ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.
ಪ್ರತಿಕ್ರಿಯೆಗಳು
ಸೊಗಸಾಗಿದೆ: ಬಸ್ಮಾಸುರ
ಅಹೋರಾತ್ರ ಅವರೇ,
ಚಿತ್ರ ಸೊಗಸಾಗಿದೆ. ನೀವೇ ಬಿಡಿಸಿದ್ದೋ, ತಾಂತ್ರಿಕತೆಯನ್ನು ಬಳಸಿ ಕೊಲಾಜ್ ಮಾಡಿದ್ದೋ, ಹೇಗೆ?
- ಶ್ಯಾಮ್ ಕಿಶೋರ್
Re: ಸೊಗಸಾಗಿದೆ: ಬಸ್ಮಾಸುರ
ಇಲ್ಲಾ ಶ್ಯಾಮರೇ,
ಹೀಗೆ ಸಿಕ್ಕಿದ್ದು. ನಿಮ್ಮ ಹೊಗಳಿಕೆ ಆ ಅಗೋಚರ ಚಿತ್ರಕಾರನಿಗೆ ಸಲ್ಲುತ್ತದೆ.
ಅಹೋರಾತ್ರ
Re: ಸೊಗಸಾಗಿದೆ: ಬಸ್ಮಾಸುರ
ಇಲ್ಲಾ ಶ್ಯಾಮರೇ,
ಹೀಗೆ ಸಿಕ್ಕಿದ್ದು.
ಅಹೋರಾತ್ರ
Re: ಸೊಗಸಾಗಿದೆ: ಬಸ್ಮಾಸುರ v/s ಭಸ್ಮಾಸುರ
ಮತ್ತೆ ನಿಘಂಟು ಭಸ್ಮಾಸುರ ಅನ್ನುತ್ತದೆ...ಕ್ಷಮಿಸಿ....
Re: ಸೊಗಸಾಗಿದೆ: ಬಸ್ಮಾಸುರ v/s ಭಸ್ಮಾಸುರ
ಆಯ್ತು ಗುರುಗಳೇ, ತಿದ್ದಿದ್ದೆವೆ.
ಮುಂದೆಯೂ ಹೀಗೆ ನಮ್ಮನ್ನು ತಿದ್ದಬೇಕೆಂದು ಆಶಿಸುತ್ತೇವೆ.
ಅಹೋರಾತ್ರ