ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ವ್ಯಾಸಂಗ, ಪ್ರಯಾಣ ಮಾಹಿತಿ

ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

June 29, 2008 - 9:10pm — Sunil Jayaprakash

ಒಮ್ಮೊಮ್ಮೆ ಹೀಗೂ ಆಗುವುದು. ಏನಾದರೂ ಘಟನೆಗಳು ಆದಾಗ, ಏನನ್ನಾದರೂ ಓದಿದಾಗ, ಯಾವುದಾದರೂ ಸುದ್ಧಿಯನ್ನು ಕೇಳಿದಾಗ, ಏನಾದರೂ ನೋಟ ಕಂಡಾಗ, ನಮ್ಮ ಮನಸ್ಸು ಮುದುಡುತ್ತದೆ/ಉದ್ರೇಕಗೊಳ್ಳುತ್ತದೆ/ಕೆರಳುತ್ತದೆ. ನಾವು ನಮ್ಮ ಭಾವನೆಗಳನ್ನು ಮೀರಿ ಮೆಚೂರ್ಡ್ ಆಗ್ತಾ ಇದ್ದೀವಿ ಅಂತ ಅಂದ್ಕೊಳ್ತಾ ಇರುವಾಗಲೇ, ಭಾವನೆಗಳು ನಮ್ಮ ಮನಸ್ಸನ್ನು, ನಾವು ಮಾಡುವ ಕೆಲಸಗಳನ್ನು ತೆನ್ನ ತೆಕ್ಕೆಗೆ ತೆಗೆದುಕೊಳ್ತಾ ಇರತ್ತೆ. ಈ ರೀತಿ ಮನಸ್ಸು ಉದ್ರೋಕಗೊಂಡಾಗ, ಅತ್ವಾ ಮನಸ್ಸು ಕೆರಳಿದಾಗ ಅದನ್ನು ಹೇಗೆ ಹತೋಟಿಯಲ್ಲಿಟ್ಟುಕೊಳ್ಳಬೇಕು ? ಇಂತಹ ಸಂದರ್ಭದಲ್ಲಿ ನಾನು ಕೆಲವೊಮ್ಮೆ ಒಂದು ದೊಡ್ಡ ಲೋಟ ನೀರು ಕುಡಿದು ಸುಮ್ಮನಾಗಿಬಿಡ್ತೀನಿ. ನೀವು ಏನು ಮಾಡ್ತೀರ ? ದೇಹವನ್ನು ತಂಪಾಗಿ ನೋಡಿಕೊಳ್ಳುವಂತೆ, ಮನಸ್ಸನ್ನು ತಂಪಾಗಿರುವಂತೆ ಹೇಗೆ ರೂಪಿಸಿಕೊಳ್ಳುವುದು ?

ಕೊಸರು - ಇದನ್ನು ವ್ಯಾಸಂಗದ ಅಡಿಯಲ್ಲಿ ಹಾಕಿದ್ದೇನೆ. ತತ್ವಜ್ಞಾನ, ವಿಜ್ಞಾನ, ವೈದ್ಯಕೀಯ ಹೀಗೆ, ಯಾವ ಹಿನ್ನೆಲೆಯಿಂದ ಬೇಕಾದರೂ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ.

‹ ಡಂಕಣಕ - ಸಮಸ್ಯೆ ಬಿಡಿಸಿ ಬಹುಮಾನ ಗೆಲ್ಲಿರಿ
  • ವ್ಯಾಸಂಗ, ಪ್ರಯಾಣ ಮಾಹಿತಿ
~.~
  • Login or register to post comments
  • 622 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 30, 2008 - 8:00am — kalpana

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

kalpana's picture

ಸುನಿಲರೆ,
ಬಹಳ generic ಆಗಿ ಕೇಳಿದ್ದೀರಿ. ನೀವು ಎದುರಿಸಿದ ಯಾವುದಾದರೂ ಸನ್ನಿವೇಶದ ಉದಾಹರಣೆ ಕೊಟ್ಟರೆ ಸಲಹೆ ಕೊಡುವುದು ಸುಲಭ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 8:46am — rameshbalaganchi

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

rameshbalaganchi's picture

ಬುದ್ಧ ಇದಕ್ಕೆ ಸರಳ, ಆದರೆ ಬಹಳ ಕಷ್ಟಕರ ಹಾಗೂ ೧೦೦% ಪರಿಣಾಮಕಾರಿ ಮಾರ್ಗ ಸೂಚಿಸಿದ್ದಾನೆ. ನಮ್ಮ ಭಾವನೆಗಳು ಹಾಗೂ ಮನಸ್ಸು ಇವಕ್ಕೆ ನೇರ ಸಂಬಂಧ. ಮನಸ್ಸು ಸದಾ ವರ್ತಮಾನದಲ್ಲಿರದೆ ಭೂತ ಭವಿಷ್ಯತ್ತುಗಳ ನಡುವೆ ಲಾಳಿಯಾಡಿತ್ತಿರುತ್ತದೆ. ಹೀಗಾದಾಗ ಭೂತಕಾಲದ ನಮ್ಮ ಯಾವುದೋ ಕೆಟ್ಟ ಅನುಭವವನ್ನೋ ಭವಿಷ್ಯತ್ತಿನ ಬಗ್ಗೆ ಆಸೆಯನ್ನೋ ಮೂಡಿಸಿಕೊಳ್ಳುತ್ತಿರುತ್ತದೆ ಮನಸ್ಸು. ಆಗ ರಾಗ ದ್ವೇಷಗಳಿಗೆ ಪಕ್ಕಾಗುತ್ತದೆ. ರಾಗ ದ್ವೇಷಗಳು ಸುಮ್ಮನೆ ಅಳಿಯದೆ ತಮ್ಮ ಬೀಜ ಬಿತ್ತಿಹೋಗುತ್ತವೆ. ನಮ್ಮ ಮನಸ್ಸು ರಾಗ ದ್ವೇಷಗಳಿಗೆ ಪಕ್ಕಾಗದಂತೆ ತಡೆಯುವ ಮಾರ್ಗ ಅನುಸರಿಸಬೇಕು. ಅದು ನಮ್ಮ ಉಸಿರನ್ನು ಗಮನಿಸುವ ಕೆಲಸ. ನಿಮ್ಮ ಮನಸ್ಸು ನಿರಾಳವಾಗಿದ್ದರೆ ಉಸಿರಾಟ ಸಮವಾಗಿರುತ್ತದೆ. ಉಸಿರಾಟ ಏರುಪೇರಾಗಿದ್ದರೆ ನೀವು ರಾಗ ದ್ವೇಷಗಳಿಗೆ ಬಲಿಯಾಗಿದ್ದೀರಿ ಅಂದುಕೊಳ್ಳಿ. ಹಾಗಾದಾಗ ಉಸಿರನ್ನು ಗಮನಿಸಿ. ನಿಮ್ಮ ಮನಸ್ಸು ದೇಹಗಳೆರಡರಲ್ಲೂ ಆ ಕ್ಷಣದಲ್ಲಿ ಆಗುತ್ತಿರುವುದನ್ನು ಗಮನಿಸಿ ಪ್ರೀತಿಸುವುದೋ ದ್ವೇಷಿಸುವುದೋ ಮಾಡಿದರೆ ಕೆಟ್ಟಿರಿ. ಸ್ಸಾಧ್ಯವಾದಷ್ಟೂ ಜನಗಳು ಸಂದರ್ಭಗಳ ಬಗ್ಗೆ ತಪ್ಪು, ಸರಿ, ಕೆಟ್ಟ, ಒಳ್ಳೆಯ ಇತ್ಯಾದಿ ಜೋಡಿಗಳ ಬಗ್ಗೆ Judgement ಮಾಡುವುದನ್ನು ನಿಲ್ಲಿಸಿದರೆ ಮನಸ್ಸು ತಾನಾಗೇ ತಹಬಂದಿಗೆ ಬರುತ್ತದೆ.
ಮೊದಲೇ ಹೇಳಿದಂತೆ ಇದು ವಿಪರೀತ ಸರಳವೆನಿಸಿದರೂ ಅತಿ ಕಷ್ಟವಾದ ಸಂಗತಿ. ಸಾಧ್ಯವಾದರೆ ಹತ್ತು ದಿನಗಳ ವಿಪಶ್ಶನ ಧ್ಯಾನ ಶಿಬಿರಕ್ಕೆ ಹೋದರೆ ಇನ್ನೂ ಒಳ್ಳೆಯದೆ! ನಿಮಗೆ ಒಳ್ಳೆಯದಾಗಲಿ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 11:02am — harshab

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

harshab's picture

""ಸ್ಸಾಧ್ಯವಾದಷ್ಟೂ ಜನಗಳು ಸಂದರ್ಭಗಳ ಬಗ್ಗೆ ತಪ್ಪು, ಸರಿ, ಕೆಟ್ಟ, ಒಳ್ಳೆಯ ಇತ್ಯಾದಿ ಜೋಡಿಗಳ ಬಗ್ಗೆ Judgement ಮಾಡುವುದನ್ನು ನಿಲ್ಲಿಸಿದರೆ ಮನಸ್ಸು ತಾನಾಗೇ ತಹಬಂದಿಗೆ ಬರುತ್ತದೆ. ""

ಇದು ಒಪ್ಪುವ ಮಾತು, ಆದರೆ ಕೆಲವು(ಅಂದರೂ ಬಹಳಷ್ಟು) ಸಂಧರ್ಬಗಳಲ್ಲಿ ತೀರ judgement ಮಾಡದೇ ಇರೋಕಾಗಲ್ಲ, ಅದ್ರಲ್ಲೂ ಅದ್ರ outcome "ಅವರವರಿಗೆ" ಬಹಳ ಮುಖ್ಯವಾದಾಗ(ಉದಾ.). ಅಂಥ situation ಹೆಂಗೆ handle ಮಾಡದು ಅನ್ನೋದು ಸುನೀಲ್ ಅವರ ಪ್ರಶ್ನೆ ಅನ್ಕಂಡೀದಿನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 12:07pm — rameshbalaganchi

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

rameshbalaganchi's picture

" ಕೆಲವು(ಅಂದರೂ ಬಹಳಷ್ಟು) ಸಂಧರ್ಬಗಳಲ್ಲಿ ತೀರ judgement ಮಾಡದೇ ಇರೋಕಾಗಲ್ಲ"
ಇದು ವ್ಯಕ್ತಿಗತವಾಗಿ ನಿಮ್ಮ ಅಭಿಪ್ರಾಯವಿರಬಹುದು ಹರ್ಷ ಅವರೆ, ಆದರೆ ಸಾದ್ಯವಿಲ್ಲ ಅನ್ನುವಂತಿಲ್ಲ. ಎಷ್ಟೋ ಜನ ಈ ಮಟ್ಟವನ್ನು ಸಾಧಿಸಿದ್ದಾರೆ. ಆದ್ದರಿಂದ ಸಾಧ್ಯವಿಲ್ಲ ಅನ್ನುವುದು ನಮ್ಮ ನಮ್ಮ ಮಿತಿಯನ್ನು ಮಾತ್ರ ಸೂಚಿಸುತ್ತದೆ.(ಇದು ಸಾರ್ವತ್ರಿಕವಾಗಿ ಹೇಳಿದ್ದು-ವ್ಯಕ್ತಿಗತವಾಗಿ ನಿಮ್ಮನ್ನು ಕುರಿತು ಹೇಳಿದ್ದಲ್ಲ). ಯಾವುದೇ ಗುರಿ ನಮ್ಮ ಹೃದಯಕ್ಕೆ ಹತ್ತಿರವಾದರೆ ನಾವು ಎಷ್ಟೇ ಕಷ್ಟವಾದರೂ ಹಠಹಿಡಿದು ಸಾಧಿಸುವುದಿಲ್ಲವೆ? ನಮ್ಮ ಮನಸ್ಸನ್ನು ನಿಯಂತ್ರಿಸಬೇಕು ಅನ್ನುವ ತುರ್ತು ನಮಗೆ ಅನುಭವವಾದರೆ ಆಗ ನಾವಾಗೇ ಆ ಹಾದಿ ಹಿಡಿಯುತ್ತೇವೆ.
ಇಲ್ಲವೆಂದರೆ ನಾವೇ ತಾನೇ negativityಯ ಬಲಿಪಶುವಾಗುವುದು?

ವಾಸ್ತವವೆಂದರೆ ನಾವು ಒಂದು ನಿರ್ದಿಷ್ಟ ಘಟನೆಗೆ ನಮ್ಮ ಪ್ರತಿಕ್ರಿಯೆ ತೋರಿಸಿತ್ತಿದ್ದೇವೆ ಅಂದುಕೊಂಡಿರುತ್ತೇವೋ ಅದು ನಿಜವಾಗಿ ಹಾಗಿರುವುದಿಲ್ಲ. ನಾವು ಆ ಕ್ಷಣದಲ್ಲಿ ನಮ್ಮ ನಮ್ಮ ಮನೋದೈಹಿಕ ಸ್ಥಿತಿಗನುಗುಣವಾಗಿಯೇ ಪ್ರತಿಕ್ರಿಯೆ ಮಾಡುತ್ತಿದ್ದರೂ ನಮ್ಮ ಮನಸ್ಸು ಅದನ್ನು ತಿಳಿಯಲಾರದಷ್ಟು ಸ್ಥೂಲ ಸ್ತಿತಿಯಲ್ಲಿರುತ್ತದೆ. ಮನಸ್ಸೂ ಸೂಕ್ಷ್ಮವಾಗಿದ್ದಾಗ ನಾವು ಅದನ್ನು ತಿಳಿದು ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳ್ಯುವ ಸಾಮರ್ಥ್ಯ ಪಡೆಯುತ್ತೇವೆ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 12:14pm — rameshbalaganchi

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

rameshbalaganchi's picture

Judgement ಮಾಡಬಾರದು ಎಂದರೆ ಸುಮ್ಮನಿರುವುದು ಅಂತ ಅಲ್ಲ. ಒಬ್ಬ ನ್ಯಾಯಾಧೀಶ ಸಾಂಧರ್ಭಿಕ ಸಾಕ್ಷ್ಯಾಧಾರದಿಂದ ಒಬ್ಬ ಅಪರಾಧಿ ಎಂದು ತೀರ್ಮಾನಿಸಿದಾಗ ಅವನು ಶಿಕ್ಷೆ ಕೊಡಲೇಬೇಕಾಗುತ್ತದೆ. ಸುಮ್ಮನಿರಲಾಗುವುದಿಲ್ಲ. ಆದರೆ ತೀರ್ಪುಕೊಡುವಾಗ ನ್ಯಾಯಾಧೀಶನ ಮನಸ್ಥಿತಿ ತುಂಬಾ ಮುಖ್ಯ. ಶಿಕ್ಷೆಯಲ್ಲಿ ಕೇವಲ ಕರ್ತವ್ಯಪ್ರಜ್ಞೆ ಮಾತ್ರ ಇದ್ದರೆ ಸರಿ. ಆದರೆ ಹೆಚ್ಚಿನವರು ಅದರಲ್ಲಿ emotional involvementಗೆ ಒಳಗಾಗ್ತಾರಲ್ಲ, ಅದು ಅಪೇಕ್ಷಣೀಯ ಅಲ್ಲ. ಅನ್ನುವುದು ನನ್ನ ಮಾತಿನ ಅರ್ಥ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 2:39pm — harshab

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

harshab's picture

"Judgement ಮಾಡಬಾರದು ಎಂದರೆ ಸುಮ್ಮನಿರುವುದು ಅಂತ ಅಲ್ಲ."

ಇದು ಸ್ವಲ್ಪ Confusing. ಉದಾ:-

ಬೆಳಗ್ಗೆದ್ದು "ಅ"(ನೆನ್ನೆ ರಾತ್ರಿ ಅವ್ನ ಹೆಂಡತಿ ಅವ್ನ ಜೊತೆ ಜೋರಾಗಿ ಜಗಳ ಬೇರೆ ಆಡಿದಾಳೆ) ಎನ್ನುವ ತನ್ನ ಹೊಸ ಕಾರಲ್ಲಿ ಆಫೀಸ್ಗೆ urgent ಆಗಿ ಹೋಗೋವಾಗ "ಬ" ಅನ್ನೋನು ಸುಮ್-ಸುಮ್ನೆ ಬಂದು ಅವ್ನ ಕಾರು ಗುದ್ದಿದ್ದಾಗ,

ಮೊದ್ಲು ನೀವು ಹೇಳಿದ ಪ್ರಕಾರ "ಅ" ಯಾರದ್ದು ತಪ್ಪು ಅಂತ judgement ಮಾಡಬಾರದೆ....? ಮಾಡದೆ ಸುಮ್ನೆ ಇರೊಕಾಗುತ್ತಾ..?

judgeಗೆನೋ emotional stability ಇರಬೇಕು ಅನ್ನೋದು ಸರಿನಪ್ಪ. ಆದ್ರೆ ಇವಾಗ ನೀವು ಹೇಳ್ದಂಗೆ "ಅ" ಹೆಂಡ್ತಿ ಮೇಲಿನ ಸಿಟ್ಟು "ಬ" ಮೇಲೆ ಹಾಕಿ ಜಗಳ ಮಾಡಬಾರದು(ನಾನು ಒಪ್ಕೋತಿನಿ). ಆದ್ರೆ "ಅ" ಅನ್ನೋರೇ (most-of-all) ಇರುವಾಗ ತನ್ನ ಕಾರಿಗೆ(ಹೊಸಾದಿರ್ಲಿ-ಹಳೇದಿರ್ಲಿ) ಯಾವನಾರು ಬಂದು ಗುದ್ದಿದ್ರೂನ್ನು ಸಿಟ್ಟು-ಜಗಳ ಮಾಡ್ಕನಲ್ವಾ.....?

(ನೀವು ಹೇಳ್ದ "ಆ ಮಟ್ಟ" ಮುಟ್ಟಿದೋರೇ ಇದ್ರೆ ಮಾಡಲ್ಲಾ ಅಂತ ನಂಗೆ confirmmu..... )

ಸರ್, JUDGE ಕೊಡೋ judgement ಬಿಟ್ಟು ಉಲು-ಮಾನವರ situational judgement ಬಗ್ಗೆ ಮಾತಾಡಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 3:50pm — rameshbalaganchi

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

rameshbalaganchi's picture

ಹರ್ಷ ಅವರೆ,
ಹೇಳಬೇಕೆಂದುಕೊಂಡ ಅಂಶವನ್ನು ನಾನೇ ಸರಿಯಾಗಿ ಹೇಳಲಿಲ್ಲವೋ ಅಥವಾ ನೀವೇ ಗೊಂದಲ ಮಾಡಿಕೊಂಡಿರೋ ತಿಳಿಯುತ್ತಿಲ್ಲ.
ಈ ಬಾರಿ ನೀವೇ ನೀಡಿರುವ ’ಹುಲುಮಾನವ’ರ ಉದಾಹರಣೆಯನ್ನೇ ತೆಗೆದುಕೊಂಡು ವಿವರಿಸುವ ಪ್ರಯತ್ನ ಮಾಡುತ್ತೇನೆ. ’ಅ’ನ ಕಾರಿಗೆ ’ಬ’ ಸುಮ್ಮನೆ ಗುದ್ದಿದ್ದಾನೆ. ಈಗ ’ಅ’ ’ಬ’ನ ವಿಷಯವಾಗಿ ತೀರ್ಪು ಕೊಡಬೇಕೋ ಇಲ್ಲವೋ ಅನ್ನುವುದು ನಿಮ್ಮ ಪ್ರಶ್ನೆ. ನಿಮ್ಮ ಪ್ರಕಾರ ’ಅ’ ’ಬ’ ನ ಮೇಲೆ ಕೂಗಿ ಕಿರುಚಿ ಕೈಮಾಡಿ ಇತ್ಯಾದಿ ನಡೆದರೆ ಅದು ಸ್ವಾಭಾವಿಕ.

’ಅ’ ತಾನೇ ಯೋಚಿಸಿದರೆ ಚೆನ್ನಾಗಿ ತಿಳಿವಿಗೆ ಬರುವ ಅಂಶವೆಂದರೆ ಅವನು ಆಫೀಸಿಗೆ ಅವಸರವಸರವಾಗಿ ಹೋಗಲು ಕಾರಣ ಹೆಂಡತಿಯೊಂದಿಗೆ ಜಗಳ. ಅವನ ಈ ಗುಣವೇ ಅಪಘಾತಕ್ಕೆ ಕಾರಣವಾಗಿರಬಾರದೇಕೆ?. ನನ್ನ ವಿಶ್ಲೇಷಣೆ ಹೀಗಿದೆ. ನಿಜವಾಗಿ ’ಬ’ನದೇ ತಪ್ಪಿದ್ದರೆ ನ್ಯಾಯ ’ಅ’ನ ಪರವಾಗಿದೆ. ಅವನು ಕೂಗಿ ಕಿರುಚಿ ಕೈ ಮಾಡುವ ಬದಲು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದೇ ಸರಿ. ನ್ಯಾಯದ ಹಾಗೆ ಕಾನೂನು ಅವರ ಪರವಾಗಿರುತ್ತದೆ. ಅದಕ್ಕೆ ಬದಲಾಗಿ ’ಅ’ ’ಬ’ನ ಮೇಲೆ ಕೂಗಾಡಿ ಕಿರುಚಾಡಿ ಕೈಮಾಡಿದರೆ ಮೊದಲೇ ಹದಗೆಟ್ಟಿರುವ ಪರಿಸ್ಥಿತಿ ಕೈಮೀರುತ್ತದೆ. ಅವನ ರಕ್ತದೊತ್ತಡ ಏರಿ ಅವನು ಆಫೀಸಿನ ಎಲ್ಲರ ಮೇಲೆ ರೇಗಾಡಿ ತನ್ನ ಸ್ವಂತ ರಂಪವನ್ನು ಎಲ್ಲರಿಗೆ ಹಂಚುತ್ತಾನೆ. ಅಂಥ ಸಂದರ್ಭದಲ್ಲಿ ಮುಂದಿನ ಕಾನೂನು ಕ್ರಮ ನಿರ್ಧರಿಸಲು ತಣ್ಣಗಿರಬೇಕಾದ ಅವನ ತಲೆ ಕೆಟ್ಟುಹೋಗಿದೆ. ಇನ್ನೂ ಒಂದು ಸಾಧ್ಯತೆ ಅಂದರೆ ಸಂಜೆ ಇದೇ ಮನಸ್ಥಿತಿಯಲ್ಲಿ ಮನೆಗೆ ಹೋಗುವಾಗ ಅವನೂ ಬೆಳಿಗ್ಗೆ ’ಬ’ ಮಾಡಿದ ತಪ್ಪನ್ನೇ ಮಾಡಬಹುದು.

ನಾನು ಹೇಳಿದ್ದು ಕಾನೂನಿನಂತೆ ತಪ್ಪು ಒಪ್ಪುಗಳನ್ನು ನಿರ್ಧರಿಸಬಾರದು ಅಂತ ಅಲ್ಲ. ಆದರೆ ಮತ್ತೊಬ್ಬರ ತಪ್ಪು ನಮ್ಮ ಮನಸ್ಸಿನ ಸ್ತಿಮಿತ ಕೆಡಿಸಬಾರದು ಅಂತ ಅಷ್ಟೆ! ನೀವೇ ಯೋಚಿಸಿ, ಎಷ್ಟೋ ಸಾರಿ ನಾವು ನಮ್ಮ ಮೂಡ್ ಕೆಡಿಸಿಕೊಂಡು ಮನೆಗೆ ಬಂದು ನಮ್ಮ ಸಿಟ್ಟನ್ನೆಲ್ಲ ಹೆಂಡತಿ ಮಕ್ಕಳ ಮೇಲೆ ಇಳಿಸುತ್ತೇವೆ. ಇದು ಸ್ವಾಭಾವಿಕ ಎನ್ನುತ್ತೀರೋ, ತಪ್ಪು ಎನ್ನುತ್ತೀರೋ ತೀರ್ಮಾನ ನಿಮ್ಮದು. ಸ್ವಾಭಾವಿಕವಾಗಿದ್ದೆಲ್ಲ ಸರಿ ಇರಬೇಕಾಗಿಲ್ಲ.
ಸಾಮಾನ್ಯ ಸಂದರ್ಭಗಳಲ್ಲಿ ಜನಸಾಮಾನ್ಯರು ಹೆಚ್ಚಾಗಿ ಮಾಡುವುದು ನೀವು ಹೇಳಿದ್ದನ್ನೇ. ಆದರೆ ಅದನ್ನು ಸರಿ ಅನ್ನುವಂತಿಲ್ಲ ಅನ್ನುವುದು ನನ್ನ ವಿನಮ್ರ ಅಭಿಪ್ರಾಯ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 5:16pm — harshab

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

harshab's picture

"ಸಾಮಾನ್ಯ ಸಂದರ್ಭಗಳಲ್ಲಿ ಜನಸಾಮಾನ್ಯರು ಹೆಚ್ಚಾಗಿ ಮಾಡುವುದು ನೀವು ಹೇಳಿದ್ದನ್ನೇ. ಆದರೆ ಅದನ್ನು ಸರಿ ಅನ್ನುವಂತಿಲ್ಲ ಅನ್ನುವುದು ನನ್ನ ವಿನಮ್ರ ಅಭಿಪ್ರಾಯ."

ನನ್ಗೆ ನಿಮ್ಮ ಉತ್ತರ ಅರ್ಥವಾಯಿತು, ಆದ್ರೆ ಸುನೀಲ್ ಪ್ರಶ್ನೆ ಹಾಗೆ ಉಳೀತು ಅನ್ಸುತ್ತೆ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 5:53pm — rameshbalaganchi

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

rameshbalaganchi's picture

"ಸುನೀಲ್ ಪ್ರಶ್ನೆ ಹಾಗೆ ಉಳೀತು ಅನ್ಸುತ್ತೆ...."

ಆದ್ರೆ ಆ ಮಾತನ್ನ ಸುನಿಲ್ ಅವರೆ ಹೇಳಿದ್ರೆ ಚೆಂದ ಅಲ್ವೇ ಹರ್ಷ? ನೀವು ಹೇಳಬಾರ್ದಿತ್ತು ಅಂತ ಅಲ್ಲ. Smiling

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 7:27pm — harshab

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

harshab's picture

ಸುನೀಲ್ ಸುಮ್ನಿದಾರೆ ಅಂದ್ರೆ, ಒಂದೋ.., ಅವ್ರಿಗೆ ಉತ್ತರ ಸಿಕ್ಕಿದೆ ಅಂತ.. Smiling ಭಲೇ ಭಲೇ ಸುನೀಲ್....

ಇಲ್ಲಾ, ಅವ್ರಿಗೆ ಉತ್ತರ ಸಿಕ್ಕಿಲ್ಲ Sad ಅಥವಾ ಇನ್ನೂ ಒಳ್ಳೇ ಉತ್ತರ ಬರ್ಲಿ ಅಂತ ....ಹಂಗಂತ ನಿಮ್ಮ inputs ಸರಿನೇ ಇಲ್ಲಾ ನಾನೇನೂ ಹೇಳ್ತಿಲ್ಲ್ಲಾ...... Smiling :)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 8:34pm — Rajeshwari

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

Rajeshwari's picture

ಹಿಂದೆ ಈ ರೀತಿ ಮನಸ್ಸಿನ ನಿಯಂತ್ರಣ ಕಳೆದುಕೊಂಡು , ಎಲ್ಲೊ ತಪ್ಪು ಮಾಡಿದಿನಿ ಅಂತ ಅನಿಸುತ್ತಿರುತ್ತೆ, ಆದ್ರೆ ಈ ರೀತಿಯಾದಾಗ ಸಂಗೀತ ಕೇಳೋದು, ನಮಗಿಷ್ಟವಾದ ಪುಸ್ತಕವನ್ನು ಓದೋದು, ಇಷ್ಟವಾದ ಸ್ತುತಿ ಅಥವ ಶ್ಲೋಕಗಳನ್ನು ಕೇಳುವುದು, ಹೇಳುವುದು. ಯೋಗ ಮಾಡಿದ್ರೆ ಇನ್ನು ಪರಿಣಾಮ ಅಂತ ಅನ್ಸುತ್ತೆ. ಇವಲ್ಲವನ್ನು ಈಗೆ ಅಳವಡಿಸಿಕೊಳ್ಳುತ್ತಿದ್ದೇನೆ ಮನಸ್ಸು ತುಂಬ ಹಗುರವಾಗುತ್ತಿದೆ ಅಂತ ನನಿಗಸುತ್ತಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 11:56pm — Sunil Jayaprakash

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

Sunil Jayaprakash's picture

ಒಳ್ಳೆಯ ವಿಚಾರಗಳು ವಿನಿಮಯವಾಗಿವೆ. ಒಟ್ಟಾಗಿ ಸೇರಿಸಿ, ನಂತರ ಚರ್ಚೆ ಮುಂದುವರಿಸೋಣ.

೧. ಕಲ್ಪನ - ಹೌದು. ತುಂಬಾ ಜೆನೆರಿಕ್ ಆಗಿ ಬರೆದಿದ್ದೆ. ಸ್ಪೆಸಿಫಿಕ್ ಆಗಿ ಹೇಳಬೇಕಂದ್ರೆ, ಹೀಗೊಂದು. ನಮ್ಮ ದೇಶದ ಬಗ್ಗೆ ಏನೂ ತಿಳಿದುಕೊಳ್ಳದೆ ಯಾರಾದರೂ ಸುಮ್ಸುಮ್ನೆ ಏನನ್ನಾದರೂ ಆರೋಪ ಮಾಡಿದಾಗ. ಇನ್ನಷ್ಟು ೩ನೇ ಪಾಯಿಂಟಿನಲ್ಲಿದೆ.

೨. ರಮೇಶಬಳಗಾಂಚಿ ಮತ್ತು ಹರ್ಷ - ಈ ಚರ್ಚೆಗೆ ಹೊಸ ಆಯಾಮವನ್ನು ನೀಡಿದಿರಿ. ನನ್ನಿ ಅ ಲಾಟ್. ನೀವುಗಳು ಚರ್ಚಿಸಿದ ಕಾರಿನ ಅಪಘಾತದ ಸನ್ನಿವೇಶವೂ ಕೂಡ ಮನಸ್ಸನ್ನು ಉದ್ರೇಕಗೊಳಿಸತ್ತೆ.

ಅವನ ರಕ್ತದೊತ್ತಡ ಏರಿ ಅವನು ಆಫೀಸಿನ ಎಲ್ಲರ ಮೇಲೆ ರೇಗಾಡಿ ತನ್ನ ಸ್ವಂತ ರಂಪವನ್ನು ಎಲ್ಲರಿಗೆ ಹಂಚುತ್ತಾನೆ.

ಹಾಂ. ಇದೇ ಪರಿಸ್ಥಿತಿಯ ಬಗ್ಗೆ ನಾನು ತಿಳಿಯೋಕ್ಕೆ ಪ್ರಯತ್ನಿಸ್ತಾ ಇರೋದು. ರಕ್ತದೊತ್ತಡ ಅತ್ವಾ ಮನಸ್ಸು ಮುದುಡಿದಾಗ ಅದರಿಂದ ಹೊರಬರಲು ಏನು ಮಾಡಬೇಕು. ವಿಪಶ್ಶನ ಧ್ಯಾನವನ್ನು ಒಮ್ಮೆ ಅನುಸರಿಸಬೇಕೆಂಬ ಹಂಬಲ ಇದೆ, ನೋಡೋಣ. ಸದ್ಯಕ್ಕೆ ರಾಜೇಶ್ವರಿ ಅವರು ನೀಡದ ಉತ್ತರ ಸ್ವಲ್ಪ ವರ್ಕ್ ಆಗತ್ತೆ ಅನ್ನಿಸ್ತು.

೩. ರಾಜೇಶ್ವರಿ ಅವರೇ,

ಸಂಗೀತ ಕೇಳೋದು, ನಮಗಿಷ್ಟವಾದ ಪುಸ್ತಕವನ್ನು ಓದೋದು, ಇಷ್ಟವಾದ ಸ್ತುತಿ ಅಥವ ಶ್ಲೋಕಗಳನ್ನು ಕೇಳುವುದು, ಹೇಳುವುದು

ನೀವು ನೀಡಿದ ಮಾರ್ಗಗಳು ಕೆಲಸ ಮಾಡತ್ತೆ. ನಾನು ಕೆಲವೊಮ್ಮೆ ಹೀಗೆ ಮಾಡ್ತೀನಿ.
೧ ನಾನು ಯಾವಾಗಲಾದರೂ ಕಷ್ಟಪಟ್ಟರೂ ಸೋತೆ ಎನಿಸಿದಾಗ, "ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ ಸಂಘ" ಹಾಡು ನೆನಪಿಸಿಕೊಳ್ತೀನಿ. ಅಣ್ಣಾವ್ರ ಆ ಹಾಡು ಮುದುಡಿರುವ ನನ್ನ ಮನಸ್ಸಿಗೆ ತುಂಬಾ ಉತ್ಸಾಹ ನೀಡತ್ತೆ. ವಿವೇಕಾನಂದರ ಜೀವನ ಚರಿತ್ರೆಯ ಒಂದು ಪುಸ್ತಕದಲ್ಲಿ, What is Life ? ಎಂಬುದಕ್ಕೆ ಒಂದು ಉತ್ತರ ಇದೆ. ಆ ಉತ್ತರವನ್ನು ಮೆಲುಕುಹಾಕಿಕೊಳ್ತೀನಿ. ತುಂಬಾ ಧೈರ್ಯ ತುಂಬತ್ತೆ.
೨ ನಮ್ಮ ದೇಶವನ್ನು ಯಾರಾದರೂ ಸುಮ್ಸುಮ್ನೆ ಬೈದಾಗ, ಅವರೊಡನೆ ಸಿಕ್ಕಾಪಟ್ಟೆ ವಾದ ಮಾಡಿ ಬೇಸರವಾದಾಗ, ಸ್ವದೇಸ್ ಚಿತ್ರದ, "ಎಜೋ, ದೇಸ ಹೇ ಮೆರಾ, ಸ್ವದೇಸ ಹೇ ಮೇರೆ, ತುಜೆಹೇ ಪುಕಾರಾ, ಎಜೋ ಬಂಧನ್ ಟೂಟು ನಹಿ ಸಕ್ತಾ." ಹಾಡು ಕೇಳ್ತೀನಿ.
೩ ನಾನು ಚಿಕ್ಕವನಿದ್ದಾಗ, ಕೆಲವೊಮ್ಮೆ ಕೆಟ್ಟಕನಸು ಬಿದ್ದು ಎಚ್ಚರವಾದಾಗ, ನನ್ನ ತಾಯಿ ಆಂಜನೇಯನ ಶ್ಲೋಕವನ್ನು ಹೇಳಿಕೊಡ್ತಾ ಇದ್ರು. ಆ ಕ್ಷಣಕ್ಕೆ, ಅಮ್ಮನ ಸಾನಿಧ್ಯವೋ ಅಥವಾ ಶ್ಲೋಕವೋ ಒಟ್ಟಿನಲ್ಲಿ ಸಮಾಧಾನವಂತೂ ಸಿಗುತ್ತಿತ್ತು.

ಗಣೇಶ್, ಈ ಎಳೆಯನ್ನು ನೋಡ್ತಾ ಇದ್ದೀರಾ? ಈ ಸನ್ನಿವೇಶದಲ್ಲಿ ಮನಸ್ಸನ್ನು ತಂಪಾಗಿಟ್ಟುಕೊಳ್ಳಲು ಯಾವ ಹಣ್ಣು, ಜೂಸ್ ಕುಡಿಯಬಹುದು ? :ಸೀರಿಯಸ್, ಜೋಕ್ ಅಲ್ಲ:

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 12:00am — Sunil Jayaprakash

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

Sunil Jayaprakash's picture

"ಸಂಘ" ಅಲ್ಲ "ಸಂಗ" ಎಂಬುದಾಗಿ ಓದಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 7:16am — rameshbalaganchi

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

rameshbalaganchi's picture

ಯೋಗ, ಸಂಗೀತ, ಸಾಹಿತ್ಯ, ಮಂತ್ರ, ಸ್ತೋತ್ರ, ೧೦ರವರೆಗೆ ಎಣಿಸುವುದು, ನೀರು ಕುಡಿಯುವುದು, ತಲೆಯಮೇಲೆ ಒಂದು ಕೊಡ ತಣ್ಣೀರು ಸುರಿದುಕೊಳ್ಳುವುದು ಇವುಗಳಲ್ಲಿ ಕೆಲವರಿಗೆ ಕೆಲವು ಹೊಂದಿಕೆಯಾಗುತ್ತವೆ. ಬೌದ್ಧ ವಿಪಶ್ಶನಕಾರರು ಹೇಳುವಂತೆ ಇವೆಲ್ಲ ತಾತ್ಕಾಲಿಕ ಉಪಶಮನಗಳು. ಇವೆಲ್ಲದರಿಂದ ನಾವು ನಮ್ಮ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸದೆ ಮುಂದೂಡುತ್ತೇವೆ. ಇವು ಮನಸ್ಸಿನ ಅಜ್ಞಾತ ಮೂಲೆಯಲ್ಲಿ ಅಡಗಿ ಮತ್ತೂಮ್ಮೆ ಹೊರಬರಲು ಹವಣಿಸುತ್ತಿರುತ್ತವೆ- ಮುಂದೆ ನಡೆಯುವ ಇನ್ನೂ ತೀವ್ರತರವಾದ ಆಘಾತಗಳಿಗೆ ಮುನ್ನುಡಿಯಾಗಿ.
ಈಗಿನ ಸಮಸ್ಯೆಗೆ ವಾಸ್ತವವಾಗಿ ಹಿಂದಿನ ಹತ್ತಿಕ್ಕಿದ ಅಂಥ issueಗಳೇ ಕಾರಣ. ಅಂಥ ಸಮಯಗಳಲ್ಲಿ ನಮ್ಮ ದೇಹ ಮನಸ್ಸುಗಳನ್ನು ಗಮನಿಸಿದಲ್ಲಿ ಅಂಥ ಸಂದರ್ಭಗಳು ನಮ್ಮ ಮೇಲೆ ಎಂಥ ಅಚ್ಚಳಿಯದ ಪರಿಣಾಮ ಬೀರುತ್ತವೆನ್ನುವುದು ತಿಳಿಯುತ್ತದೆ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 5:32pm — Sunil Jayaprakash

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

Sunil Jayaprakash's picture

>> ಬೌದ್ಧ ವಿಪಶ್ಶನಕಾರರು ಹೇಳುವಂತೆ ಇವೆಲ್ಲ ತಾತ್ಕಾಲಿಕ ಉಪಶಮನಗಳು. ಇವೆಲ್ಲದರಿಂದ ನಾವು ನಮ್ಮ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸದೆ ಮುಂದೂಡುತ್ತೇವೆ.

ಒಳ್ಳೆಯ ಪಾಯಿಂಟ್. "ನನಗೆ ಒಬ್ಬರ ಮೇಲೆ ಜೀವಂತಪರ್ಯಂತ ಸಿಟ್ಟಿದ್ದು, ಅವರ ವಿಚಾರ ಬಂದಾಗಲೆಲ್ಲ ನನಗೆ ಉದ್ವೇಗ ಉಂಟಾಗತ್ತೆ" ಅಂತಿಟ್ಟುಕೊಳ್ಳಿ, ಆಗ ನಾನು ಸಂಗೀತವನ್ನೋ, ೧-೧೦ ಹೇಳುವುದರಿಂದ ಹತೋಟಿಗೆ ಬರಿಸಿಕೊಳ್ಳಬಹುದು. ಇಂತಹ ಸನ್ನಿವೇಶಗಳು ನೀವು ನೀಡಿದ ಉತ್ತರಕ್ಕೆ ತಾಳೆಯಾಗುತ್ತದೆ.

ಸರಿ, ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗೋಣ. ಬೇರೆ ಕೆಲವು ಸನ್ನಿವೇಶಗಳನ್ನು ತೆಗೆದುಕೊಳ್ಳೋಣ. ಅವುಗಳನ್ನು ಶಾಶ್ವತ, ತಾತ್ಕಾಲಿಕ ಅಂತ ಬೇರೆ ಮಾಡಕ್ಕೆ ಆಗಲ್ಲ. ಉದಾ :- "ಕಾರ್ ಆಕ್ಸಿಡೆಂಟಿನಿಂದ ಆ ಕ್ಷಣ ನಮ್ಮಲ್ಲಿರಬಹುದಾದ ಉದ್ವೇಗ", "ಮಧ್ಯರಾತ್ರಿ ಒಬ್ಬನೇ ರಸ್ತೆಯಲ್ಲಿ ನಡೆಯುತ್ತಿದ್ದಾಗ ನಾಯಿಗಳು ಅಟ್ಟಿಸಿಕೊಂಡು ಬಂದಂತಾದಾಗ ಉಂಟಾಗುವ ನಡುಕ". "ನಮ್ಮದು ಯಾವುದೇ ರೀತಿಯ ತಪ್ಪಿಲ್ಲದಿದ್ದರೂ, ಬೇರೆಯವರು ನಮ್ಮ ಮೇಲೆ ಆರೋಪ ಹೊರಿಸುವುದು", ಇಂತಹ ಸನ್ನಿವೇಶಗಳಲ್ಲಿ ಕೂಲ್-ಆಗಿ ಹೇಗಿರುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2008 - 4:56pm — rameshbalaganchi

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

rameshbalaganchi's picture

ವಿಷಯ, ವಸ್ತು ಮತ್ತು ಸನ್ನಿವೇಶಗಳ ಬಗ್ಗೆ ನಮಗಿರುವ ಮೂಲಭೂತ ಧೋರಣೆಯೇ ಇದಕ್ಕೆಲ್ಲ ಕಾರಣವೆನ್ನಿಸುತ್ತದೆ.
ಸಾವು ಅನಿವಾರ್ಯ ಅಂತ ಗೊತ್ತಿರುವುದರಿಂದಲೇ ಅತ್ತೋ ಕರೆದೋ ಆ ಸನ್ನಿವೇಶಕ್ಕೆ ಅಣಿಯಾಗುತ್ತೇವಲ್ಲವೆ? ಹಾಗೆಯೇ ಇದೂ ಸಹ. ಸ್ವಲ್ಪ ಪರಿಶೀಲನೆ ಮಾಡೋಣ. ಎಲ್ಲ ಸಂದರ್ಭಗಳಲ್ಲಿಯೂ ನಾನೇ ಸನ್ನಿವೇಶಗಳನ್ನು ನಿರ್ದೇಶಿಸುತ್ತೇನೆ, ನಿಯಂತ್ರಿಸುತ್ತೇನೆ ಅನ್ನುವ ನಮ್ಮ ಅಹಂಭಾವವೇ ಇಂಥ ಉದ್ವೇಗಗಳು ಬಂದರೂ ಅವನ್ನು ಸರಿಯಾದ ಧೋರಣೆಯಿಂದ ನೋಡದಿರಲು ಕಾರಣ. ಮನೆಯಲ್ಲಿ ನಡೆದ ಮೊದಲ ಸಾವು ವಿಪರೀತ ಕಾಡಿದರೂ ಮೇಲಿಂದ ಮೇಲೆ ಅದೇ ಸಂಭವಿಸುತ್ತಿದ್ದರೆ ನಾವು ಅದನ್ನು ನೋಡುವ ದೃಷ್ಟಿಕೋನವೇ ಬೇರೆಯಾಗುತ್ತದೆ. ಹತ್ತನೆಯ ಸಾವನ್ನು ನೋಡುವಲ್ಲಿ ನಮ್ಮ ಮನಸ್ಸು ಪರಿಪಕ್ವವಾಗಿರುತ್ತದೆ. ನಾನು ಕೊಂಡ ಮೊದಲ ಕಾರಿನ ಬಗ್ಗೆ ಇರುವ ನನ್ನ ಧೋರಣೆ ಮತ್ತು ಹತ್ತನೆಯ ಕಾರು ಕೊಂಡಾಗ ಇರುವ ಧೋರಣೆ ಒಂದೇ ಅಲ್ಲ. ನಿಮ್ಮ ಬಳಿ ಹತ್ತು ಕಾರಿರುವಾಗ ಒಂದು ಹೊಸ ಕಾರಿಗೆ ಏನೇ ಆದರೂ ಅದರ ಆಘಾತ ಅಷ್ಟಾಗಿ ಇರುವುದಿಲ್ಲ.
ಮೂಲಭೂತವಾಗಿ ನಮ್ಮ ಆಲೋಚನೆಗಳ ಓಟ ಹೀಗಿರುತ್ತದೆ. "ನನ್ನದು ಹೊಸ ಕಾರು ಆದ್ದರಿಂದ ಇದಕ್ಕೆ ಆಕ್ಸಿಡೆಂಟ್ ಆಗಲಾರದು ( ಹಾರೈಕೆ)--- ಆಗಬಾರದು (ಅವಾಸ್ತವಿಕವಾದ ಹಕ್ಕೊತ್ತಾಯ).
ಆಕ್ಸಿಡೆಂಟ್ ಆಗುವುದು ಬಿಡುವುದು ನನ್ನ ಮನಸ್ಸಿನ ಹಾರೈಕೆ ಹಕ್ಕೊತ್ತಾಯಗಳಿಗನುಗುಣವಾಗಿ ಅಲ್ಲ. ರೋಡ್‌ನ ಸ್ಥಿತಿ, ನಮ್ಮ ಮನಸ್ಥಿತಿ, ಮತ್ತೊಬ್ಬ ಡ್ರೈವರ್‌ನ ಡ್ರೈವಿಂಗ್ ವಿಚಕ್ಷಣೆ ಇತ್ಯಾದಿಗಳನ್ನು ಅವಲಂಬಿಸಿದೆ. ಆದ್ದರಿಂದ ಯಾವ ಕ್ಷಣದಲ್ಲಾದರೂ ಯಾರಿಗಾದರೂ ಇದು ಸಂಭವಿಸಬಹುದಲ್ಲ!! ನನಗೆ ಆಗಬಾರದು ಅನ್ನುವುದು ಅವಾಸ್ತವಿಕ ಹಕ್ಕೊತ್ತಾಯ. ಅಂಥದ್ದೇನೂ ಮನಸ್ಸಿನಲ್ಲಿಲ್ಲದಿದ್ದರೆ ಅಂಥ ಸನ್ನಿವೇಶದಲ್ಲಿ ಮನಸ್ಸಿಗೆ ಸ್ವಲ್ಪ ಆಘಾತವಾದರೂ (ಇದು ರೊಟೀನ್) ಹೆಚ್ಚು ಹೆಚ್ಚು ನಮ್ಮನ್ನು ಕಾಡುವುದಿಲ್ಲ.
ಬೇರೆಯವರು ನಮ್ಮ ಮೇಲೆ ವಿನಾಕಾರಣ ತಪ್ಪುಹೊರಿಸಿದಾಗಲೂ ಆಗುವುದು ಇದೇ. ನಾನು ಎಲ್ಲರಿಗಿಂತ ಎಲ್ಲಕ್ಕಿಂತ ಮೇಲಿದ್ದೇನೆ. ಸರಿ ಇದ್ದೇನೆ ಅನ್ನುವ ನಮ್ಮ ಪ್ರವೃತ್ತಿ ನಮ್ಮನ್ನು ಕಾಡುತ್ತದೆ. ನಾನೂ ಎಲ್ಲರಂತೆ ಸಾಮಾನ್ಯ ಅಂದುಕೊಂಡರೆ ಯಾವ ತೊಂದರೆಯೂ ಇರುವುದಿಲ್ಲ. ಆದರೆ ಸಣ್ಣವರಿರುವಾಗಿನಿಂದ ರೂಢಿಸಿಕೊಂಡ ಇಂಥ ನೆಗೆಟಿವಿಟಿ ನಮ್ಮನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. "ನಾನು ಸರಿ ಇದ್ದೇನೆ, ಆದ್ದರಿಂದ ಮತ್ತೊಬ್ಬ ಹೇಳುತ್ತಿರುವುದರಲ್ಲಿ ಏನೂ ಹುರುಳಿಲ್ಲ. ಪಾಪ, ಇವನಿಗೆ ವಾಸ್ತವ ಸರಿಯಾಗಿ ಅರ್ಥವಾಗಿಲ್ಲ ಹಾಗಾಗಿ ತಪ್ಪಾಗಿ ನಡೆದುಕೊಳ್ಳುತ್ತಿದ್ದಾನೆ" ಅಂದುಕೊಳ್ಳುವ ಬದಲು ಬೈದೋ, ಹೊಡೆದೋ, ಕೋರ್ಟ್ ಮೆಟ್ಟಿಲು ಹತ್ತಿಯೋ, ಕೊಲೆಮಾಡಿಯೋ, ಮನೆಗೆ ಬೆಂಕಿ ಹಚ್ಚಿಯೋ ತಾತ್ಕಾಲಿಕ ಉಪಶಮನ ಪಡೆದರೂ ಮುಂದಿನ ಸರಣಿ ಅನಾಹುತಗಳಿಗೆ ನಾವೇ ಹಾದಿ ಮಾಡುತ್ತೇವೆ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 3:52pm — ಗಣೇಶ

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

ಗಣೇಶ's picture

ನನ್ನಿ ಸುನಿಲ್,

ತುರ್ತು,ಸೀರಿಯಸ್ ಪದಕ್ಕೆ ಇನ್ನು ಗಮನ ಕೊಡಬಾರದು ಎಂದಿದ್ದೇನೆ. Smiling
ಜ್ಯೂಸ್ ವಿಷಯ ಬದಿಗಿಟ್ಟು ಮನದ ವಿಷಯಕ್ಕೆ ಬರುವೆನು.

ಸಂಗೀತ ಕೇಳುವುದು,ಪುಸ್ತಕ ಓದುವುದು ಇತ್ಯಾದಿ- 'ದುಃಖವನ್ನು ಹತೋಟಿಯಲ್ಲಿಡಲು ಕುಡಿದೆ' ಎಂದಂತೆ.
ಇದು ಮನಸ್ಸಿನ direction ಅಷ್ಟೇ ಬದಲಾಯಿಸಿದ್ದು. ಉದಾಹರಣೆಗೆ-
ರಸ್ತೆಯಲ್ಲಿ ಇತರ ಮಕ್ಕಳೊಂದಿಗೆ ಜಗಳ ಮಾಡುವ ಮಕ್ಕಳನ್ನು ತಾಯಂದಿರು ಕರೆದು ರಿಮೋಟು ಕೊಟ್ಟು ಟಿ.ವಿ. ಮುಂದೆ ಕಾರ್ಟೂನ್ ನೋಡಲು ಕುಳ್ಳಿರಿಸಿದಂತೆ.
ಮನಸ್ಸಿಗೆ ಇನ್ನೊಂದು ಆಮಿಷ ತೋರಿಸುವುದು ಮನಸ್ಸಿನ ಮೇಲಿನ ಹತೋಟಿಯಾಗದು.
ಏನಂತೀರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 5:23pm — Sunil Jayaprakash

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

Sunil Jayaprakash's picture

ಅಯ್ಯೋ, ಕುಡಿಯೋದು ಅಂದ್ರೆ "ಆ ಕುಡಿಯೋದು ಅಲ್ಲ". ಇಂಥ ಹಣ್ಣು ತಿಂದರೆ, ಅದರಲ್ಲಿಯ ಪೋಷಕಾಂಶಗಳು ಮೆದುಳನ್ನು ಹೆಚ್ಚು ಆತಂಕವಿಲ್ಲದಾಗಿಟ್ಟಿರತ್ತೆ ಎನ್ನುವ ರೀತಿ. ಕ್ಯಾರೆಟ್ ತಿಂದ್ರೆ ಕಣ್ಣಿಗೆ ಒಳ್ಳೇದು ಅಂತಾರಲ್ಲ ಹಾಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 4:03pm — roopablrao

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

roopablrao's picture

ಸುನಿಲ್
ತುಂಬಾನೆ ದೊಡ್ಡ ಪ್ರಶ್ನೆ ಕೇಳಿದ್ದೀರಾ
ಯೋಗಿಗಳಿಗೇ ಮನಸನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಿಲ್ಲ
ಇನ್ನು ಸಾಮಾನ್ಯ ಮನುಜರಾದ ನಮ್ಮಿಂದ ಸಾಧ್ಯಾನ?

ನಿಮ್ಮ ಪ್ರಶ್ನೆ ಭಾವನೆಗಳನ್ನು ಹತೋಟಿಯಲ್ಲಿಡುವುದು ಹೇಗೆ ಎನ್ನುವುದಾದರೆ
ದು:ಖಕರ ಸಮಯದಲ್ಲಿ ನಾನು ಅತ್ತುಬಿಡುತ್ತೇನೆ ಒಂಟಿಯಾಗಿ ಕುಳಿತು.
ಹಾಗೆ ಬೇಸರವಾದ ಸಮಯದಲ್ಲಿ ಅದನ್ನು ಪೇಪರ್ ಮೇಲೆ ಮೂಡಿಸಿ ನಂತರ ಎಸೆಯುತ್ತೇನೆ
ಕೋಪ ಬಂದ ಕ್ಷಣದಲ್ಲಿ ಕೋಪಕ್ಕೆ ಕಾರಣಾವಾದವರ ಮುಂದಿನಿಂದ ಬೇರೆ ಕಡೆಗೆ ಹೊರಟುಬಿಡುತ್ತೇನೆ.

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 5:52pm — mahesha

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

mahesha's picture

ನಾನು ಇದಕ್ಕೆ ಕಮೆಂಟಬಾರದು ಅಂತ ಇದ್ದೆ. ಆದರೆ ಅದು ನನ್ನ ನಂಬಿಕೆಗೆ ಒಗ್ಗಲ್ಲ.

ಮನವನ್ನು ಅಂಕೆಯಲ್ಲಿ ಇಡಬೇಕು ಅನ್ನೋದು ಒಂದು ಮರುಳು! Smiling ಯೋಗಿ ಗೀಗಿ ಮುಂತಾದವರಿಗೆಲ್ಲ ಒಂದೊಂದು ತೆವಲು.. ಅವರ ಮನದ ಅಂಕೆ ಅಂತ ಮನುಶ್ಯ ಅನ್ನೋ ಪ್ರಾಣಿಗೆ ಮೈಸಹಜವಾದ ಊಟಬೇಟಬಟ್ಟೆಗಳನ್ನಲ್ಲ ಬಿಟ್ಟರೆ ಅದೊಂತರ ಹುಚ್ಚು.. !!

ಇಶ್ಟೇ ಹೇಳಕ್ಕೆ ಇದ್ದದ್ದು!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 8:07pm — smurthygr

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

smurthygr's picture

ಸಲಹೆ ತುಂಬಾ ಸೀರಿಯಸ್ ಏನೋ: ಅಧ್ಯಾತ್ಮದ ಹಲವು ದಾರಿಗಳಿವೆ - ಪ್ರಾಣಾಯಾಮ, ಧ್ಯಾನ, ವಿಚಾರ ಇತ್ಯಾದಿ. ಕೆಲವು ಪುಸ್ತಕಗಳನ್ನೋದಿದರೆ ನಿಮಗೆ ಸರಿಹೊಂದುವ ಯಾವುದಾದರೊಂದು ದಾರಿ ಹಿಡಿಯಬಹುದು. ದುಡ್ಡು ಕೊಟ್ಟು ಸೇರಬೇಕಾದ ಶಿಬಿರಗಳ ಬಗ್ಗೆ ಕೊಂಚ ಎಚ್ಚರವಿದ್ದರೆ ಒಳ್ಳೆಯದು. ನಿಜವಾದ ಆಸಕ್ತಿ ಬಂದ ನಂತರ ನಿಮ್ಮ ದಾರಿ ನಿಮಗೇ ತಿಳಿಯುತ್ತೆ. ’ರಮಣ ಮಹರ್ಷಿಗಳೊಂದಿಗೆ ಮಾತುಕತ’ ಇತ್ಯಾದಿ ಪುಸ್ತಕಗಳಿಂದ ಪ್ರಾರಂಭಿಸಬಹುದು. ಮನಸ್ಸು ಹತೋಟಿಗೆ ಬರುವುದು ನಿಧಾನವಾದರೂ ಖಂಡಿತ ಅಸಾಧ್ಯವಲ್ಲ. ನೀವೇ ಪ್ರಯತ್ನಿಸಿ ನೋಡಿ. ಕೆಲ ಸಮಯದ ನಂತರ ನಿಮಗೇ ಗೊತ್ತಾಗುತ್ತೆ. ಈ ಬಗ್ಗೆ ಅಸಕ್ತಿಯನ್ನೇ ತೋರಿಸದೇ ಹಗುರವಾಗಿ ಮಾತಾಡಿದರೆ ಪ್ರಯೋಜನವಿಲ್ಲ. ನಿಮ್ಮ ಮನಸ್ಸಿನ ಆಟಗಳನ್ನು ನೀವೇ ಗಮನಿಸಿದರೆ ಎಲ್ಲಾ ಸ್ಪಷ್ಟ.
(ನಿಮಗೆ ಈ ರೀತಿಯ ಉತ್ತರ ಬೇಡದಿದ್ದರೆ ಬಿಟ್ಟು ಬಿಡಿ, ಒಂದು PJ ಅಂತ, Eye-wink )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 1, 2008 - 9:58pm — rameshbalaganchi

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

rameshbalaganchi's picture

"ದುಡ್ಡು ಕೊಟ್ಟು ಸೇರಬೇಕಾದ ಶಿಬಿರಗಳ ಬಗ್ಗೆ ಕೊಂಚ ಎಚ್ಚರವಿದ್ದರೆ ಒಳ್ಳೆಯದು"

ಸರಿಯಾದ ಸಲಹೆಯನ್ನೇ ಕೊಟ್ಟಿದ್ದೀರಿ. ಆದರೆ ಶ್ರೀ ಎಸ್. ಎನ್. ಗೋಯೆಂಕಾ ರವರ ನೇತೃತ್ವದಲ್ಲಿ ನಡೆಯುವ 10 ದಿನಗಳ ವಿಪಶ್ಶನ ಧ್ಯಾನ ಶಿಬಿರಗಳು ಇದಕ್ಕೆ ಒಂದು ಅಪವಾದ. ಇವು ಪೂರ್ಣ ಉಚಿತವಾದ ಶಿಬಿರಗಳು. ಊಟ, ವಸತಿ ಇತ್ಯಾದಿಗಳನ್ನೆಲ್ಲ ಅವರೇ ಏರ್ಪಡಿಸುತ್ತಾರೆ. ಶಿಬಿರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಅಷ್ಟೆ! ಶಿಬಿರ ಮುಗಿಯುವಾಗ ಶಿಬಿರಾರ್ಥಿಗಳು ತಮಗೆ ಇದರಿಂದ ಉಪಯುಕ್ತವೆನಿಸಿದರೆ ಸ್ವಯಂಪ್ರೇರಿತವಾಗಿ ಏನಾದರೂ ಹಣಕೊಡಬಹುದು. ಅದರಿಂದ ಮುಂದಿನ ಶಿಬಿರಗಳ ಏರ್ಪಾಟಿಗೆ ಸಹಾಯವಾಗುತ್ತದೆ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 5:02pm — Sunil Jayaprakash

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

Sunil Jayaprakash's picture

ಮಹೇಶರೆ, ತಮಗೆ ಇಷ್ಟವಿಲ್ಲದಿದ್ದರೆ ಇಲ್ಲಿ ಬರೆಯದೇ ಇರುವ ಹಕ್ಕು ನಿಮಗೆ ಇದ್ದೇ ಇದೆ. ಆದರೆ ಏನೇನೋ ಬರೆದು ಚರ್ಚೆಯನ್ನು ಹಾಳುಮಾಡಬೇಡಿ. ಇದು ಯೋಗ ಅತ್ವಾ ಸನ್ಯಾಸತ್ವದ ಬಗೆಗೆ ಇರುವ ಚರ್ಚೆಯಲ್ಲ. "ಮನಸ್ಸು ಉದ್ರೇಕಗೊಂಡಾಗ ಹೇಗೆ ಹತೋಟಿಯಲ್ಲಿಡಬೇಕು" ಅನ್ನೋದು. ಇದು ಬರೀ ಊಟಬೇಟಬಟ್ಟೆಗೆ ನಂಟಾದದ್ದಲ್ಲ. ಉದಾ -: "ನನಗೆ ಯಾರದೋ ಮೇಲೆ ತುಂಬಾ ಸಿಟ್ಟು ಬಂದು, ಅವರನ್ನು ಕೊಲೆ ಮಾಡಬೇಕು" ಎಂಬ ಯೋಚನೆ ಬರುತ್ತೆ ಅಂತಿಟ್ಟುಕೊಳ್ಳಿ, ಆ ಸನ್ನಿವೇಶದಲ್ಲಿ ಮನಸ್ಸನ್ನು ಹೇಗೆ ಅಂಕೆಯಲ್ಲಿ ಇಡಬೇಕು ಅನ್ನೋದು. ಇಂತಹ ಸನ್ನಿವೇಶಗಳಲ್ಲಿ ಮನಸ್ಸನ್ನು ಅಂಕೆಯಲ್ಲಿ ಇಟ್ಟುಕೊಳ್ಳುಬೇಕಾದುದು "ಒಂದು ಮರುಳು ಅತ್ವಾ ಯೋಗಿಗಳ ತೆವಲು" ಅಂತ ನನಗೆ ಖಂಡಿತ ಅನ್ನಿಸುವುದಿಲ್ಲ.

ನಿಮ್ಮ ನಂಬಿಕೆಗಳಿಗೆ ಪ್ರಕಾರ ಅವುಗಳು "ಮರುಳು, ಯೋಗಿಗಳ ತೆವಲು" ಅಂತ ಅನ್ನಿಸಿದರೆ ನಾವು ಏನೂ ಮಾಡಕ್ಕೆ ಆಗಲ್ಲ. ದಯವಿಟ್ಟು ಚರ್ಚೆಯನ್ನು ತಪ್ಪು ದಾರಿಗೆ ಎಳೆಯಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 5:29pm — mahesha

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

mahesha's picture

ತಲೆಸಾಲಿನಡಿಯಲ್ಲೇ ಇದೆ ನನ್ನ ಕಮೆಂಟು...

ಒಟ್ಟಿನಲ್ಲಿ ಮನದ ಹತೋಟಿ ಅನ್ನೋದು ಮರುಳು.. ಅದನ್ನು ’ಸಾಧಿಸು’ತೇವೆ ಎಂಬುದೂ ಮರಳು.............

ಸಿಟ್ಟು ಬಂದು ಒಬ್ಬರನ್ನು ಕೊಲೆ ಮಾಡಬೇಕು ಅನ್ನಿಸಿದರೆ.. ಮಾಡಲು ತಕ್ಕುಮೆ ಇದ್ದರೆ ಹೋಗಿ ಕೊಲೆ ಮಾಡುವೆವು.. ತಕ್ಕುಮೆ ಇಲ್ಲವೇ ಬಡವನ ಮುನಿಸು ದವಡೆಗೆ ಎಂದು ಸಿಟ್ಟುಮಾಡಿಕೊಂಡು ಸುಮ್ಮನಿರುವೆವು.

ತಪ್ಪು ದಾರಿಗೆ ಎಳೆದಿಲ್ಲ.. !!!

ನಿಮ್ಮದೇ ಕೊಸರು

Quote:

ಕೊಸರು - ಇದನ್ನು ವ್ಯಾಸಂಗದ ಅಡಿಯಲ್ಲಿ ಹಾಕಿದ್ದೇನೆ. ತತ್ವಜ್ಞಾನ, ವಿಜ್ಞಾನ, ವೈದ್ಯಕೀಯ ಹೀಗೆ, ಯಾವ ಹಿನ್ನೆಲೆಯಿಂದ ಬೇಕಾದರೂ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ.

ನಾನು ವಿಜ್ನಾನ, ತತ್ವಜ್ನಾನ ಮತ್ತು ಮೆಡಿಸಿನ್ ಮೂರರ ಅಡಿಯಲ್ಲಿ ನನ್ನನಿಸಿಕೆ ಅರುಹಿರುವುದು... ತಿಳಿಯುವಲ್ಲಿ ಕೊರತೆ ನಿಮ್ಮದು...

’ಮರುಳು’ ಎಂಬು ಒಂದು ಮನಕ್ಕೆ ನಂಟಾದ ಪಾಡು.. ಇದು ’ಹುಚ್ಚು’ ಎಂಬದ ಸಣ್ಣಬಗೆ.

ಮಾದರಿ: ನಾನು ನೋಡುತ್ತಿದ್ದೀನಿ.. ಎಂಬು ಮರುಳು.. ನನಗೆ ಕಾಣ್ತಾ ಇದೆ.. ಇದು ದಿಟ..! ಕಣ್ಣುಬಿಡುವುದಶ್ಟೇ ನಮ್ ಅಂಕೆಯಲ್ಲಿದೆ.. ಕಣ್ಣಮುಚ್ಚಿಕೊಂಡರೂ ನಮಗೆ ಕಾಣುವುದು.... (ಮಾದರಿ ಕನಸು.. ನಾವು ಕನಸು ನೋಡಲ್ಲ, ಕಾಣ್ತೀವಿ)..

ಈ ಬಗೆಯಲ್ಲಿ ನಾನು ಹೇಳಹೊರಟಿದ್ದು..
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 5:38pm — Sunil Jayaprakash

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

Sunil Jayaprakash's picture

ಮಹೇಶ wrote:
ಸಿಟ್ಟು ಬಂದು ಒಬ್ಬರನ್ನು ಕೊಲೆ ಮಾಡಬೇಕು ಅನ್ನಿಸಿದರೆ.. ಮಾಡಲು ತಕ್ಕುಮೆ ಇದ್ದರೆ ಹೋಗಿ ಕೊಲೆ ಮಾಡುವೆವು.. ತಕ್ಕುಮೆ ಇಲ್ಲವೇ ಬಡವನ ಮುನಿಸು ದವಡೆಗೆ ಎಂದು ಸಿಟ್ಟುಮಾಡಿಕೊಂಡು ಸುಮ್ಮನಿರುವೆವು.

ತಪ್ಪಾಯ್ತು, ಮನ್ನಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 5:35pm — mahesha

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

mahesha's picture

Quote:

ನಾನು ಕೆಲವೊಮ್ಮೆ ಒಂದು ದೊಡ್ಡ ಲೋಟ ನೀರು ಕುಡಿದು ಸುಮ್ಮನಾಗಿಬಿಡ್ತೀನಿ.

ಇದು ಒಂದು ಬಗೆಯಲ್ಲಿ ತನ್ನನ್ನು ತಾನೇ ಒಂದು ಮರುಳಿಗೆ ತಳ್ಳುವ ಜಾಣ್ಮೆ. ನನ್ನ ಸಿಟ್ಟು ಇಳಿಯಿತು. ನೀರು ಕುಡಿದಿದ್ದರಿಂದ ಎಂದು ’ಅಂದು’ಕೊಂಡುಬಿಡುವುದು...!!

ನಾವು ನಮ್ಮ ಹಲವು ಸರತಿ ಹೀಗೆ ಮಾಡುವುದುಂಟು.. ಆದರೆ ಅಲ್ಲಿ ನೀರು ಕುಡಿದುದಲ್ಲ ನಮ್ಮ ಸಿಟ್ಟು ಇಳಿಯಿತು ಎಂದು ಅಂದುಕೊಳ್ಳಲು ಓಸುಗರ.. ; ನಮ್ಮನ್ನು ನಾವೇ ತಳ್ಳಿಕೊಂಡ ’ಮರುಳು’ಪಾಡು/ಸ್ತಿತಿ ಅದಕ್ಕೆ ಓಸುಗರ/ಕಾರಣ.

ಇದೇ ದ್ಯಾನ ಮತ್ತು ತತ್ವಜ್ನಾನದ ಗುಟ್ಟು.. ನಮ್ಮ ಬಾಳು ಸಲೀಸಾಗಲೆಂದು ನಮಗೆ ಹೊರಲು ಅಂಜಿಕೆಯಾದ ಸಂಗತಿಯನ್ನು, ಹೊಣೆಗಳನ್ನು, ’ದೇವರು’ ಎಂಬು ಒಂದು ಹುಸಿಸಂಗತಿಯನ್ನು, ಮರುಳನ್ನು ನಂಬಿ ಅದರ ಹೊಣೆಗೆ ಬಿಡುವುದು.. ಅದನ್ನು ಇರುವುಅನ್ನು ನಂಬುವುದರ ಮರುಳಲ್ಲೇ ನಮಗೆ ನೆಮ್ಮದಿ...

ಹೀಗೆ ಮನದ ಹತೋಟಿ ಎಂಬುದೂ ಕೂಡ! ಮಾದರಿಗಳಲ್ಲಿ ಅರುಹಲು ತಿಣುಕಿದ್ದೀನಿ.. ಸೋತಿದ್ದಾರೆ ಮನ್ನಿಪು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 6:02pm — smurthygr

ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?

smurthygr's picture

ಮನಸ್ಸನ್ನಯ ಹತೋಟಿ ಮಾಡಲು ’ದೇವರು’ ಬರಬೇಕಾಗಿಲ್ಲ. ಹತೋಟಿ ನಮ್ಮಿಂದಲೇ ಸ್ವಲ್ಪ ಮಟ್ಟಿಗಾದರೂ ಖಂಡಿತ ಸಾಧ್ಯ. ಸಿಟ್ಟು ಬಂದಾಗ ಕೊಲೆ / ತೆಪ್ಪಗಿರುವುದು ಎರಡೇ ಸಾಧ್ಯತೆಗಳಲ್ಲ. ಅದಕ್ಕೆ ಬೇರೆ ಬೇರೆ ಪದರಗಳಿರುತ್ತವೆ ಅಂತ ಗೊತ್ತು ಮಾಡಿಕೊಂಡರೆ ಅದರೊಳಗೆ ಇಳಿಯುತ್ತಾ ಹೋದರೆ ಆಗ ನಮಗೇ ಏನಾದರೂ ಹೊಳೆಯಬಹುದು. ಇದಕ್ಕೆ ದೇವರು ತತ್ವಜ್ಞಾನ ಇತ್ಯಾದಿ ದೊಡ್ಡ ದೊಡ್ಡ ಹೆಸರುಗಳೇನೂ ಬೇಕಾಗಿಲ್ಲ. ನಮಗೆ ತಿಳಿದಿದ್ದಷ್ಟೇ ಸರಿಯಾಗಿರಬೇಕಿಲ್ಲ. ನಮಗೇ ಒಂದು ಸಲ ಸರಿ ಅನ್ನಿಸಿದ್ದು ಬೇರೆ ಸನ್ನಿವೇಶದಲ್ಲಿ ಅಥವಾ ಬೇರೆ ವಿವರಗಳು ತಿಳಿದ ನಂತರ ಸರಿಯಲ್ಲ ಅನಿಸಬಹುದು. Osho (ರಜನೀಶ್) ಪುಸ್ತಕಗಳನ್ನು ತೆರೆದ ಮನಸ್ನಿನಿಂದ ಓದಿದರೆ ಚಿಂತನೆಗೆ ಹೊಸ ದಾರಿ ಕಾಣಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನಸ್ಸಿನ ಮನಸ್ಸೆ...
  • ಮನಸ್ಸು
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !
  • ವಚನ ಚಿಂತನ ೪ : ಮನಸ್ಸು ಹೀಗೆ..
  • ವಚನ ಚಿಂತನ: ೬: ಮನಸ್ಸು ಕೋತಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
  • Aravinda
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 21, 2008 - 11:07pm
ಇನ್ನಷ್ಟು


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator