ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಯೋಗಿಯ ಆತ್ಮ ಕಥೆ

April 3, 2007 - 7:28pm — thewiseant
ಯೋಗಿಯ ಆತ್ಮ ಕಥೆ

ನಾನು ಓದಿದ ಹಲವಾರು ಪುಸ್ತಕಗಳ ಪೈಕಿ ನನ್ನ ಮೇಲೆ ಸತ್ಪರಿಣಾಮ ಬೀರಿದ್ದು ಶ್ರೀ ಪರಮಹಂಸ ಯೋಗಾನಂದರ "ಯೋಗಿಯ ಆತ್ಮಕತೆ". Autobiography of a Yogi ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ 60 ವರ್ಷಗಳ ನಂತರವೂ ವಿಶ್ವದಾದ್ಯಂತ ಪ್ರಸಿದ್ದವಾಗಿದೆ. ಬಹುತೇಕ ಎಲ್ಲಾ ಭಾರತೀಯ ಹಾಗು ವಿಷ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಪರಮಹಂಸ ಯೋಗಾನಂದರು ಒಬ್ಬ ಪ್ರಸಿದ್ದ ಯೋಗಿ. ಇದೊಂದು ಯೋಗಿಗಳ ಬಗ್ಗೆ ಒಬ್ಬ ಯೋಗಿಯೇ ಬರೆದ ಅಪರೂಪದ ಕೃತಿ. ತಾವು ಕಂಡು ಅನುಭವಿಸಿದ ಘಟನೆಗಳನ್ನು ಪ್ರಾಮಾಣಿಕವಾಗಿ ತಿಳಿ ಹಾಸ್ಯದೊಂದಿಗೆ ಹೇಳುತ್ತಾ ಓದುಗರನ್ನು ಯೋಗ ಮತ್ತು ಆಧ್ಯಾತ್ಮದ ವಿಷಯಗಳಿಗೆ ಪರಿಚಯಿಸುತ್ತಾರೆ.
ಎರಡು ದೇಹಗಳ ಸಂತ, ಗಾಳಿಯಲ್ಲಿ ತೇಲಾಡುವ ಸಂತ, ಪರಮಸುಖಿಯಾದ ಉಪಾಸಕ, ಗಂಧ ಬಾಬ, ಹುಲಿ ಸ್ವಾಮಿ, ನಿಧ್ರಿಸದ ಸಂತ, ನಿರಾಹಾರ ಯೋಗಿನಿ, ಆನಂದಮಯೀ ಮಾ ಮುಂತಾದವರೊಡನೆ ನಡೆದ ತಮ್ಮ ಭೇಟಿಯನ್ನು ವಿವರವಾಗಿ ತಿಳಿಸುತ್ತಾರೆ. ಕವಿ ರವೀಂದ್ರನಾಥ ಟ್ಯಾಗೋರ್, ಮಹಾತ್ಮಾ ಗಾಂಧಿ, ಜಗಧೀಶ್ ಚಂದ್ರ ಬೋಸ್ ರೊಂದಿಗಿನ ಭೇಟಿಯ ವಿವರಗಳು ಮಹತ್ವಪೂರ್ಣ. ಪವಾಡಗಳ ನಿಯಮಗಳು, ಭಾರತದ ಪ್ರಾಚೀನ ದೈವ ಸಾಕ್ಷಾತ್ಕಾರ ವಿಜ್ನಾನವೆನಿಸಿದ ಕ್ರಿಯಾ ಯೋಗ, ಸಾವಿನಾಚೆಗಿನ ಬದುಕನ್ನು ಗತಿಸಿ ಸುಮಾರು ನಾಲ್ಕು ತಿಂಗಳ ಬಳಿಕ ಪುನರುಜ್ಜೀವನಗೊಂಡ ತಮ್ಮ ಪೂಜ್ಯ ಗುರು ಶ್ರೀ ಯುಕ್ತೇಶ್ವರರಿಂದ ದೊರಕಿದ ಅಪೂರ್ವವಾದ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಸಾವಿಲ್ಲದ ಚಿರಯವ್ವನದ ಗುರು ಶ್ರೀ ಮಹಾವತಾರ ಬಾಬಾಜಿಯವರ ಇರುವಿಕೆ ಮೊತ್ತಮೊದಲ ಬಾರಿಗೆ ಸಾರ್ವಜನಿಕರಿಗೆ ಈ ಪುಸ್ತಕದಿಂದ ತಿಳಿಯುವಂತಾಯಿತು. ಇವರ ಇಚ್ಛೆಯಂತೆ ಆಧ್ಯಾತ್ಮ ಪಿಪಾಸೆಯಿಂದ ಕೂಡಿದ ಪಾಶ್ಚಿಮಾತ್ಯರಿಗೆ ಯೋಗ ವಿದ್ಯೆಯನ್ನು ದಯಪಾಲಿಸಲು 1920 ರಲ್ಲಿ ಅಮೇರಿಕಕ್ಕೆ ಹೋಗಿ ಅಭೂತಪೂರ್ವ ಯಶಸ್ಸುಗಳಿಸಿದ ವಿವರವಿದೆ. 1935-36ರ ತಮ್ಮ ಭಾರತದ ಭೇಟಿಯ ವಿವರಗಳು ತುಂಬಾ ಸ್ಸ್ವಾರಸ್ಯಕರ. ತಮ್ಮ ಮಹಾಸಮಾಧಿಯಾಗುವ ಮೊದಲು 1946ರಲ್ಲಿ ಪ್ರಕಟಗೊಂಡ ಈ ಪುಸ್ತಕಕ್ಕೆ ನಂತರದ ಬೆಳವಣಿಗೆಗಳನ್ನು ಹೇಳುತ್ತಾ ಓದುಗರ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಇನ್ನಷ್ಟು ವಿವರಗಳನ್ನು ಒಂದು ಹೆಚ್ಚುವರಿ ಅಧ್ಯಾಯದಲ್ಲಿ ನೀಡಿದ್ದಾರೆ.
ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ಧರ್ಮ ದೇಶ ಕಾಲಗಳನ್ನು ಮೀರಿ ಜನಪ್ರಿಯವಾಗಿರುವುದರ ಕಾರಣ ಇದು ಸತ್ಯವೂ ಶಿವವೂ ಸುಂದರವೂ ಆಗಿದೆ. ಎಲ್ಲರ ಮನೆ ಮನಗಳಲ್ಲೂ ಈ ಪುಸ್ತಕ ಬೆಳಗಲಿ ಎಂಬುದೇ ನನ್ನ ಆಶಯ.

ಎನ್. ಅಂಜನ್ ಕುಮಾರ್
thewiseant@yahoo.co.in

~.~
  • Login or register to post comments
  • 619 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಮೆಚ್ಚಿನ ಪುಸ್ತಕ
  • ಭಾರತದ ಜ್ಞಾನಾವತಾರ
  • ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ
  • 'ಕನ್ನಡ ಪುಸ್ತಕ ಮಾರಾಟ ಮಳಿಗೆ' ಉದ್ಘಾಟನಾ ಸಮಾರಂಭ- ಮುಂಬೈನಲ್ಲಿ !
  • ನಾ ಮೆಚ್ಚಿದ ಪುಸ್ತಕ: "ಶ್ರೀ ಕರ್ನಾಟಕ ಭಕ್ತ ವಿಜಯ"
Syndicate content

ಲೇಖಕರು

thewiseant's picture

ಪೂರ್ಣ ಹೆಸರು
ಎನ್. ಅಂಜನ್ ಕುಮಾರ್

ಪರಿಚಯ

ಯೋಗ, ಆಧ್ಯಾತ್ಮ , ಗಾಂಧೀವಾದ, ಓದು, ಬರವಣಿಗೆ, ಮಕ್ಕಳ ಸಾಹಿತ್ಯ , ಇಂಟರ್‍ನೆಟ್ ಮುಂತಾದುವು ನನ್ನ ಆಸಕ್ತಿಯ ವಿಷಯಗಳು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

೨೦೩೪-ಮಾರ್ಚ್-೨೦-ಗ್ರಹಣ

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator