April 13, 2012 - 1:27pm
'ಸುಂದರ ತಾಜ್ ಮಹಲ್ ನ ನೀಲ ನಕ್ಷೆ'.
ಮಿನಾರ್ ಗಳು. ಎದುರಿಗೆ , ಉದ್ದನೆಯ ನೀರಿನ ತೊಟ್ಟಿ, ಅದರಲ್ಲಿ ತಾಜ್ ನ ಪ್ರತಿಬಿಂಬ ಕಾಣಿಸುತ್ತಿರುತ್ತದೆ. ಬದಿಯಲ್ಲಿ ಅಚ್ಚ ಹಸುರಿನ ಸುಂದರವಾಗಿ ಸಜಾಯಿಸಿದ ಗಿಡಗಳು. ಇವೇ ಅಲ್ಲವೇ. ಆದರೆ, ಒಮ್ಮೆ ಈ ತರಹದ ಚಿತ್ರ, ಕಂಡರೆ,- ಬದಿಯಲ್ಲಿ ಎಲೆಗಳಿಲ್ಲದ ಬೋಳು ಮರ. ನಮಗೆ ಏನನ್ನಿಸಬಹುದು ? ನಮಗೆಲ್ಲಾ 'ತಾಜ್ 'ಎಂದರೆ ನಾಲ್ಕೂ ಭಾಗದಲ್ಲೂ ಚಚ್ಚೌಕಾರದ ಒಂದು ಕಟ್ಟಡ, ಮತ್ತು ಅದರ ನಾಲ್ಕೂ ಬದಿಯಲ್ಲೂ.
ಇದನ್ನು ವಿಶ್ವದಾದ್ಯಂತ ಲಕ್ಷಾಂತರ ಕ್ಯಾಮರಗಳು ಸೆರೆಹಿಡಿದಿವೆ. ಆದರೆ ನನ್ನತನ ಎಲ್ಲಿದೆ ? ಅದಕ್ಕಾಗಿಯೇ ನಾನು ಈ ಲೇಖನ ಬರೆದಿರುವುದು. ನಿಧಾನವಾಗಿ ಓದಿ. ರವಿ ಕಾಣದ್ದನ್ನು ಕವಿ ಕಂಡ; ಇಲ್ಲವೇ ಫೋಟೋಗ್ರಾಫರ್ ಕಂಡ, ಎಂದರೆ ನನಗೆ ಖುಷಿಯಾಗುತ್ತದೆ !
ಕ್ರಿಯೇಟಿವಿಟಿ ಎಲ್ಲೆಲ್ಲೂ ಕಾಣಲು ಸಾಧ್ಯವಿದೆ. ಎನಂತಿರಿ ?!

Taxonomy upgrade extras:





ಪ್ರತಿಕ್ರಿಯೆಗಳು
ಉ: 'ತಾಜ್ ಮಹಲ್' ನ್ನು ಹೀಗೆ ನೋಡಿ ಸಂತಸಪಡುವರ ಸಂಖ್ಯೆ ಎಷ್ಟು ?
ವೆಂಕಟೇಶ್ ಅವ್ರೆ-
ರವಿಗೆ ಕಾಣದ್ದು ಕವಿ ಕಂಡ ಎಂಬಂತೆ ನೀವ್ ಎಲ್ಲರಿಗಿಂತ ವಿಭಿನ್ನವಾಗಿ ತಾಜ್ ಚಿತ್ರವನ್ ಸೆರೆ ಹಿಡಿದಿರುವಿರಿ..
ನನಗೆ ತಕ್ಷಣಕ್ಕೆ ಏನೂ ತೊಚುತ್ತಿಲ್ಲ,
ಆದರೆ ಆ ಬೋಳು ಮರದ ಜೊತೆಗೆ ಇರೋ ತಾಜ್ ಫೋಟೋ ನೋಡಿ ಚಿತ್ರ ವಿಭಿನ್ನ ಅನ್ನಿಸಿದೆ...
ಉ: 'ತಾಜ್ ಮಹಲ್' ನ್ನು ಹೀಗೆ ನೋಡಿ ಸಂತಸಪಡುವರ ಸಂಖ್ಯೆ ಎಷ್ಟು ?
ಕ್ರಿಯೇಟಿವಿಟಿ ಎಲ್ಲೆಲ್ಲೂ ಕಾಣಲು ಸಾಧ್ಯವಿದೆ. ಎನಂತಿರಿ ?!
ತಾಜ್ ಅಂದ ಮಾತ್ರಕ್ಕೆ ಭವ್ಯತೆ ಅದರ ಜೊತೆ ಜೊತೆಗೆ ಸೇರುತ್ತದೆ. ನಿಜ. ಆದರೆ ಅದನ್ನು ಸಾವಿರಾರು ಜನ ನೋಡುವಂತೆ ನಾವ್ಯಾಕೆ ನೋಡಬೇಕು. ಸ್ವಲ್ಪ ದೃಷ್ಟಿ ಕೋನ ಬದಲಾವಣೆಯಾದರೆ ಹೇಗೆ ?
ನಾನು ಮತ್ತು ನನ್ನ ಪತ್ನಿ, ನವ -ದೆಹಲಿಯಲ್ಲಿ 'ಅಕ್ಷರಧಾಮ' ವನ್ನು ನೋಡಿದೆವು. ರಾತ್ರಿ, ಅದಕ್ಕೆ ಬೆಳಕಿನ ಹೊದಿಕೆ ಹೊದಿಸಿದಾಗ ಅದು ತಾಜ್ ಗಿಂತ ಮಿಗಿಲಾದ ಮೆರುಗನ್ನು ಹೊಂದುತ್ತದೆ. ಒಮ್ಮೆ ನೋಡಿ ಬನ್ನಿ. ಅದೇನು ಕೆತ್ತನೆಯ ಕೆಲಸ, ಅದೇನು ವೈವಿಧ್ಯತೆ, ದೇವಿ ದೇವತೆಗಳು, ಪಕ್ಷಿಗಳು, ಪ್ರಾಣಿಗಳು. ಅಬ್ಬಬ್ಬ ಆದೊಂದು ಸ್ವರ್ಗ ಸದೃಶವಾದ ಸ್ಥಾನವಾಗಿತ್ತು. ಆನೆಗಳ ಕೆತ್ತನೆಯ ಕೆಲಸ ಅದ್ಭುತವಾಗಿತ್ತು. ಅವೆಲ್ಲಾ ಆ ಮಂದಿರವನ್ನು ಹೊತ್ತಿರುವಂತೆ ಭಾಸವಾಗುತ್ತಿತ್ತು.
ಉ: 'ತಾಜ್ ಮಹಲ್' ನ್ನು ಹೀಗೆ ನೋಡಿ ಸಂತಸಪಡುವರ ಸಂಖ್ಯೆ ಎಷ್ಟು ?
ಕೊನೆಯದಾಗಿ ಅಕ್ಷರಧಾಂ ನೋಡಿದಾಗ ಅನ್ನಿಸಿದ್ದು, ಕಲೆಯ ಬಲೆ, ಸುಂದರ, ಅತಿ ಸುಂದರ, ಬೇಲೂರಿನ ನಮ್ಮ ಚನ್ನಕೇಶವ ದೇವಾಲಯವನ್ನು ಹೋಲುವ ಕೆತ್ತನೆಕೆಲಸ, ಬೆಣ್ಣೆಯಮ್ತಹ ಕಲ್ಲಿನಲ್ಲಿ ಮಾಡಿದ್ದಾರೆ. ಸರಿ. ಇಲ್ಲಿ ನಾವೆಲ್ಲಾ ಮೆಚ್ಚಲೇ ಬೇಕಾದ ಶಿಲ್ಪ ಸಾಮರ್ಥ್ಯವೆಮ್ದರೆ, ದೇವಾಲಯದ ಒಳಗೆ ತಲೆ ಎತ್ತಿನೋಡಿದರೆ, ಮೇಲೆ ಕೆತ್ತಿರುವ ಕಲಾಕೃತಿಗಳು, ಹೂವಿನತರಹ, ಕನ್ನಿಕೆಯರು, ಮೃಗಗಳು, ಮತ್ತಿತರ ಕಲಾಪ್ರಕಾರಗಳನ್ನು ಅನುಸರಿಸಿ ಮಾಡಿದ ಕೆತ್ತನೆ ಕೆಲಸ ಎಲ್ಲರು ತಲೆಬಾಗಿಸುವಮ್ತಹದು. ಇದು 'ತಾಜ್ ಮಹಲ್' ನಲ್ಲಿ ನಮಗೆ ಸಿಗಲಿಲ್ಲ. 'ತಾಜ್ ಕಲಾಕೃತಿ'ಯು ಅದರದೇ ಆದ ಅನುಪಮ ಕೃತಿಗಳ ಸಮಾವೇಶ. ಇದರಲ್ಲಿ ಎರಡು ಮಾತಿಲ್ಲ.
ಮತ್ತೊಂದು ವಿಚಾರವೆಂದರೆ, ಅಕ್ಷರಧಾಂ ನಲ್ಲಿ ಒಂದು ಕಡೆಯಿಂದ ಗಮನಿಸಿದರೆ, ದೆಹಲಿಯ ಕೆಂಪು ಕೋಟೆಯನ್ನು ಹೋಲುವ ಕೋಟೆಯ ಗೋಡೆಗಳಿವೆ. ಇವು ಒಂದು ತರಹದ ಅನುಕರಣೆ ಅನ್ನಿಸುವುದು ನಿಜ. ಒಟ್ಟಿನಲ್ಲಿ ಸರಿಯಾಗಿ ಗಮನಿಸಿದರೆ, ಯಾವುದು ಅಸಲಿ ಯಾವುದು ನಕಲಿ ಮತ್ತು ಯಾವುದು ತನ್ನದೇ ಆದ ತನ್ನತನಕ್ಕೆ ಮೀಸಲಾದ ಕೃತಿ ಎಂದು ಕೇಳಿದರೆ ಉತ್ತರ ಸಿಗುವುದು ಕಷ್ಟ.