ಮುಕ್ತ...ಮುಕ್ತ...ಸಾಹಿತ್ಯ ಬೇಕು...
ಧಾರವಾಹಿ 'ಮುಕ್ತ...ಮುಕ್ತ' ಹಾಡಿನ ಪೂರ್ಣ ಸಾಹಿತ್ಯ ಬೇಕು...
ತಿಳಿದವರು ಇಲ್ಲಿ ಪ್ರಕಟಿಸುವಿರಾ?
--ಶ್ರೀನಿವಾಸ ಪ ಶೇ

- Login or register to post comments
- 418 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಧಾರವಾಹಿ 'ಮುಕ್ತ...ಮುಕ್ತ' ಹಾಡಿನ ಪೂರ್ಣ ಸಾಹಿತ್ಯ ಬೇಕು...
ತಿಳಿದವರು ಇಲ್ಲಿ ಪ್ರಕಟಿಸುವಿರಾ?
--ಶ್ರೀನಿವಾಸ ಪ ಶೇ




ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ಯಾಕೋ ಯಾರಿಂದಲೂ ಪ್ರತಿಕ್ರಿಯೆ ಬರಲೇ ಇಲ್ಲ...!
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ಶ್ರೀನಿವಾಸರೆ, ನೀವು ಕೇಳಿರುವ ಮುಕ್ತ ಮುಕ್ತ ಸಾಹಿತ್ಯ ಇಲ್ಲಿದೆ.
ಕಾರುಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ |
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧ ಮುಕ್ತಿ
ಎಂದು ಆದೇವು ನಾವು ಮುಕ್ತ ಮುಕ್ತ ಮುಕ್ತ ||
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ |
ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ
ಎಲ್ಲುಂಟು ಆಚೆ ತೀರ ||
ಏರು ನದಿಗೆ ಇದಿರಾಗಿ ಈಜಿ ದಡ ಸೇರಬಹುದೆ ಜೀವಾ
ದಾಟಿ ಈ ಪ್ರವಾಹ |
ತಾನು ನೊಂದು ತಿಳಿ ಬೆಳಕ ಬೀರುತಿದೆ ಒಂದು ಇರುಳ ದೀಪ
ನಿಶ್ಚಲದ ಮೂರ್ತ ರೂಪ ||
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇವೆ ಬಂಧ ಮುಕ್ತ |
ದೂರದಿಂದಲೆ ಜೀವ ಹಿಂಡುತಿದೆ ಕಾಣದೊಂದು ಹಸ್ತ
ಆದೇನೆ ಬಂಧ ಮುಕ್ತ ||
-ಯುವಪ್ರೇಮಿ
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ಧನ್ಯವಾದಗಳು ಯುವಪ್ರೇಮಿಗಳೇ...!
ಇದು ಹಳೆ 'ಮುಕ್ತ' ಧಾರಾವಾಹಿಯ ಸಾಹಿತ್ಯ...ಈಗ 'ಮುಕ್ತ...ಮುಕ್ತ' ಧಾರಾವಾಹಿಯಲ್ಲಿ ಈ ಹಾಡು ಮುಂದುವರೆದಿದೆ..ಅದನ್ನು ತಿಳಿಯಬೇಕಾಗಿದೆ...
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ಅಯ್ಯೊ ಕ್ರಿಷ್ಣ...!! ಹಳೆ ಮುಕ್ತ, ಹೊಸ ಮುಕ್ತ... ಮುಕ್ತ... ಅಂತ ಬೇರೆ ದಾರಾವಾಹಿ ಇದ್ಯ ?

ಕ್ಷಮಿಸಿ ಶ್ರಿನಿವಾಸರೆ, ನನಗೆ ಈ ಹೊಸ ಮುಕ್ತ..ಮುಕ್ತ... ದ ವಿಷಯ ಎಳ್ಳಷ್ಟು ದಿಳಿದಿಲ್ಲ...!!
-ಯುವಪ್ರೇಮಿ
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ನಾನೂ ಇದರ ಬಗ್ಗೆ ಕೇಳಿದ್ದೆ ಅಷ್ಟೆ. ಇಲ್ಲಿದೆ ನೋಡಿ ಅದರ ಹಾಡು:
http://in.youtube.com/watch?v=xSCjvzKfbrA&NR=1
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ಯುವಪ್ರೇಮಿಗಳೇ!! ನಾನು ನಿಮ್ಮ ಹಾಗೆ ಹೊಸ ಮುಕ್ತ..ಮುಕ್ತ ಬ೦ದಿರೋದು ಗೊತ್ತಿರ್ಲಿಲ್ಲಾ. ಹೆಚ್ಪಿಎನ್ ಹೇಳಿಡ್ಮೇಲೆ ತಿಳೀತು.
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ಆಫ್ಲೈನಲ್ಲಿ ಬನ್ನಿ ಧಾರವಾಹಿ 'ಮುಕ್ತ...ಮುಕ್ತ' ಹಾಡಿನ ಪೂರ್ಣ ಆಡಿಯೊ ಬೇಕಾದ್ರೆ ಕೊಡ್ತೇನೆ!!
ನಿಮ್ಮವ,
ಕ್ರಿಸ್ನ
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ಹಾಡು ಕೇಳುತ್ತ ಸುಮಾರು transcript ಮಾಡಿದ್ದೆ. ಆಗ ಹೊಳೆಯಿತು ಆಗಲೇ ಯಾರಾದ್ರೂ ಮಾಡಿರುತ್ತಾರೆ ಹುಡುಕಬಹುದಲ್ಲ ಅಂತ. ತಾರಿಣಿಯವರು transcript ಮಾಡಿದ ಒಂದು ಪ್ರತಿ ಸಿಕ್ತು. ಅದರಲ್ಲಿದ್ದ ತಪ್ಪುಗಳನ್ನು ಸರಿಪಡಿಸಿ format ಮಾಡಿರುವ ಪ್ರತಿ ಇಲ್ಲಿದೆ:
(ರಚನೆ: ಎಚ್ ಎಸ್ ವೆಂಕಟೇಶಮೂರ್ತಿ)
ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ
ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ
ಹಾಡಿ ಮುಕ್ತ ಮುಕ್ತ ||
ಹಸಿರ ತೋಳಿನಲಿ ಬೆಂಕಿಯ ಕೂಸ
ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ ಮರೆಯಲಿ ನಿಂತೇ
ಕಾಯುವ ಕರುಣಾಮಯಿಯ ||
ತನ್ನಾವರಣವೆ ಸೆರೆಮನೆಯಾದರೆ
ಜೀವಕೆ ಎಲ್ಲಿಯ ಮುಕ್ತಿ
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ
ಬಯಲೆ ಜೀವನ್ಮುಕ್ತಿ ||
ಇರುಳ ವಿರುದ್ದ ಬೆಳಕಿನ ಯುದ್ಧ
ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು
ಸೋಲಿಲ್ಲದ ಹೋರಾಟ ||
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
ನನ್ನಿ
ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
"ಮರೆಯುವುದುಂಟೆ ಮರೆಯಲಿ ನಿಂತೇ
ಕಾಯುವ ಕರುಣಾಮಯಿಯ ||"
ಏನ್ ಚೆನಾಗಿ ಬರ್ದಿದಾರೆ. ಹ್ಯಾಟ್ಸ್ ಆಫ್ ಟು HSV.
--
ನನ್ನ ಬ್ಲಾಗ್:
ಪರಿವೇಶಣ | PariveshaNa