ಸರ್ಕಾರ್ದೊರ್, "ತಿಪ್ಪೆ ಸಾರ್ಸ್ದಂಗ್ ಆಡೊ ಮಾತ್ ನೋಡಿದ್ರೆ ಕೆಟ್ಟ ಕ್ವಾಪ ಬರಲ್ವ್ರ" ? ನೀವಾದ್ರು ಒಸಿ ಏಳ್ಬಾರ್ದ್ರಾ !

ಎಂಕ್ಟೇಸಪ್ಪ : ಏನ್ ಎಂಟಣ್ಣಾ ಗೊತ್ತಾಯ್ತ, 'ಯಾಹು ಇಂಡಿಯಾದೊರು', ಕನ್ನಡದಲ್ಲಿ ಒಂದು 'ಸೈಟ್' ತೆಗೆದಿದ್ದಾರೆ. ಅದೊಂದು 'ದಿನ ಪತ್ರಿಕೆ' ತರ್ಹ ಇದೆ. ನಿನ್ಗೂ ಹೆಮ್ಮೆ ಅಲ್ಲೇನಪಾ ?
ಎಂಟಣ್ಣ : ಔದು ಕಣಪ್ಪೊ, ನಮ್ಮ ಬಸ್ವರಾಜು ಏಳ್ತಾ ಇದ್ದ, ಕಣಪ.
ಎಂಕ್ಟೇಸಪ್ಪ : ಸಂತೊಷನಾ ? ಹೆಂಗೆ ಅಂತ..
ಎಂಟಣ್ಣ : ಒಳ್ಳೆ 'ತೊಗ್ರಿನುಚ್ಚಿನುಂಡೆ' ತಿಂದು 'ನೊರೆ ಆಕ್ಳಾಲು' ಕುಡ್ದಂಗಾತು ಕಣಪೊ.
ಎಂಕ್ಟೇಸಪ್ಪ: ಅದೇನ್ ಅಂಗಂದ್ರೆ ? ನಿಜ್ವಾಗ್ ಸಂತೊಷ ಆಗ್ಲಿಲ್ವಾ ? 'ಬ್ಯಾಳೆ ವೋಳ್ಗೆ' 'ಬೆಣ್ಣೆಕಾಸಿದ್ ತುಪ್ಪ' ಉಂಡಗ್ ಆಯ್ತದೆ, ಅಂತಲ್ವಾ ನಿನಗೆ ಸಂತೊಷ ಆದಾಗ್ ಹೇಳೋದು ?
ಎಂಟಣ್ಣ : ಅಲ್ಲಪ್ಪ ಮಾಡಿದ್ತೆಪ್ನೇ ಮಾಡ್ತಾನೆ ಇರ್ತೀರಲ್ಲ,.. ನೀವು ಅಂಗೆಯ, ಆ ದ್ಯಾವೇಗೌಡ್ರು ಅಂಗೇಯ..
ಎಂಕ್ಟೇಸಪ್ಪ : ಏನ್ ಆಂಗಂದ್ರೆ, ಎಂಟಣ್ಣ ?
ಎಂಟಣ್ಣ : ನೀನೇ ಒಸಿ ಏಳು; ಎಂಕ್ಟೇಸಪ್ಪ, 'ಯಾಹೂ ಬೆಂಗ್ಳೂರು ಅಂತಲ್ವ್ರಾ ಎಳೋದು', ಮತ್ತೂ 'ಬ್ಯಾಂಗ್ಳೋರ್ 'ಯಾಕೇ ಅಂತೀರಿ ? !
ಎಂಕ್ಟೇಸಪ್ಪ : ನೀನ್ ಸರಿ. ಸರಿಯಾಗ್ ಹೇಳ್ದೆ ಕಣಪ ಎಂಟಣ್ಣ !
ಎಂಟಣ್ಣ : "ಅಂಗ್ ಏಳ್ ಅಟ್ಟದ್ ಮ್ಯಾಗ್ ಕುಂಡ್ರಿಸಿದ್ರೆ ಆದೀತ, ನೀನೊಳ್ಳೆ , ಯಾಮಾರ್ಸ್ ಬ್ಯಾಡಿ ! ಕುಡ್ಯಕ್ ನೀರಿಲ್ಲ ; "ಒಟ್ಟೆಗ್ ಕೂಳಿಲ್ದೆ ಸಾಯೊ ಪರಿಸ್ತಿತಿ ಬಂದೊಯ್ತ್ " ನೋಡಪ. ನಮ್ಮ ದೇಸ್ದಗೆ ಕಾವೇರಿ ನದಿ ಅರಿ ತೈತೆ, ಆದ್ರೆ ಈ ಬವ್ಣೆ ಬಂದೊಗದೆ, ಯಾರ್ಗೇಳಿ ಏನ್ ಪ್ರಯೊಜ್ನ. ನೀವೆ ಎಳಿ"...
ಒಳಲ್ಕೆರೆ ರೈತ್ರು, ಕಾಳ್ಗಟ್ಟದೊರು, ಚಿತ್ರದುರ್ಗದೊರು ಎಲ್ಲ ಬೆಂಗಳೂರ್ ಗೆ ಒಂಟವ್ರೆ. ನೀರಿಲ್ದೆ ಏನ್ ಮಾಡಕ್ ಆಯ್ತೆದೆ, ನೀನೇ ಒಸಿ ಏಳು . ಆ ತಿಮ್ಮಣ್ಣಾರ್ ಮಕ್ಳು ಒಬ್ನು, ಶಿಮೊಗ್ಗಕ್ ಓದ್ರೆ, ಇನ್ನೊಬ್ಬ ಒಳ್ಳೆ, "ನಿನ್ನೆತ್ರ ಬೆಳೆದ್ ಆಡ್ಕೆ ಗಿಡ್ಗಳೊನೆ" ಬಿಟ್ಟು, ಪಟ್ಣಕ್ ಒ ಗೊ ತಯರಿನಲ್ಲವ್ರೆ. ಏನ್ ಏಳ್ತಿಯಪ್ಪ, ನಮ್ಮ ಪಾಡು. ನಾನು, ಒಳಲ್ಕೆರೆಯಾಗ್ ಇರೊದು,ಒಂದ್ ರಸ್ಯ್ ಕಣಪೊ. "ಒಂದು, ನಮ್ ಪೂರ್ವಿಕ್ರ ಆಸ್ತಿ, ಸ್ವತ್ನ, ಆಳ್ಮಾಡ್ಕಬಾರ್ದು ಅಂತವ ; ಜಿವ ಕೈನಲ್ ಮಡಗ್ಕೊಂಡು ನಾನು, ಪಾರವ್ವ ಇಲ್ಲೆ ಗೈಗೆ ಮಾಡ್ತಿವ್ನಿ ! ಇಲ್ಲೆ ನಾವ್ ಸಾಯಕ್ಕೂ ರೆಡಿ " ! ಎಲ್ ಸತ್ರೆ ಏನ್ಬಿಡು ?
ಕಾವೇರಿಯಮ್ಮನ್ ಇರುದ್ದ, ನಾವ್ ಎಂಗ್ ಏಳಕಾಗ್ತದೆ ? ನೀರ್ಕೊಡೊ ತಾಯಿ ಅವ್ಳು. ನಮ್ಗ್ಯಾಕೊ ಆ ತಾಯಿ ಇನ್ನೂ ಒಲ್ದಿಲ್ವಲ್ಲಪ್ಪ. ಆಯಮ್ಮನ್ ಆಸ್ರೆ ನಮ್ಗೇನಾದ್ರು ಐತಾ ? ಮಂಡ್ಯಾ, ಮೈಸುರ್, ಸೀರಂಗ್ಪಟ್ಣ ಅಂತ ಅವ್ರೆಲ್ಲ ಓರಾಡ್ತವ್ರೆ. ನಮ್ ಸಾನುಬೂತಿ, ತೊರ್ಸೊದ್ ಬಿಟ್ರೆ ನಮ್ಗೇನ್ ಲಾಬ ಅದೆ, ಒಸಿ ಬಿಡ್ಸಿ ಏಳು ?
ದ್ಯಾವೇ ಗೌಡ್ರ್ಗೆ, ಆ ಕುಮಾರಪ್ಪಾರ್ಗೆ ತಿಳ್ಯಾಕಿಲ್ಲೇನು ? ಗೌಡ್ರು ,ದಿಲ್ಲಿ ಸರ್ಕಾರ್ದಗ್ ಇದ್ದು ಬಂದೊರಲ್ವ್ರ ? ಪಂತ್ ಪ್ರದಾನಿ ಅಂದ್ರೆ ಸುಮ್ಕೆನಾ ? ಅವ್ರೇನ್ ಒಸಬ್ರೆ ನೀನೆ ಏಳ್ ಎಂಟೇಸಣ್ಣ ?
ಆ ನಾಗ್ರಾಜಪ್ಪ, ಅನಂತಪ್ಪ, ಚುರೊಪಾರೊ ಆಸ್ತಿ ಮಾರ್ಕಂಡ್ , ಕೆಟ್ಟ ಪಟ್ಣ ಸೇರ್ಲಿಲ್ವ್ರ !
ನಮ್ ಬಸಣ್ಣ ಅದೇ ಏಳ್ತಾವ್ನೆ, "ಮುಂದಿನ್ ವರ್ಸ, ಇದೇ ಕೂಗ್ನಾಗ್ ನನ್ ಸಿಕ್ಸ್ ಬ್ಯಾಡ್ರಿ. ನಾನ್ ಕೇಳೊಪಾಕಿ ಅಲ್ಲ. ಯಾರ್ ಒಪ್ಪಂದ ಮಾಡ್ಕಂಡ್ರು ? ಅದಕ್ಕೇನ್ ಗಡಿ ಗಿಡಿ, ಇಲ್ ವ್ರಾ " ? ಎಂಗೆ ; ಅಳ್ಳಿ ಮುಕ್ಕ , ನಂಗ್ ತಿಳೀತದಲ್ಲಪಾ. ಈ ವ್ಯವಾರ !
ನನಗ್ ತಿಳ್ದಂಗೆ, ಆಗ ಮೈಸುರ್ ಅರ್ಸ್ರ ಕಾರ್ಬಾರು. ಅವರ್ ಕೈನಗೆ, ಎನೊ ಏಳಿ ಬರಸ್ಕಂಡು ಸೈನ್ ಆಕ್ಸ್ಕಂಡವ್ರೆ.. ನಮ್ಗ್ ತಿಳೀದಾ... ಆಗ್ ಚಿಕ್ ರಾಜ್ಯ. 'ಅರಿಅರ' [Harihar] ನೇ ಕೊನೆ ಗಡಿ, ಅಂತ ನಮ್ಮಪ್ಪ ಏಳ್ತಿದ್ದ.
ಈಗ್ನೊಡಿದ್ರೆ , "ವಿಸಾಲ್ಕರ್ನಾಟ್ಕ ಅಂತ ಏಳಿದ್ದೇ ಏಳಿದ್ದು, ಕುಣ್ದ್ -ಕುಪ್ಪಳ್ ಸ್ತಾರಲ್ಲಪ, ಅದೇನ್ ಸುಳ್ಳಾ ? ಅಂಗಿದ್ರೆ ನಮ್ಗೇನು ನೀರು -ಗಾಳಿ, "ಉಣ್ಣಕ್ ಒಂದು ಒತ್ತಿನ್ ಕೂಳು" ಬ್ಯಾಡ ಅನ್ನು , ಅಂಗಂದ್ರೆ. ತೆಗಿ ತೆಗಿ ಎಂಕ್ಟೇಸಪ್ಪ, ಇದೇನ್ ಸರಿಕಾಣಕ್ಕಿಲ್ಲಪ್ಪ. ಸರ್ಕಾರ್ದೊರ್, "ತಿಪ್ಪೆ ಸಾರ್ಸ್ದಂಗ್ ಆಡೊ ಮಾತ್ ನೋಡಿದ್ರೆ ಕೆಟ್ಟ ಕ್ವಾಪ ಬರಕಿಲ್ವ್ರ" ?
ಅಲ್ಲಾಕಣ್ ಎಂಕ್ಟೇಸಪ್ಪ, ನಾವ್ ಕೇಳೊದ್ ತೆಪ್ಪಾ, ಮುಂದಿನ್ ವರ್ಸದಾಗೂ ಇದೇ ಪಜೀತಿ ಇರ್ತದಲ್ಲ. ಆಗ್ ಕೂಗಾಡಾಕಾದ್ರು ಸಕ್ತಿ ಬ್ಯಾಡ್ವ ... " ನೀರ್ ಕ್ವಡಿ, ನಾವೂ ನಿಮ್ ಜತ್ಯಾಗ್ ಕೂಗಾಡ್ , ಒದೆ ತಿಂತೀವಿ. ಆ ಪೊಲಿಸಪ್ಪನೊರ್ತಾವ. " !!
ಎಂಕ್ಟೇಸಪ್ಪ : ಸರಿಕಣಪ್ಪ ಎಂಟಣ್ನ, ನಿನ್ಗಿರೊದ್ರದಲ್ಲಿ ಕಾಲಾಣೆ ಬುದ್ದಿ ಇದ್ರೆ, ನಮ್ಮ ಪರಿಸ್ತಿತಿ ಇಂತಾ ಅಧೊಗತಿಗಿಳಿತಿರ್ಲಿಲ್ಲ. ಸರಿಕಣಪ್ಪ ನಾನ್ ಒರ್ಟೆ. ಶರಣು.
ಎಂಟಣ್ಣ : ಶರ್ಣು, ಓಗ್ ಬಾರಪ್ಪ. "ಆದ್ಯಾವ್ರಿಗ್ ಯಾವಾಗ್ 'ಕರ್ಣೆ'ಬರ್ತದೊ ಯಾರಿಗ್ಗೊತ್ತು" ?

- Login or register to post comments
- 624 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಸರ್ಕಾರ್ದೊರ್, "ತಿಪ್ಪೆ ಸಾರ್ಸ್ದಂಗ್ ಆಡೊ ಮಾತ್ ನೋಡಿದ್ರೆ ಕೆಟ್ಟ ಕ್ವಾಪ ಬರಲ್ವ್ರ" ? ನೀವಾದ್ರು ಒಸಿ ಏಳ್ಬಾರ್ದ್ರಾ !
ನಿಮ್ಮ ವಿಸ್ಯ ಇಗ ೩೩೮ ಜನಕ್ಕೆ ಅರ್ತ ಆಗೊದದೆ. ಸುಮ್ಕಿರಿ ದಿನ ಇಂಗೆ ಇರಕ್ಕಿಲ್ಲ. ಹೊಸ ನೇಸ್ರು ಬತ್ತದೆ, ಬೈಗ್ ಕಳ್ದು ಎಲ್ಲೆಲ್ಲು ನಮ್ಮ ಕನ್ನಡ್ ದ್ ಜನಗೋಳೆ ಎಲ್ಲೆಲ್ಲು. ಪ್ಲಾನಿಂಗ್ ಕಮಿಸನ್ ನಾಗೆ, ಮಂತ್ರಿಗೋಳು, ರಾಶ್ಟ್ರಪತಿಗೋಳು, ಸ್ಪೀಕರ್ಗೋಳು, ಮತ್ತೆ ದೊಡ್ಡ ದೊಡ್ಡ ನಟ್ರು ನಮ್ಮ ಅಮಿತಾಬ್ ಅವ್ರ ತರ ಬಂದೇ ಬರ್ತಾರೆ. ನೋಡ್ರಿ ಬ್ಯಾಕಾದ್ರೆ. ಇಗಾಗ್ಲೆ ಒಬ್ರು ದಿಲ್ಲಿ ಓಗಿ ವಾಪಸ್ ಬಂದವ್ರೆ.
ಈಗ ಸ್ಸಿಲ್ಪ ಸೆಟ್ಟಿ ಬರ್ಲಿಲ್ವ. ನಮ್ಮ ಇಸ್ವ ಸುಂದ್ರಿ, ಅಬಿಶೇಕಪ್ಪನ್ನ ಮದ್ವೆ ಅಗ್ಲಿಲ್ವ. ತಡಿರಿ ಎಲ್ಲ ಒಳ್ಳೇದಾಗ್ತೈತ್ರಿ.