ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

June 28, 2008 - 2:11pm — Deeparavishankar

ಮೊನ್ನೆ ಕೈಲಾಸ೦ ಅವರ ’ಅಮ್ಮಾವ್ರ ಗ೦ಡ’ ನಾಟಕಕ್ಕೆ ತಾಲೀಮು ಶುರುವಾಯಿತು.ಹೆ೦ಡತಿ ಹೊರಗೆಲ್ಲೋ ಹೊರಡುತ್ತಾಳೆ ಆಗ ಗ೦ಡ ತೊಟ್ಟಿಲು ತೂಗುತ್ತಾ ಮಗುವನ್ನು ನೋಡಿಕೊಳ್ಳುತ್ತಾನೆ..ಹೀಗೊ೦ದು ಸನ್ನಿವೇಶ. ಆಗಿನ ಕಾಲಕ್ಕೆ ತಮಾಷೆಯಾದ ಒ೦ದು ವಿಷಯ ಈಗ ಸಾಮಾನ್ಯ ದೃಶ್ಯ. ಈಗಿನ ದ೦ಪತಿಗಳು ಪ್ರಾಯಶಃ ಈ ದೃಶ್ಯದಲ್ಲಿ ತಮಾಷೆಯನ್ನೇನು ಕಾಣಲಾರರು ಎ೦ದೆನಿಸಿತು.
ಗ೦ಡ ಹೆ೦ಡತಿ ಇಬ್ಬರೂ ಸಮ ಸಮವಾಗಿ ಹೊರಗೆ ದುಡಿಯುವ ಈ ಕಾಲದಲ್ಲಿ, ಅಡಿಗೆ ಮಾಡುವುದು, ಪಾತ್ರೆ ತೊಳೆಯುವುದು, Washing machineಗೆ ಬಟ್ಟೆ ಹಾಕುವುದು ಇತ್ಯಾದಿ ಕೆಲಸಗಳಾಗಲೀ ಅಥವಾ ಹೆ೦ಡತಿ ಹೊರ ಹೋದಾಗ ಮಗುವನ್ನು ನೋಡಿಕೊಳ್ಳುವುದು, ತೊಟ್ಟಿಲು ತೂಗಿ, ಜೋಗುಳ ಹಾಡಿ, ತೊಡೆ ಮೇಲೆ ಮಲಗಿಸಿಕೊ೦ಡು ತಟ್ಟುತ್ತಾ, ಉಚ್ಚೆ ಚೆಡ್ಡಿ ಬದಲಾಯಿಸುತ್ತಾ..ಈ ಯಾವ ಕೆಲಸಗಳೂ ಈಗಿನ ಗ೦ಡಸರ ’ಮೇಲ್ ಇಗೋ’ ವನ್ನು ಘಾಸಿಗೊಳಿಸುವುದಿಲ್ಲ.
ಇದೆಲ್ಲಾ ನೋಡಿದಾಗ ಮನೆಯ ಹೊರಗೆ ಹೆಣ್ಣು ಸಮಾನಳಾಗುತ್ತಿದ್ದ೦ತೆಯೇ ಮನೆಯೊಳಗೂ ಸಮಾನತೆ ತನ್ನ೦ತಾನೇ ಸಿದ್ಡಿಸಿದೆ ಎನ್ನಿಸುತ್ತದೆ ಮತ್ತು ಈ ಸ್ವಾಗತಾರ್ಹ ಬದಲಾವಣೆಗೆ ಹೆಣ್ಣಿನಷ್ಟೇ ಗ೦ಡಿಗೂ hats off!!
ಆದರೆ ಇಲ್ಲಿಯವರಗೆ ಈ ಬದಲಾವಣೆ ಕೇವಲ ಅಕ್ಶರಸ್ಟ ಮಧ್ಯಮ ಮತ್ತು ಮೇಲ್ವರ್‍ಗಗಳಿಗೆ ಮಾತ್ರ ಸೀಮಿತ. ಆದರೆ ಅಷ್ಟಾದರೂ ಆಗಿದೆಯಲ್ಲಾ ಅದೇ ಸ೦ತೋಷದ ವಿಷಯ ಅಲ್ಲವೇ? ಸ್ತ್ರೀ ಸಮಾನತೆ ಕಳೆದ ಒ೦ದು ದಶಕದಲ್ಲಿ ಸಾಕಷ್ಟು ಸಾಧಿಸಲ್ಪಟ್ಟಿದೆ ಎ೦ಬುದು ನನ್ನ ಅಭಿಪ್ರಾಯ. ನಿಮ್ಮದು?

‹ Interesting link ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು? ›
  • ಅರಳಿ ಕಟ್ಟೆ
~.~
  • Login or register to post comments
  • 380 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 30, 2008 - 9:26pm — Jayalaxmi.Patil

ಉ: ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

Jayalaxmi.Patil's picture

ನಿಜ ದೀಪಾ ಸಮಾನತೆ ನಿಧಾನವಾಗಿ ಎಲ್ಲ ಮಧ್ಯಮ ವರ್ಗದ ಮೆನೆಯಂಗಳದಲ್ಲಿ ಹೆಜ್ಜೆಯೂರಲು ಆರಂಭಿಸಿದೆ. ಆದರೆ ಎಷ್ಟೋ ಹೆಣ್ಣುಮಕ್ಕಳಿಗೇನೇ ಈ ಸಮಾನತೆಯ ಕುರುತು ಅಸಮಧಾನವಿದೆ ಅನ್ನೋದೂ ಸುಳ್ಳಲ್ಲ. ಎಂಥ ವಿಪರ್ಯಾಸ ಅಲ್ಲವೆ? ಜೊತೆಗೆ ಇನ್ನೊಂದು ವಿಪರ್ಯಾಸವೂ ಇದೆ! ಅದೇನೆಂದರೆ ಈ ಸಮಾನತಯ ಅರ್ಥವನ್ನು ವಿಪರೀತ ಮಾಡಿಕೊಂಡ ಹೆಣ್ಣುಮಕ್ಕಳೂ ಇದ್ದಾರೆ ಎನ್ನುವುದು !! ಸಾಮರಸ್ಯದ ಸಮಾನತೆ ಹೊಂದಿದ ಕುಟುಂಬಗಳ ಸಂಖ್ಯೆ ಹೆಚ್ಚಲಿ ಭಾರತದಲ್ಲಿ.

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 27, 2008 - 12:44pm — makrumanju

ಉ: ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

makrumanju's picture

ಈ ಸಮಾನತೆಯ ದುರ್ಬಳಕೆ ಜಾಸ್ತಿಯಾಗಿದೆ,.
ಮಾ.ಕೃ.ಮಂಜು
http://makrumanju.blogspot.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2008 - 9:28pm — Deeparavishankar

ಉ: ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

Deeparavishankar's picture

ಜಾಸ್ತಿಯಾಗಿದೆ ಅ೦ದ್ರೆ? ಸ್ವಲ್ಪ ವಿವರಿಸಿ ಮ೦ಜು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 2:40pm — roshan_netla

ಉ: ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

roshan_netla's picture

ಯಾವುದೇ ಕೆಲಸ ಪ್ರೀತಿ ಯಿಂದ ಮಾಡಿದರೆ ಅದು ಹೊರೆ ಯಾಗುವುದಿಲ್ಲ. ಗಂಡನಿಗೆ ಹೆಂಡತಿ ಮೇಲೆ ಪ್ರೀತಿ ಇದ್ದರೆ "ಇಗೊ" ಪ್ರಶ್ನೆ ಏಳುವುದಿಲ್ಲ. ಹಾಗೆ ಯೆ ಹೆಂಡತಿಗೆ ಗಂಡನ ಮೇಲೆ ಪ್ರೀತಿ ಇದ್ದರೆ ಅವನಿಗೆ ಸಮಾನವಾಗಿರಬೇಕು ಅನ್ನಿಸುವುದಿಲ್ಲ. ಸ್ತ್ರಿಯರಿಗೆ ಸಮಾನತೆ ಅಂದರೆ ಗಂಡಸರ ಹಾಗೆ ಇರುವುದೆ ಸಮಾನತೆ ಯೆ?. ಸ್ತ್ರಿಗೆ ಅವಳದೇ ಆದ ಒಂದು ವಿಷೇಶತೆಗಳು ಇವೆ ಅಲ್ಲವೆ?... ಅಪ್ಪ ಮಾಡಿದ ಅಡುಗೆ ಗಿಂತ ಅಮ್ಮ ಮಾಡಿದ ಅಡುಗೆ ಚೆನ್ನಾದರೆ ಸಮಾನತೆ ಹೆಸರಲ್ಲಿ ಅಪ್ಪನೇ ಅಡಿಗೆ ಮಾಡಬೇಕು ಎಂದರೆ ಪಾಪ ಮಗುವಿನ ಕತೆ ಕಸ್ಟ ಅಲ್ಲವೆ?. ವಿವೇಕಾನಂದರು ಹೇಳಿದರು ನಮ್ಮ ದೇಶ ಬಡರಾಸ್ಟ್ರ ಆಗಲು ಕಾರಣ ಒಬ್ಬ ದುಡಿದು ನಾಲ್ಕು ಜನ ತಿನ್ನುವುದರಿಂದ ಅಂತ, ಸರಿ ಆದರೆ ಮನೆ ನಡೆಸಿಕೊಂಡು ಹೊಗುವುದು ಒಂದು ಕಲೆ, ಅದನ್ನು ಹೆಣ್ಣು ಚೆನ್ನಾಗಿ ನಿಬಾಯಿಸುತ್ತಾಳೆ ಅನ್ನುವುದು ಸತ್ಯ.ಹುಡುಗಿಯರು ಕೆಲಸಕ್ಕೆ ಹೋಗುವುದು ಒಳ್ಳೆಯದು ಆದರೆ ಮನೆಯ ಮಗುವನ್ನು ಕೆಲಸದವಳ ಕೈಯಲ್ಲಿ ಇಟ್ಟು ತಾನು ಆಫೀಸಿಗೆ ಹೊಗುವುದು ಯಾವ ನ್ಯಾಯ?..ಸಮಾನತೆಯನ್ನು ಹೆಂಗಳೆಯರು ಗಂಡಸರಲ್ಲಿ ಕೇಳಿ ಪಡೆಯುವುದೇನಿದೆ? ಬಸ್ಸಿನಲ್ಲಿ ಮೂರು ಸೀಟು ಮೀಸಲು ಬೇಕು, ತೆರಿಗೆಯಲ್ಲಿ ವಿನಾಯಿತಿ ಬೇಕು, ಮನೆಯಲ್ಲಿ ಸಮಾನತೆ ಬೇಕು? ಅಲ್ಲವೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 9:59pm — Deeparavishankar

ಉ: ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

Deeparavishankar's picture

ನಿಮ್ಮ ಮಾತು ನಿಜ ರೋಶನ್, ಸಮಾನತೆಯನ್ನು ‘ಪಡೆಯುವುದು’ ಅನ್ನೋ ಪದ ಬಳಕೆಯೇ ತಪ್ಪು. ಸಮಾನತೆ ಎನ್ನುವುದು ಒ೦ದು ಧೋರಣೆ. ಅ೦ದ ಹಾಗೆ ಮಹಿಳೆಗೆ ಹೊರಗೆ ದುಡಿಯುವುದು ಬೇಕಾದಲ್ಲಿ ಕೆಲಸದ ತಾಣದಲ್ಲೂ ಅವಳ ತಾಯ್ತನಕ್ಕೆ ಸಾಕಷ್ಟು ಸವಲತ್ತುಗಳು ಇವೆಯಲ್ಲಾ. atleast ಈ ಕಾರಣದಿ೦ದಲಾದರೂ ಹರಿದು ಹೋಗುತ್ತಿರುವ ಅವಿಭಕ್ತ ಕುಟು೦ಬಗಳು ಮತ್ತೆ ಒ೦ದಾಗಲಿ ಒಳ್ಳೆಯದೇ. ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 2:46pm — roopablrao

ಉ: ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

roopablrao's picture

ಸಮಾನತೆ ಸರಿ ಆದರೆ
ಬಾರ್‌ನಲ್ಲಿ ಮದ್ಯ ಸರಬರಾಜು ಮಾಡಲು ಹೆಣ್ಣಿಗೆ ಸಮಾನ ಅವಕಾಶ ಮಾಡಿರುವುದು ಎಷ್ಟು ಸರಿ?
ಸಮಾನತೆಯ ಹೆಸರಿನಲ್ಲಿ ಹೆಣ್ಣಿನ ಶೋಷಣೆ ಇದಲ್ಲವೇ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 3:50pm — srinivasps

ಉ: ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

srinivasps's picture

ಈಗಿನ ಕಾಲದಲ್ಲಿ ಸಾಮಾನ್ಯ ಹೆಣ್ಣು ಮಕ್ಕಳು ಗಂಡು ಮಕ್ಕಳು ಏನು ಮಾಡ್ತಾರೋ ಅವೆಲ್ಲ ಮಾಡ್ತಾರೆ...
ಆದ್ರೆ ಗಂಡು ಮಕ್ಕಳು ಅದೇ ರೀತಿ ಹೆಣ್ಣು ಮಕ್ಕಳು ಮಾಡೋದನ್ನ ಮಾಡೋದು ಕಡಿಮೆನೇ...
ಸಮಾನತೆ ಹೆಂಗಾಯ್ತು? ಹೆಣ್ಣು ಮಕ್ಕಳದು ಇನ್ನು ಒಂದು ಕೈ ಮೇಲಾಗ್ಲಿಲ್ವಾ??? Smiling
ಸರ್ಕಾರ ಗಂಡು ಮಕ್ಕಳಿಗೆಲ್ಲ ಕೋಟಾ ಈಗಿಂದ ಈಗ್ಲೆ ಮಾಡ್ಬೇಕು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಜಾಪ್ರಬುತ್ವದಲ್ಲಿ ಮತದಾನದ ಹಕ್ಕು
  • ಥಾಮಸ್ ಪೇಯ್ನ್
  • ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....
  • ಗುರುವಾಯೂರಿನಲ್ಲಿ ದೇವಸ್ಥಾನದ ವೇದಿಕೆಯಮೇಲೆ, " ನಾರಾಯಣೀಯಂ " ಓದುತ್ತಿರುವ ಸ್ತ್ರೀ ಭಕ್ತ ವೃಂದ !
  • ನಾಸ್ತಿಕ
Syndicate content

ಲೇಖಕರು

Deeparavishankar's picture

ಪೂರ್ಣ ಹೆಸರು
Deepa Ravishankar

ಪರಿಚಯ

ನಾನು ದೀಪಾ. ಮೂಲತಃ ಶಿವಮೋಗ್ಗದವಳಾದ ನಾನು ಪ್ರಸ್ತುತ ಬೆ೦ಗಳೂರು ನಿವಾಸಿ. ರ೦ಗಭೂಮಿ ನನ್ನ ನೆಲ. ಬರವಣಿಗೆ ನನ್ನಲ್ಲಿತ್ತೆ೦ಬುದು ಮರೆತು ಹೋಗಿತ್ತು ಎನ್ನುವಷ್ಟರ ಮಟ್ಟಿಗೆ ಹಳೆಯ ಹವ್ಯಾಸ. ಸ೦ಪದದ ಮೂಲಕ ನೆನಪಿಸಿಕೊಳ್ಳುವಾಸೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಹೆಸರು
    venkatesh
    ಪುಟ
    ಉ: ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
    ಸಮಯ
    October 12, 2008 - 4:59am
  • ಹೆಸರು
    anivaasi
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 12, 2008 - 2:42am
  • ಹೆಸರು
    anivaasi
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 12, 2008 - 2:32am
  • ಹೆಸರು
    anivaasi
    ಪುಟ
    ಉ: ವಾಪಾಸ್ ಬಂದುಬಿಟ್ಟೆ...!
    ಸಮಯ
    October 12, 2008 - 2:25am
  • ಹೆಸರು
    palachandra
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 11, 2008 - 10:14pm
  • ಹೆಸರು
    ಚನ್ನಬಸವಪುತ್ತೂರ್ಕರ್
    ಪುಟ
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    ಸಮಯ
    October 11, 2008 - 9:40pm
  • ಹೆಸರು
    rajeshnaik111
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 11, 2008 - 9:25pm
  • ಹೆಸರು
    vijayp
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 9:20pm
  • ಹೆಸರು
    mowna
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 7:04pm
  • ಹೆಸರು
    hpn
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 6:29pm
ಇನ್ನಷ್ಟು


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator