ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ದಯವಟ್ಟು ದೊಡ್ಡ ದೊಡ್ಡ ಮಂದಿಗಳೇ...
ನಿಮ್ಮ ಮೇಲ್ಮಟ್ಟದ ಬರಹವೆಂದು ಒಂದು ಮಣ ಸಂಸ್ಕೃತ ತುರುಕಿ ಬರೆದು ಅದು ಮೇರುಗನ್ನಡ, ಹಸನುಗನ್ನಡ ಎಂದು ಹಲವರು ಬರೆಯುತ್ತಿದ್ದೀರಿ.
ಕನ್ನಡದ ಕೊಲೆಗೆ ಹೆಚ್ಚೆಚ್ಚು ಸಂಸ್ಕೃತ/ಸಕ್ಕದದ ಒರೆಗಳ ಬಳಕೆಯೂ ಒಂದು ದೊಡ್ಡ ಓಸುಗರ/ಕಾರಣ. ದಯವಿಟ್ಟು ಅಪ್ಪಟಕನ್ನಡ ಒರೆ/ಪದಗಳನ್ನು ಕಲಿತು ಬಳಸಿರಿ.. ಮೊದಮೊದಲು ತುಸು ತೊಡರಾದರೂ ಬಳಿಕ ಸಲೀಸಾಗುವುದು.....
ನಮ್ಮ ಮನೆಯ ಬಚ್ಚಲುಮನೆ ಶೌಚಾಲಯವಾಗುವುದ ಬೇಡ..
ನಾವು ತಿನ್ನುವ ಊಟ, ಭೋಜನವಾಗುವುದು ಬೇಡ
ಹಾಗೆ
ನಾವು ಉಲಿಯುವ ನುಡಿ, ಭಾಷೆಯಾಗುವುದು ಬೇಡ.....!!
ಅಮ್ಮ ಜನನಿಯಾಗದೇ, ಅಪ್ಪ ಪಿತನಾಗದೇ ಇರಲಿ.
ಈ ಸಂಗತಿಯ ಬಗ್ಗೆ ಕೆವಿ ನಾರಾಯಣರ ’ಕನ್ನಡದ ಮೇಲೆ ಸಂಸ್ಕೃತದ ಸವಾರಿ’ ಮತ್ತು ಶಂಕರಬಟ್ಟರ ಹೊತ್ತಗೆಗಳನ್ನು ಓದಿ ಅರಿಯಿರಿ.
ಮೊದಲು ಸಂಸ್ಕೃತ ಕಡಮೆ ಮಾಡೋಣ, ಬಳಿಕೆ ಬೇರೆನುಡಿಗಳನ್ನೂ ಕೂಡ.. ಈಗ ಬಲುಹೆಚ್ಚು ಹೊರನುಡಿಒರೆಗಳು ಸಂಸ್ಕೃತದ್ದು ಕನ್ನಡದಲ್ಲಿ!
=====================

- Login or register to post comments
- 626 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಅದೇ ರಾಗ, ಅದೇ ಹಾಡು.......
ಆಯ್ತು ಬುದ್ಧಿ. ನೀವ್ಯೋಳ್ದಂಗೇ ಆಗ್ಲಿ.
**************************
http://vikasavada.blogspot.com/
**************************
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಈ ಕೋರಿಕೆಗೆ ತಿಳಿದವರು ಮರುಹೇಳಿರಿ...
ಇದು ಯಾರನ್ನು ಗುರಿಯಾಗಿಸಿ ಹೇಳಿದಲ್ಲ.. ಕೆಲವು ಕನ್ನಡದಲ್ಲೇ ಸಲೀಸಾಗಿ ಹೇಳಬಹುದಾದ ಸಂಗತಿಗಳನ್ನು ಉದ್ದು ಸಂಸ್ಕೃತ ಒರೆಗಳಲ್ಲಿ ಹೇಳಲಾಗುತ್ತಿದೆ.
ಮಾದರಿಯಾಗಿ
ಇದೂ ಕೂಡ ಯಾರನ್ನು ಗುರಿ ಮಾಡಿ ಅಲ್ಲ )
"ದೇಹ ತಂಪಾಗಲು" ಎಂದು ಹೇಳುವ ಬದಲು ’ಮೈ ತಂಪಾಗಲು’ ( ಒಡಲು ತಂಪಾಗಲು ) ಎಂದರೆ ಕನ್ನಡ ಒಂದು ಒರೆ/ಪದ ಬಳಕೆಯಿಂದ ತಪ್ಪುವುದನ್ನು ತಡೆಯಬಹುದು...
ದೇಹ, ಶರೀರ, ಬಾಡಿ ಇವೆಲ್ಲ ಕನ್ನಡಕ್ಕೆ ಎರವಲಾಗಿ ಬೇಡವಾದ ಹೊರನುಡಿ ಪದಗಳು ಏಕೆಂದರೆ ದೇಹ/ಶರೀರ/ಬಾಡಿ ಅನ್ನೋದಕ್ಕೆ ನಮ್ಮ ಬಳಿಯೇ ಮಯ್, ಒಡಲು ಎನ್ನುವ ಒರೆ ಇದೆ..
ಹಾಗೆ ತಂಪು ಇರಲಿ, ಶೀತ ಬೇಡ
ಬರಹ ಇರಲಿ, ಲೇಖನ ಬೇಡ
ಹೀಗೆ ಕನ್ನಡ ಒಂದೊಂದೇ ಒರೆಗಳನ್ನು ಸಂಸ್ಕೃತ ಇಂಗ್ಲೀಶಿನ ಪದ/ವರ್ಡುಗಳು ಕದಲಿಸುತ್ತಾ ಹೋದರೆ.. ಕನ್ನಡವು ಬರೀ ಹೊರನುಡಿಯಿಂದ ತುಂಬಿ ಹೋಗಿ, ಕನ್ನಡದ ’ಮಯ್, ಒಡಲು, ಹಕ್ಕಿ’ ಮುಂತಾದ ಒರೆಗಳು ಬಳಕೆ ತಪ್ಪಿ ಹಳಗನ್ನಡದ ಒರೆಗಳಂತೆ ಕಣ್ಮರೆಯಾಗುವುವು.
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಅಲ್ಲ ಗುರು... ಎಲ್ಲಾ ಅಚ್ಚ ಕನ್ನಡದಲ್ಲೇ ಬರೆದರೆ ಅರ್ಥ ಆಗೋದು ಕಷ್ಟ ಅನ್ಸತ್ತೆ. ಹೊತ್ತಗೆ ಅನ್ನೋದು ಪುಸ್ತಕಕ್ಕೆ ಕನ್ನಡ ಪದ ಆದರೂ ಹೆಚ್ಚು ಜನಕ್ಕೆ ಪುಸ್ತಕ ಅಂದ್ರೇನೇ ಅರ್ಥ ಆಗೋದು. ಭಾಷೆ ಇರೋದು ನಮಗೆ ಅರ್ಥ ಆಗಲಿ ಅಂತ ಅಲ್ವಾ?
ಕೀರ್ತಿ ಕಿರಣ್ ಎಂ
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಮಾರಾಯ..
ಇಲ್ಲಿ ನಿಮಗೆ ಹೊತ್ತಗೆ ಗೊತ್ತಿಲ್ಲ ಅಂದರೆ ಕನ್ನಡದ ಒಂದು ಒರೆ/ಪದ ಗೊತ್ತಿಲ್ಲ..
ಹಾಗಾದರೆ ಇಂಗ್ಲೀಶ್ ಮಾತಾಡುವಾಗಲೂ ಹೀಗೇ ಮಾತಾಡ್ತೀರ?
come for ಊಟ ಅಂತೀರ? ಆದರೆ ಲಂಚಿನಗೆ ಬಾ ಅನ್ನಬೋದು ಅಲ್ವ?
ಹೀಗೆ ಸಂಸ್ಕೃತದಲ್ಲೂ ಗುಬ್ಬಿ ಏಕಃ ಪಕ್ಷಿಃ ಎಂದು ಹೇಳಿಕೊಡಲ್ಲ ಬದಲಿಗೆ ಚಷಕಃ ಎಂದೇ ಗುಬ್ಬಿಗೆ ಹೇಳಿಕೊಡೋದು.. !!
ವಿಶಯ ಇರೋದು ಬಲುಕಡಮೆ ಬಳಸಿ ಅಂತ, ಬಳಸಲೇಬೇಡಿ ಅಂತ ಅಲ್ಲ.. !! ಅಚ್ಚಕನ್ನಡದ ಮಾತಲ್ಲ ಇದು.. !!
"ಭಾಷೆ ಇರೋದು ನಮಗೆ ಅರ್ಥ ಆಗಲಿ ಅಂತ ಅಲ್ವಾ?"
ಇನ್ನು ಕನ್ನಡ-ಗಿನ್ನಡ ಯಾಕೆ?
ಇಲ್ಲಿರುವ ಮೂರು ಮುಕ್ಕಾಲು ಮಂದಿಗೆ ಇಂಗ್ಲೀಶ್ ಬರತ್ತೆ ಹಾಗಂತ ಅದರಲ್ಲೇ ಮಾತಾಡಣ. ಅರ್ತ ಆಗತ್ತಲ್ಲ?
ತಲೆಸಾಲನ್ನು ಸರಿಯಾಗಿ ಓದಿ "ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ"
ಕನ್ನಡ ಉಳೀಬೇಕು ಅಂದರೆ ಕನ್ನಡದ ಒರೆಗಳು ಉಳೀಬೇಕು
ಕನ್ನಡ ಒರೆಗಳು ಉಳೀಬೇಕು ಅಂದರೆ ಹೊರನುಡಿಒರೆಗಳು ಕಡಮೆ ಆಗಬೇಕು
ಕನ್ನಡದಲ್ಲಿ ಬಲುಹೆಚ್ಚು ಇರುವ ಹೊರನುಡಿಒರೆಗಳು ಸಂಸ್ಕೃತದವು
ಅದಕ್ಕೆ ಸಂಸ್ಕೃತದ ಹೆಚ್ಚುವರಿ ಎರವಲು ಬಂದ ಒರೆಗಳ ಕಡಮೆಯಾಗಬೇಕು...
ಇದೇ ಲಾಜಿಕ್ಕು/ತರ್ಕ/ಎಣಿಕೆ ಇಂಗ್ಲೀಶೂ ಮುಂತಾದ ಹೊರನುಡಿಒರೆಗಳಿಗೂ ಹೊಂದುವುದು...!!
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಮಹೇಶ್,
ಇಲ್ಲಿರುವ ಸಮಸ್ಯೆ ಕನ್ನಡಿಗರು ಕನ್ನಡವನ್ನು ಬೞಸಲು ಕೀೞರಿಮೆಯಿಂದ ಬೞಲುತ್ತಿದ್ದಾರೆ. ಅವರಿಗೆ ನನ್ನ ಅಪ್ಪ ಅಥವಾ ನನ್ನ ತಂದೆ ಎನ್ನುವುದಕ್ಕಿಂತ ನನ್ನ daddy ಅಥವಾ father ಎಂದರೆ ಏನೋ ಸಾಧಿಸಿದ ಹಾಗೆ. ಅಪ್ಪ, ಅಮ್ಮ, ಮಾಮ, ಮಾಮಿ ಬದಲು daddy, mummy, uncle, aunt(ie) ಇತ್ಯಾದಿ ಪದಗಳನ್ನೇ ಬೞಸುತ್ತಾರೆ. ಹಾಗೆಯೆ ಕೆಲವು ಕನ್ನಡ ಪದಗಳಿಗೆ ವಿಶಾಲ ಅರ್ಥದ ಬೞಕೆ ಇದ್ದರೂ ಅದಱ ಸಂಕುಚಿತಾರ್ಥದ ಅಥವಾ ಬೇಱೆಯದನ್ನು ಸೂಚಿಸುವ ಅರ್ಥ ಬರುವುದೆಂದು ತಪ್ಪಾಗಿ ತಿಳಿದು ಆಂಗ್ಲ ಪದ ಬೞಸುತ್ತಾರೆ. ಉದಾಹರಣೆಗೆ ’ಕುಣಿ’ ಶಬ್ದಕ್ಕೆ ’ನರ್ತಿಸು’ , 'dance' ಅರ್ಥ ಇದ್ದರೂ. ಅವಳ ತಾಳಕ್ಕೆ ಕುಣಿಯುತ್ತಾನೆ ಎಂಬ ಅರ್ಥ ಮಾತ್ರ ತಮಗೆ ಗೊತ್ತಿರುವುದೆಂದು ನನ್ನ ಹೆಂಡತಿ ಹಾಗೂ ಆಕೆಯ ಗೆಳತಿಯೊಬ್ಬಳು ಹೇೞುವುದಱಿಂದ ಅವರು ಈ ’ಕುಣಿ’ ಗೆ ’dance' ಅಂತ ಮಾತ್ರ ಹೇೞುತ್ತಾರಂತೆ. ಹಾಗೆ ಕನ್ನಡದ ಬೆಂಜನ ಪದಾರ್ಥವಾದ ತೊಕ್ಕು/ಟೊಕ್ಕು ಕೇಳಲು ಅಷ್ಟಾಗಿ ಚೆನ್ನಾಗಿಲ್ಲವೆಂದು ಅದಕ್ಕೆ ಹುಳಿಚಟ್ನಿ ಎನ್ನುತ್ತೇನೆಂಬುದು ಇನ್ನೊಬ್ಬರ ಅಂಬೋಣ. ಇಲ್ಲೆಲ್ಲ ಈ ಜನಗಳ ಕೀೞಱಿಮೆಯಷ್ಟೇ ಎದ್ದುಕಾಣುತ್ತದೆ. ಇಂಥವರಿಂದ ಕನ್ನಡ ಉೞಿಯುತ್ತೆಂದು ನಾನು ಭಾವಿಸುವುದಿಲ್ಲ.
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಸಾರ್..
ಇಂಗ್ಲೀಶಿಂದ ತೊಂದರೆ( ಸಮಸ್ಯೆ ) ಇಲ್ಲ ಎಂದು ಇಲ್ಲಿ ಯಾರು ಹೇಳಿತ್ತುಲ್ಲಿ... ಯಾಕೆ ಮಾತು ಬದಲಿಸ್ತೀರಿ...
ಸಂಸ್ಕೃತದಿಂದ ಕನ್ನಡಕ್ಕಿರುವ ಕುಂದಿನ ಬಗ್ಗೆ ಮಾತು.. ಇಂಗ್ಲೀಶು ಮತ್ತು ಸಂಸ್ಕೃತ ಎರಡರಿಂದಲೂ ಕನ್ನಡಿಗರಿಗೆ ಕೀಳರಿಮೆ ಹತ್ತಿದೆ.
ಉದಾಹರಣೆ = ಮಾದರಿ
ಜನ = ಮಂದಿ
ಭಾವಿಸು = ಅಂದುಕೊಳ್ಳು, ಅನಿಸು
ವಿಶಾಲ = ದೊಡ್ಡ, ಹಿರಿದಾದ
ಅರ್ಥ = ತಿಳಿವು
ಸಂಕುಚಿತಾರ್ಥ = ಕುಗ್ಗಿದತಿಳಿವು
ಮಾತ್ರ = ಬರೀ
ಪದಾರ್ಥ = ಸರಕು...
ಇಂಥವರು ಅಲ್ಲ ಇಂತವರು/ಇಂತಹವರು
ಇನ್ನು ಕೇಳಲು ಚನ್ನಾಗಿಲ್ಲ ಅನ್ನೊರೇ ಚನ್ನಾಗಿಲ್ಲ
ಕನ್ನಡದ ಎಲ್ಲಒರೆಗಳು ಎಲ್ಲ ಕನ್ನಡಿಗರಿಗೂ ಇಂಪೇ.. ಒಂದು ಕನ್ನಡದ ಒರೆ ಕೇಳಲು ಚನ್ನಾಗಿಲ್ಲ ಅಂದರೆ ಅವರು ದಿಟಕನ್ನಡಿಗರೇ ಅಲ್ಲ.
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಯಾರು ಹೇಳಿತ್ತುಲ್ಲಿ = ಯಾರು ಹೇಳುತ್ತಿಲ್ಲ.. ತಿದ್ದು
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಮಹೇಶ
ನನ್ನ ಒಲವೂ ಈ ಕಡೆಯೇ ಇದೆ.
ನಾನು ಸಂಪದಕ್ಕೆ ಕಾಲಿಡುವ ( ಬೆರಳಿಡುವ!
) ಮುನ್ನ ಸಕ್ಕದ-ಕನ್ನಡ ಎರಡರ ವ್ಯತ್ಯಾಸ ನನಗೆ ಗುರ್ತಿಸಲು ಆಗ್ತ ಇರಲಿಲ್ಲ.ಅದರ ಕಡೆ ನನ್ನ ಗಮನ ಇರಲಿಲ್ಲ. ಜಾಸ್ತಿ ಸಕ್ಕದ ಬಳಸಿದಷ್ಟೂ ಅದು ಒಳ್ಳೆಯ / ಅಚ್ಚ ಕನ್ನಡ ಅಂತ ತಿಳಿದುಕೊಂಡಿದ್ದೆ.
ಸಂಪದದ ಕೆಲ ಬರವಣಿಗೆಗಳನ್ನು / ಪ್ರತಿಕ್ರಿಯೆಗಳನ್ನು ಓದಿದ ಮೇಲೆ ನನ್ನ ಅನಿಸಿಕೆ ಬದಲಾಯಿತು. ಅಚ್ಚಗನ್ನದತನವೇ ನನ್ನತನ ಆಗಿರುವಾಗ ನನಗಂತೂ ಕಡಿಮೆ ಸಕ್ಕದ / ಹೆಚ್ಚು ಕನ್ನಡ ದ ಬಳಕೆಯೇ ಸರಿ.
ಹೆಚ್ಚು ಕನ್ನಡ ಬಳಸುವ ಅವಶ್ಯಕತೆ ಇದೆ. ಆದರೆ ನಾನು ಇದನ್ನು ಕಷ್ಟ ಪಟ್ಟು ರೂಡಿಗೆ ತರಲಾರೆ. ಸಹಜವಾಗಿ ಹೆಚ್ಚು ಕನ್ನಡ ಬಳಸುವಾಗಲೂ ಹೆಚ್ಚು ಕನ್ನಡ ಬಳಸಲು ಸಾಧ್ಯ ಅಂತ ಅನುಭವಕ್ಕೆ ಬಂದಿದೆ. ಸಕ್ಕದ ( ಮತ್ತು ಇತರ ನುಡಿಯ) ಪದಗಳು ನನ್ನ ತಾಯ್ನುಡಿಯ ಪದಗಳನ್ನು ಬಳಕೆಯಿಂದ ಮರೆ ಮಾಡದಂತೆ ಎಚ್ಚರ ವಹಿಸುವ ಅವಶ್ಯಕೆತೆಯಂತೂ ಎದ್ದು ಕಾಣುತ್ತಿದೆ.
ಕೆಲವರಂತೂ ತಮ್ಮ ಮೇಲ್ಮೆಯನ್ನು ತೋರ್ಪಡಿಸಲು ಅವಶ್ಯಕತೆ ಇಲ್ಲದಿದ್ದರೂ ಸಕ್ಕದ ತುರುಕುತ್ತಾರೆ. ಈ ತರದ ಮನಸ್ತಿತಿಯಿಂದ ಹೊರಗಿರಲು ನಾನಂತೂ ಪ್ರಯತ್ನ ಮಾಡ್ತಾ ಇದ್ದೀನಿ.
ಸವಿತೃ
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ನನ್ನಿ...
ನೋಡಿ ನಿಮ್ಮ ಈ ಕಮೆಂಟಲ್ಲಿ(ಇಂಗ್ಲೀಶ ಪದ), ಎಶ್ಟು ಅಶ್ಟು ಹೊರನುಡಿಪದಗಳು ಬಳಕೆಯಾಗಿವೆ.
ಸಹಜ, ಅನುಬವ, ಮನಸ್ತಿತಿ(ಮೆಂಟಾಲಿಟಿ) ಇದಕ್ಕ ಕನ್ನಡದ್ದೇ ಪದ ಸಿಗುವುದು ಕಶ್ಟ( ಸಕ್ಕದ ಪದ)! ಅದಕ್ಕೆ ಅವುಗಳ ಬಳಕೆ ಸರಿಯೇ..
ಆದರೆ ಹಕ್ಕಿ, ಮಯ್ಯಿ, ಬಾಯಿ, ಕಣ್ಣು, ಅಮ್ಮ, ಅಪ್ಪ ಇಂತಹ ಪದಗಳನ್ನು ಪಕ್ಷಿ/ಖಗ, ಶರೀರ, ವದನ, ನೇತ್ರ, ಜನನಿ, ಜನಕ ಅಂತ ಕದಲಿಸಿದರೆ ತಪ್ಪಲ್ವ!
ಅರ್ತ ಆದರೆ ಸಾಕು ಎಂದ ನಮ್ಮ ಕೀರ್ತಿಕಿರಣ ಅವರ ಈ ಬರಹದ ಒಂದು ತುಣುಕು..
http://sampada.net/article/9551
"ರೂಪ್ ಕುಂಡ್: ಅಸ್ಥಿಪಂಜರಗಳ ಸರೋವರ"
( ನಾವು ಆಡುಮಾತಲ್ಲಿ ಅಸ್ಧಿಪಂಜರ ಅನ್ನೋದು ಕಡಮೆ. ಆ ಕರೆಯಲ್ಲಿ ಎಲುಬಿನ ಗೂಡುಗಳಿಲ್ಲ
ಬರೀ ಮೂಳೆಗಳಿವೆ.. ಮೂಳೆಗಳ ಸರೋವರ ಅನ್ನಬಹುದಿತ್ತು )
"ಹಿಮಾಲಯದ ಮಡಿಲಲ್ಲಿ ಅನೇಕ ನಿಗೂಢ ಸಂಗತಿಗಳನ್ನು, ಸ್ಥಳಗಳನ್ನು ಕಾಣಬಹುದು. "
ಅನೇಕ = ಹಲವು ( ಹಲವು ಹಲವು ಕನ್ನಡಿಗರಿಗೆ ತಿಳಿಯಲ್ವ? )
ರೂಪ್‌ಕುಂಡ್ ನ ದಾರಿಯಲ್ಲಿ ಕಾಣಸಿಗುವ ಪ್ರಕೃತಿ ಸೌಂದರ್ಯ ಅವರ್ಣನೀಯ
ಇಲ್ಲಿ ’ಅವರ್ಣನೀಯ’ ಎಂಬ ಬಳಕೆ ಕನ್ನಡ ನುಡಿಯ ಸೊಗಡಲ್ಲ. ಹೀಗೆ ಹೇಳುವುದು ಸಂಸ್ಕೃತ, ಇಂಗ್ಲೀಶ ಅಂತಹ ಇಂಡೋ ಆರ್ಯನ್ ನುಡಿಗಳ ಬಗೆ. ಇದು ಆಡುಮಾತಿಗೂ ದೂರ.. ( ಯಾರಾದರೂ ಹೀಗೆ ಮಾತಾಡ್ತಾರ? ಮಾತಲ್ಲಿ ’ಅನ್ನು ವರ್ಣಸಕ್ಕೇ ಆಗಲ್ಲ’ ಎಂದೇ ಹೇಳೋದು)
ಹೀಗೆ ಮೊದಲು ಪದಗಳು ನುಸುಳಿ ತರುವಾಯ, ಹೊರನುಡಿಯ ವ್ಯಾಕರಣವೂ ನುಸುಳುವುದು..
ವಿದ್ಯೆ ಸರಿ, ಆದರೆ ವಿದ್ಯಾಕೇಂದ್ರ ಯಾಕೆ?
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ನೀವು ಹೇಳೋದು ಸರಿ ಮಹೇಶ ಅವರೆ. ಮುಂದೆ ಹೆಚ್ಚು ಕನ್ನಡ ಪದಗಳ್ನ ಬಳಸ್ತೀನಿ.
ಕೀರ್ತಿ ಕಿರಣ್ ಎಂ
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಪದ ಅನ್ನೋದನ್ನ ’ಒರೆ’ಗಿಂತ ಹೆಚ್ಚು ಬಳಸಿ ವಾಡಿಕೆ. ಮನ್ನಿಸಿ.
ಕೀರ್ತಿ ಕಿರಣ್ ಎಂ
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಡಿ.ಎನ್.ಶಂಕರಬಟ್ಟ - ಕನ್ನಡದ ಹೆಸರಾಂತ ಲಿಂಗ್ವಿಸ್ಟರು/ಬಾಶಾವಿಜ್ನಾನಿ
ಇದು ಯಾವ ಭಾಷೆ ಅಂತ ತಿಳೀಲಿಲ್ಲ.
ಕೀರ್ತಿ ಕಿರಣ್ ಎಂ
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಅದಕ್ಕೆ ನೀವು ಶಂಕರಬಟ್ಟರ ಹೊತ್ತಗೆ ಓದಬೇಕು...
ಓದಿ , ನಮಗೇ ಅರಿವಾಗುವುದು..!
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಪದ ಬಳಕೆ ಬಗ್ಗೆ ಅಡ್ಡಿಯಿಲ್ಲ.... ಒರೆಯ ಬಳಕೆ ಬಗ್ಗೆ ಅಡ್ಡಿಬೇಡ.
ಬಲುಕಡಮೆ ಹೊರತು ಬೇಡವೇ ಬೇಡ ಅಂತ ಅಲ್ಲ... ಒರೆ-ಗೊತ್ತಿರದಿದ್ದರೆ ಏನು ಮಾಡಲಾದೀತು?
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ನನ್ನಿ! ನಲಿವಾಯ್ತು!
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
Visit my blog:
http://kannada-nudi.blogspot.com
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಮಹೇಶ,
ಸಂಸ್ಕೃತ ಸತ್ತು ಹೋಗಿರುವ ಭಾಷೆ, ಯಾಕೆಂದರೆ ಸಂಸ್ಕೃತದಲ್ಲಿ ಮಾತಾಡುವವರು ಯಾರೂ ಉಳಿದಿಲ್ಲ. ಕನ್ನಡಕ್ಕೆ ಈಗ ಸಂಸ್ಕೃತದಿಂದ ಯಾವ ಭೀತಿಯೂ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಕನ್ನಡಕ್ಕೆ ನಿಜವಾಗಿ ಏಟು ಬೀಳುತ್ತಿರುವುದು ಇಂಗ್ಲೀಶಿನಿಂದ.
ಬಚ್ಚಲುಮನೆ ಈಗಾಗಲೇ ಬಾತ್ರೂಮ್ ಆಗಿದೆ (ಬೆಂಗಳೂರಿನಲ್ಲಿ ನಾನು ಯಾರ ಮಾತಿನಲ್ಲೂ ಬಚ್ಚಲುಮನೆ ಪದವನ್ನೇ ಕೇಳಿಲ್ಲ), ಶೌಚಾಲಯ ಅಂತ ಅಲ್ಲಲ್ಲಿ ಬರೆಯುತ್ತಾರೆ ಅಷ್ಟೆ.
ಭೋಜನ ಈಗಾಗಲೇ ಲಂಚ್, ಡಿನ್ನರ್ ಆಗಿದೆ, ಭೋಜನ ಎಂದು ಎಲ್ಲೂ ಬರೆದಿರುವುದನ್ನೂ ಕಾಣೆ. ಎಲ್ಲ ಹೊಟೆಲುಗಳ ಮುಂದೆ "ಊಟ ತಯಾರಿದೆ" ಎಂದು ಬರೆದಿರುತ್ತರೆಯೇ ಹೊರತು "ಭೋಜನ ಲಬ್ಧವಿದೆ" ಎಂದು ಬರೆದುದನ್ನು ಕಾಣೆ.
ಅಮ್ಮ ಈಗಾಗಲೇ ಮಮ್ಮಾ, ಮಾಮ್ ಆಗಿದ್ದಾಳ, ಅಪ್ಪ ಡ್ಯಾಡ್, ಡ್ಯಾಡಿ, ಪಪ್ಪಾ ಆಗಿ ಬಹಳ ಕಾಲವಾಯಿತು.
ಕನ್ನಡ ಉಳಿಸಲು ಬರೀ ಸಂಸ್ಕೃತವನ್ನು ಕಡಿಮೆ ಮಾಡಿದರೆ ಸಾಲದು, ಅದಕ್ಕೂ ಹೆಚ್ಚಾಗಿ ಇಂಗ್ಲೀಷನ್ನು ಕಡಿಮೆ ಮಾಡುವುದರತ್ತ ಹೆಚ್ಚು ಚರ್ಚೆಯಾಗಬೇಕು. ಸಂಸ್ಕೃತದ ಮೇಲಿರುವ ಸಿಟ್ಟು ಸ್ವಲ್ಪ ಇಂಗ್ಲೀಷಿನ ಮೇಲೂ ಹಾಯಿಸಿ.
-ಕೇಶವ
Visit my blog:
http://kannada-nudi.blogspot.com
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ನಿಮ್ಮ ಅನಿಸಿಕೆ ತಪ್ಪು..
ಕಕ್ಕಸುಮನೆ ಶೌಚಾಲಯ
ಅಚ್ಚುಮನೆ ಮುದ್ರಣಾಲಯ
ದೊಡ್ಡ ಬೆಂಗಳೂರು => ಬೃಹತ್ ಬೆಂಗಳೂರು
ಇವೆಲ್ಲ ಸಂಸ್ಕೃತದ ಹೊಡೆತವೇ>..
ಇಂಗ್ಲೀಶೂ ಬೇಡ, ಸಂಸ್ಕೃತವೂ ಬೇಡ.. ಇಂದು ಕನ್ನಡ ನಿಗಂಟು ಎಂದು ಹೊರಬಂದಿರುವ ಹಲವು ಒರೆಗಂಟಲ್ಲಿ ೫೦% ಹೆಚ್ಚು ಸಂಸ್ಕೃತಪದಗಳಿವೆ...
ಒಮ್ಮೆ ನೋಡಿ.. ನಿಮ್ಮ ಅನಿಸಿಗಿಂತ ಲೆಕ್ಕ ಸಂಸ್ಕೃತವನ್ನೇ ಬೆರಳುಮಾಡಿ ತೋರುವುದು..
’ಬೃಹತ್ ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರ’ ಕನ್ನಡವಲ್ಲ ಸಂಸ್ಕೃತ !!
ಅಬ್ಬ ಸಂಸ್ಕೃತ ಸತ್ತಿದೆ ಎಂದು ಹೇಳಿದ್ದಕ್ಕೆ ನನ್ನಿ.. ಹಲವರು ಇನ್ನು ಅದನ್ನು ಮರುಹುಟ್ಟುಹಾಕು ಸರ್ಕಸ್ ಮಾಡುತ್ತಿದ್ದಾರೆ. ಅದರ ಹೊಡೆತ ಕನ್ನಡಕ್ಕೆ ಬೀಳುತ್ತಿದೆ.
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಮಹೇಶ್,
ನೀವು ಕೊಟ್ಟ ಉದಾಹರಣೆಗಳನ್ನು ದಿನನಿತ್ಯದ ಉಪಯೋಗದಲ್ಲಿ ಯಾರೂ ಬಳಸಿದ್ದನ್ನು ನಾನು ನೋಡಿಲ್ಲ..
ಕನ್ನಡಕ್ಕೆ ಸಂಸ್ಕೃತದಿಂದ ಅಂಥ ತೊಂದರೆ ಇದೆ ಅನ್ನಿಸಲ್ಲ..
-ವರುಣ ಭಟ್
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ದಯವಿಟ್ಟು ಡಿ.ಎನ್.ಶಂಕರ ಬಟ್ಟರ ಹೊತ್ತಿಗೆಗಳನ್ನು ಓದಿ ಮತ್ತು ಇಲ್ಲೆ ಸಂಪದದಲ್ಲೇ ಆಗಿರುವ ಚರ್ಚೆಗಳನ್ನು ನೋಡಿ. ಆಮೇಲೆ ಹೇಳಿ ಸಕ್ಕದದಿಂದ ತೊಂದರೆಯಿಲ್ಲ, ನೋಡೋಣ.
ಇಂಗಲೀಸಿನಿಂದ ಎಲ್ಲ ನುಡಿಗಳಿಗೆ(ತಮಿಳು,ತೆಲುಗು..) ತೊಂದರೆಯಾಗಿದೆ. ಆದರೆ ಸಕ್ಕದದಿಂದ ತೊಂದರೆಯಾಗಿರುವುದು ಬರೀ ಕನ್ನಡಕ್ಕೆ. ಅದರಲ್ಲೂ ಬರಹಗನ್ನಡಕ್ಕೆ.
ಯಾದೃಚ್ಚಿಕ, ವಾಙ್ಮಯ,ಶೌಚಾಲಯ,ಧೂಮಪಾನ ನಿಷೇಧಿಸಲಾಗಿದೆ, ಖಗೋಳವಿಙ್ಞಾನ,ಕಾರಾಗೃಹ, ಪುರುಷರು,ನಿಷ್ಕರ್ಷೆ..ಅಬ್ಬ . ..ಈ ತೆರನಾದ ಪದಗಳು ಕನ್ನಡವನ್ನು ಹಾಡು ಹಗಲೇ ಕೊಲ್ಲುತ್ತಿವೆ. ಇವೆಲ್ಲ ಪದಗಳು ಇಂದು ಸುದ್ದಿಯೋಲೆಗಳಲ್ಲಿ ದಿನ ಬರುವ ಪದಗಳು ಅತ್ವ ದೊಡ್ಡ ಬಸ್ ನಿಲ್ದಾಣದಲ್ಲಿ ಕಾಣಬರುವ ಪದಗಳು. ನಾವು ನಮ್ಮ ಮನೆಯಲ್ಲಿ ಬೇರೆಯವರಂತೆ ನಡೆದುಕೊಳ್ಳಬೇಕಾಗಿದೆ. ನಮಗೆ ನಮ್ಮ ನುಡಿ ನಮ್ಮದಲ್ಲ ಅನ್ನಿಸತೊಡಿಗಿದೆ ಈ ಸಕ್ಕದ ಪದಗಳಿಂದ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ದಿನನಿತ್ಯ = ದಿನಾಲೂ, ದಿನಾಗಲೂ ( ನಿತ್ಯ = ಯಾವಾಗಲು)
ಉಪಯೋಗ = ಬಳಕೆ
ಉದಾಹರಣೆ = ಮಾದರಿ...
ನೋಡಿ ನಿಮಗೆ ಗೊತ್ತಿಲ್ಲ ಮೂರು ಕನ್ನಡದ ಒರೆಗಳ ಬಳಕೆ ತಪ್ಪಿದವು.. ಇದನ್ನೇ ಹೇಳಿದ್ದು...
ನಿಮಗೆ ಅನ್ನಿಸಲ್ಲ, ಆದರೆ ಲೆಕ್ಕ/ಅಂಕಿಅಂಶ ಸಂಸ್ಕೃತ ಒಂದೊಂದಾಗಿ ಕನ್ನಡ ಒರೆಗಳನ್ನು ನುಂಗಿ ಹಾಕುತ್ತಿರುವುದನ್ನು ತೋರಿಸುತ್ತದೆ...
ಮಾದರಿ = ಬಸ್ಸಲ್ಲಿ ’ಸ್ತ್ರೀಯರಿಗೆ, ಮಹಿಳೆಯರಿಗೆ’ ಯಾಕೆ ’ಹೆಂಗಸರಿಗೆ’ ಎಂದು ತಾನೆ ಇರಬೇಕು.!!!
ನೀವು ಗಮನಿಸಿಲ್ಲ.!
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಆದರೆ ಮಹೇಶ ಅವರೆ,
ಕನ್ನಡ ಪದ ಬಳಸೋದರ ಜೊತೆಗೆ ಕನ್ನಡ ಸೊಗಡೂ ಇರ್ಬೇಕು ಅಲ್ವಾ... ಉದಾಹರಣೆಗೆ, ಮಹಾಜನಗಳೇ ಅನ್ನುವ ಬದಲು ದೊಡ್ಡ ದೊಡ್ಡ ಮಂದಿಗಳೇ ಅಂತ ಬರ್ದಿದೀರಿ. ಅದು ಕೃತಕ ಅನ್ನಿಸೋದಿಲ್ವಾ? ದೊಡ್ಡ ದೊಡ್ಡ ಮಂದಿಗಳೇ ಅನ್ನೋ ಬಳಕೆ ನಾನೆಲ್ಲೂ ಕೇಳಿರ್ಲಿಲ್ಲ. ಇಲ್ಲಿ ನೀವು ಕನ್ನಡ ಪದಗಳೇ ಬಳಸಿದ್ದೂ ಯಾಕೋ ಹೊಂದುತ್ತಿಲ್ಲ ಅನ್ಸತ್ತೆ. ನೀವೇನ್ ಹೇಳ್ತೀರ?
ಕೀರ್ತಿ ಕಿರಣ್ ಎಂ
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಹೊಂದುತ್ತೆ.. ತುಸು ಹೊತ್ತಾಗ್ತದೆ...
ಹೊಸತು ಯಾವಾಗಲೂ ಹೊಸತೇ..... ನಿಮಗಿದು ಹೊಸತು. ಅಲುವಾಟ(ಅಬ್ಯಾಸ), ಚಟಗಳನ್ನು ಬಿಡಲು ತುಸು ಎಡರೇ(ಕಶ್ಟವೇ)...!!
ಅದಕ್ಕೆ ಬಲುಕಡಮೆ ಅಂದಿದ್ದು.. ಒಂದೂ ಹೊರನುಡಿಒರೆ ಇಲ್ಲದೇ ಬರೆಯಲು ತಿಣುಕಿ(ಪ್ರಯತ್ನಿಸಿ)... ಆಗ ಹೊಂದುತ್ತಾ ಹೋಗ್ತದೆ...!!
ಇದಕ್ಕೆ ನೀವಿನ್ನು ಹೊಸಬರು.. ಹೀಗೆ ಪಳಗಿದ ದೊಡ್ಡದೊಡ್ಡಮಂದಿ( ಮಹನೀಯರು) ಸಂಪದದಲ್ಲೇ ಇದ್ದಾರೆ. ಅವರಿಗೆ ಈಗ ನಾವು ಏನು ಬರೆದರೂ ಸರಿಯಾಗೇ ತಿಳಿಯುವುದು.
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಕೀರ್ತಿ೨ಕಿರಣ್(ನಿಮ್ಮ ಹೆಸರಿನಲ್ಲಿ ಏನೋ ಸೆಳೆತವಿದೆ), "ಅಹಂಕಾರ" ಅಡ್ಡಬರದಿದ್ದರೆ , "ದೊಡ್ಡ ದೊಡ್ಡ ಮಂದಿಗಳೇ" ಅನ್ನೋದಕ್ಕಿಂತ ಎಲ್ಲರನ್ನೂ ಸೇರಿಸಿ "ಹಿರಿಯರೆ" ಅನ್ನಬಹುದು. ಕೇಳೋಕ್ಕೆ ಹಿತವಾಗಿರತ್ತೆ.
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಕೇಳೋದಕ್ಕೆ ಇನಿಯಾಗಿತ್ತೆ ಹವುದು..!
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಆದರೆ ಮಹೇಶ ಅವರೆ,
ಕನ್ನಡ ಪದ ಬಳಸೋದರ ಜೊತೆಗೆ ಕನ್ನಡ ಸೊಗಡೂ ಇರ್ಬೇಕು ಅಲ್ವಾ... ಉದಾಹರಣೆಗೆ, ಮಹಾಜನಗಳೇ ಅನ್ನುವ ಬದಲು ದೊಡ್ಡ ದೊಡ್ಡ ಮಂದಿಗಳೇ ಅಂತ ಬರ್ದಿದೀರಿ. ಅದು ಕೃತಕ ಅನ್ನಿಸೋದಿಲ್ವಾ? ದೊಡ್ಡ ದೊಡ್ಡ ಮಂದಿಗಳೇ ಅನ್ನೋ ಬಳಕೆ ನಾನೆಲ್ಲೂ ಕೇಳಿರ್ಲಿಲ್ಲ. ಇಲ್ಲಿ ನೀವು ಕನ್ನಡ ಪದಗಳೇ ಬಳಸಿದ್ರೂ ಯಾಕೋ ಹೊಂದುತ್ತಿಲ್ಲ ಅನ್ಸತ್ತೆ. ನೀವೇನ್ ಹೇಳ್ತೀರ?
ಕೀರ್ತಿ ಕಿರಣ್ ಎಂ
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಗೆಳೆಯರೆ, ಒಂದು ಕಿವಿಮಾತು. ಮೂಲ ಬರಹದಲ್ಲಿ ಇದರ ಪ್ರಸ್ತಾಪವಿಲ್ಲವಾದ್ದರಿಂದ ಬರೆಯುತ್ತಿದ್ದೇನೆ. ಬೇರೆನುಡಿಯ ಪದಬಳಕೆಯನ್ನು ಕಡಿಮೆ ಮಾಡಿ ಕನ್ನಡ ಪದಗಳನ್ನು ಹೆಚ್ಚು ಬಳಸಿ ಎನ್ನುವಾಗ ಆಡುನುಡಿಯ ಪ್ರತ್ಯಯಗಳನ್ನು ಬಳಸಿ ಅಂತ ಹೇಳಿದ ಹಾಗೆ ಅಲ್ಲ.
ಅಂದರೆ ಮಂಡ್ಯದವರು, "ಬಂದಯ್ತೆ" ಅಂತಲೋ, ಅಥ್ವಾ ಹವ್ಯಕರು "ಬಂಜಡ", ಧಾರವಾಡದವರು "ಬಂದ್ಯದ" ಅಂತಲೂ ಬಳಸಿರಿ ಅಂತ ಹೇಳಿದ ಹಾಗೆ ಆಗುವುದಿಲ್ಲ. ಇಂತಹ ಆಯಾ ಪ್ರದೇಶದ ಪ್ರತ್ಯಯಗಳನ್ನು ಬರಹ ರೂಪಕ್ಕೆ ಇಳಿಸಿದರೆ, ಬೇರೆಯವರಿಗೆ ಓದುವಾಗ ಮುಜುಗರವಾಗುವುದು. ಆದ್ದರಿಂದ ನನಗನ್ನಿಸುವುದು, ಬೇರೆ ಬೇರೆ ಪ್ರದೇಶದ ಕನ್ನಡದ ಧಾತುಗಳಿಗೆ "ಶಿಷ್ಟ" ಪ್ರತ್ಯಯಗಳನ್ನು ಸೇರಿಸಿದರೆ (ಉದಾ- ಬಂದಿದೆ, ಇಲ್ಲಿ ಶಿಷ್ಟ ಪ್ರತ್ಯಯವನ್ನು ಬಳಸುತ್ತದೆ) ಆಗ ಓದುವವರಿಗೆ, ಕೇಳುವವರಿಗೆ ಮುಜುಗರವೂ ಆಗುವುದಿಲ್ಲ, ಕನ್ನಡದ ಹೆಚ್ಚು ಹೆಚ್ಚು ಪದಗಳು ಚಾಲ್ತಿಗೂ ಬಂದಂತೆ ಆಗುತ್ತದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ?
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಹೊಸ ಮಾತುಕತೆ ತೆಗೆಯಲು ಮನವಿ...
ಪ್ರಸ್ತಾಪ = ಮಾತೆತ್ತು
ಪ್ರತ್ಯಯ = ಒಟ್ಟು
ಬರಹ ರೂಪಕ್ಕೆ ಇಳಿಸು = ಬರಹಕ್ಕೆ ತರು
ಆಯಾ ಪ್ರದೇಶ = ಆ ಜಾಗ
ಮುಜುಗರ = ಇರುಸುಮುರುಸು
ಚಾಲ್ತಿಗೆ ಬರು = ಬಳಕೆಯಲ್ಲಿ ತರು,
ಈ ಮಾತುಕತೆ "ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!"
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಆಸಕ್ತಿಯಿದ್ದರೆ ಓದಿ. ಕನ್ನಡ ಪದಗಳ ಬಳಕೆಯಲ್ಲಿನ ಮುಜುಗರವನ್ನು ಮೀರೋದು ಹೇಗೆ ?. ಹಾಂ! ಓದದೇ ಇರುವ ಹಕ್ಕು ನಿಮಗೆ ಇದೆ.
ಅಂದಹಾಗೆ, "ಮುಜುಗರ" ಕನ್ನಡವಲ್ಲದ ರೀತಿ, "ಆಯಾ ಪ್ರದೇಶ = ಆ ಜಾಗ" ಕೂಡ ಕನ್ನಡವಲ್ಲ, ಅಲ್ಲವೇ ?
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಜಾಗ ಕನ್ನಡವೇ... ಮೂಲ ಬೇರೆ ಇದ್ದರೂ.. ( ತದ್ಬವಗಳನ್ನು ಕಂನಡವೆಂದೇ ಎಣಿಸಬಹುದು )
ಪ್ರದೇಶ ಕನ್ನಡದ ಉಲಿಕೆಗೆ ಒಗ್ಗದ ಒರೆ. ನಿಮ್ಮ ಸಮಸಂಸ್ಕೃತ ಪಾಪೆಯನ್ನು ನೋಡಿರಿ.
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಹ್ಮ್. ಒಳ್ಳೆ ಪಾಯಿಂಟ್. ಹಾಗಾದರೆ, ಮುಜುಗರ ಕನ್ನಡವಲ್ಲವೇ ? "ಮುಜುಗರ = ಇರುಸುಮುರುಸು, ಚಾಲ್ತಿಗೆ ಬರು = ಬಳಕೆಯಲ್ಲಿ ತರು" ಎಂದು ಹೇಳುವುದರ ಔಚಿತ್ಯ(=ತೆವಲು) ಏನಿತ್ತು ?
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
mahesha
ಗೊತ್ತಾಗಲಿಲ್ಲ. ಪ್ರತ್ಯಯವೆಂದರೆ ಕೊನೆಯಲ್ಲಿ ಸೇರುವಂಥದ್ದು/suffix ಎಂದುಕೊಂಡಿದ್ದೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಇಲ್ಲಿಯ ಮಾತುಕತೆ ಒಟ್ಟುಗಳ ಬಗ್ಗೆ ಅಲ್ಲ.!
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ನಿಮ್ಮಲ್ಲಿ ಎಷ್ಟು ಮಂದಿ ಕನ್ನಡದ ನಾಱು=ವಾಸನೆ ಬೀಱು ಪದವನ್ನು ಮೈಸೂರು ಮಲ್ಲಿಗೆ ಘಮ್ಮೆಂದು ನಾಱುತ್ತಿದೆ ಎಂದು ಬೞಸಲು ಒಪ್ಪುತ್ತೀರಿ?
ಘಮ್ಮೆಂದು ನಾಱುವ ಅಡಿಗೆ ಬಾಯಲ್ಲಿ ನೀರೂರಿಸುತ್ತಿದೆ ಎಂದು ಬೞಸಲು ಇಚ್ಛಿಸುತ್ತೀರಾ?
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಇಲ್ಲಿನ ಮಾತುಕತೆಗೆ ನಂಟಾಗಿಲ್ಲ ನಿಮ್ಮ ಕಮೆಂಟು!
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಯಾಕೆಂದರೆ ’ನಾಱು’ ಕೀೞೆಂದು ಪರಿಗಣಿಸಿ ’ಪರಿಮಳ’ ಪದವನ್ನು ಬಳಸುತ್ತಾರೆ. ಆದ್ದಱಿಂದ ಪರಿಮಳ ಬೇಕಾಗಿಲ್ಲದ ಸಕ್ಕದ ಪದ.
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ನಾವು ಕಂಪು ಬಳಸುವೆವು..
ನಾರು ಬಳಸಲ್ಲ.. ಏನೋ ಕಂಪು.. ಏನೋ ಗಬ್ಬು.. ಸರಿ..!
ಪರಿಮಳ ನಮ್ಮಲ್ಲಿ ಬಳಕೆ ಇಲ್ಲ. ಕೆಟ್ಟವಾಸನೆ ಮತ್ತು ಒಳ್ಳೇವಾಸನೆ ಎಂದು ಹಲವರು ಹೇಳೋದು ಕೇಳಿದ್ದೀನಿ..
ನನ್ನಿ
=====================================
ಮಾಯ್ಸ!
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ನಾಱು ಬಳಸಲು ನಿಮಗೇಕೆ ಹಿಂಜರಿಕೆ? ’ನಾಱು’ ಪದಕ್ಕೆ ಎಲ್ಲೂ ಕೀೞರ್ಥವಿಲ್ಲ. ಅದನ್ನು ಕೀೞುಮಾಡಿದವರು ನಾವು. ನೀವು ಮಲ್ಲಿಗೆ ಹೂವು ಘಮ್ಮೆಂದು ನಾಱುತ್ತಿದೆ ಎಂದು ಬಳಸಲೇಬೇಕೆಂದು ನನ್ನ್ನ ಕಟ್ಟೊತ್ತಾಯ.
ಉ: ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
ಸರಿ ಬಳಸ್ತೀವಿ
=====================================
ಮಾಯ್ಸ!