24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಚಹಾತೋಟ

June 15, 2011 - 12:52pm
ನಂದೀಶ್ ಬಂಕೇನಹಳ್ಳಿ

ಕಣ್ಣಾಡಿಸಿದಷ್ಟು ದೂರವು ಚಹಾ ತೋಟ,
ತೋಟದ ನಡುವೆ ಅಲ್ಲಲ್ಲಿ ಕಾವಲಿಗೆ ನಿಂತಿರುವಂತೇ ತೋರುವ ಮರಗಳು.
ಬೆನ್ನಿಗೆ ಬುಟ್ಟಿ ಕಟ್ಟಿಕೊಂಡು ಚಹಾಗಿಡದ ಚಿಗುರನ್ನು ಕತ್ತರಿಯಿಂದ ಕತ್ತರಿಸಿ ಬುಟ್ಟಿಯಲ್ಲಿ ಸಂಗ್ರಹಿಸುತ್ತಿರುವ ಹೆಣ್ಣಾಳುಗಳು.
ಎದುರಿನ ಗಿರಿಗೆ ಬಡಿದು ಪ್ರತಿಧ್ವನಿಸುವ ಹೆಣ್ಣಾಳಿನ ಕೈಯ ಕತ್ತರಿಯ ಕಟ್ ಕಟ್ ಶಬ್ದ.
ಹಸುರಿನ ವೈಭವಕ್ಕೆ ಸಾಥ್ ನೀಡಿರುವ ಮೋಡ ಮುಸುಕಿದ ಆಗಸ.
ಮರಗಳ ತೊಗಟೆಗೆ ಅಂಟಿಕೊಂಡು ಜಿರ್ ಧ್ವನಿಗೈಯುತ್ತ ಮಳೆಯ ಬರುವಿಕೆಯನ್ನು ಸಾರಿ ಹೇಳುತ್ತಿರುವ ಜೀರುಂಡೆಗಳು.-ಎಲ್ಲವೂ ಒಂದಕ್ಕೊಂದು ಮಾತನಾಡಿಕೊಂಡಂತೇ ಸುಂದರ ನಿಸರ್ಗ ಚಿತ್ತಾರಕ್ಕೆ ಕಾರಣವಾಗಿವೆ.