24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅಡಿಗೆರಗಿದ ಈ ದೀನಳ ಮರೆತು ಸಾಗುವೆ ಏಕೆ ವಿರಾಗಿ .....

December 15, 2010 - 4:44pm
ಪುಟ್ಟಕೊಳ



ತೊರೆದು ಹೋಗದಿರೋ ಜೋಗಿ
ಅಡಿಗೆರಗಿದ ಈ ದೀನಳ ಮರೆತು
ಸಾಗುವೆ ಏಕೆ ವಿರಾಗಿ .....

ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷೆ ಎನಗೆ
ನಿನ್ನ ವಿರಹದಲಿ ಉರಿದು ಹೋಗಲು ಸಿದ್ಧಳಿರುವ ನನಗೆ || ತೊರೆದು||

ಹೂಡುವೆ ಗಂಧದ ಚಿತೆಯ ನಡುವೆ ನಿಲುವೆ ನಾನೇ
ಉರಿ ಸೋಕಿಸು ಪ್ರಭುವೇ ಚಿತೆಗೆ ಪ್ರೀತಿಯಿಂದ ನೀನೆ ||ತೊರೆದು||

ಉರಿದು ಉಳಿವೆನು ಬೂಧಿಯಲಿ ಲೇಪಿಸಿಕೋ ಅದ ಮೈಗೆ
ಮೀರಾ ಪ್ರಭು ಗಿರಿಧರನೇ ಜ್ಯೋತಿಯು || ತೊರೆದು ||

ತೊರೆದು ಹೋಗದಿರೋ ಜೋಗಿ
ಅಡಿಗೆರಗಿದ ಈ ದೀನಳ ಮರೆತು
ಸಾಗುವೆ ಏಕೆ ವಿರಾಗಿ .....


ಪ್ರತಿಕ್ರಿಯೆಗಳು

Submitted by sm.sathyacharana on

ನಿಮ್ಮ ಪ್ರಯತ್ನ ಒಳ್ಳೆಯದೇ.. ಧನ್ಯವಾದಗಳು..

ಆದರೆ.. ಅದರ ಜೊತೆ.. ಇನ್ನೊಂದೆರಡು ವಿಚಾರಗಳು ತಮ್ಮ ಗಮನಕ್ಕೆ.. :)

ಈ ಕೆಳಗಿನ ಕೊಂಡಿಗಳನ್ನ ದಯವಿಟ್ಟು ಗಮನಿಸಿ..

೧. ಸಂಪದದಲ್ಲಿ ಬರೆಯುವಾಗ ಗಮನದಲ್ಲಿಡಬೇಕಾದ ಅಂಶಗಳು | ಸಿರಿಗನ್ನಡ ಸಂಪದ

೨. ಸದಸ್ಯರ ಗಮನಕ್ಕೆ: ಹೊರಗಿನ ಕಂಟೆಂಟ್ ತಂದು ಹಾಕದಿರಿ | ಸಿರಿಗನ್ನಡ ಸಂಪದ

 

ನಿಮ್ಮೊಲವಿನ,

ಸತ್ಯ.. :)

Submitted by sm.sathyacharana on

ಸಂತೋಷ..! ತಮ್ಮ ಉತ್ತರ ಬಂದಲ್ಲಿ.. ಇನ್ನೊಂದಿಷ್ಟು ವಿವರಣೆ ಕೊಡೋಣ ಅಂತ ಸುಮ್ಮನಿದ್ದೆ..

ನೀವು ಪ್ರಕಟಿಸುತ್ತಿರೋ ಲೇಖನದಲ್ಲಿ ತೊಂದರೆ ಇಲ್ಲ.. ಇತರರ ಬರಹ, ಚಿತ್ರ, ಕವನಗಳನ್ನ ಹಾಕುವಾಗ, ಅದಕ್ಕೆ ಸರಿಯಾದ "ಕೃಪೆ", "ಸಹಾಯ", "ಮೂಲ" ಇತ್ಯಾದಿ ವಿಷಯಗಳಿಗೆ ಎಂದೆಂದಿಗೂ ಗಮನ ನೀಡಲೇಬೇಕು. ತೊಂದರೆ ಇರೋದು.. ಅದನ್ನ ನಾವು ಅನುಸರಿಸದೇ ಇದ್ದಲ್ಲಿ. ಈ ಮೇಲಿನ ಎಲ್ಲಾ ವಿಚಾರ, ನಾವು ಬರೆಯೋ, ಲಗತ್ತಿಸುತ್ತಿರೋ ಚಿತ್ರದೊಂದಿಗೆ ಬಂದಾಗಲೇ, ಅದು ಸರಿ ಅಲ್ವೇ..!

ಇತರರ ಕವನ, ಬರಹ ಹಾಕುವಾಗ, ಅದರ ಕತೃ, ವಿವರ (ಎನೇನು ಸಾಧ್ಯವೋ ಅದೆಲ್ಲಾ) ಹಾಕಿದಲ್ಲಿ.. ಇತರರಿಗೂ ಸಹಾಯವಾಗುತ್ತೆ, ಹಾಗೇ.. ಮೂಲ ಬರಹಗಾರನಿಗೂ, ಕವಿಗೂ ಗೌರವ ತಲುಪುತ್ತದೆ.. ಅಲ್ಲವೇ..!

ನಿಮ್ಮೊಲವಿನ,
ಸತ್ಯ.. :)

Submitted by ಪುಟ್ಟಕೊಳ on

"ಮೊದಲ ದಿನ ಮೌನ.." ಚಿತ್ರದಲ್ಲಿ ಈ ಕವನದ ರಚನೆ ಹಾಗು ಕವನ ಸಂಕಲನ ಎರಡನ್ನೂ ತಿಳಿಸಿರುವೆ .
"ಇದು ರಾಧೆಯ ಪ್ರೀತಿಯ ರೀತಿ ..." ಚಿತ್ರದಲ್ಲಿ ಕವಿಯ,ಸಂಗೀತ ಸಂಯೋಜಕರ ಹಾಗು ಗಾಯಕಿಯ ಬಗ್ಗೆ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದೇನೆ.
ಆದರೆ "ತೊರೆದು ಹೋಗದಿರು ಜೋಗಿ..." ಈ ಹಾಡಿನ ಕರ್ತೃ,ಸಂಗೀತ ಸಂಯೋಜಕರು ಯಾರೆಂದು ಬಹಳ ಹುಡುಕಿದ ನಂತರವೂ ನನಗೆ ತಿಳಿದಿಲ್ಲ .ಆದ್ದರಿಂದ ಅವರ ಹೆಸರನ್ನು ಇಲ್ಲಿ ಉಲ್ಲೇಖಿಸಲಾಗಲಿಲ್ಲ.ಅದಕ್ಕಾಗಿ ಕ್ಷಮೆ ಇರಲಿ.
ತಮಗೆ ಅಥವಾ ಸಂಪದದ ಮಿತ್ರರಿಗೇನಾದರು ಈ ಹಾಡಿನ ರಚನೆಕಾರರು ಯಾರೆಂದು ಗೊತ್ತಿದ್ದಲ್ಲಿ ದಯವಿಟ್ಟು ತಿಳಿಸಿ.

ಸವಿಯೊದಗೆಗಳೊಂದಿಗೆ
ಪುಟ್ಟಕೊಳ

Submitted by sm.sathyacharana on

:) ಸಂತೋಷ.. ತಮ್ಮ ಪ್ರಯತ್ನಕ್ಕೆ..
ಉಳಿದ ಮಾಹಿತಿ ತಮಗೆ ಬೇಕಿರುವಂತದ್ದಕ್ಕೆ.. ಸಂಪದಿಗರು ಯಾರಾದರೂ ಸಹಾಯ ಮಾಡಬಹುದು.. ನನಗೆ ಇದರ ಬಗ್ಗೆ ಅಷ್ಟೆಲ್ಲಾ ತಿಳಿದಿಲ್ಲ..
ನನ್ನ ಶುಭ ಹಾರೈಕೆಗಳು ತಮ್ಮ ಉತ್ತಮ ಪ್ರಯತ್ನಕ್ಕೆ..

ನಿಮ್ಮೊಲವಿನ,
ಸತ್ಯ.. :)