ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

June 30, 2008 - 2:26pm — roopablrao

ಇದೊಂದು ಕಥಾ ಸ್ಪರ್ಧೆ.

ಕೇವಲ ನಾಲ್ಕೇ(ಅದಕ್ಕೂ ಕಡಿಮೆ ಇದ್ದರೆ ಪರವಾಗಿಲ್ಲ) ಸಾಲಿನಲ್ಲಿ ಕತೆ ಹೇಳಬೇಕು (ಬರೆಯಬೇಕು)

ಉದಾಹರಣೆಗೆ ೧

ಟೈಟಲ್ : ಕಾಯುವಿಕೆ

೧) ಬಾಡಿ ಹೋದ ತನ್ನ ಬಾಳು ಮತ್ತೆ ಚಿಗುರಾಗಬೇಕೆಂದು ಪ್ರೀತಿಯ ನೀರ ಉಣಿಸುವವನಿಗಾಗಿ ಕಾಯುತ್ತಿದ್ದ್ದಂತೆ ಅವನು ಬಂದು ಅವಳ ಬಾಳ ಬಳ್ಳಿಯನ್ನೆ ಚಿವುಟಿ ಹೋದ.

ಉದಾಹರಣೆ ಎರೆಡು

ಟೈಟಲ್: ಕೊನೆ ಆಸೆ

೨) ಒಂದು ಸಲವಾದರೂ ತನ್ನನ್ನು ಎಲ್ಲರೂ ಹೊಗಳಬೇಕೆಂಬ ಆಸೆ ಆ ರಾಜಕಾರಣಿಗಿತ್ತು . ಆ ಸಮಯ ಬಂದಾಗ ಆ ಆನಂದವನ್ನು ಅವನು ಅನುಭವಿಸಲಾಗಲಿಲ್ಲ ಯಾಕೆಂದರೆ ಅವನು ಆಗಲೆ ಚಟ್ಟದ ಮೇಲೆ ಇದ್ದ.

ಉದಾಹರಣೆ ಮೂರು

ಟೈಟಲ್ : ಪಾತ್ರ

೩) ಸಿನಿಮಾದಲ್ಲಿ ಒಂದೇ ಒಂದು ಸಲವಾದರೂ ನಟಿಸಬೆಕೆಂಬ ಆಸೆ ಆ ಹುಡುಗನದು . ತನ್ನ ಆಸೆಯನ್ನು ನಿರ್ಮಾಪಕನೊಬ್ಬನಿಗೆ ಹೇಳಿಕೊಂಡಾಗ ಕೊನೆಗೂ ಪಾತ್ರ ಸಿಕ್ಕಿತು. ಅದು ಸಾವಿನ ಮೆರವಣಿಗೆಯ ಶವದ ಪಾತ್ರ.

ಹೀಗೆ ಬರೆಯುತ್ತೀರಲ್ಲ ?

‹ ಕ್ಯಾ೦ಡಲ್ ದೀಪದ ಬೆಳಕು - ಹೆಬ್ಬಾಲ್ ಕೆರೆ ಒಂದು ಸಾಕೋ, ಎರಡು ಬೇಕೋ? ›
  • ಸಮಾಜ
~.~
  • Login or register to post comments
  • 281 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 30, 2008 - 2:36pm — mahesha

ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

mahesha's picture

ಹಾಡು ಹಾಡಲು ಬಯಸಿದ ಮೂಗ-ಹುಡುಗಿ ಹಾಡು ಉಲಿಯಲಾರದೇ ಬೇಸರಗೊಂಡರು; ಹರುಪುತಂದು ಕೊಂಡು, ಸೊಗಸಾಗಿ ವೀಣೆಯನ್ನು ಕಲಿತು, ನುಡಿಸಿ, ಕೋಗಿಲೆಯ ಇಂಪನ್ನೂ ಮೀರಿಸಿ ನಲಿದು ನಲಿಸಿದಳು.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 2:40pm — roopablrao

ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

roopablrao's picture

ಸೂಪರ್

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 2:48pm — ಶ್ರೀನಿಧಿ

ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

ಶ್ರೀನಿಧಿ's picture

ಯಾಕೆ ಎಂದಳಾಕೆ
ಯಾಕಿಲ್ಲ, ನನಗಾಕೆ ಗೆಳತಿ - ಎಂದನಾತ
ಯಾಕೆ ಎಂದಳೀಕೆ
ಅದೆಲ್ಲಾ ನಿನಗ್ಯಾಕೆ ಎಂದಳಾ ಗೆಳತಿ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 2:51pm — mahesha

ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

mahesha's picture

Smiling

ಕತೆಬರಯಲು ಹೊರಟ ಶ್ರೀನಿಧಿ. ಯೋಚಿಸಿ ಯೋಚಿಸಿ, ಪ್ರಾಸಕ್ಕೆ ಪ್ರಾಸ ಸೇರಿಸಿ, ಆಕೆ ಈಕೆ ಅಂತ ಒಂದು ಕವನ ಬರೆದುಬಿಟ್ಟ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 2:57pm — ಶ್ರೀನಿಧಿ

ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

ಶ್ರೀನಿಧಿ's picture

ಆಕೆ ಮೇಲೆ ಕತೆ ಬರೆಯಲು ಹೋದರೆ ಕವನಾನೇ ಆಗೋದು Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 3:01pm — roopablrao

ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

roopablrao's picture

ಕತೆಯೋ ಕವಿತೆಯೋ ಅರ್ಥ ಇದ್ದರೆ ಸಾಕು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 3:05pm — mahesha

ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

mahesha's picture

ರೂಪಕ್ಕ ನಾಲಕ್ಕು ಸಾಲಿನ ಕತೆ ಬರೆಯೋ ತಮ್ಮ ಅಂದರು.
ತಮ್ಮ ತಿಮ್ಮ ನಾಲಕ್ಕು ಸಾಲಲ್ಲಿ ಕತೆ ಏನೂ, ಕವಿತೆ ಏನೂ, "ಮಹಾಕಬ್ಬವಂ ನೆಗೞ್ಪುವೆ" ಎಂದು ಹೞಗನ್ನಡದಲ್ಲೊಂದು ’ಘನಗಂಭೀರಮಹಾಗ್ರಾಹ್ಯಾಸಾಧ್ಯಮಹಾಕಾವ್ಯ’ ಎಂಬ ಕಾವ್ಯವನ್ನು ರಚಿಸಿ ತಂದು ಅಕ್ಕನಿಗೆ ತೋರಿಸಿದನು.
ಅಕ್ಕ, ಪಕಪಕ ಎಂದು ಎವೆರೆಕ್ಕೆಗಳನ್ನು ಇಕ್ಕಿ, ತಮ್ಮ ಪಕ್ಕ ಕೂತು.. ’ಮಾರಾಯ..’ ಎಂದು ಬೆನ್ನಿಗೆ ಗುದ್ದಿ ಕಿಲಕಿಲ ಎಂದು ನಕ್ಕಳು. Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 30, 2008 - 3:04pm — vikashegde

ಉ: ನಾಲ್ಕೇ ಸಾಲಿನಲ್ಲಿ ಕತೆ ಬರೆಯಬಲ್ಲಿರಾ?

vikashegde's picture

ನಮ್ ಮೇಸ್ಟ್ರೋಬ್ರು ರಾಮಾಯಣ ಕತೆನ್ನ ೪ ಸಾಲಲ್ಲಿ ಹೀಗೆ ಹೇಳ್ಕೊಟ್ಟ್ರಿದು

ದಶರಥನ ಕಂದ
ರಾವಣನ ಕೊಂದ
ಸೀತೆಯ ತಂದ
ರಾಮಾಯಣ ಗೋವಿಂದ

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ರದ್ಧಾ
  • ಪ್ರಸ್ತುತ ರಾಜಕಾರಣದಲ್ಲಿ ದೇವೇಗೌಡರ ಪಾತ್ರ!
  • ಟಿಪ್ಪು ಸುಲ್ತಾನ್ ಅಲ್ಲ ತಿಪ್ಪು ಸುಲ್ತಾನ್
  • ಇಳಿ, ಇೞಿ
  • ಸಿಂಧು ಭೈರವಿ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator