ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಕನಸು, ಕಣಸು

July 7, 2008 - 6:16am — cmariejoseph

ಕನಸು, ಕಣಸು (ನಾ)
=ಸ್ವಪ್ನ; ನಿದ್ದೆಯಲ್ಲಿ ಕಾಣುವ ನೋಟ
ಪುಟ್ಟಿದಂದಿಂ ತೊಟ್ಟಿಂತಪ್ಪುಣಿಸಂ ಕನಸಿನೊಳಪ್ಪೊಡಂ ಕಂಡಱಿಯದ ಮಗಂ (ವಡ್ಡಾರಾಧನೆ ೭೮.೨೦); ಅೞ್ಕಿಱನಿೞ್ಕುಳಿಗೊಂಡಲಂಪುಗಳ್ ಕನಸಿನೊಳಂ ಪಳಂಚಲೆವು[ವೆ]ನ್ನೆದೆಯೊಳ್ (ಪಂಪಭಾರತ ೪.೧೦೬); ಇರುಳ್ ಕಂಡ ಕನಸುಗಳಂ ಪಗಲ್ ನೆನೆವಂತೆ (ಧರ್ಮಾಮೃತ ೧.೧೫೪); ಕನಸಿನ ಭತ್ತಕ್ಕೆ ಗೋಣಿಯಾಂಪರೆ (ಲೀಲಾವತಿ ೪.೭೦); ಮೂಗರು ಕಂಡ ಕನಸಿನಂತೆ ಮೆಱೆವಾತ್ಮಯೋಗವನಾರಾಡಬಹುದು (ಭರಚ ೨.೪೨);
=ಸುಳ್ಳು; ಅಸತ್ಯ; ಕಲ್ಪನೆ
ಉದಾರಮಹೇಶ್ವರನೀಶ್ವರವರಪ್ರಸಾದಮೆಲ್ಲಂ ತನಗೆ ನೆನಸಾಗೆಯುಂ ಕನಸಿನಂದಮಾಗಿ ತೋಱೆ (ಪಂಪಭಾರತ ೧೧.೧೩೧ವ); ಮರುಳಕ್ಕ ಕನಸಿನ ತೊಱೆಯೊಳ್ ನೀರ್ಗುಡಿದು ತಣಿವನಱಸಿದರೊಳರೇ (ಶಾಂತಿಪುರಾಣ ೪.೯೮); ಕನಸಲ್ಲಿದು ನಿಶ್ಚಯಮೆಂದಳ್ಕಿ ನೋಡಿ (ಧರ್ಮಾಮೃತ ೩.೧೧೪)
ಕಣಸು ಬಿರಿದೊಡನೆ ನನಸು ನುಗ್ಗಿತು ಬಗೆ ಭೂಮಿಕೆಗೆ (ಶ್ರೀರಾಮಾ ೫೨೪.೬೪೭)

ಕನಸಿನಗಂಟು (ಅಲಂ)= ಅಸಾಧ್ಯವಾದುದು; ಕೈಗೆ ನಿಲುಕಲಾರದುದು

[ತಮಿಳು: ಕನವು; ಮಲಯಾಳ: ಕಿನಾವು; ಕೊಡವ: ಕೆನಚಿ]

‹ ಪಡು ಪಂದಿ/ಹಂದಿ, ಪಂದೆ/ಹಂದೆ ›
  • ದಿನಕ್ಕೊಂದು ಪದ
~.~
  • Login or register to post comments
  • 143 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 7, 2008 - 4:29pm — Sunil Jayaprakash

ಉ: ಕನಸು, ಕಣಸು

Sunil Jayaprakash's picture

ಸೀಮರಿಜೋಸೆಫ್, ಕನ್ನಡದಲ್ಲಿ ಕನಸು ಮತ್ತು ಕಣಸು ಎರಡೂ ಬೇರೆ ಬೇರೆ ಅಲ್ವಾ. ಕನಸು - ಡ್ರೀಮ್, ಕಣಸು - ಧ್ಯೇಯ. ಶ್ರೀಕಾಂತಮಿಶ್ರಿಕೋಟಿಯವರ ಒಂದು ಬ್ಲಾಗನ್ನು ನೋಡಿ, ನನ್ನ ಕನ್ನಡ ಕಲಿಕೆ -೧

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 7, 2008 - 8:18pm — cmariejoseph

ಉ: ಕನಸು, ಕಣಸು

cmariejoseph's picture

ಸುನಿಲರೇ,
ಕನ್ನಡ ಸಾಹಿತ್ಯದಲ್ಲಿ ಕಣಸು ಎಂಬ ಪದವು ಮೂರು ರೂಪಗಳಲ್ಲಿ ಪ್ರಯೋಗವಾಗಿದೆ. ಕಣಸಿಗೆ ಕನಸು ಎಂಬರ್ಥ ಇರುವಂತೆಯೇ ನೀವು ಹೇಳುವ ಕಣಸು=ಧ್ಯೇಯ ಎಂಬುದೂ ಸರಿಯಾದ ಪ್ರಯೋಗವೇ. ಅದಕ್ಕೆ ನಿಘಂಟಿನಲ್ಲಿ ನೋಟ; ಕಾಣ್ಕೆ, ಅತಿಮಾನುಷ ದರ್ಶನ; ಅಲೌಕಿಕವಾದ ತೋರಿಕೆ ಎಂಬರ್ಥವನ್ನು ಕೊಡಲಾಗಿದೆ. [ಕನಸೋ ಕಣಸೋ ನನಸೋ (ಸೂರ್ಯಪಾ ೭.೧೧)]
ಅಚ್ಚರಿಯೆಂದರೆ ಈ ಕಣಸು ಪದವು ಕಡಸು ಎಂಬುದಕ್ಕೆ ಸಂವಾದಿಯಾಗಿಯೂ ಪ್ರಯೋಗವಾಗಿರುವುದನ್ನು ನೋಡಬಹುದು. ಕ್ರಿಸ್ತಶಕ ಸುಮಾರು ೯೫೦ರ ಮುಳಬಾಗಿಲಿನ ಶಾಸನವೊಂದರಲ್ಲಿ (ಎಪಿಗ್ರಾಫಿಯಾ ಕರ್ನಾಟಿಕ X, ೧೬೨.೨) ’ಕಡಸಂ ಪೆರ್ಭುಲಿ ಕೊಣ್ಡೊಡೆ ಆ ಪುಲಿಯಂ ಕೊಲ್ವೆನೆನ್ದು ಪ್ರತಿಜ್ಞೆ ಕಡಿದು’ ಎಂದು ಪ್ರಯೋಗವಾಗಿರುವಂತೆಯೇ ’ಪಕ್ಕೆಯೊಳೆ ಪಟ್ಟು ಕಣಸಂ ಲಲ್ಲೆಗೆಯ್ದು ಪರಿವ ಕಾೞ್ಪುರದ ಕಳಕಳಮನಾಲಿಸುತಿರೆ . . . ನೋೞ್ಪ ಹರಿಣಸಂದೋಹದಿಂದೆಯುಂ’ (ರಾಮಾಶ್ವ ೩.೨೭) ಎಂಬ ಪ್ರಯೋಗವನ್ನೂ ಕಾಣಬಹುದಾಗಿದೆ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2008 - 2:57pm — kannadakanda

ಉ: ಕನಸು, ಕಣಸು

kannadakanda's picture

ಕನಸು ಹಾಗೆಯೆ ಬೀೞುತ್ತದೆ (ಹಗಲ್ಗನಸೂ ಕೂಡ). ಕಡಸಾಗಿ(ಖಡಕ್ಕಾಗಿ) ಕಣಸು ಕಾಣಬೇಕು ಸಾಧಿಸಬೇಕೆಂದರೆ. ಅದಕ್ಕೆ ಕಡಸಾದ ಕಣಸು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾವಣನ ಪುನರ್ಜನ್ಮದ ಕಣಸು
  • ರಾವಣ , ಕಣಸು ಮತ್ತು ಅಂತರ್ಜಾಲದಲ್ಲಿನ ನೀವೂ ನಾವು
  • Sex - ಕಾಮ; ಅದರ ಮಹತ್ವ !
  • ಕೊೞಲ್, ಕೊಳಲ್, ಕೊಳಲು
  • ಝೆನ್ ಕತೆ ೧೬: ಕನಸಿನ ಚಿಟ್ಟೆ-ಚಿಟ್ಟೆಯ ಕನಸು
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • pallavi.dharwad
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 6:32am
  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
ಇನ್ನಷ್ಟು


ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator