November 17, 2008 - 5:08am
ಮುಂಬೈ ನ ’ಮೈಸೂರ್ ಅಸೋಸಿಯೇಶನ್ ನ ಒಳಭಾಗಕ್ಕೆ ಬಂದರೆ, ಒಳಗೆ ಗಣೇಶನ ಭವ್ಯ ವಿಗ್ರಹವನ್ನು ಕಾಣುತ್ತೀರಿ. ಅಲ್ಲೇ ಕಣ್ಣುಹಾಯಿಸಿದರೆ, ನಿಮಗೆ ಗೋಚರಿಸುವುದು, ಗೋಡೆಯಮೇಲೆ ರಚಿಸಿರುವ ಮುರಾಲ್ ಶೈಲಿಯ ಸುಂದರ ಶಿಲ್ಪಗಳು. ನಟರಾಜ, ತ್ರಿಮೂರ್ತಿ ಶಿವ, ನಂದಿ, ಗೊಮ್ಮಟೇಶ್ವರ, ಗಂಡುಭೇರುಂಡ, ಹಾಗೂ ಕರ್ನಾಟಕದ ಸುಂದರ ತಾಣಗಳ ಶಿಲ್ಪಗಳು, ಎಲ್ಲರಿಗೂ ಮುದಕೊಡುತ್ತವೆ. ಮೊದಲನೆಯ ಮಹಡಿಯಲ್ಲಿ ಚಿಕ್ಕ ರಂಗಮಂದಿರವಿದೆ. ಎರಡನೆಯ ಮಹಡಿಗೆ ಹೋದರೆ, ಶೋಭಾಯಮಾನವಾದ, ಹವಾನಿಯಂತ್ರಿತ, ಸುಂದರ, ವಿಶಾಲ ರಂಗಮಂದಿರವಿದೆ. ಒಮ್ಮೆ ಬಂದು ನೋಡಿ.
-ಚಿತ್ರ. ವೆಂ.
Taxonomy upgrade extras:




