ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡದಲ್ಲಿ ಧಾತುಗಳೇ ವಿಶೇಷಣಗಳಾಗಿ ಬಳಕೆಯಾಗುತ್ತವೆ.

ನನಗೆ ಗೊತ್ತಿರುವಂತೆ ತೀರು, ತುಂಬು, ನೆಱೆ ಮತ್ತು ಹೆಚ್ಚು ಈ ಧಾತುಗಳೇ ಕ್ರಿಯಾಪದ ಅಥವಾ ನಾಮಪದಗಳ ವಿಶೇಷಣಗಳಾಗಿ ಬಳಕೆಯಾಗುವುದು ಕಂಡುಬರುತ್ತದೆ.
ಹೆಚ್ಚು ಮಾತಾಡು
ತೀರಾ ಕಡಿಮೆ
ತುಂಬಾ ಜಾಸ್ತಿ.
ನೆಱೆ ನಂಬಿದೆ ನಿನ್ನ ಇತ್ಯಾದಿ ಇತ್ಯಾದಿ.

ನಿಮಗಿನ್ನಾವುದಾದರೂ ಕ್ರಿಯಾಪದಗಳೇ ವಿಶೇಷಣಗಳಾಗಿ ಬಳಕೆಯಾಗುತ್ತಿದ್ದರೆ ದಯವಿಟ್ಟು ತಿಳಿಸಿ.

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕನ್ನಡದಲ್ಲಿ ಧಾತುಗಳೇ ವಿಶೇಷಣಗಳಾಗಿ ಬಳಕೆಯಾಗುತ್ತವೆ.

kannadakanda's picture

ಇನ್ನೊಂದು ಪದ ಪೋಲ್=ಹೋಲು, ಅಂತೆ ಇದು ಇನ್ನೊಂದರಂತೆ ಎಂದು ಉಪಮೆ ಕೊಡುವಾಗ ಅವ್ಯಯವಾಗಿ ಹೞಗನ್ನಡ, ನಡುಗನ್ನಡದಲ್ಲಿ ಬಳಕೆಯಾಗುತ್ತಿದ್ದ ಇನ್ನೊಂದು ಕ್ರಿಯಾಪದ. ಈ ಪದವು ಮಧ್ಯದ ಪಕಾರ ವಕಾರವಾಗಬೇಕೆಂಬ ನಿಯಮವಿರುವುದಱಿಂದ ವೋಲ್ ಎಂದೂ ಸಾಮಾನ್ಯವಾಗಿ ಕಾಣುತ್ತದೆ. ಅನುನಾಸಿಕದ ಮುಂದೆ ಬಂದಾಗ ಬೋಲ್ ಆಗುತ್ತದೆ. ಕೆಲವು ವೇಳೆ ಹ್ರಸ್ವವಾಗಿ ಪೊಲ್, ವೊಲ್, ಬೊಲ್ ರೂಪಗಳು ಕಾಣಬರಬಹುದು. ಆದರೆ ವ್ಯಾಕರಣದ ಪ್ರಕಾರ ಹ್ರಸ್ವವಾಗುವುದು ತಪ್ಪು. ಪೂರ್ವದ ಹೞಗನ್ನಡದಲ್ಲಿ ಹಾಗಾಗಿ ಒಕಾರಕ್ಕೆ ಹ್ರಸ್ವವಿಲ್ಲ.

ಉ: ಕನ್ನಡದಲ್ಲಿ ಧಾತುಗಳೇ ವಿಶೇಷಣಗಳಾಗಿ ಬಳಕೆಯಾಗುತ್ತವೆ.

kannadakanda's picture

ಹಾಗೆಯೇ ಮಿಗೆ ಕೂಡ ಮಿಗು=ಹೆಚ್ಚಾಗು ಎಂಬುದಱಿಂದ ಹೆಚ್ಚಾಗಿ ಎಂಬರ್ಥದಲ್ಲಿ ವಿಶೇಷಣವಾಗಿ ಬಳಸಲ್ಪಡುವ ಇನ್ನೊಂದು ಧಾತು.