23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹಲಗೆ ಹಣ್ಣು

March 28, 2012 - 5:42pm
devaru.rbhat

ಮಲೆನಾಡಿನ ಗುಡ್ಡ ಬೆಟ್ಟಗಳಲ್ಲಿ ಮಾರ್ಚ್ - ಏಪ್ರಿಲ್ ತಿಂಗಳುಗಳಲ್ಲಿ ದೊರಕುವ ಹಣ್ಣು ಹಲಗೆ ಹಣ್ಣು. ಬಳ್ಳಿಯಂತೆ ಬಳುಕುವ ಸುಮಾರು 10-15 ಅಡಿ ಉದ್ದ ಬೆಳೆಯುವ ಪೊದೆಗಳಂತೆ ಗುಂಪು ಗುಂಪಾಗಿ ಬೆಳೆಯುತ್ತದೆ. ಮಾಗದ ಹಣ್ಣು ಹುಳಿಯಾದರೆ ಮಾಗಿದ ಹಣ್ಣು ಸಿಹಿ- ಹುಳಿ ಗಳ ಮಿಶ್ರಣದ ರುಚಿ ಹೊಂದಿದೆ. ಸುಮಾರು ಹೆಬ್ಬೆರಳು ಗಾತ್ರದ ಕೆಂಪಾದ ಹಣ್ಣಿನ ಮೇಲೆ ಬೂದು ಬಣ್ಣದ ಮರಳಿನಂತಹ ದೊರಗಾದ ತೆಳು ಹೊದಿಕೆ ಹೊಂದಿದೆ. ಬಟ್ಟೆಯ ಮೇಲೆ ಮೆದುವಾಗಿ ಉಜ್ಜಿ ದೊರಗು ಹೊದಿಕೆ ಬಿಡಿಸಿ ಹಣ್ಣಿನ ಭಾಗ ತಿಂದಾಗ ಉಳಿಯುವ ಬೀಜವು ಎರಡೂ ಬದಿಯಲ್ಲಿ ಚೂಪಾಗಿದ್ದು ಸುಮಾರು ಒಂದು ಇಂಚು ಉದ್ದವಾಗಿದ್ದು ಗದೆಯ ಮೇಲ್ಮೈಯಂತೆ ಏಣುಗಳನ್ನು ಹೊಂದಿದೆ.

ಮಲೆನಾಡಿನಲ್ಲಿ ಮಳೆಗಾಲದ ಪ್ರಾರಂಭದಲ್ಲಿ ದನಗಳಿಗೆ ಬರುವ ಹಲಗೆ ರೋಗಕ್ಕೆ ಈ ಸಸ್ಯವನ್ನು ಮನೆ ಮದ್ದಾಗಿ ಉಪಯೋಗಿಸುವರು. ಹೆಚ್ಚು ಹೆಚ್ಚು ತಿಂದಲ್ಲಿ ಆಮಶಂಕೆ ಪ್ರಾರಂಭವಾಗುವ ಸಾಧ್ಯತೆ ಇದೆ. ಹಿತಮಿತವಾಗಿ ತಿಂದಲ್ಲಿ ಬೇಸಿಗೆಯ ವಾತಾವರಣಕ್ಕೆ ಅನುಕೂಲವಾಗಿ ಪರಿಣಮಿಸುತ್ತದೆ.