ಆಂಗ್ಲ ಪದ 'ಬೀಚ್'' ಎಂಬುದನ್ನು ಕನ್ನಡದಲ್ಲಿ ಈ ರೀತಿಯಲ್ಲೂ ಬರೆಯುತ್ತಾರೆ...... ಜೈ ಕನ್ನಡ!

ಹೊನ್ನಾವರದಿಂದ ಕುಮಟಾಕ್ಕೆ ತೆರಳುವಾಗ ೧೩ಕಿಮಿ ಬಳಿಕ ಸಿಗುವುದು ಧಾರೇಶ್ವರ. ಇಲ್ಲಿರುವ ರಮಣೀಯ ಸಮುದ್ರ ತೀರಕ್ಕೆ ತೆರಳಲು ಹಾಕಿರುವ ಮಾರ್ಗಸೂಚಿಯನ್ನು ಗಮನಿಸಿದರೆ....ಎಡವಟ್ಟು. ರಸ್ತೆಯ ಇನ್ನೊಂದು ಬದಿಯಲ್ಲಿ, ಕುಮಟಾದಿಂದ ಬರುವವರಿಗೆ ಕಾಣಲೆಂದು ಇನ್ನೊಂದು ಮಾರ್ಗಸೂಚಿ. ಅದರಲ್ಲಾದರೂ ಸರಿಯಾಗಿ ಬರೆದಿರಬಹುದು ಎಂದು ನೋಡಹೊರಟರೆ....ಅಲ್ಲೂ ಎಡವಟ್ಟು.

- Login or register to post comments
- 912 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಕೊಂಕು ವಿಡಂಬನೆ : ಆಂಗ್ಲ ಪದ 'ಬೀಚ್''
ನಗುವುದೋ ಅಳುವುದೋ ನೀವೇ ಹೇಳಿ,
ಇರುವುದೋ ಬಿಡುವುದೋ ಈ ಊರಿನಲಿ.
ಈ ಜನರ ನಡುವೆ ನಾನು ಹೇಗೆ ಬಾಳಲಿ,
ಅಳುವುದೋಓಓಓ, ನಗುವುದೋಓಓಓ, ಈಗ ಏನು ಮಾಡಲಿ.
ಧಾರೇಶ್ವರ, ಏನು ಮೋಡಿಯಪ್ಪಾ ನಿನ್ನದು. ಜೈ, ಕನ್ನಡ.
Re: ಆಂಗ್ಲ ಪದ 'ಬೀಚ್'' ಎಂಬುದನ್ನು ಕನ್ನಡದಲ್ಲಿ ಈ ರೀತಿಯಲ್ಲೂ ಬರೆಯುತ್ತಾರ
ಇದು ಅದೆಷ್ಟು ವರ್ಷಗಳಿಂದ ಹೀಗಿದೆಯೋ? ಅದನ್ನ ಕಂಡರೂ ಸರಿಮಾಡಬೇಕು ಅನ್ನೋ ಯೋಚನೆ ಯಾರಿಗೂ ಬರೋಲ್ಲವಾ? ತಪ್ಪಾಗೋದು ಸಹಜವೇ ಆದರೆ ಆ ತಪ್ಪನ್ನ ತಿದ್ದಿಕೊಳ್ಳೋ ಬುದ್ಧಿ ಯಾವಾಗ ನಮಗೆ ಬರೋದು? ಛೆ ಎಂಥಾ ವ್ಯವಸ್ಥೆ ನಮ್ಮದು. ಯಾರಾದರ ಅಲ್ಲಿಗೆ ಹತ್ತಿರದವರಿದ್ದರೆ ದಯವಿಟ್ಟು ಸಂಬಂಧಪಟ್ಟವರಿಗೆ ತಿಳಿಸಿ ಹೇಳೀಪ್ಪ.
-ಧ್ರುವ
ಬೀಚ್ ಮೇ ಬಿಚ್
ಹೆ ಹೆ
ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.
ಈ ತರಹದ ನೂರಾರು ತಮಾಷೆ ತಪ್ಪುಗಳ ಬೋರ್ಡುಗಳು ಊರೆಲ್ಲ ಕಾಣಸಿಗುತ್ವೆ. ಕಂಡಾಗ ಒಂದು ಮಾತು ಹೇಳಬಹುದು... ಆದರೆ ಹೆಚ್ಚು ತಲೆಕೆಡಿಸಿಕೊಳ್ಳೋ ಅಂತ ವಿಷಯ ಅಲ್ಲ
ಸದ್ಯಕ್ಕೆ ತಮಾಷೆ ತಗೊಳಿ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಹೆಣ್ಣು ಮಕ್ಕಳ ಹೆರಿಗೆ ಆಸ್ಪತ್ರೆ
ಪ್ರಿಯ ರಾಜೇಶ್ ನೀವು ನೋಡಿದ ತಪ್ಪು ತೀರಾ ಸಣ್ಣದು. ಅಂದರೆ ಕೇವಲ ಅಕ್ಷರ ತಪ್ಪು ಮಾತ್ರ ಇರುವಂಥದ್ದು. 'ಸರಕಾರಿ ಹೆಮ್ಮಕ್ಕಳ ಹೆರಿಗೆ ಆಸ್ಪತ್ರೆ', 'ಸರಕಾರೀ ಬಾಲಕರ/ಬಾಲಕಿಯರ ಪ್ರೌಢಶಾಲೆ', ಮುಂತಾದುವುಗಳ ತಮಾಷೆ ಗಮನಿಸಿದ್ದೀರಾ?
ಸರಕಾರೀ ಹೆಮ್ಮಕ್ಕಳು ಎಂದರೆ ಯಾರು?
ಅದು ಬಿಡಿ ಹೆಮ್ಮಕ್ಕಳ ಹೆರಿಗೆ ಆಸ್ಪತ್ರೆ ಎಂದರೆ ಗಂಡಸರ ಹೆರಿಗೆ ಆಸ್ಪತ್ರೆಗಳೂ ಇವೆಯೇ?, ಸರಕಾರೀ ಬಾಲಕರು ಅಥವಾ ಬಾಲಕಿಯರು ಅಂದರೆ ಯಾರು? ಇವರಿಗೂ ಸಾಮಾನ್ಯ ಬಾಲಕರಿಗೆ ಅಥವಾ ಬಾಲಕಿಯರಿಗೆ ಇರುವ ವ್ಯತ್ಯಾಸವೇನು? ಇದು ಸರಕಾರೀ ಹೆಮ್ಮಕ್ಕಳಿಗೂ ಅನ್ವಯಿಸುತ್ತದೆ. ಇದು ಇಂಗ್ಲಿಷ್ ನಲ್ಲಿ ಬರೆದ ನಾಮ ಫಲಕಗಳನ್ನು ಕುರುಡಾಗಿ ಅನುವಾದಿಸಿರುವುದರ ಫಲ.
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
Re: ಆಂಗ್ಲ ಪದ 'ಬೀಚ್'' ಎಂಬುದನ್ನು ಕನ್ನಡದಲ್ಲಿ ಈ ರೀತಿಯಲ್ಲೂ ಬರೆಯುತ್ತಾರೆ...... ಜೈ ಕನ್ನಡ!
ಇಸ್ಮಾಯಿಲ್-ರವರೆ,
ನೀವು ಹೇಳಿದ್ದನ್ನು ಗಮನಿಸಿದ್ದೇನೆ. ಇಂತವುಗಳನ್ನು ನೋಡಿ ಹರಿಯವರು ಹೇಳಿರುವಂತೆ 'ನಕ್ಕು ಸುಮ್ಮನಾಗಬೇಕು'. ಜನತೆಯನ್ನು ನಗಿಸಲೆಂದೇ ಸರಕಾರಿ ಸಂಸ್ಥೆ/ಪ್ರಾಧಿಕಾರಗಳು ತಪ್ಪು ಬರೆಯುತ್ತಾರೋ ತಿಳಿಯದು. ಅಂತೂ ನೋಡಿ ನಕ್ಕು ಸುಮ್ಮನಾಗುವುದು ನಮ್ಮ ಭಾ(ದೌರ್ಭಾ)ಗ್ಯ.