ನಾನು ಹೇಗೆ ಸೈನೈಡ್ ತಿಂದರೂ ಬದುಕಿದ್ದೇನೆ
ಹೌದು ನಾನು ಸೈನೈಡ್ ತಿಂದೆ. ನಾನಷ್ಟೇ ಅಲ್ಲ, ನನ್ನ ಸ್ನೇಹಿತರಿಗೂ ತಿನ್ನಿಸಿದೆ. ಅಷ್ಟೇ ಅಲ್ಲ, ಸುತ್ತಮುತ್ತಲಿನ ಜನರಿಗೂ ತಿನ್ನಿಸಿದೆ. ಭಯಬೀಳಬೇಡಿ. ಯಾರಿಗೂ ಏನೂ ಆಗಿಲ್ಲ. ಇದು ಹೇಗೆ ಸಾಧ್ಯವಾಗಿರಬಹುದು. ತಿಳಿದುಕೊಳ್ಳಲಿಚ್ಛೆಯೇ. ಸರಿ ಹಾಗಾದರೆ, ವಿವರವಾಗಿ ತಿಳಿಸುತ್ತೇನೆ ಕೇಳಿ. ಅಂದು ಸುಮಾರು ಬೆಳಗ್ಗೆ ೯:೩೦ ರ ಸಮಯ ಮನೆಯಲ್ಲಿ ನಾನು ತಮ್ಮನೊಡಗೂಡಿ, "ನಾಡಿನ ನಾಡಿ ಚಂದನ, ಚಂದನ, ಚಂದನಾ" ವಾಹಿನಿ ನೋಡುತ್ತಿದ್ದೆ. ನನಗೆ ಸೈನೈಡ್ ಯೋಚನೆ ಬಂದಿದ್ದೇ ಆಗ. ಏನಾಯಿತು ಗೊತ್ತೆೇ.
ಒಂದು ಲೈವ್ ಬುಲೆಟಿನ್ ಪ್ರಸಾರವಾಗುತ್ತಿತ್ತು. ಅಂದರೆ ಟಿವಿ, ಪರದೆಯ ಕೆಳಗಡೆ ಕೆಲವೊಮ್ಮೆ ಮುಖ್ಯವಿಷಯಗಳ ತುಣುಕುಗಳನ್ನು ಪ್ರಸಾರಮಾಡುತ್ತಿರುತ್ತಾರಲ್ಲ, ಅದು. ಏನಪ್ಪ ಅದು ಅಂತಂದ್ರೆ,.
"ವೀಕ್ಷಕರೆ ಗಮನಿಸಿ, ೦೯-೦೭-೨೦೦೬ ರ ಬೆಳಗ್ಗೆ ೧೦:೦೦ ರಿಂದ ೧೨:೦೦ ರವರೆಗೆ ಹಲೋ ಸಿ.ಎಂ. ಮಹಿಳಾ ವಿಶೇಷ ನೆೇರಪ್ರಸಾರವಿದೆ. ತಪ್ಪದೆ ವಿಕ್ಷೀಸಿರಿ" .
ಮತ್ತೊಮ್ಮೆ ಓದಿ ನೋಡಿ. ನಾನು ಸ್ಪೆಲ್ ಚೆಕ್ ಮಾಡಿಯೇ ಹಾಕಿದ್ದೇನೆ. ಕೊನೆಯ ವಾಕ್ಯ ಮತ್ತೊಮ್ಮೆ ಓದಿ. ಸೈನೈಡ್ ಯೋಚನೆ ಏಕೆ ಬಂತು ಎಂಬುದು ತಿಳಿಯುತ್ತದೆ. By the way, ನನಗೆ ಸೈನೈಡ್ ಯೋಚನೆ ಬಂದಿದ್ದರಲ್ಲಿ ಪಾಪ ನಮ್ಮ ಸಿ.ಎಂ ದು ಏನೂ ತಪ್ಪಿಲ್ಲ ಬಿಡಿ. ಅದು ಬೇರೆ ವಿಷಯ.
ಛೆ, ಟಿವಿಯಲ್ಲಿ ಸುದ್ಧಿ ಪ್ರಸಾರ ಮಾಡುವಾಗ ಯಾರೂ Quality check ಮಾಡಲ್ವ ಎನಿಸಿತು. ಹೆೋಗಲಿ ಒಂದು ಒಳ್ಳೆಯ ಕನ್ನಡ ನಾಟಕನೋ, ಪುಸ್ತಕಾನೋ ತೊಗೊಂಡು ಓದೋಣ ಅಂತಿರುವಾಗ, ಹೊಳೆಯಿತು ಉಪಾಯ. ಮೊನ್ನೆ ತಾನೆೆ ಸೈನೈಡ್ ಸಿನಿಮಾ ಬಿಡುಗಡೆಯಾಗಿದೆ ಅಂತ ತಿಳಿದಿತ್ತು, ಹಾಗೆಯೇ ಸೈನೈಡ್ ಕುರಿತು ಕೆಲವು ವಾರಗಳ ಹಿಂದೆ ನಾನೇ ಬ್ಲಾಗೂ ಕೂಡ ಮಾಡಿದ್ದೆನಾದ್ದರಿಂದ ಕುತೂಹಲವೂ ಸಾಕಷ್ಟಿತ್ತು. ಸರಿ ಸಿನಿಮಾ ನೋಡೋಣ ಅಂತ ತಿೀರ್ಮಾನಿಸಿ, ಗೆಳೆಯರನ್ನೆಲ್ಲ ಒಟ್ಟುಗೂಡಿಸಿ ಬನಶಂಕರಿ ಮೂರನೇ ಹಂತದಲ್ಲಿರುವ ವಿದ್ಯಾಪೀಠದ ಹತ್ತಿರವಿರುವ ಚಂದ್ರೋದಯ, ಚಿತ್ರಮಂದಿರಕ್ಕೆ ನುಗ್ಗಿದೆ. ಇನ್ನೂ ಟಿಕೆಟ್ಟೇ ಕೊಂಡುಕೊಂಡಿರಲಿಲ್ಲ, ಆಗಲೇ ಅಲ್ಲಿದ್ದ ಒಂದು ಪೋಸ್ಟರ್ ನನಗೆ "ಸೈನೈಡ್" ತಿನ್ನಿಸಿತು. ನಾನು ನನ್ನ ಸ್ನೇಹಿತರಿಗೆ ತಿನ್ನಿಸಿದೆ. ಸರಿ ಈಗ ನಿಮಗೂ ತಿನ್ನಿಸುವೆ ನೋಡಿ.
ಎಚ್ಚರಿಕೆ: ಆ ಪೋಸ್ಟರ್ ನೋಡಿ, ಮೂರ್ಛೆ ಹೋದರೆ ನಾನು ಖಂಡಿತ ಜವಾಬ್ದಾರನಲ್ಲ. ನಿಮಗೆ ನೀವೇ ಜವಾಬ್ದಾರರು

ಏನಪ್ಪಾ ಇದು, ಟಿಕೆೇಟು ಕೆೊಂಡುಕೆೊಳ್ಳೋ ಮುಂಚೆನೇ ಈ ರೀತಿಯಾದರೆ ಏನಪ್ಪಾ ಗತಿ ಅಂತ ಯೋಚಿಸುವಷ್ಟರಲ್ಲಿ, ನನ್ನ ಸ್ನೇಹಿತ ಬೆಳಗ್ಗಿನ ಪ್ರದರ್ಶನ (೧೧:೪೫) ಕ್ಕೆ ಟಿಕೆಟ್ಟು ಖರೀದಿಸಿ ತಂದ. ಸರಿ ಸಮಯವಾಯಿತು ನೋಡಲು ಹೊರಟೆವು. ಈಗಾಗಲೇ ಸೈನೈಡ್ ರುಚಿ ನೋಡಿದ್ದ(ಪೋಸ್ಟರ್) ನಮ್ಮನ್ನು ಸಾಯಲು ಬಿಡದೆ ಬದುಕಿಸಿದ್ದೇ ಸೈನೈಡ್(ಸಿನಿಮಾ). ಸಾಂಪಲ್ ಸೈನೈಡ್ ನಮಗೆ vaccination ನೀಡಿತ್ತಾದ್ದರಿಂದ ನಮಗೆ ಪೂರ್ಣಪ್ರಮಾಣದ ಸೈನೈಡ್ (ಸಿನಿಮಾದ) ಬಗ್ಗೆ ಭಯ ಹೊರಟುಹೋಗಿತ್ತು.
ನಿಜಹೇಳಬೇಕೆಂದರೆ, ನಮ್ಮನ್ನು ಆ ಸೈನೈಡ್ನಿಂದ (ಕನ್ನಡಕ್ಕೆ ಅಪಚಾರಮಾಡಿದ್ದ ಪೋಸ್ಟರ್ನಿಂದ) ಪಾರು ಮಾಡಿದ್ದೇ ಈ ಸೈನೈಡ್(ಸಿನಿಮಾ). ನಿಜವಾಗಿಯೂ ಇದೊಂದು ಅತ್ಯುತ್ತಮ ಚಿತ್ರ ಎಂದು ಹೇಳುವುದಕ್ಕೆ ನನಗೆ ಎಳ್ಳಷ್ಟೂ ಹಿಂಜರಿಕೆಯಿಲ್ಲ. ಇದೊಂದು ಪ್ರಾಮಾಣಿಕ ಪ್ರಯೋಗ. ಇಲ್ಲಿ ರಾಜಕೀಯವಿಲ್ಲ. ಅಂದರೆ ರಾಜಕೀಯ ಸಿದ್ಧಾಂತದ ಪರ ವಿರೋಧಿ ಹೇಳಿಕೆಗಳಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಚಿತ್ರದಲ್ಲಿ ಕನ್ನಡಕ್ಕೆ ಯಾವ ಅಪಚಾರವೂ ಆಗಿರಲಿಲ್ಲ, ಪೋಸ್ಟರ್ನಲ್ಲಿ ಆದಂತೆ.
ಚಿತ್ರ ತಂಡಕ್ಕೆ ಖಂಡಿತವಾಗಿಯೂ ಶಹಭಾಸ್ ಹೇಳಲೇ ಬೇಕು(ಆದರೆ ಪೋಸ್ಟರ್ ತಂಡಕ್ಕಲ್ಲ). ಅವಿನಾಶ್, ತಾರಾ, ರಂಗಾಯಣ ರಘು, ಸುರೇಶ್ ಹೆಬ್ಳೀಕರ್ (ಮತ್ತಾರದಾದರು ಹೆಸರು ಬಿಟ್ಟು ಹೋಗಿದ್ದರೆ ಕ್ಷಮಿಸಿ) ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅದರಲ್ಲೂ, ತಾರಾ ಮತ್ತು ರಂಗಾಯಣ ರಘು ಬಗ್ಗೆ ಹೇಳಲೇಬೇಕು. "ತಾರಾ ಅಭಿನಯ" ಅಂತೂ ಒಬ್ಬ ಹಳ್ಳಿಯ ಮುಗ್ಧ ಹೆಂಗಸು, ಪ್ರಪಂಚದ ರಾಜಕೀಯ ಆಗುಹೋಗುಗಳ ಬಗ್ಗೆ ಹೇಗೆ ನಿರ್ಲಿಪ್ತಳಾಗಿರುತ್ತಾಳೆ ಎಂಬದನ್ನು ನಮ್ಮ ತಾರಾ (ನೈಜ ಕಥನದ ಮೃದುಲಾ) ಅಭಿನಯಿಸಿ ತೋರಿಸಿದ್ದಾರೆ.
ನನ್ನ ಹಿಂದಿನ ಬ್ಲಾಗಿನಲ್ಲೂ ಹೇಳಿದ್ದೆ, ಇದು ಖಂಡಿತ ಸಿನಿಮಾ ಪ್ರಚಾರದ ಬ್ಲಾಗಲ್ಲ ಎಂದು. ಈಗಲೂ ಹೇಳುತ್ತಿದ್ದೇನೆ, ಇದು ಸಿನಿಮಾದ ಪ್ರಚಾರವಲ್ಲ, ಆದರೆ ಅಭಿನಂದನೆ. ನಿಮ್ಮಲ್ಲಿ ನನ್ನ ಕಳಕಳಿಯ ಮನವಿಯೇನೆಂದರೆ, ಸಿನಿಮಾ ಮಡಿವಂತಿಕೆ ಪ್ರದರ್ಶಿಸದೆ (ಏಕೆ ಈ ಪದ ಎಂದರೆ, ಸಿನಿಮಾಗಳ ಅವಹೇಳನ ಮಾಡುವವರು, ಸಿನಿಮಾಗಳನ್ನು ನೋಡಿಯೆೇ ಇರುವುದಿಲ್ಲ. ಅದರಲ್ಲೂ ಕನ್ನಡದ ಬಗ್ಗೆ ಮಾತನಾಡುವಾಗ ಕನ್ನಡವೇ ಗೊತ್ತಿಲ್ಲದ ಜನ ಅನೇಕ ವಿಷಯದಲ್ಲಿ ಮೂಗು ತೂರಿಸುತ್ತಾರೆ) ಈ ಸಿನಿಮಾ ನೋಡಿ ನಿಮ್ಮ ಅನುಭವ ಹಂಚಿಕೊಳ್ಳಿ.
ಇದರ ವಿಶೇಷತೆಗಳು
೧. ಇದರಲ್ಲಿ ಎಲ್ಲಿಯೂ ರಾಜಕೀಯ ಪ್ರೇರಿತ ದೃಶ್ಯವಿರಲಿಲ್ಲ. ಎಚ್ಚರಿಕೆ : ಕಡೇ ಪಕ್ಷ ನಾನು ನೋಡಿದ version ಅಲ್ಲಿ ಇರಲಿಲ್ಲ. ನಿೀವೂ ಸಹ ನಾನು ನೋಡಿದ versionಎ ನೋಡುತ್ತೀರಿ ಎಂದು ಹೇಳುವುದು ಕಷ್ಟ.
೨. ಹಾಡಾಗಲೀ ಅಥವಾ ನೃತ್ಯವಾಗಲೀ ಇಲ್ಲ.
೩. ರಾಜಕೀಯ ಸಿದ್ಧಾಂತದ ಪರ/ವಿರೋಧ ಹೇಳಿಕೆಗಳಿಲ್ಲ.
೪. ಮುಖ್ಯವಾಗಿ ಹೊಡೆದಾಟಗಳಿಲ್ಲ. ( ಅವು ಇರಬಾರದು ಎಂದು ನಾನು ಪ್ರತಿಪಾದಿಸುತ್ತಿಲ್ಲ ).
ಆದರೆ ಈ ಚಿತ್ರ ಚಿಕ್ಕ ಮಕ್ಕಳಿಗೆ ಅರ್ಥವಾಗದಿರಬಹುದು. ಆದರೆ ನಿಟ್ಟುಸಿರು ಬಿಡಬಹುದಾದ ಅಂಶವೆಂದರೆ ಹಾಡು, ಕುಣಿತ ಮತ್ತು ಹೊಡೆದಾಟ. ಇದಾವುದೂ ಇಲ್ಲ. ಹಾಗಾಗಿ ನೀವು ಮಕ್ಕಳನ್ನೂ ಕರೆದುಕೊಂಡು ಹೋದರೂ ನಷ್ಟವು ಒಂಚೂರೂ ಇಲ್ಲ. ಹೆಚ್ಚೆಂದರೆ ಮಕ್ಕಳು ಅವರಿಗೆ ಅರ್ಥವಾಗದ ಸನ್ನಿವೇಶಗಳ ಕುರಿತು ಪ್ರಶ್ನೆಗಳನ್ನು ಕೇಳಬಹುದು. ನಾವು ಅವುಗಳಿಗೆ ಸಮರ್ಥವಾದ ಉತ್ತರ ನೀಡಬೇಕಾಗುತ್ತದೆ.
"ಸೈನೈಡ್ - Cyanide, the inside story" ಚಿತ್ರ ಎರಡು ದೃಷ್ಟಿಯಿಂದ ನೋಡಲು ಯೋಗ್ಯವಾಗಿದೆ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ.
೧. ಕನ್ನಡ ತಾರೆಯರ ಮನೋಜ್ಞ ಅಭಿನಯ - Wonderful performance of Kannada Actors.
೨. ರಾಜಕೀಯ ವಿಷಯವನ್ನು ಹೇಗೆ ಅರಾಜಕೀಯ ಗೊಳಿಸಿ ಜನರಿಗೆ ತಲುಪಿಸಲು ಸಾಧ್ಯವಿಿದೆ ಎಂಬುದನ್ನು ಕಂಡುಕೊಳ್ಳಲು. - Apolitical narration of a tragic political issue.
ಇನ್ನೂ ಬರೆಯುವ ಆಸೆಯಿತ್ತು, ಸಮಯವಾದಾಗ ಬರೆಯುವೆ.
ಜೈ ಹಿಂದ್, ಜೈ ಕರ್ನಾಟಕ. Jai Hind. Jai Karnataka.
.
ಸವಿಯೊದಗು,
ಸುನಿಲ.

- Sunil Jayaprakash ರವರ ಬ್ಲಾಗ್
- Login or register to post comments
- 894 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಸೈನೈಡ್ ಚಿತ್ರದ ಪೋಸ್ಟರ್
ವ್ಯಾಕರಣ ತುಂಬಾ ಚೆನ್ನಾಗಿದೆ ಅಲ್ಲವೇ..ಮಾ...ಮಾ...ಮಾಸ್ಟರ್(ರಂಗಾಯಣ ರಘು ಉರ್ಫ್ ರಂಗನಾಥನ - ಶೈಲಿಯಲ್ಲಿ) ? ಬಿಟ್ಟು ಬಿಡಬೇಕೇ ಅದನ್ನು.
ಸೈನೈಡ್ ಬಹಳ ರುಚಿ ಇದೆ!!:)
ನಾನು ಕೂಡ ಸ್ಯೆನೈಡ್ ಚಿತ್ರ ನೋಡಿದೆ.. ಚಂದ್ರೋದಯ ದಲ್ಲೇ.. ಆ ಪೋಸ್ಟರು ನೊಡಿ ನಾನೂ ಕಂಗಾಲಾಗಿದ್ದೆ. ಆದರೆ,ಇದಕ್ಕೊ ಭಯಾನಕವಾದ ಪೋಸ್ಟರುಗಳನ್ನು ನೋಡಿದ ಅನುಭವ ಇದ್ದುದರಿಂದ,ಹೆಚ್ಚು ತೊಂದರೆ ಆಗಲಿಲ್ಲ, ಮನಸ್ಸಿಗೆ.
ಸೈನೈಡ್ ನಿಜಕ್ಕೂ ಸುಂದರ ಚಿತ್ರ. ಎಳ್ಳಷ್ಟೂ ವೈಭವೀಕರಣವಿಲ್ಲ,ಮಸಾಲೆ ಇಲ್ಲ. ಸ್ವಲ್ಪ ಹೆಚ್ಚು-ಕಡಿಮೆಯಾದರೂ "documentary" ಆಗುವ ಅಪಾಯವಿತ್ತು.. ಆದರೆ ಹಾಗಾಗದಂತೆ ನಿರ್ದೇಶಕ ರಮೇಶ್ ಎಚ್ಚರಿಕೆ ವಹಿಸಿದ್ದಾರೆ, ಉತ್ತಮ ಕಲಾವಿದರು ಮತ್ತು, ತಂತ್ರಜ್ಞರ ಸಹಯೋಗದೊಂದಿಗೆ.
ಒಮ್ಮೆ ಹೋಗಿ ಸೈನೈಡ್ ತಿಂದು ಬನ್ನಿ!
ಸೈನೈಡ್ ಉದ್ದೇಶ-ಸಂದೇಶಗಳೇನು
ಈ ವಿಷಯವಾಗಿ thats-kannada ದಲ್ಲಿ ಒಂದು ಲೇಖನ ಪ್ರಕಟವಾಗಿದೆ. ಲೇಖಕರಾದ ವಿಕ್ರಮ್ ಹತ್ವಾರ್ ಅವರು ಸೈನೈಡ್ ಸಿನಿಮಾ LTTE ಪರ ಸಹಾನುಭೂತಿ ನಿರ್ಮಿಸುತ್ತಿದೆಯೇ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.