ಆರ್. ಕೆ. ಲಕ್ಷ್ಮಣ್ ರ 'ವ್ಯಂಗ್ಯಚಿತ್ರಾಂಕಣ' ಈಗ ಸಪ್ಪೆಯಾಗಿದೆ !

ನಾನೊಬ್ಬ ಲಕ್ಷ್ಮಣ್ ರ " ಫ್ಯಾನ್ " ಎಂದರೆ ಅಡ್ಡಿಯಿಲ್ಲ. ಏಕೆಂದರೆ ಬಹುಶಃ ೪೦ ವರ್ಷದ ನನ್ನ ಮುಂಬೈ ಜೀವನದಲ್ಲಿ ಅವರ ವ್ಯಂಗ್ಯ ಚಿತ್ರಾಂಕಣ ಮಾಡಿರುವ ಮೋಡಿ ಅನನ್ಯ ! ಅದೇನೋ ಅವರ ರೇಖೆಗಳು ನಮ್ಮನ್ನು ದಿಗ್ಭ್ರಮೆ ಮಾಡಿ ಹೊಟ್ಟೆ ಹುಣ್ಣು ಮಾಡುವುದಲ್ಲದೆ, ಒಂದು ವೈಚಾರಿಕ ಪ್ರೌವೃತ್ತಿಯನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ. ಎಷ್ಟೋ ಜನರ ವ್ಯಂಗ್ಯ ಚಿತ್ರಗಳನ್ನು ನಾನು ನೋಡಿದ್ದೇನೆ. ಆದರೆ ಲಕ್ಷ್ಮಣ್ ಒಂದು ಮಹಾನ್ ಸಂಸ್ಥೆ ಎಂದು ನನ್ನ ಅನಿಸಿಕೆ !
ವಿಷಯಗಳನ್ನು ಅಭ್ಯಾಸಿಸಿ ಅದನ್ನು ರೇಖೆಯಲ್ಲಿ ಇಳಿಸುವ ಕಾರ್ಯ ಅದನ್ನು ನೋಡಿ ನಕ್ಕಷ್ಟು ಸುಲಭವಲ್ಲ.
ರೇಖಾಚಿತ್ರಗಳೆಂದರೆ, ಏನೊ ನಗಿಸುವ ಒಂದು ಪರಿಯೆಂದು ಕೆಲವರು ತಿಳಿದಿದ್ದಾರೆ. ನಿಜವಾಗಿಯೂ ಅದಲ್ಲ. ಒಂದು ಸಮಗ್ರ ವೃತ್ತಪತ್ರಿಕೆಯ ಎಲ್ಲಾ ಪುಟಗಳಲ್ಲಿ ಅಡಗಿರುವ ಪ್ರಮುಖ ವರದಿಸಾರವನ್ನು ಅದು ತನ್ನ ಚಿಕ್ಕ ಅಂಕಣದಲ್ಲಿ ಮನಮುಟ್ಟುವಂತೆ ವಿವರಿಸಬಲ್ಲದು. ನಮ್ಮನ್ನು ಆಲೋಚನೆಗೆ ಎಳೆದೊಯ್ಯಬಲ್ಲದು.
ಶಂಕರ್ಸ್ ವೀಕ್ಲಿ, ಲಕ್ಶ್ಮಣರಿಗೆ ಸ್ಪೂರ್ತಿನೀಡಿದ ಒಂದು ಪತ್ರಿಕೆ. ಆದರೆ ನಿಜವಾಗಿ ಅವರು ಪ್ರಭಾವಿತರಾದದ್ದು, ಬ್ರಿಟಿಷ ಚಿತ್ರಕಾರ, ’ಡೇವಿಡ್ ಲೊ” ಅವರ ಪೊಲಿಟಿಕಲ್ ವ್ಯಂಗ್ಯ ಚಿತ್ರಾಂಕಣದಿಂದ !
ಬಾಲ್ಯದಲ್ಲಿ ಅವರ ತಾಯಿ ಟೆನ್ನಿಸ್ ಆಡುತ್ತಿದ್ದರು - ಮಹರಾಣಿ ಕ್ಲಬ್ಬಿನಲಿ, ಅವರು ಮೈಸೂರಿನಲ್ಲಿದ್ದಾಗ. ಅದೂ ಅಂದಿನ ಮಹಾರಾಣಿಯವರ ಜೊತೆಗೆ ! ಮನೆಗೆ ಬರುವಾಗ "ಪಂಚ್ " ಪತ್ರಿಕೆಯನ್ನು ತರುತ್ತಿದ್ದರಂತೆ. ಅದು ಲಕ್ಷ್ಮಣ್ ರವರನ್ನು ಪ್ರೇರೇಪಿಸಿತೆಂದು ಅವರು ಒಂದು ಕಡೆ ಹೇಳಿಕೊಂಡಿದ್ದಾರೆ.
ಆದರೆ ಒಂದು ಮಾತು ಸತ್ಯ. ಹುಟ್ಟನಿಂದಲೇ ವ್ಯಂಗ್ಯ ಚಿತ್ರಕಲೆ ಅವರ ಬೆನ್ನಿಗೆ ಅಂಟಿಕೊಂಡಿತ್ತು !
ಈ ಮಾರ್ಚ್ ತಿಂಗಳಿನಲ್ಲಿ ಒಂದು ವಿಶಯ ನಡೆಯಿತು. ಸುಮಾರು ೫೫ ವರ್ಷಗಳಿಂದ Times of India ದ ಮೊದಲ ಪುಟದಲ್ಲಿ ಬರಬೇಕಿದ್ದ ಅವರ ಚಿತ್ರ, ೫ ನೇ ಪುಟಕ್ಕೆ ವರ್ಗಾಯಿಸಲ್ಪಟ್ಟಿತ್ತು. ಇದು ಆದದ್ದು ಒಂದು ದಿನ ಮಾತ್ರ ! ನನಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಮೇಲಾಗಿ ಈಗ ಅವರು ತಾವೇ ಬರೆಯದೆ ಯಾರನ್ನೊ ತರಪೇತಿಮಾಡುತ್ತಿರಬಹುದು.
ಲಕ್ಷ್ಮಣ ರೇಖೆ ನಮಗೇನು ಹೊಸದೇ ?

- Login or register to post comments
- 564 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಈ ವ್ಯಂಗ್ಯಚಿತ್ರ ಚೆನ್ನಾಗಿದೆ.
- ಯಾರಿಗ್ಕೊಟ್ರೂ ಕೊಡ್ಬೊದು ನಿವೃತ್ತಿ ; ಆದ್ರೆ ಲಕ್ಷ್ಮಣ್ಗೆ, ಹೇಗ್ಸಾಧ್ಯ ಮಾರಾಯ !
- ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
- ಹೊಸ ವರ್ಷದ್ ಭಾಷಣ ಪಾಡಾಗೈತ್ರಿ ಸಾಹೇಬ್ರೆ ; ಎಣ್ಣಿ ಬೆಲೆ ಏರಿದೆ, ಫಂಡ್ಸೆ ಇಲ್ರಿ, ರಫ್ತ್ ಬಂದಾಗದೆ, ಹಣದುಬ್ಬರ ಐತ್ರಿ. ಅದ್ಕೆ ಅವೆಲ್ಲ ನಾನು ಬಿಟ್ಟೀನಿ.
- ಕಾಗೆ- ಆರ್. ಕೆ. ಲಕ್ಷ್ಮಣರ ವ್ಯಂಗಚಿತ್ರಪ್ರದರ್ಶನದ ಪ್ರಮುಖ ಆಕರ್ಶಣೆಯಂತೆ !


RSS:
ಪ್ರತಿಕ್ರಿಯೆಗಳು
Re: ಆರ್. ಕೆ. ಲಕ್ಷ್ಮಣ್ ನಿವೃತ್ತಿ ಆಗುವುದು ಒಳಿತು
ಬೆಂಗಳೂರು ಆವೃತ್ತಿಯಲ್ಲಿ ಲಕ್ಷ್ಮಣ್ ಹಲವಾರು ಸಲ ಒಳಪುಟಕ್ಕೆ ಸರಿದಿದ್ದಾರೆ. ಅನಾರೋಗ್ಯ ಪೀಡಿತ ಲಕ್ಷ್ಮಣ್ ಹಿಂದಿನ ಮಟ್ಟದ ಕಾರ್ಟೂನ್ ಬರೆಯುತ್ತಿಲ್ಲ. ಆದರೆ ಖುರ್ಚಿಗೆ ಅಂಟಿಕೊಳ್ಳುವ ರಾಜಕಾರಣಿಗಳನ್ನು ಛೇಡಿಸುವ ಲಕ್ಷ್ಮಣ್ ಸ್ವತಃ ತಾನು ನಿವೃತ್ತಿ ನಿರ್ಧಾರ ತೆಗೆದುಕೊಂಡಿಲ್ಲ!