ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

July 3, 2008 - 11:09am — harshavardhan v...

ನಾವೇಕೆ ಹೀಗೆ?

ಗುಡ್ಡ ಸುತ್ತಿ ಮೈಲಾರಕ್ಕೆ ಹೋದಹಾಗೆ? ಯಾವುದೇ ವಿಷಯವಿರಲಿ, ಆ ಪರಿಸ್ಥಿತಿಯ ಆಳ, ಅಗಲ, ವ್ಯಾಪ್ತಿ ಮತ್ತು ಪರಿಣಾಮಗಳನ್ನು ಗಮನಿಸದೇ ಸಾರ್ವತ್ರಿಕವಾಗಿ ಹೇರ ಹೋಗುವುದು?
ಹೋಗಲಿ. ಅದು ವ್ಯಕ್ತಿ, ಸಮುದಾಯ ಅಥವಾ ಪ್ರಾದೇಶಿಕ ಹಂತದಲ್ಲಿ ಪರಿಹಾರ ಕಂಡುಕೊಳ್ಳಬಲ್ಲ ಸಮಸ್ಯೆಯಾಗಿದ್ದರೆ ಅಡ್ಡಿ ಇಲ್ಲ.

‹ ಕನ್ನಡಕ್ಕೊಂದು CMS ನಮಗೆ ರಿಮೇಕ್ ಪತ್ರಿಕೆ ಬೇಕೇ? ›
  • ಸುದ್ದಿ, ಸಮಾಚಾರ
~.~
  • Login or register to post comments
  • 441 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2008 - 11:49am — vikashegde

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

vikashegde's picture

ಏನ್ ಸಾರ್ ಅದು ನಿಭಂಧ!

ಇದು ಸಾರ್ವತ್ರಿಕ ವಿಷ್ಯನೇ ಹೌದಲ್ವಾ. ಹಿಂದೂ ಬಹುಸಂಖ್ಯಾತ ಭಾರತ ದೇಶದಲ್ಲಿ ಬಹಳ ಜನರು ಭೇಟಿ ಕೊಡುವ ಒಂದು ದೇವಾಲಯಕ್ಕೆ ಜಾಗ ಕೊಟ್ಟಿದ್ದನ್ನ ವಿರೋಧಿಸುವುದು, ಅದನ್ನು ವಾಪಸ್ ಪಡೆಯುವುದು ಇವೆಲ್ಲಾ ಜಾತ್ಯಾತೀತ ದೇಶದ ಲಕ್ಷಣಗಳಾ? ಪ್ರಾದೇಶಿಕ ಹಂತದ ಸಮಸ್ಯೆ ದೇಶದ ಜನರಿಗೆಲ್ಲಾ ಆದ ಅವಮಾನವಲ್ವಾ?

ನಾವೇಕೆ ಹೀಗೆ?

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 11:59am — mahesha

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

mahesha's picture

ಗೊಡವೆ ಏನೆಂದು ತಿಳಿಸಿರಿ.. ನನಗೆ ’ಬಂದ್’/ತಡೆ ಯಾಕೆ ಅಂತ ಹೊಳೀತಿಲ್ಲ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 12:53pm — hpn

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

hpn's picture

ನಿಜ. ಕಾಶ್ಮೀರದಲ್ಲಿರುವ ಸಮಸ್ಯೆಗಾಗಿ ದೂರದಲ್ಲಿರುವ ಒಂದು ಊರನ್ನು ದಿನವಿಡೀ ಸ್ಥಗಿತಗೊಳಿಸೋದು ಸರಿಯಲ್ಲ.

ಸಮಸ್ಯೆಗೆ ಡಿಪ್ಲೋಮ್ಯಾಟಿಕ್ ಪರಿಹಾರ ಕಂಡುಕೊಳ್ಳಬೇಕೇ ಹೊರತು ಇದನ್ನು ಹಿಂದು vs ಮುಸ್ಲಿಮ್ ಎಂದು project ಮಾಡ ಹೊರಟರೆ ಸಮಸ್ಯೆ ದೊಡ್ಡದಾಗುತ್ತದೇ ವಿನಃ ಉತ್ತರ ಸಿಗೋದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 1:01pm — mahesha

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

mahesha's picture

ಇದು ಅಮರನಾತನ ಗುಡಿ ಕುರಿತ ಗದ್ದಲದ ಸಂಗತಿಯಾ?

ಜಮ್ಮು ಮತ್ತು ಕಾಶ್ಮೀರ, ಏನು ಕರ್ನಾಟಕದಂತೆ ಇಂಡಿಯದ ಒಂದು ಮಾಮೂಲಿ ರಾಜ್ಯವಾ? ಅದಕ್ಕೆ ವಿಶೇಶ ಜಾಗ ಸಂವಿದಾನದಲ್ಲೇ ಇದೆ.
ಅವರ ಒಳಸಂಗತಿ ಅದು.. ನಾವು ಕರ್ನಾಟಕದೋರು ನಡುವೆ ಹೋಗೋದು ಸರಿಯಿಲ್ಲ... ಏಕೆಂದರೆ ಅದು ಸಂವಿದಾನಕ್ಕೆ ತಪ್ಪೆಸಗಿದಂತೆ..ತಾನೆ!

ಒಂದು ಗುಡಿಗೆ ನೆಲಕೊಡಲ್ಲ ಅಂದುದಕ್ಕೆ ಇಡೀ ದೇಶವನ್ನೇ ಬಂದ್ ಮಾಡೋದ!? ಏನ್ ಕಾಲ ಬಂತಪ್ಪ!

ನಾಳೆ ಇನ್ನೊಂದು ಗುಡಿ, ನಾಳಿದ್ದು ಮತ್ತೊಂದು ಮಸೀದು, ಅದರ ಆಚೆ ನಾಳಿದ್ದು ಒಂದು ಚರ್ಚು.. ಎಲ್ಲದಕ್ಕೆ ಬಂದ್ ಮಾಡಿದರೆ, ಈ ದೇಶ ಉದ್ದಾರ! Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 1:07pm — vikashegde

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

vikashegde's picture

ಜಾತ್ಯಾತೀತ ದೇಶ ಅಂತ declare ಮಾಡಿ ಎಲ್ಲವನ್ನೂ ಜಾತಿ, ಧರ್ಮದ ಆಧಾರದ ಮೇಲೆ ಮಾಡೋದು ಸಂವಿಧಾನಕ್ಕೆ ವಿರುದ್ಧ ಅಲ್ವೇನೋ?
ಅಮರನಾಥಕ್ಕೆ ಒಂಚೂರು ಜಾಗ ಕೊಟ್ಟು ಮುಸ್ಲಿಂಮರು ಬೇಡ ಅಂದ್ರು ಅಂತ ಅದನ್ನ ರದ್ದು ಮಾಡಿದ ದೇಶದಲ್ಲಿ ಹಜ್ ಯಾತ್ರೆಗೆ ಸಬ್ಸಿಡಿ ಯಾಕ್ ಕೊಡ್ತಾರೋ ಹಾಗಿದ್ರೆ?!

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 1:12pm — vikashegde

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

vikashegde's picture

ಒ.ಕೆ ಹಾಗಿದ್ರೆ some muslims v/s ಅಮರನಾಥ್ ಅಂತ project ಮಾಡಬೇಕಲ್ವ?

ಆದ್ರೆ ಅಮರನಾಧಕ್ಕೆ ಬರೀ ಕಾಶ್ಮೀರಿಗಳು ಮಾತ್ರ ಹೋಗೊಲ್ಲ ಅಲ್ವಾ.

ಈಗ ಸಿಕ್ಕಿಂ ರಾಜ್ಯದೊಳಕ್ಕೆ ಚೀನೀಯರು ಬಂದು ಕುಂತರೆ ಅದು ಅಲ್ಲೆಲ್ಲೋ ಆಗಿದ್ದು ಅಂತ ನಾವು ತಣ್ಣಗೆ ಕುಳಿತುಬಿಡಕ್ಕಾಗುತ್ತಾ?

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 1:20pm — roopablrao

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

roopablrao's picture

ಅಮರನಾಥ ಕೇವಲ ಒಂದು ರಾಜ್ಯಕ್ಕೆ ಸಂಭಂಧಿಸಿದ್ದಲ್ಲ.
ಅದು ಹಿಂದೂಗಳ ಪವಿತ್ರ ದೇವಾಲಯ.
ಹಿಂದೂಗಳ ಭಾವನೆಗೆ ಧಕ್ಕೆ ಉಂಟಾದರೆ, ಅದು ಎಲ್ಲೇ ಆಗಲಿ ಅದನ್ನು ಪ್ರತಿಭಟಿಸುವುದು ಹಿಂದೂ ಧರ್ಮ . ಇದು ನಮಗೆ ಮಾತ್ರವಲ್ಲ ಎಲ್ಲಾ ಧರ್ಮಗಳವರೂ ಅವರ ಧರ್ಮ , ಅವರ ಕಡೆಯವರಿಗೆ ನೋವು ಹಾಗು ಹಾನಿಯಾದರೆ ಇನ್ನೂ ಉಗ್ರವಾಗಿ ಪ್ರತಿಭಟಿಸುತ್ತಾರೆ.
ಪ್ರತಿಭಟನೆ ಮಾಡದಿದ್ದರೆ ಕೇಂದ್ರ ಸರ್ಕಾರ ತಾನು ಮಾಡಿದ್ದನು ಸರಿ ಎಂದೇ ತಿಳಿದು ನಾಳೆ ಇನ್ನೊಂದು ದೇವಾಲಯದ ಭೂಮಿ ಕಿತ್ತುಕೊಳ್ಳುತ್ತದೆ, ಇದೇ ಪರಿಪಾಠ ಮುಂಡುವರಿಯುತ್ತದೆ
ಎಲ್ಲರೂ ನಾವು ನಮ್ಮ ಉದ್ಯೊಗಕ್ಕೆ ಧಕ್ಕೆ ಆಗದೆ ಇದ್ದರೆ ಸಾಕು ಇಡೀ ದೇಶ ಕೊಳ್ಳೆ ಹೋದರೂ ಪರವಾಗಿಲ್ಲ ಎಂದರೆ ಹೇಗೆ ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 1:30pm — vikashegde

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

vikashegde's picture

ಸರಿಯಾಗಿ ಹೇಳಿದ್ದೀರ ನೋಡಿ. ಅಲ್ಲೆಲ್ಲೋ ಅಮೆರಿಕಾದಲ್ಲಿ ಏನೋ ಆದರೆ ಬಟ್ಟೆ ಒಳೆಗೆ ಚೇಳು ಬಿಟ್ಟುಕೊಂಡವರಂತೆ ಆಡುವ ಕೆಲವರಿಗೆ ಕಾಶ್ವೀರದ ವಿಷಯ ಅವರ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ಒಳವಿಷಯವಂತೆ !!.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 2:27pm — roshan_netla

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

roshan_netla's picture

ತಮ್ಮನು ತಾವು ಬಹಳ ಒಳ್ಳೆಯವರು, ಹಾಗು ಜಾತ್ಯಾತಿವಾದಿ ಗಳು ಅನ್ನಿಸಿಕೊಳುವವರು ಇಂತವುಗಳನ್ನು ವಿರೊದಿಸ್ತಾರೆ. ಬೆಂಗಳೊರಿನಲ್ಲಿ ಯೆನಾದರು ಆದರೆ ಮಂಗಳೋರಿನವರು ಯಾಕೆ ತಲೆ ಕೆಡಿಸಿಕೊಳಬೇಕು ಅನ್ನುವಂತಿದೆ ಕೆಲವರ ಅಬಿಪ್ರಾಯ. ಕಾಶ್ಮೀರದ ಹಿಂದುಗಳ ಕಷ್ಟ ಇವರಿಗೆ ಯೇನು ಗೊತ್ತು? ಅವರೊಂದಿಗೆ ನಾವು ಇದ್ದೇವೆ ಅನ್ನುವ ಒಂದು ಸಂದೇಶ ಈ ಬಂದ್.. ಇದನ್ನು ರಾಜಕೀಯ ಮಾಡಿ ಬೇಷ್ ಅನ್ನಿಸಿಕೊಳೊರು ಇದ್ದಾರೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 2:35pm — mahesha

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

mahesha's picture

ಬೆಂಗಳೂರಿನವರು ಹಾಗೆ ಇದಾರೋ ಇಲ್ಲವೋ ಆದರೆ ಮಂಗಳೂರಿನವರು ಹಾಗೆ ಇರೋದಕ್ಕೆ ಇಲ್ಲೇ ಹಲವು ಕಾವೇರಿ ಚಳುವಳಿಗಳ ಹೊತ್ತಲ್ಲಿ ಬಂದ ಕಮೆಂಟು, ಬ್ಲಾಗುಗಳು ಪುರಾವೆ.

ಕಾಶ್ಮೀರದ ಹಿಂದುಗಳ ಒಡಹೋರಾಡುವ ಮಂಗಳೂರು ಮಂದಿ ಕಾವೇರಿ ನೀರಿನ ಚಳುವಳಿಯನ್ನ ಎಂದೂ ’ಅಲ್ಲಿಯ, ಸಂಗತಿ ನಮಗೇಕೆ’ ಎಂದೇ ನೋಡಿರುವುದು..!! ಕಾವೇರಿಗಾಗಿ ಇಡೀ ಕರ್ನಾಟಕ ಬಂದ್ ಆಗಿದ್ದಾಗ ಮಂಗಳೂರು ಬಂದ್ ಆಗಿರಲಿಲ್ಲ...!!

ಒಂದೊಂದಕ್ಕೊಂದು ನಂಟಿಲ್ಲವಾ? ಸರಿಬಿಡಿ.. ಮನ್ನಿಸಿರಿ.. !

ಅದೇನೋಪ್ಪ.. ಈ ಗೋಜಲುಗಳು ನಮಗೆ ತಿಳಿಯೋದೇ ಇಲ್ಲವೇನೋ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 2:52pm — vikashegde

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

vikashegde's picture

ಕೃಷ್ಟಾ ನದಿ ವಿಷ್ಯದಲ್ಲಿ ಮಂಡ್ಯದವ್ರು ಅದೇನ್ ಮಾಡಿದ್ರು? ಪಾಪ ಏಟೋ ನಿಮ್ ಜನಕ್ಕೆ ಆ ನದಿ ಎಲ್ಲೈತೆ, ಎಂಗೆ, ಏನ್ ಕತೆ ಅನ್ನದೇ ಗೊತ್ತಿರಕ್ಕಿಲ್ಲ. !

ವಿಶ್ವೇಶ್ವರಯ್ಯನವರನ್ನು ಮೈಸೂರಿಗೆ ಸೀಮಿತಗೊಳಿಸಿತ ಮನಸ್ಥಿತಿಯವರು ಇವತ್ತು ಮಂಗಳೂರಿಗರ ನಾಡಪ್ರೇಮದ ಬಗ್ಗೆ ಅನುಮಾನ ಪಡ್ತಾರೆ !!

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 3:24pm — mahesha

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

mahesha's picture

Smiling

ಅದನ್ನೇ ಹೇಳಿದ್ದು..

ಕ್ರಿಶ್ಣ, ತುಂಗಬದ್ರ ಕಡೆಯೋರೂ ಕೂಡ ಕಾವೇರಿ ಬಗ್ಗೆ ಚಳುವಳಿ ಮಾಡ್ತಿರಲಿಲ್ಲ. ಕರವೇ ಮುಂತಾದವರಿಂದ ಮೊದಲ ಸರತಿ ಬೆಳಗಾವಿ ಮತ್ತು ಕಾವೇರಿ ಎರಡು ಸಂಗತಿಗಳಿಗೂ ಕರ್ನಾಟಕ ಬಂದ್ ಆಯ್ತು.. ಮಂಗಳೂರನ್ನು ಹೊರತು ಪಡಿಸಿ..

ಮಂಡ್ಯದವರೂ ಬೆಳಗಾವಿಗಾಗಿ, ಹಾವೇರಿ ರಯ್ತರಿಗಾಗಿ ಚಳುವಳಿ ಮಾಡಿದ್ದಾರೆ.

ಕ್ರಿಶ್ಣ ಮೇಲ್ದಂಡೆ ಯೋಜನೆಗೆ ದೇವೇಗವ್ಡದ ಹೊತ್ತಲ್ಲಿ ಕೆಲಸ ನಡೆದಿದೆಯಂತ. ಕುಮಾರಸ್ವಾಮಿ ಹೊತ್ತಲ್ಲೇ ಬೆಳಗಾವಿಯಲ್ಲಿ ವಿಶೇಶ ಅದಿವೇಶನ ನಡೆದುದು.. ಹಾಗೇ ಕುಮಾರಸ್ವಾಮಿಯವೇ ಸಂಚಾರಿ ಹಯ್ ಕೋರ್ಟಿ ಪೀಟಕ್ಕೆ ಕಾಳಜಿ ಮಾಡಿದ್ದು..

ಹಾವೇರಿ ರಯ್ತರ ಬಗ್ಗೆ ಶ್ರೀರಂಗಪಟ್ಟಣದ ರಯ್ತಸಂಗ ಬೀದಿಗೆ ಬಂದಿತ್ತು..

ಮಂಗಳೂರಿನವರು ಈ ಎಲ್ಲ ಸಂಗತಿಗಳ ಬಗ್ಗೆ ಏನೇನೇನು ಮಾಡಿದ್ದಾರೆ?..

ಹೀಗೆ ಎತ್ತೆತ್ತಲೋ ಮಾತಾಡಬೋದು... ಮಾತಿಗೆ ಮಾತು ಅಂತ..!!

ರೋಶನ್ ಅವರಿಗೆ ನಾನು ಹೇಳಿದ್ದು ಇಶ್ಟೇ!
ಮಂಗಳೂರಿನವರಿ ’ಹಿಂದು’ ಎಂಬ ಬಾವನೆ ಹೆಚ್ಚು ಇದ್ದು ಅವರು ಅದಕ್ಕೆ ಬೆಂಬಲಕ್ಕೆ ನಿಂತಿದ್ದಾರೆ.. ಆದರೆ ಅವರಿಗೆ ಕನ್ನಡದ ಬಾವನೆ, ಇಲ್ಲವೇ ಕನ್ನಡನಾಡಿ ಬೇರೆಡೆಗಳ ತೊಂದರೆಗಳ ಬಗ್ಗೆ ಬಾವನೆ ಕಡೆಮೆ....

ಹಾಗೆ ಬೆಂಗಳೂರು, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ ಮುಂತಾದ ಕಡೆ ’ಹಿಂದು’ ಎಂಬ ಬಾವನೆ ಕಡಮೆ ಇದ್ದು.. ಕಾಶ್ಮೀರದ ತೊಂದರೆದ ಬಗ್ಗೆ ಅವರಿಗೆ ಹೆಚ್ಚು ಆಸಕ್ತಿ ತಾನೇ ತಾನಗಿಲ್ಲ. ಅದು ನಮಗೆಲ್ಲ ಇಲ್ಲದ ಗೊಡವೆ ಎಂದು ಅನ್ನಿಸಿದ್ದು ದಿಟ. ಅದನ್ನು ಹೇಳಿಕೊಂಡಿದ್ದೀವಿ.

ನಿಮ್ಮ ಕೆಲವು ಕಮೆಂಟುಗಳನ್ನು ಅಳಿಸಿಸಿದ್ದೀವಿ.. ನಿಮಗೆ ತುಸು ನೇರವಾಗಿ ಪರ್ಸನಲ್ಲಾಗಿ ಬರೆಯಬೇಡಿ.. ನಿಮಗೆ ತಿಳಿಯದೇ ಕಮೆಂಟು ಅಳಿಸಿಹೋಗುವುವು.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 3:52pm — roshan_netla

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

roshan_netla's picture

ಅಲ್ಲ ಮಂಗಳೋರಿನಲ್ಲಿ ಇವಗ ಸಂಪೂರ್ಣ ಬಂದ್ ಇದೆ ಅಂತ ಯಾವನು ಹೇಳಿದ್ದು ನಿಮಗೆ?..ಅಲ್ಲ ಕಾವೆರಿ ಗಲಾಟೆ ಸಮಯ ದಲ್ಲಿ ಇಲ್ಲಿ ಪ್ರತಿಭಟಣೆ ಆಗಲಿಲ್ಲ ಅಂತ ಹೇಗೆ ಹೇಳ್ತೀರಿ? ನಿಮ್ಮ ಮೂಗಿನ ನೇರಕ್ಕೆ ಬರೆದರೆ ನಾವೇನು ಮಾಡೊಣ? ಈ ಬಂದ್ ಯಾಕೆ ಅನ್ನೊದಿಕ್ಕೆ ನಾನು ಹೇಳಿದ್ದು. ಮತ್ತು ಕಾವೆರಿ ಗಲಾಟೆ ಸಮಯ ಕರ್ನಾಟಕದಲ್ಲಿ ಯೆಲ್ಲಿ ಯೆಲ್ಲ ಬಂದಾಗಿತ್ತು ಅಂತ ನೀವು ಹಳೆ ಪಾಪೆರ್ ನೋಡಿ ಗೊತ್ತಾಗುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 3:57pm — mahesha

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

mahesha's picture

ಮಂಗಳೂರಲ್ಲೂ ಪೂರ್ತಿ ಬಂದ್ ಇಲ್ವ Smiling

ಮಂಡ್ಯದಲ್ಲಿ ಕಾವೇರಿಗೆ ಪೂರ್ತಿ ಇತ್ತು ಬಿಡಿ..!! Smiling

ನಮ್ಮ ಮೂಗಿನ ನೇರವೂ, ನಿಮ್ಮ ಮೂಗಿನ ನೇರವೂ.. ಎಲ್ಲಗಿರೂ ಮೂಗೂ ಇದೆ.. ಅದರ ನೇರವೂ ಇದೆ.. Smiling

ಒಟ್ನಲ್ಲಿ ಈ ಬಂದ್ಗೆ ಬರಹಗಾರ ಹೇಳ್ತಾ ಇರೋದಕ್ಕೆ ಒಪ್ಪಿಗೆ ಇದೆ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 4:06pm — vikashegde

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

vikashegde's picture

ಎಲ್ಲ ವಿಷ್ಯದಲ್ಲೂ ಸಂಬಂಧವಿಲ್ಲಂದತೆ ಯಾವುದ್ಯಾವುದೋ ವಿಷ್ಯ ತಂದು ಕುಮಾರಸ್ವಾಮಿ, ದೇವೇಗೌಡ ಅಂತ ಬಾಲಬಡುಕತನ ತೋರಿಸುವ ಅಗತ್ಯವಿಲ್ಲ.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 4:11pm — roshan_netla

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

roshan_netla's picture

ಮಂಡ್ಯ ದಲ್ಲಿ ಪೂರ್ತಿ ಇರೊಕ್ಕೆ.... ಮಂಗಳೊರು ಕಾಶ್ಮೀರದಲ್ಲಿ ಇಲ್ಲ ಅಲ್ವ? ಹಾಗೆ ನಿಮ್ಮಂತವ್ರು ಇಲ್ಲೂ ಇರ್ತಾರಲ್ವಾ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 4:17pm — mahesha

ಉ: ವಿಎಚ್ ಪಿ ಬಂದ್..ಗೆ, ನನ್ನ ನಿಭಂಧ!

mahesha's picture

"ನಿಮ್ಮಂತವ್ರು ಇಲ್ಲೂ ಇರ್ತಾರಲ್ವಾ? Smiling"

Smiling :) Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅ೦ತೂ ಇ೦ತೂ ಕೊ೦ಕಣವ೦ ಸುತ್ತಿ ಮೈಲಾರಕ್ಕೆ.....
  • ಎಂದೂ ಮರೆಯದ ಆ ದಿನ
  • ಕೊಂಕಣ ಸುತ್ತಿ ಮೈಲಾರಕ್ಕೆ...
  • ಬಂದ್
  • ವಿಫಲ ಪ್ರಯತ್ನ
Syndicate content

ಲೇಖಕರು

harshavardhan v.sheelavant's picture

ಪೂರ್ಣ ಹೆಸರು
harshavardhan v. sheelavant

ಪರಿಚಯ

Assistant Professor, Institute of Mass Communication and Research, Hubli. Freelance Journalist. a netizen having own blog- 'arivinamarevu.blogspot.com.' Karnataka Media Academy awardee. AIR grade artist. Centre for Agricultural Media (CAM) Fellow. Love to contribute feature articles, farm crisis, rural and agri life. Happy to teach journalism, to promote citizen journalism.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
  • anil.ramesh
    ಉ: ಬಸವನ ಹುಳು...
    October 12, 2008 - 11:19pm
  • pradeep_adiga
    ಉ: ಸಹಾಯ ಬೇಕಾಗಿದೆ
    October 12, 2008 - 11:14pm
  • Chetan.Jeeral
    ಉ: ಸಹಾಯ ಬೇಕಾಗಿದೆ
    October 12, 2008 - 11:07pm
ಇನ್ನಷ್ಟು


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator