ರಾಜೇಶ್ vs ರಾಜ್
ನಾನು ಹಳೆಯ ಚಿತ್ರಗಳನ್ನು ಹೆಚ್ಚಾಗಿ ನೋಡಿಲ್ಲ. ಡಾ.ರಾಜ್ ಚಿತ್ರಗಳನ್ನು ಸಹ ಹೆಚ್ಚಾಗಿ ನೋಡಿದ್ದು, ಮೆಚ್ಚಿದ್ದು ಅಮೇರಿಕೆಗೆ ಬಂದ ನಂತರ! ಆದರೆ, ಟೀವಿಯಲ್ಲಿ ಬಿತ್ತರಿಸಿದ ಕೆಲವು ಹಳೆಯ ಚಿತ್ರಗಳಲ್ಲಿ ನೋಡಿರುವುದು ಡಾ.ರಾಜ್ ಮತ್ತು ಕಲ್ಯಾಣ್ಕುಮಾರ್, ರಾಜೇಶ್, ಗಂಗಾಧರ್(?) ಇವರುಗಳು ಸಮಕಾಲೀನರೆಂದು. ಕಲ್ಯಾಣ್ಕುಮಾರ್ ಮತ್ತು ಗಂಗಾಧರರು ರಾಜ್ ರಿಗೆ ಯಾವ ರೀತಿಯಲ್ಲೂ ಸಾಟಿಯಿರಲಿಲ್ಲ. ಆದರೆ, ರಾಜೇಶ್ ರಿಗೆ ಹೀರೋಗಿರಬೇಕಾದ ಗತ್ತು, ಮುಖಚರ್ಯೆ, ಎತ್ತರ, ನಟನಾ ಸಾಮರ್ಥ್ಯ ಎಲ್ಲ ಇತ್ತು. ಆದರೂ, ರಾಜ್ ಗೆದ್ದರು, ಮಿಂಚಿದರು, ರಾಜೇಶ್ ಒಂದು ಮಟ್ಟದಲ್ಲೇ ಉಳಿದರು. ಯಾಕೆ ಹೀಗಾಯ್ತು?
ಬರಿಯ ನಟನೆಯಿಂದ ರಾಜ್ ಎಲ್ಲರನ್ನೂ ಹಿಂದೆ ಹಾಕಿದರೆ? ಅಥವ ಅವರ ನಟನೆಗೆ ಪುಷ್ಠಿಕೊಡುವಂತಹ ಪಾತ್ರಗಳು, ಕಥಾವಸ್ತು ಅವರಿಗೆ ದಕ್ಕಿದವೆ? ಹಾಗಾದರೆ, ರಾಜೇಶ್ ಅವಕಾಶವಂಚಿತರಾದರೆ? ರಾಜೇಶ್ ಮತ್ತು ರಾಜ್ ಚಿತ್ರಗಳನ್ನು ಮಸ್ತಾಗಿ ನೋಡಿರುವ ಯಾರಾದರೂ ಹೇಳಿದರೆ ಚೆನ್ನಾಗಿರುತ್ತೆ. (ಬರಿಯ ಡಾ.ರಾಜ್ ಬೀಸಣಿಗೆಗಳು ಇಲ್ಲಿ ಬಂದು ಬೀಸಬೇಡಿ
)

- Login or register to post comments
- 394 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ರಾಜೇಶ್ vs ರಾಜ್
ರಾಜೇಶ್ ಅಭಿನಯ ನನಗೆ ಯಾವಾಗಲೂ ನಾಟಕೀಯ ಅನ್ನಿಸುತ್ತೆ, ನೈಜತೆ ಕಡಿಮೆ..
ಕಲ್ಯಾಣ್ಕುಮಾರ್ ಉತ್ತಮ ನಟ ಆದರೆ, ಅವರ ಚಿತ್ರಗಳು ಹೆಚ್ಚು ಇಲ್ಲ ಅನ್ನೋದು ದುಃಖದ ವಿಷಯ.
-ವರುಣ ಭಟ್
ಉ: ರಾಜೇಶ್ vs ರಾಜ್
'ಪ್ರತಿಧ್ವನಿ' ಚಿತ್ರ ನೋಡಿ. ಇದರಲ್ಲಿ ರಾಜ್ ಮತ್ತು ರಾಜೇಶ್ ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ.ಇದರ ಮೊಸರ್ಬೇರ್ ವಿಡಿಯೋ/ಡಿವಿಡಿ ಈ ಕೆಳಗಿನ ಕೊಂಡಿಯಲ್ಲಿ ಸಿಗುತ್ತದೆ.
http://www.moserbaerhomevideo.com/movies_catagory_nt.aspx?id=2016
ನರಸಿಂಹ ರಾಜು ಮತ್ತು ಬಾಲಕೃಷ್ಣ ಜೋಡಿಯ ಹಾಸ್ಯ ರಸಾಯನವೂ ಇದೆ, ಹದಿನೆಂಟರ ಆರತಿಯೂ ಇದ್ದಾರೆ. ಆರತಿಯ ಅಪ್ಪನಾಗಿ ದಿನೇಶ್ ಇದ್ದಾರೆ... ಕಚಗುಳಿಯಿಡುವ ಮಾತುಕತೆಗಳಿವೆ.....ಒಟ್ಟಿನಲ್ಲಿ ಚೆನ್ನಾಗಿದೆ.
ನನಗೆ ರಾಜೇಶ್ ನಟನೆ ನಾಟಕೀಯ ಅನ್ನಿಸಲಿಲ್ಲ. ರಾಜೇಶ್ ಮತ್ತು ಹೊನ್ನಪ್ಪ ಭಾಗವತರಂತಹ(ಕನ್ನಡದಲ್ಲಿ) ನಟರಿಗೆ ಹೆಚ್ಚು ಅವಕಾಶ ಸಿಗಲಿಲ್ಲ ಎನ್ನುವುದೇ ನಿಜ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ರಾಜೇಶ್ vs ರಾಜ್
ಕಲ್ಪ್ನನಾ
ರಾಜೇಶ್ ಎಲ್ಲಿ ಡಾ|| ರಾಜ್ ಎಲ್ಲಿ
ನಾವು ಈಗಲೂ ರಾಜೇಶರವರ ಅಭಿನಯ ನೋಡಿ ನಗುತ್ತಿರುತ್ತೇವೆ
ಮುಖದಲ್ಲಿ ಭಾವನೇನ ತೋರಿಸೋದಿಕ್ಕೆ ಅವರಿಗೆ ಸರಿಯಾಗಿ ಬರುವುದಿಲ್ಲ.
ಹಾಗೆ ನೋಡಿದರೆ ಅವರ ಸಮಕಾಲೀನರಾದ ಕಲ್ಯಾಣ್‌ಕುಮಾರ್‌ರವರದು ಮೇರು ಅಭಿನಯ , ಹಾಸ್ಯವೆಂಬುದೇನೆಂದು ಅವರ ಅಭಿನಯದಿಂದ ತಿಳಿಯುತ್ತಿತು
ಬೇಕಿದ್ದರೆ ಮಂಕುದಿಣ್ಣೆ ಎಂಬ ಚಿತ್ರ ನೋಡಿ
ನಕ್ಕೂ ನಕ್ಕೊ ಸುಸ್ತಾಗುತ್ತೀರಾ
ಹಾಗೆ ಸುಮಾರು ಚಿತ್ರಗಳಲ್ಲಿ ಗಂಭೀರ ಅಭಿನಯವನ್ನೂ ಮಾಡಿ ಗೆದ್ದಿದ್ದಾರೆ.
http://thereda-mana.blogspot.com/
ರೂಪ
ಉ: ರಾಜೇಶ್ vs ರಾಜ್
ವರುಣ್, ಬೋಳುಂಬು ಮತ್ತು ರೂಪರವರೆ,
ನಿಮ್ಮ ಪ್ರತಿಕ್ರಿಯೆಗಳಿಗೆ ವಂದನೆಗಳು.
ರಾಜೇಶ್ ಅವರ ಯಾವುದೋ ಚಿತ್ರದಲ್ಲಿ ಅವರು ರೈತರಾಗಿ ಒಂದು ಒಳ್ಳೆಯ ಹಾಡಿಗೆ ಅಭಿನಯಿಸಿದ ನೆನಪು(ಹನಿಹನಿಗೂಡದ್ರೆ ಹಳ್ಳ..? ಅಥವ ಬೆಳುವಲದ ಮಡಿಲಲ್ಲಿ...?) ಪರವಾಗಿಲ್ಲ, ಪಾತ್ರ ಓಕೆ ಎನ್ನುವಂತೆ ನಿರ್ವಹಿಸುತ್ತಾರೆ ಅನ್ನಿಸಿತ್ತು.
ರೂಪ, ಈಗ ಈ ಮಾತು ಕೇಳಿ ನೀವು ಕೋಪಿಸಿಕೊಳ್ಳಬೇಡಿ!
ಡಾ.ರಾಜ್ ಅಭಿನಯ ಕೆಲವೊಮ್ಮೆ ನನಗೆ overacting ಅನ್ನಿಸಿದೆ. ಬಾಲ್ಯದಲ್ಲಿ ಇದೇ ವಿಷಯವಾಗಿ ಬಹಳಷ್ಟು ಚರ್ಚೆಗಳು ನಡೆದು ನಮ್ಮ ಮೇಲಿನ ಮನೆಯಲ್ಲಿದ್ದ ಹುಡುಗಿ(ಡಾ.ರಾಜ್ ಕಟ್ಟಾ ಅಭಿಮಾನಿ) ನನ್ನೊಂದಿಗೆ ಮಾತು ಬಿಟ್ಟಿದ್ದಳು
ನೀವುಗಳು ಪ್ರಸ್ತಾಪಿಸಿದ ಚಿತ್ರಗಳು ಸಿಕ್ಕಿದರೆ ನೋಡುತ್ತೇನೆ. "ಲಗ್ನಪತಿಕೆ" ಸುಮಾರು ಸರ್ತಿ ನೋಡಿ ನಕ್ಕಿದ್ದೇನೆ. ಮೊನ್ನೆ, "ಶಬ್ದವೇದಿ" ನೋಡಿದೆ. ಕಥೆ, ಅಭಿನಯ ಯಾವುದೂ ಇಷ್ಟವೇ ಆಗಲಿಲ್ಲ. ವಯಸ್ಸಾದ ಮೇಲೆ ಡಾ.ರಾಜ್ ಹೀರೋ ಪಾತ್ರಗಳ ಬದಲಿಗೆ, ಬಿಗ್ ಬಿ ಈಗ ಮಾಡುವಂತಹ ಪಾತ್ರಗಳನ್ನು ಮಾಡಬೇಕಿತ್ತು. ಅವರ ಪೌರಾಣಿಕ ಪಾತ್ರಗಳು ಯಾವಾಗಲೂ ಚೆನ್ನಾಗಿತ್ತು.
~ಕಲ್ಪನ
ಉ: ರಾಜೇಶ್ vs ರಾಜ್
ಕಲ್ಪನಾ, "ರಾಜ್ ಮತ್ತು ರಾಜೇಶ್" ಚರ್ಚೆಯ ಬಗ್ಗೆ ಆಮೇಲೆ ಯಾವಾಗಲಾದರೂ ಬರೆಯುತ್ತೇನೆ. ಆದರೆ ಈ ಕೆಳಗಿನ ಮಾತಿಗೆ ನಾನು ಉತ್ತರ ನೀಡಲೇ ಬೇಕು.
ನೀವು ಈ ರೀತಿ ಮತ್ತೊಬ್ಬನನ್ನು ಮುಂದಿಟ್ಟುಕೊಂಡು ಇನ್ನೊಬ್ಬ ವ್ಯಕ್ತಿಯ ವಿಮರ್ಶೆ ಮಾಡೋದು ತಪ್ಪು. "ಡಾ.ರಾಜ್ ಹಿರಿಯ ಪಾತ್ರಗಳನ್ನು ಮಾಡಿಲ್ಲ" ಅನ್ನೋದು ನಿಮ್ಮ ಅಭಿಪ್ರಾಯವೇ ? ಶಬ್ದವೇಧಿ ಒಂದನ್ನು ಮುಂದುಮಾಡಿದಿರಲ್ಲ, "ಜೀವನ ಚೈತ್ರದ" ಬಗ್ಗೆ ಏನು ಹೇಳ್ತೀರಾ ?
ಸರಿ ಕೆಲವು ಪಾಯಿಂಟ್ ಬಚ್ಚನ್ ಅಮಲನ್ನು ಈ ಚರ್ಚೆಯಿಂದ ಹೋಗಿಸಲು. ಇಲ್ಲಿ ಚರ್ಚೆಯಾಗಬೇಕಾದದ್ದು ರಾಜ್ ಮತ್ತು ರಾಜೇಶ್ ಬಗ್ಗೆ ಮಾತ್ರ.
೧. ಬಚ್ಚನ್ ಮುದುಕನಾಗಿದ್ದರೂ ಒಬ್ಬಳಿಗೆ ಪ್ರಪೋಸ್ ಮಾಡುವ ಸಿನಿಮಾ ಬಂದಿರೋದನ್ನು ನೋಡಿಲ್ವೇ ? ಅದನ್ನು ಬೇರೊಬ್ಬರು ಓವರಆಕ್ಟಿಂಗ್ ಅನ್ನಬಹುದಲ್ವಾ ? ಯೋಚಿಸಿ
೨. ಕಜ್ರಾರೇ ನೋಡೇ ಇರ್ಬೇಕು ನೀವು. "ಅಮಿತಾಭ್ ಬಚ್ಚನ್ ಮುದುಕ ಆದಮೇಲೆ ಅವನಿಗೆ ಕುಣಿಯೋಕ್ಕೆ ಏನು ಬಂದಿತ್ತು" ಅಂತ ಬೇರೊಬ್ಬರು ಕೊಂಕಾಡಲು ಸ್ವಾತಂತ್ರ್ಯ ಇದೆ.
೩. ಹಿಂದಿ ಸೂರ್ಯವಂಶದಲ್ಲಿ ಯಾರು ಹೀರೋ ?
೪. ನಾಂದಿ ಸಿನಿಮಾ ನೋಡಿದ್ದೀರಾ ನೀವು. ಈಗ ಯಾವುದನ್ನು ಬ್ಲ್ಯಾಕ್ ಸಿನಿಮಾ ಬಂದಿತ್ತೋ, ಹಾಗೆ ೧೯೭೦ರಲ್ಲಿಯೇ ರಾಜ್ ಅಂತಹ ಸಿನಿಮಾ ಮಾಡಿದ್ರು.
ಇವುಗಳನ್ನು ಹೀಗೆ ಸಮಗ್ರವಾಗಿ ಗಮನಿಸದೆ, ಒಬ್ಬನ ವ್ಯಕ್ತಿತ್ವವನ್ನು ಯಾವ್ದೋ ಒಂದೆರೆಡು ಸಿನಿಮಾ ನೋಡಿಬಿಟ್ಟು, ಆತನ ಇಡೀ ಸಿನಿಮಾ ಜೀವನವನ್ನು ವಿಮರ್ಶಿಸಲು ಪ್ರಯತ್ನಿಸುತ್ತಿರುವ ಔಚಿತ್ಯವೇನು ?
ಉ: ರಾಜೇಶ್ vs ರಾಜ್
ಸುನಿಲರೆ,
ಬಚ್ಚನ್ ಅಮಲು ನನಗಿಲ್ಲ! "ವಯಸ್ಸಾದ ಮೇಲೆ ಡಾ.ರಾಜ್ ಹೀರೋ ಪಾತ್ರಗಳ ಬದಲಿಗೆ, ಬಿಗ್ ಬಿ ಈಗ ಮಾಡುವಂತಹ ಪಾತ್ರಗಳನ್ನು ಮಾಡಬೇಕಿತ್ತು. " ಇದು ಬಹುಶಃ ಹೀಗಿರಬೇಕಾಗಿತ್ತು - "ವಯಸ್ಸಾದ ಮೇಲೆ ಡಾ.ರಾಜ್ ಹೀರೋ ಪಾತ್ರಗಳ ಬದಲಿಗೆ, ಬಿಗ್ ಬಿ ಈಗ ಮಾಡುವಂತಹ ಮನೆಯ ಹಿರಿಯನ(family patriarch) ಪಾತ್ರಗಳನ್ನು ಮಾಡಬೇಕಿತ್ತು. "
ಜೀವನಚೈತ್ರ ನೋಡಿಲ್ಲ, ಸಿಕ್ಕಿದರೆ ನೋಡುತ್ತೇನೆ. ಹೌದು, ಒಂದು ಕಾಲದಲ್ಲಿ, ಬಚ್ಚನ್ ವಯಸ್ಸಾದರೂ ಹೀರೋ ಪಾತ್ರಗಳನ್ನು ಮಾಡುತ್ತಿದ್ದರು. ಉದಾ: ಶಾಹೆನ್ ಶಾ, ಸೂರ್ಯವಂಶ್, ಇನ್ನೂ ಕೆಲವು ಫ್ಲಾಪ್ ಚಿತ್ರಗಳು. ಇದರಿಂದ ಪಾಠ ಕಲಿತರೇನೋ ಎನ್ನುವಂತೆ ಈ ನಡುವೆ ವಯಸ್ಸಿಗೆ ತಕ್ಕಂತಹ ಕ್ಯಾರೆಕ್ಟರ್ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ನಾನು ಹೇಳಿದ್ದು. ಬಹುಶಃ ರಾಜ್ ಬದುಕಿದ್ದಿದ್ದರೆ ಹೀಗೆ ಮಾಡುತ್ತಿದ್ದರೇನೋ ಗೊತ್ತಿಲ್ಲ. (ನಿಶ್ಶಬ್ದ, ಕಜ್ರಾರೆ, ಇವೂ ಕ್ಯಾರೆಕ್ಟರ್ ರೋಲ್ಸ್. ಅಂದರೆ, ಮುದುಕ ಹುಡುಗಿಯ ಹಿಂದೆ ಬೀಳುವುದು, ಮುದುಕ ಹಳೆಯ ಪ್ರೇಮಿಯನ್ನು ನೆನೆಸಿಕೊಂಡು ಕುಣಿಯುವುದು, ಹೀಗೆ.)
ಒಬ್ಬರ ಎಲ್ಲಾ ಸಿನಿಮಾ ನೋಡಿ ಮಾತನಾಡಬೇಕು ಎನ್ನಲು ನಾನೇನು ಅವರ ಜೀವನ ಚರಿತ್ರೆ ಇಲ್ಲಿ ಪ್ರಸ್ತಾಪಿಸಿಲ್ಲ. ಜೊತೆಗೆ ಇದು ರಾಜ್ vs ಅಮಿತಾಭ್ ಚರ್ಚೆ ಅಲ್ಲವೇ ಅಲ್ಲ! ಇದೇ ರೀತಿಯ ಪಾತ್ರಗಳನ್ನು ಭಾರತದ ಸಿನಿಮಾರಂಗದಲ್ಲಿ ಯಾರಾದರೂ ಮಾಡುತ್ತಿದ್ದರೆ, ನನಗೆ ಅದು ಗೊತ್ತಿದ್ದರೆ, ನಾನು ಆಗ ಅವರ ಹೆಸರನ್ನು ಇಲ್ಲಿ ಮುಂದಿಟ್ಟುಕೊಂಡು ಇದೇ ಕಾಮೆಂಟು ಮಾಡಿರುತ್ತಿದ್ದೆ. ಇದನ್ನು ಹಿಂದಿ ವ್ಯಾಮೋಹ, ಬಚ್ಚನ್ ಅಮಲು ಅಂತೆಲ್ಲ ಅರ್ಥ್ಯೈಸಬೇಡಿ.
~ಕಲ್ಪನ
ಉ: ರಾಜೇಶ್ vs ರಾಜ್
ಆಯ್ತು. ನನಗೆ ಈ ರಾಜ್ ಮತ್ತು ರಾಜೇಶರ ನಡುವಿನ ಚರ್ಚೆಯಲ್ಲಿ ಬಚ್ಚನ್ನಿನ ಪ್ರಸ್ತಾಪ ಮಾಡಿದ್ದು ಸಮಂಜಸವೆನಿಸಿಲಿಲ್ಲ. ಒಂದು ರೀತಿ "ಡಾ|ರಾಜರ ಸಿನಿಮಾಗಳನ್ನೇ ನೋಡದೆ ಇದ್ದರೂ, ಅವರು ಬಚ್ಚನ್ ಮಾಡಿದಂತಹ ಪಾತ್ರ ಮಾಡಿಲ್ಲ" ಅಂತ ಹೇಳಿದ ಹಾಗಾಗುತ್ತದೆ. ಇಂತಹವು ಚರ್ಚೆಯ ಗತಿಯನ್ನು ಹಾಳುಮಾಡುತ್ತದೆ. "ಚರ್ಚೆಯಲ್ಲಿ ಭಾಗವಹಿಸದೆ, ಚರ್ಚೆಯಲ್ಲಿ ಏನಾಗುತ್ತಿದೆ" ಎಂದು ನೋಡಲು ಇಷ್ಟಪಡುವವರನ್ನು ಇಂತಹವು ದಾರಿತಪ್ಪಿಸುತ್ತದೆ.
ಸರಿ ಚರ್ಚೆ ಮುಂದುವರಿಸುವ ಮುಂಚೆ ಒಂದು ಕರಾರು. "ರಾಜ್ ಮತ್ತು ರಾಜೇಶ್" ಬಗೆಗಿನ ಚರ್ಚೆಯನ್ನು ಅವರಿಬ್ಬರ ನೆಲೆಯಲ್ಲಿಯೇ ಮಾಡೋಣ !!!!! ಬೇರೆಯವರ ಪ್ರಸ್ತಾಪ ಇಲ್ಲಿ ಬೇಡ. ಒಪ್ಪಿಗೆಯೇ ?
ಉ: ರಾಜೇಶ್ vs ರಾಜ್
ಸರಿ, ಒಪ್ಪಿಗೆ!
~ಕಲ್ಪನ
ಉ: ರಾಜೇಶ್ vs ರಾಜ್
೧. ನೋಡಿ, ನೀವು ಅಷ್ಟು ಚಿಕ್ಕವಯಸ್ಸಿಗೆ ಬೇರೊಬ್ಬಳ ಜೊತೆ ಚರ್ಚಿಸುತ್ತಿದ್ದೆ ಅಂತೀರಲ್ಲ. ಅಷ್ಚು ಚಿಕ್ಕವಯಸ್ಸಿಗೆ ಡಾ.ರಾಜರ ಎಲ್ಲ ಸಿನಿಮಾಗಳನ್ನು ನೋಡಿದ್ರಾ ? ಹೋಗಲಿ ಬಿಡಿ. ಚಿಕ್ಕವಯಸ್ಸಿನಲ್ಲಿ ಹುಮ್ಮಸ್ಸಿರತ್ತೆ, ಸ್ವಲ್ಪ ವಿಶ್ಯ ಗೊತ್ತಿದ್ರೂ ಸಿಕ್ಕಾಪಟ್ಟೆ ತಿಳ್ಕೊಂಡಿರೋವ್ರತರಹ ಮಾತಾಡ್ತೀವಿ, ಆದರೆ ಆ ಭಾವನೆ ತಪ್ಪಿರಬಹುದು ಅಂತ ಬೆಳೆಯುತ್ತಾ, ನಿಮಗೆ ಯಾವತ್ತಾದರೂ ಯೋಚನೆ ಬಂದಿತ್ತೇ ? ಅಥ್ವಾ ಚಿಕ್ಕಂದಿನ ಆ ಭಾವನೆಯನ್ನು ಹೆಚ್ಚು ಹೆಚ್ಚು ಹರಿತಗೊಳಿಸಿಕೊಳ್ಳಬೇಕು ಅಂತಲೇ ಇಲ್ಲಿಯವರೆಗೂ ಡಾ|ರಾಜರ ಸಿನಿಮಾಗಳನ್ನು ಪೂರ್ವಾಗ್ರಹದ ಕಣ್ಣಿನಿಂದ ನೋಡುತ್ತಾ ಬಂದಿರುವಿರೇ ?
೨. ಡಾ|ರಾಜರ ಮೇಲಿನ ನಿಮ್ಮ ಓವರಆಕ್ಟಿಂಗ್ ಎನ್ನುವಂತಹ ಭಾವನೆ, ನಿಜಕ್ಕೂ ನಿಮ್ಮಲ್ಲೇ ಮೊದಲು ಹುಟ್ಟಿತೇ ? ಅತ್ವಾ ನೀವು ಚಿಕ್ಕವರಿದ್ದಾಗೆ ನಿಮ್ಮ ಅಕ್ವೈಂಟ್ಸ್ ಯಾರಾದ್ರು ಆ ರೀತಿ ಹೇಳಿದಾಗ, ನೀವು ಅದು ನಿಜ ಇರಬಹುದು ಅಂತ ಅದೇ ಭಾವನೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋದ್ರೋ ?
ಈ ಪ್ರಶ್ನೆಗಳಿಗೆ ಉತ್ತರ ಬೇಕು. ಏಕೆಂದರೆ, ನಾನು ಕೆಲವು ಮನೆಗಳಲ್ಲಿ ಗಮನಿಸಿದ್ದೇನೆ. ಒಂದೇ ಮನೆಯಲ್ಲಿ ರಾಜ್ ಅಭಿಮಾನಿ ಒಂದು ಕಡೆ, ವಿಷ್ಣು ಅಭಿಮಾನಿ ಮತ್ತೊಂದು ಕಡೆ. ಆಗ ಏನಾಗುತ್ತದೆ ಎಂದರೆ ಅವರಿಬ್ಬರೂ ಚರ್ಚೆ ಮಾಡುತ್ತಿದ್ದಾಗೆ, ಬೇರೆಯವರು ಅವರ ಮಾತುಗಳನ್ನು ಕೇಳಿಸಿಕೊಂಡು, ಸ್ವಂತ ಅಭಿಪ್ರಾಯವಿಲ್ಲದೆ, ಚರ್ಚಿಸುತ್ತಿದ್ದವರ ವಾದವನ್ನೇ ನಿಜ ಅಂತ ನಂಬ್ತಾರೆ. ನಿಮ್ಮ ಕಾಮೆಂಟೂ ನನಗೆ ಹಾಗೆಯೇ ಅನಿಸುತ್ತಿದೆ. ಎರೆಡೆರಡು ಬಾರಿ ರಾಜರ ಬಗ್ಗೆ ಮಾತಾಡೋರಿಗೆ, "ಬೀಸಣಿಗೆ, ಕಟ್ಟಾ ಅಭಿಮಾನಿಗಳು" ಅಂತ ಹಣೆಪಟ್ಟಿಕಟ್ಟಿದ್ದೀರಾ. ಅಂದರೆ ನಿಮಗೆ ನಿಜಕ್ಕೂ ಡಾ!ರಾಜರ ಬಗ್ಗೆ ಪೂರ್ವಾಗ್ರಹವಿದೆ ಅಂತ ನನ್ನ ಎಣಿಕೆ. ತಪ್ಪಿರಬಹುದು.
ಉ: ರಾಜೇಶ್ vs ರಾಜ್
ಸುನಿಲರೆ,
ನನಗೆ ಇಲ್ಲಿ ರಾಜೇಶ್ ಅಭಿಮಾನಿಗಳಿಂದಲೂ ಪ್ರತಿಕ್ರಿಯೆ ಬೇಕಾಗಿತ್ತು. ಆದ್ದರಿಂದ "ಬರಿಯ ಡಾ.ರಾಜ್ ಬೀಸಣಿಗೆಗಳು ಇಲ್ಲಿ ಬಂದು ಬೀಸಬೇಡಿ." ಅಂತಂದೆ. ಇದು one-sided discussion ಆಗದಿರಲಿ ಎಂದು ಅಂದಿದ್ದು.
ಚಿಕ್ಕ ವಯಸ್ಸಿನಲ್ಲೇನು ಮಹಾ, ಈಗಲೂ ಎಲ್ಲ ಗೊತ್ತಿರುವ ಹಾಗೆ ಚರ್ಚಿಸುತ್ತೀವಲ್ವ?
ಇರಲಿ, ಚಿಕ್ಕ ವಯಸ್ಸಿನಲ್ಲಿ ನಾನು ವಾದ ಮಾಡುವಾಗ ನನ್ನ ವಾದದಲ್ಲಿ ಹುರುಳಿಲ್ಲದಿದ್ದರೂ ಬಹುಶಃ ಸೋಲಲು ಇಷ್ಟವಿಲ್ಲದ ಹಾಗೆ ಮುಂದುವರೆಸುತ್ತಿದ್ದೆ. ಈಗ ಹಾಗಲ್ಲ. ಎದುರು ವಾದಿ ತನ್ನ ಪಾಯಿಂಟ್ಸ್ನಿಂದ ನನ್ನನ್ನು convince ಮಾಡಿದರೆ ನನಗೆ ಸೋಲಲು ಲಜ್ಜೆಯೇನಿಲ್ಲ. ಮತ್ತೆ ಡಾ.ರಾಜ್ ಬಗ್ಗೆ ಪೂರ್ವಾಗ್ರಹ, ಇದು ಕನ್ನಡನಾಡಿನಲ್ಲಿ ಬೆಳೆದ ಎಲ್ಲರಿಗೂ ಒಂದು ರೀತಿಯಲ್ಲಿ ಇರುತ್ತೆ ಅನ್ನಿಸುತ್ತೆ. "ಸ್ವಂತ" ಅಭಿಪ್ರಾಯವನ್ನು ಬೆಳೆಸಿಕೊಂಡರೂ, it will be tainted with some bias. "ಅಭಿಮಾನಿ" ಎಂದು ಹೇಳಿಕೊಂಡ ನಿಮಗೂ ಇದೆ. ಆದ್ದರಿಂದಲೇ, ನನ್ನ ಒಂದು ಸಾಲನ್ನು ತೆಗೆದುಕೊಂಡು, (ನಾನು ಬರೆದಾಗ ಊಹಿಸಲೂ ಇರದಿದ್ದ) ವಿವಿಧ ರೀತಿಯಲ್ಲಿ ಅರ್ಥ್ಯೈಸಿ, ಪುಟಗಟ್ಟಲೆ ಬರೆದಿದ್ದೀರ 
~ಕಲ್ಪನ
ಉ: ರಾಜೇಶ್ vs ರಾಜ್
"ರಾಜೇಶ್ ಮತ್ತು ರಾಜ್" ಬಗ್ಗೆ ನನ್ನ ಎರಡು ಅನಿಸಿಕೆಗಳು. ಮೊದಲು ನಿಜ ಒಪ್ಕೊಳ್ಳೋಣ. ನಾನು ಇವರಿಬ್ಬರೂ ನಟರ ಅಭಿಮಾನಿ, ಅತ್ವಾ ಬೀಸಣಿಗೆ. ಹೌದು.
೧. ರಾಜೇಶರಿಗಿಂತ ಹೆಚ್ಚು ಸಿನಿಮಾಗಳನ್ನು ಡಾ|ರಾಜ್ ಮಾಡಿದ್ದಾರೆ. ಹೌದು!!!!! ಆದರೆ, ಇಲ್ಲಿ ಗಮನಿಸಬೇಕಾದ್ದು, ಡಾ|ರಾಜ್, ರಾಜೇಶ್ ಅಷ್ಟೇ ಅಲ್ಲ, ಬೇರೆಲ್ಲರಿಗಿಂತಲೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಆದ್ದರಿಂದ, ರಾಜ್ ಹಾಗು ರಾಜೇಶರನ್ನು ಎಷ್ಟು ಸಿನಿಮಾ ಮಾಡಿದ್ದಾರೆ ಎಂಬುದನ್ನು ಮುಂದಿಟ್ಟುಕೊಂಡು, ರಾಜೇಶರು ಅವಕಾಶವಂಚಿತರು ಅನ್ನೋಕ್ಕೆ ಆಗಲ್ಲ. ದಯವಿಟ್ಟು ಕನ್ನಡದಲ್ಲಿ ಆಗ ಬಿಡುಗಡೆಯಾಗುತ್ತಿದ್ದ, ಸಿನಿಮಾಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಿ.
೨. ಬರಿಯ ನಟನೆಯಿಂದ ರಾಜ್ ಎಲ್ಲರನ್ನೂ ಹಿಂದೆ ಹಾಕಿದರೆ ? ನಿಸ್ಸಂಶಯವಾಗಿ ಹೇಳಬಲ್ಲೆ, ಹೌದು. ಏಕೆಂದರೆ ರಾಜರಿಗೆ ದಕ್ಕಿದ ಪಾತ್ರಗಳು ಹಾಗಿದ್ದವು. ತೆರೆಮರೆಯಲ್ಲಿ ಇದ್ದುಕೊಂಡು ಯಾರೂ ಕೂಡ ಒಂದು ನಾಡಿನ ದೊಡ್ಡ ಶಕ್ತಿಯಾಗಿ ಬೆಳೆಯೋದು ಸಾಧ್ಯ ಇಲ್ಲ, ಕಣ್ರೀ.
೩. ರಾಜೇಶರಿಗೆ ಗತ್ತು, ಮುಖಚರ್ಯೆ, ಎತ್ತರ, ನಟನಾ ಸಾಮರ್ಥ್ಯ ಎಲ್ಲವೂ ಇತ್ತು, ಆದರೆ ನಾನು ಒಂದು ಸೂಕ್ಷ್ಮ ಅಂಶವನ್ನು ಗಮನಿಸಿದ್ದೇನೆ. ಅವರ ಚಿತ್ರಗಳಲ್ಲಿ ಮಾತುಕತೆಗಿಂತ ಡಿಸ್ಕಶನ್ ಹೆಚ್ಚು. ಹಿಂದಿನ ಕನ್ನಡ ಸಿನಿಮಾಗಳಲ್ಲಿ, ಸಂಸ್ಕೃತ ಪದಬಳಕೆ ಹೆಚ್ಚು. ಸಂಸ್ಕೃತದ ಪದಗಳನ್ನು ಡಾ|ರಾಜರು ಸ್ವಾಭಾವಿಕವೇನೋ ಎನ್ನುವಂತೆ ಹೇಳುತ್ತಿದ್ದರು. ಆದರೆ ರಾಜೇಶರು ಈ ರೀತಿಯ ಸಂಸ್ಕೃತ ಪದಗಳನ್ನು ಬಳಸಿದಾಗ, ಅದೆಲ್ಲೋ ಕೃತಕ ಅಂತ ತಕ್ಷಣಕ್ಕೆ ಗೊತ್ತಾಗತ್ತೆ. (ಬೇಕಿದ್ದರೆ ನೋಡಿ, ನನಗೆ ಸಿನಿಮಾ ಹೆಸರು ಗೊತ್ತಿಲ್ಲ, ಆದರೆ ರಾಜೇಶ್ ಒಬ್ಬಳು ಸೂಳೆಯನ್ನು ಗರತಿಯನ್ನಾಗಿ ಮಾಡಿ ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸುವ ಒಂದು ಫಿಲಮ್ ಇದೆ. ಅಲ್ಲಿ ಮಾತುಗಳು ಡಿಸ್ಕಶನ್, ಚರ್ಚೆ ಎನ್ನುವಂತೆ ಇರುತ್ತದೆ). ಡಾ|ರಾಜ್ ರವರು ಕೃತಕವಲ್ಲದ ರೀತಿಯಲ್ಲಿ, ಲೀಲಾಜಾಲವಾಗಿ ತೂಕದ ಸಂಸ್ಕೃತ ಪದಗಳನ್ನು ಬಳಸುವ ಶೈಲಿ ತುಂಬಾ ಕಷ್ಟ ಸಿಗೋದು.
ನೋಡಿ, ರಾಜೇಶರು ಡಾ|ರಾಜರ ಸಿನಿಮಾ ನೋಡಿರ್ತಾರೆ. ಡಾ|ರಾಜ್, ರಾಜೇಶರನ್ನು ನೆನೆಸಿಕೊಂಡಿರ್ತಾರೆ. ಆದರೆ ನಾವು ಇಂತಹ ಆನ್ಲೈನ್ ವೇದಿಕೆಗಳಲ್ಲಿ ಹೊಡ್ದಾಡ್ತೀವಿ, ಅವ್ನು ಇವ್ನನ್ನು ತುಳ್ದಬಿಟ್ಟ, ಅವನು ಅವಕಾಶವಂಚಿತ, ಹಾಗೆ ಹೀಗೆ ಅಂತ. ಚಿತ್ರರಂಗ ಒಂದು ಸ್ಪರ್ಧೆ, ಸ್ಪರ್ಧೆಯಲ್ಲಿ ರಾಜ್ ಜನಮನ ಗೆದ್ದರು, ಅಷ್ಟೇ, ಅಂತ ಯಾಕೆ ಅರ್ಥ ಮಾಡ್ಕೊಳಲ್ಲ.
ಉ: ರಾಜೇಶ್ vs ರಾಜ್
ಸುನಿಲರೇ,
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ವಂದನೆಗಳು. ಇದೇ ನನಗೆ ಬೇಕಾಗಿದ್ದಿದ್ದು.
~ಕಲ್ಪನ