ಚಳ್ಳೇ ಹಣ್ಣಿನ ಮರ-ಭೂಷಣ್ ಮಿಡಿಗೇಶಿ
ಚಳ್ಳೆ ಹಣ್ಣೀನ ಹೆಸರು ಕೇಳದವರು ಬಾರೀ ವಿರಳ.ತಿಂದು ರುಚಿ ನೋಡಿದವರೂ ವಿರಳವೆನ್ನಬಹುದು.ಹಳ್ಳಿಗಾಡಿನ ಹುಡುಗರಿಗಂತೂ ಇದು ಪರಿಚಿತವಾದ ಹಣ್ಣು.ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಕಳ್ಳ ಎಂಬ ಮಾತು ಜನಜನಿತ.ಇದು ತಿಪಟುರು ತಾಲ್ಲುಕಿನ ಗ್ರಾಮವೊಂದರಲ್ಲಿ ಕ್ಲಿಕ್ಕಿಸಿದ್ದು
- Login or register to post comments
- 338 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ- Original
- Thumbnail
Printer-friendly version


RSS:
ಪ್ರತಿಕ್ರಿಯೆಗಳು
ಪಾಳೇಗಾರರೆ,
ಚಿತ್ರಕ್ಕೆ ಧನ್ಯವಾದ.
ಚಳ್ಳೇಹಣ್ಣಿನ ರುಚಿ ಹೇಗಿರುತ್ತೆ?
-ಅನಿಲ್
ಸಕತ್ ಸ್ವೀಟ್...ಈಗಲೇ ಹಣ್ಣಿನ ಕಾಲ. ತುಮಕೂರಿಗೆ ಬಂದ್ರೆ ನೋಡ್ಬಹುದು.
>>ಸಕತ್ ಸ್ವೀಟ್
ನೀವ್ಯಾಕೋ ನಿಜವಾಗ್ಲು ಚಳ್ಳೇ ಹಣ್ಣು ತಿನ್ನಿಸೋ ಹಾಗಿದೀರ.. ನಿಂ ಕಡೆ ಬೆಂಬರ್ಲೆ ಹಣ್ಣು ಸಿಗುತ್ತಾ
ಬೆಂಬರ್ಲೆ ಹೆಸರೇ ಗೊತ್ತಿಲ್ಲ ನನ್ಗೆ.ಫೋಟೊ ಹಾಕಿ ಸರ್
ಮುಂದಿನ ಸಲ ನೋಡ್ದಾಗ ಖಂಡಿತ ತೆಗ್ದ್ ಹಾಕ್ತೀನಿ ಫೋಟೋ
ಚಳ್ಳೇಹಣ್ಣಿನ ಸಸ್ಯ ಶಾಸ್ತ್ರೀಯ ನಾಮಧೇಯ ಕಾರ್ಡಿಯ ಡೈಕಾಟಮ. ಕಾರ್ಡಿಯದಲ್ಲಿ ಸುಮಾರು ೩೦೦ ಪ್ರಭೇದಗಳುಂಟು.
ಸಿರಸಿಯ ಕಾಡಿನಲ್ಲಿ ಗೆಳೆಯರೊಡನೆ ಓಡಾಡುವಾಗ ಅವರು ನನಗೆ ಚಳ್ಳೇಹಣ್ಣನ್ನು ತೋರಿಸಿದ್ದು ಮಾತ್ರವಲ್ಲ, ತಿನ್ನಿಸಿದ್ದರೂ ಕೂಡಾ! :)
ಇದೊಂದು ಬಟಾಣಿ ಗಾತ್ರದ, ನಸು ಹಳಡೀ ಬಣ್ಣದ ಪಾರದರ್ಶಕದ ಹಣ್ಣು. ಮುತ್ತಿನ ಮಣಿಗಳಂತೆ ಕಾಣುತ್ತದೆ. ಸ್ವಲ್ಪ ಹುಳಿಬೆರೆತ ಸಿಹಿ ಸಿಹಿ ಹಣ್ಣು.
ಇದು ಹಕ್ಕಿಗಳ ಬಹು ಮುಖ್ಯ ಆಹಾರ.
ಎಂಡೋಕ್ಲೈಟಾ ಮಲಬಾರಿಕಸ್ ಮುಂತಾದ ಕೀಟಗಳು ತಮ್ಮ ಉಳಿವಿಗಾಗಿ ಚಳ್ಳೇಮರವನ್ನು ಅವಲಂಬಿಸಿವೆ. ಇದರ ಹುಳು ಚಳ್ಳೇ ಎಲೆಗಳನ್ನು ತಿಂದು ಬದುಕುತ್ತದೆ. ಒಂದು ವೇಳೆ ಚಳ್ಳೇಮರ ಈ ಭೂಮಿಯಿಂದ ಕಣ್ಮರೆಯಾಯಿತು ಎಂದಿಟ್ಟುಕೊಳ್ಳಿ. ಆಗ ಎಂಡೋಕ್ಲೈಟವೂ ಸಹಾ ಭೂಮಿಯಿಂದ ನಾಮಾವಶೇಷವಾಗಿಬಿಡುತ್ತದೆ.
-ನಾಸೋ
ಡಾ. ನಾಸೋ,
ಮಾಹಿತಿಗೆ ಧನ್ಯವಾದ.
-ಅನಿಲ್
ನಾ.ಸೋ ರವರೇ ಅಪರೂಪದ ಮಾಹಿತಿ ನೀಡಿದ್ದೀರಿ
ಧನ್ಯವಾದಗಳು.
ಭೂಷಣ್