ಪುರಂದರದಾಸರ ೪೪೩ ನೆಯ ಜಯಂತಿಯನ್ನು ಮುಂಬೈನ 'ಕನ್ನಡ ಸಂಘ,' ಇಂದು, ಆಚರಿಸುತ್ತಿದೆ !

'ಕರ್ಣಾಟಕ ಸಂಗೀತ ಪಿತಾಮಹ' ರೆಂದೇ ಹೆಸರಾಗಿ, ತಮ್ಮ ಅನುಪಮ ಭಕ್ತಿಮಾರ್ಗದಲ್ಲಿ ಜೀವನವನ್ನು ಕಳೆದು, ನಮಗೆಲ್ಲಾ ಎಂದೆಂದಿಗೂ ಮರೆಯಲಾರದ 'ಅದ್ಭುತ ಕೀರ್ತನೆಗಳನ್ನು ಕೊಟ್ಟು 'ಧನ್ಯ'ರನ್ನಾಗಿ ಮಾಡಿರುವ 'ಪುರಂದರ ದಾಸರ ೪೪೩ ನೆಯ ಜಯಂತಿ' ಯನ್ನು ಮುಂಬೈ ನ ಕನ್ನಡ ಸಂಘ, ತುಂಬಾ ಭಕ್ತಿ, ಶ್ರದ್ಧಾಪೂರ್ವಕವಾಗಿ ಆಚರಿಸುತ್ತಿದೆ.
ದಾಸಶ್ರೇಷ್ಟ, ಶ್ರೀ ಪುರಂದರರು, ಸುಮಾರು ೪೭೫,೦೦೦ ಕೀರ್ತನೆಗಳನ್ನು ರಚಿಸಿದರೆಂದು ಪ್ರತೀತಿಯಿದೆ. ಆದರೆ ನಮಗೆ ಲಭ್ಯವಾಗಿರುವುದು, ಸುಮಾರು ಒಂದು ಸಾವಿರದ ಹತ್ತಿರ ಹತ್ತಿರ ಮಾತ್ರ. 'ಹಂಪೆ'ಯಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದ ದಾಸವರ್ಯರು, ವಿಜಯನಗರ ಸಾಮ್ರಾಜ್ಯದ ಪತನವನ್ನು ಬಹುಶಃ ಪೂರ್ವ ಭಾವಿಯಾಗಿಯೇ ತಿಳಿದಿದ್ದರೆಂದು ತಿಳಿದು ಬರುತ್ತದೆ. ಅದು ಆದದ್ದು, ೧೫೬೫ ರಲ್ಲಿ. ಇವರು ಬದುಕಿದ್ದ ಕಾಲ (೧೪೮೪- ೧೫೬೪)
ಈ ದಿನ , ಫೆಬ್ರವರಿ, ೧೧, ಭಾನುವಾರ, ಮಧ್ಯಾನ್ಹ ೨ ಘಂಟೆಗೆ, ಮೈಸೂರ್ ಅಸೊಸಿಯೇಷನ್ ನ 'ಕಿರು ಸಭಾಗೃಹ'ದಲ್ಲಿ ಶಾಲಾ ಮಕ್ಕಳಿಂದ ದಾಸರ ಶ್ರೇಷ್ಟ ಕೃತಿಗಳನ್ನು ಹಾಡಿಸಲಾಗುವುದು. ಉತ್ತಮ ಗಾಯಕ, ಗಾಯಕಿಯರನ್ನು ಪುರಸ್ಕರಿಸಿ ಬಹುಮಾನಗಳನ್ನು ವಿತರಿಸಲಾಗುವುದು.
ಈ ವರ್ಷದ 'ಸುವರ್ಣಕರ್ಣಾಟಕ ಪುರಸ್ಕೃತ' ರಾದ, ಕನ್ನಡ ಸಂಘದ ಅಧ್ಯಕ್ಷರಾದ, ಶ್ರೀ ಜಿ.ಎಸ್.ನಾಯಕರು, ಮಕ್ಕಳಿಗೆ ಬಹುಮಾನಗಳನ್ನು ನೀಡಲಿದ್ದಾರೆ. ಸೆಕ್ರೆಟರಿ, ಶ್ರೀ ಬಿ. ನಾಗಭೂಷಣ, ಜಯಂಟ್ಸ್ ಪುರಸ್ಕೃತರು, ಉಪಾಧ್ಯಕ್ಷ, ಶ್ರೀ ಚಂದ್ರಶೇಖರ್, ಕೊಶಾಧಿಕಾರಿ, ಶ್ರೀ ರಾಜೇಂದ್ರ ಗಡಿಯಾರ್, ಜಾಯಿಂಟ್ ಸೆಕ್ರೆಟರಿ, ಶ್ರೀ ಸೊಮ್ನಾಥ್ ಕರ್ಕೇರ, ವಾಚನಾಲಯದ ಅಧಿಕಾರಿ, ಶ್ರೀ ಶೇಖರ್ ಕಾಂಚನ್, ಈ ಎಲ್ಲಾ ಪದಾಧಿಕಾರಿಗಳೂ ಕಾರ್ಯಕ್ರಮಗಳ ಉಸ್ತುವಾರಿ ನೊಡಿಕೊಳ್ಳುತ್ತಾರೆ. ದಾಸಶ್ರೇಷ್ಟ ಪುರಂದರದಾಸರ ದಾಸಕೃತಿಗಳನ್ನು ಕೇಳಿ, ಸ್ವಲ್ಪಸಮಯದಲ್ಲಾದರೂ ಭಕ್ತಿಮಾರ್ಗದಲ್ಲಿ ತಲ್ಲೀನರಾಗುವ ಬನ್ನಿ.
ಎಲ್ಲರಿಗೂ ಆದರದ ಸ್ವಾಗತ. ನಿಮ್ಮ ಗೆಳೆಯರು, ಪರಿವಾರದವರನ್ನೂ ಕರೆತನ್ನಿ.

- Login or register to post comments
- 494 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
- 'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !
- ೧೧ ನೇ ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಥೆ- ಕರ್ಣಾಟಕ ಸಂಘ, ಮುಂಬೈನಲ್ಲಿ ...!
- "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
- ಪುರಂದರದಾಸರ ೪೪೩ ನೇ ಆರಾಧನಾ ಮಹೋತ್ಸವ ! 'ದತ್ತಿ ಉಪನ್ಯಾಸಗಳು' ಮತ್ತು ಸುವರ್ಣ ಕರ್ಣಾಟಕ ಉತ್ಸವ ಕಾರ್ಯಕ್ರಮಗಳು , ಮುಂಬೈನಲ್ಲಿ !


RSS: