ದಿನಕ್ಕೊಂದು ಪದ : ಕಾಣ್, ಕಾಣು
ಕಾಣ್, ಕಾಣು (ಕ್ರಿ೦
ಕಂಡ್ಯ (ಭೂತಕೃ); ಕಂಡು (ಭೂತನ್ಯೂ); ಕಾಂಬ, ಕಾಣ್ಬ, ಕಾಬ (ಭವಿಕೃ).
೧. ನೋಡು; ಈಕ್ಷಿಸು
೨. ಭೇಟಿಯಾಗು; ಸಂದರ್ಶಿಸು
೩. ಎಣಿಸು; ಭಾವಿಸು; ತಿಳಿದುಕೋ; ಅರಿತುಕೊ
೪. ಹೊಂದು; ಪಡೆ
೫. ತೋರು; ಕಣ್ಣಿಗೆ ಬೀಳು; ಗೋಚರಿಸು
ಕಾಣನೇಗೆಯ್ದುಂ ತನ್ನ ದೋಷಮಂ ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ (ಕವಿರಾಜಮಾರ್ಗ ೧-೪೫); ಚಿಲಿಮಿಲಿಯೆಂದೋದುವ ಗಿಳಿಗಳಿರಾ, ನೀವು ಕಾಣಿರೇ (ಮಹಾದೇವಿಯಕ್ಕ ೭೨); ಹಗೆಯಾಳಿ ಮುಱಿದುದ ಕಾಬೆನೆಸುಗೆಯ ಕಾಣೆ ನಾನು (ಕುವ್ಯಾಕ ೧೦-೨೪); ತನ್ನ ಪೊೞಲ್ಗೆವೋಗಿ ತಾಯಂ ತಂದೆಯುಮಂ ಕಂಡು (ವಡ್ಡಾರಾಧನೆ ೭೪-೧೮); ರೊಕ್ಕ ಇಲ್ಲದಿರಲು ಬಲು ದುಕ್ಕ ಕಾಣಕ್ಕ (ಪುರಂದರದಾಸರು ೨-೪೮-೩);ಅನಿಬರ್ ತಾಂ ಮಾನ್ಯನೆಂದೆನ್ನದಾ ಮನುಂ ಸದ್ಗತಿ ಕಾಣನೈ (ಸೋಮೇಶ್ವರಶತಕ ೫೦); ಅವರಿಗೆ ಪಾಂಡವರು ಕಂಡರು (ವಚನಭಾರತ ೩೬).
[ತಮಿಳು: ಕಾಣ್, ಮಲಯಾಳ: ಕಾಣು, ಕೊಡವ: ಕಾಣ್, ತೆಲುಗು: ಕನು, ಕಾನು]

- Login or register to post comments
- 185 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ದಿನಕ್ಕೊಂದು ಪದ : ಕಾಣ್, ಕಾಣು
ಕಾಣ್ಕೆ/ಕಾಣಿಕೆ= ಯಾರನ್ನಾದರೂ ಕಾಣಲು ಹೋದಾಗ ಅವರಿಗೆ ಕೊಡಲು ಒಯ್ಯುವ ವಸ್ತು. ಉದಾಹರಣೆಗೆ ದೇವಸ್ಥಾನಕ್ಕೆ ಹೋದರೆ ದೇವರಿಗೆ ಕಾಣಿಕೆ.
ಉ: ದಿನಕ್ಕೊಂದು ಪದ : ಕಾಣ್, ಕಾಣು
ಕಾಣ್ಕೆ = ನೋಟ, ದರ್ಶನ
ದೇವಸ್ಥಾನದಲ್ಲಿದ್ದರೆ ಮಾತ್ರ ದೇವರಿಗೆ ಕಾಣ್ಕೆ ಅನ್ನೋದು ತಪ್ಪು. ಏಕೆಂದರೆ ದೇವರಿಗೆ ನಾವು ಎಲ್ಲಿದ್ದರೂ ಕಾಣ್ತೇವೆ. ಅದಕ್ಕೇ ಕನಕದಾಸರು ಗುರುಗಳು ಕೊಟ್ಟ ಬಾಳೆಹಣ್ಣನ್ನು ತಿನ್ನಲಿಲ್ಲ. ಹೌದಾ?
ಪ್ರೀತಿಯಿಂದ
ಸಿ ಮರಿಜೋಸೆಫ್