ಸಂಕಷ್ಟಿ ಪುಷ್ಪ

ಪುಟ್ಟ ಬಳ್ಳಿಯ ದೊಡ್ಡ ಹೂವು. ಸುಮಾರು ಸಾಮಾನ್ಯ ಅಗರಬತ್ತಿ ಗಾತ್ರಕ್ಕಿಂತಲೂ ಸಪೂರಾದ 4-5 ಇಂಚು ಉದ್ದದ ಒಂದು ವರೆ - ಎರಡು ಇಂಚು ಅಗಲದ  ತುದಿ ಚೂಪಾಗಿ ಬಡದಲ್ಲಿ ಅರಳಿ ಎಲೆ ಆಕಾರವನ್ನು ಹೋಲುವ ತೆಳುವಾದ ಎಲೆಗಳನ್ನು ಹೊಂದಿದ ಪುಟ್ಟ ಬಳ್ಳಿಯಲ್ಲಿ ಸುಮಾರು ಆರು ಇಂಚು ಅಗಲದ ಅಚ್ಚ ಬಿಳಿ ಬಣ್ಣದ  ಸಂಜೆ ನಾಲ್ಕರ ನಂತರ ಅರಳಿ ಬೆಳಗಾಗುವುದರೊಳಗಾಗಿ ಬಾಡಿ ಹೋಗುವ ಈ ಹೂವಿಗೆ ಸಂಕಷ್ಟಿ ಪುಷ್ಪ ಎನ್ನುತ್ತಾರೆ.