟ್ಟೆ
~.~
  • Login or register to post comments
  • 199 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 7, 2008 - 11:58am — Dattatri H M

ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

Dattatri H M's picture

ಸಮಾನತೆ ಅಂದರೆ ಗಂಡು ಹೆಣ್ಣು ಇಬ್ಬರೂ ಒಂದೇ ಕೆಲಸ ಮಾಡೋದಲ್ಲ. ಸಮಾನತೆ ಅಂದ್ರೆ ಇಬ್ಬರ ಕೆಲಸಗಳ ಬಗ್ಗೆ ಪರಸ್ಪರರಿಂದ ಸಮಾನ ಗೌರವ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 10:04pm — kalpana

ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

kalpana's picture

ಪ್ರತಿಕ್ರಿಯೆಗೆ ಧನ್ಯವಾದಗಳು ದತ್ತಾತ್ರಿ ಅವರೆ.

ಸುಮಾರು ಜನರು ಸಮಾನತೆಯನ್ನು ಗಂಡು,ಹೆಣ್ಣು ಒಂದೇ ಕೆಲಸ ಮಾಡುವುದೆಂದು ಅರ್ಥೈಸುತ್ತಾರೆ. ನೀವು ಹೇಳಿದ ಸಮಾನ ಗೌರವ ನಿಜಕ್ಕೂ ಇರಬೇಕು, ಆದರೆ, ಎಲ್ಲ ಕ್ಷೇತ್ರದಲ್ಲೂ ಇದ್ದ ಹಾಗಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
  • ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
  • ಸ್ತ್ರೀವಾದಿ ಏಕಾಗಬಾರದು?
  • ಅಡುಗೆಯ ಸಂಭ್ರಮ
  • ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • "ಶಂಖದಿಂದ ಬಂದರೆ ತೀರ್ಥ..."
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ನರಸಿಂಹ ಸಾಲಿಗ್ರಾಮ
  • ಮುಸುಱ್/ಮುಸುಱು
  • ಈಗಿನಂತೆ 4 ಸದಸ್ಯರು ಮತ್ತು 781 ಅತಿಥಿಗಳು ಆನ್ಲೈನ್ ಇರುವರು.
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
  • JAYADEV
    ಉ: ನೀರವತೆ!
    September 5, 2008 - 1:50pm
  • hpn
    ಉ: ನೀರವತೆ!
    September 5, 2008 - 1:31pm
  • JAYADEV
    ಉ: ನೀರವತೆ!
    September 5, 2008 - 1:25pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator