ಕೊೞಲ್, ಕೊಳಲ್, ಕೊಳಲು
ಕೊೞಲ್, ಕೊಳಲ್, ಕೊಳಲು (ನಾ)
ಬಿದಿರ ಕೊಳವೆಯಿಂದ ಮಾಡಿದ ಊದುವ ವಾದ್ಯ; ವೇಣು
ಎಕ್ಕ ಮದ್ದಳೆಯ ಕೊೞಲ ಝಂಕಾರದ ಪಱೆಗಳ್ ಮುಂದೆ ಬಾಜಿಸುತ್ತಂ (ವಡ್ಡಾರಾಧನೆ ೮೦-೧೨); ದಂಟನೂದುವಂಗೆ ಕೊೞಲ್ ದೊರೆಕೊಂಡುದೆಂಬಂತೆ (ಧರ್ಮಾಮೃತ ೧೦-೨೮೦); ಮುರಹರನ ಕೊೞಲ ಸನ್ನೆಯ ವರರವಕನುಸರವಿದೆಂಬಿನಂ (ಜಗವಿ ೪-೧೧೫); ಕರಡೆಯ ಮದ್ದಳೆಯ ಕೊೞಲ ಪಳವದ . . . ಕಿನ್ನರದ ಸರಮೆ ಸರಮಾ ಪೊೞಲೊಳ್ (ಸೂಕ್ತಿಸುಧಾರ್ಣವ ೪-೧೦೪)
ತ್ರಿಭಂಗಿಯಿಂದಂ ನಿಂದು ಒಪ್ಪುತಿರ್ಪೊಂದು ಪೊಸ ಕೊಳಲಂ ಕೊಳುತ್ತಂದು . . . ಅಧರದೊಳ್ತಂದಿರಿಸಿದಂ ಕೊಳಲನೊಪ್ಪದಿಂ (ಆನಾರ ೧೮೧-೧೪)
ಸವೆಯದೂದುವ ಕೊಳಲು ಮೈಯ ತವರದ ತೊಡಿಗೆ ಎಸೆವುತಿರೆ (ಬಸರ ೯-೧೦೨); ಕೊಳಲನೂದುತ್ತಾ ಬಂದ ನಮ್ಮ ಗೋಪಿಯ ಕಂದ ಕೊಳಲನೂದುವುದು ಬಲು ಚೆಂದ (ಪುರಂದರದಾಸ ೧-೧೩೩-೧); ಕೊಳಲಿಗೆ ಪಶು ಮಿಗ ಘಂಟೆಗೆ ಹಸುಳೆ ಜೋಗುಳೆಗೆ ಸರ್ಪ ಸುನಾಗಸರಕೆ (ಭರಚ ೧-೮೮); ಕೊಂಬು ಕೊಳಲು ನಾಗಸರ ಭೇರಿ ತಂಬಟಬೊಂಬುಳಿಬುರುಗು ಡಿಂಡಿಮದ (ಕಂನವಿ ೮-೧೯); ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲಗೌಡನು (ಗೋವಿನಹಾಡು ೩೧)
[ತಮಿಳು, ಮಲಯಾಳ, ತುಳು: ಕುೞಲ್; ತೆಲುಗು: ಕ್ರೋವಿ]
(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

- Login or register to post comments
- 172 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಕೊೞಲ್, ಕೊಳಲ್, ಕೊಳಲು
ಕೊೞಲ್(ಲು), ಕೊೞವೆ ಮತ್ತು ಕೊೞಾಯ್(ಯಿ) ಎಲ್ಲಾ ಒಂದೇ ಮೂಲದ್ದಾಗಿದ್ದು ಎಲ್ಲವೂ ಱೞವೇ ಆಗಿದ್ದು ನಡುವಿನಲ್ಲಿ ಉದ್ದಕ್ಕೂ ತೂತಿರಬೇಕೆಂಬ ನಿಯಮವಿದೆ. ಹಾಗಾಗಿ ಈ ಮೂಱಱ ಎಷ್ಟು ಉದ್ದವಿದೆಯೋ ಅಷ್ಟುದ್ದಕ್ಕೂ ನಡುವಿನಲ್ಲಿ ಗಾಳಿ(ಧ್ವನಿ) ಹೋಗಲೋ ನೀರು ಹೋಗಲೋ ರಂಧ್ರವಿರಲೇಬೇಕು.
ಉ: ಕೊೞಲ್, ಕೊಳಲ್, ಕೊಳಲು
ನ್ಯೂಟನ್ ನಿಯಮ, ಕಿರ್ಚಾಫ್ ನಿಯಮ, ಓಮ್ ನಿಯಮ ಗೊತ್ತು. ಇದಾವ ನಿಯಮ?
ಪ್ರೀತಿಯಿಂದ
ಸಿ ಮರಿಜೋಸೆಫ್