"ಏರ್ ಡೆಕ್ಕನ್ " ತಮ್ಮ ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ ಆರಿಸಿದ್ದಾರೆ.

* ಕ್ಯಾಪ್ಟನ್ ಗೋಪಿನಾಥ್, ತಮ್ಮ ಕಡಿಮೆ ಬಡ್ಜೆಟ್ ಏರ್ಲೈನ್ಸ್- "ಏರ್ ಡೆಕ್ಕನ್ " ಗೆ ಆರ್. ಕೆ. ಲಕ್ಷ್ಮಣ್ ರ ಕಾಮನ್ ಮ್ಯಾನ್ (ಸಾಮಾನ್ಯ ಮನುಷ್ಯ) ನನ್ನು ತಮ್ಮ ವಿಮಾನದ ಲಾಂಛನವನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಬಹುಶಃ ಅದು "ಕಾಮನ್ ಮ್ಯಾನ್ " ನ ಜನಪ್ರಿಯತೆಯ ಸಂದೇಶವೆಂದು ಬೇರೆ ಹೇಳಬೇಕಾಗಿಲ್ಲ !
-*ಈ ಚಿತ್ರ, ’ಟೈಮ್ಸ ಪತ್ರಿಕೆ ’ ಯಲ್ಲೂ ಬಂದಿತ್ತು. ನಾನು ಅದನ್ನು " ನೆಟ್ " ನಿಂದ ಪಡೆದಿದ್ದೇನೆ.

- Login or register to post comments
- 664 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: "ಏರ್ ಡೆಕ್ಕನ್ " ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ
ಆದರೆ ಅದೇ "ಕಾಮನ್ ಮ್ಯಾನ್"ಗೆ "ಲೇಟಾಗಿ ಬಂದೆ" ಎಂಬ ಸಬೂಬು ಒಡ್ಡಿ overbook ಆದವರನ್ನೆಲ್ಲ ಮನೆಗೆ ಕಳುಹಿಸುತ್ತಿದ್ದಾರೆ ಅಂತ ಹಲವೆಡೆ ವರದಿಗಳು ಬರುತ್ತಿವೆಯಲ್ಲ?
ಸೂ: ಮಾನ್ಯ ವೆಂಕಟೇಶರೆ, ಚಿತ್ರ ನೀವೆ ತೆಗೆದದ್ದಾ? ಬೇರೆಡೆಯಿಂದ ತೆಗೆದುಕೊಂಡಿದ್ದೀರಾದರೆ ಸರಿಯಾದ credits ಕೊಟ್ಟರೆ ಚೆನ್ನ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: "ಏರ್ ಡೆಕ್ಕನ್ " ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ
’ಲೋಗೋ” ಚುನಾಯಿಸುವುದು ಅದರ ಮಾರ್ಕೆಟಿಂಗ್ ಸ್ಟ್ಟ್ರಾಟೆಜಿ ಯನ್ನು ಅವಲಂಭಿಸಿದೆ. ಗೋಪಿನಾಥರಿಗೇನೋ ತೋರಿತು. ಆರಿಸಿದ್ದಾರೆ. ಮೇಲಾಗಿ ಅವರು ಕಾಮನ್ ಮ್ಯಾನ್ ನ ’ಕಾರ್ನಾಮಗಳ”ನ್ನು ಪ್ರತಿದಿನ ಅವಲೊಕಿಸಿರಬಹುದು.
ಪುಣೆಯ ’ಸಿಂಬಯೋಸಿಸ್ ’ ಸಂಸ್ಥೆಯ ಪ್ರಾಂಶುಪಾಲರು, ಕಾಮನ್ ಮ್ಯಾನ್ ನ ಕಂಚಿನ ಪ್ರತಿಮೆಯನ್ನು ಅವರ ಕಾಲೇಜಿನ ಪ್ರಮುಖ ದ್ವಾರದಲ್ಲಿ ಸ್ಥಾಪಿಸಿದ್ದಾರೆ. ಇದೆಲ್ಲಾ ಅವರವರಿಗೆ ಬಿಟ್ಟವಿಷಯಗಳಲ್ಲವೇ ?
ಇನ್ನೊಂದು ಗಮ್ಮತ್ತೆಂದರೆ, ಆ ಏರ್ ಡೆಕ್ಕನ್ ನಲ್ಲಿನಾವು ಬೆಂಗಳೂರಿನಿಂದ ಮುಂಬೈಗೆ ಬಂದೆವು. ಸೀಟ್ ನಂಬರ್ ಅವರು ಕೊಡಲ್ಲ. ಕ್ಯೂ ನಲ್ಲಿ ಬಕಪಕ್ಷಿಯಂತೆ ಕಾದಿದ್ದು, ಓಡಿ ಹೋಗಿ ಕಿಟಕಿಯಪಕ್ಕದಲ್ಲಿ ಕುಳಿತದ್ದು ಜ್ಞಾಪಕವಿದೆ. ಮತ್ತೆ ತಿಂಡಿ-ತಿನಸುಗಳನ್ನೆಲ್ಲಾ ಕೊಳ್ಳಬೇಕು. ನಮಗಂತೂ ಏರ್ ನಲ್ಲಿ ಟ್ರಾವೆಲ್ ಮಾಡಿದ ಮಜ ಬರಲೇ ಇಲ್ಲ. ಮುಂದಿನ ಬಾರಿ ದೆಹಲಿಗೆ ಹೋದಾಗ, ನಾವು ’ಸ್ಪೈಸ್ ಜೆಟ್” ನಲ್ಲಿ ಹೋಗಿದ್ದೆವು. ಈಗ ಪರವಾಗಿಲ್ಲ ಅಂತ ಕೇಳಿದ್ದೆ. ಗೊತ್ತಿಲ್ಲ. ನೀವು ಹೇಳುವ ಮಾತು ಸತ್ಯವಾಗಿದ್ದರೆ, ಬೇಜಾರು ಮಾರಾಯ್ರೆ ! ಅಲ್ವ ?
ನಿಮ್ಮ ಕೊನೆ ಪ್ರಶ್ನೆಗೆ ಉತ್ತರ- ಆ ಚಿತ್ರ ಖಂಡಿತ ನಾನು ತೆಗೆದದ್ದಂತೂ ಅಲ್ಲ. ಅದನ್ನು ನೆಟ್ ನಿಂದ ಕ್ಲಿಕ್ಕಿಸಿದ್ದೆ. ಅದನ್ನು ಬರೆಯುತ್ತೇನೆ. ನಿಮ್ಮ ತೋರಿಕೆಗೆ ಧನ್ಯವಾದಗಳು.
ಏರ್ ಡೆಕ್ಕನ್ ನ ಮಾಲೀಕರು, ನಮ್ಮೋರೆ ; ಅಯ್ಯಂಗಾರ್ರು. ಕನ್ನಡ್ದೋರ್ ವಿಮಾನನ ನಾವ್ ಒಪ್ಪಕಿಟ್ಕೊಳ್ದೆ ಬೇರೆ ಯಾರ್ ಕೊ- ಆಪರೇಟ್ ಮಾಡ್ತಾರೆ, ಅಲ್ವಾ ? ನಡ್ಯತ್ತೆ. ಹೋಗ್ಲಿ ಬಿಡಿ ಸಾರ್.