ನೆಹರು, ಬಾಪು, ಪಟೇಲ್, ತಿಲಕ್, ಗೋಖಲೆ, ಮತ್ತು ಹಲವಾರು ರಾಷ್ಟ್ರ ಪ್ರೇಮಿಗಳು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ. ದೇಶಕ್ಕೆ ತಮ್ಮ ಮನೆಯನ್ನೇ ಸಮರ್ಪಿಸಿದ ದೇಶಪ್ರೇಮಿಗಳಲ್ಲಿ ಮೋತಿಲಾಲ್ ನೆಹರು ಕಡಿಮೆಯೇನಿಲ್ಲ. ಅವರ ಹಿರಿಯರು ಮಾಡಿದ ಆಸ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಆ ಮಹಲ್ ನ ಎಲ್ಲ ತಾಣಗಳಲ್ಲೂ ನೆಹರೂ ಮೆನೆಯ ಪರಿವಾರದವರು, ತಂದೆ,ತಾಯಿ, ಅಕ್ಕ,ಅಣ್ಣ,ತಂಗಿ,ಮಾವ, ಅಜ್ಜಿ,ಅಜ್ಜ, ಒಟ್ಟಿಗೆ ಕುಳಿತುಂಡು ನಲಿದ, ನಡೆದಾಡಿದ ಪವಿತ್ರ ಭೂಮಿಯನ್ನೂ ರಾಷ್ಟ್ರಕ್ಕೆ ಕೊಟ್ಟರು ಎಂದು ಹೇಳುವುದು ಸುಲಭ. ಆದರೆ ನಮ್ಮಲ್ಲಿ ಎಷ್ಟು ಜನ ಇಂತಹ ತ್ಯಾಗವನ್ನು ಮಾಡಿದ್ದೇವೆ ? ಎಂದರೆ ಬೆರೆಳಿಣಿಕೆಯಷ್ಟಿರಬಹುದೇನೊ.
ಅದರಲ್ಲಿ ಮಹಾತ್ಮಗಾಂಧಿಯವರು ಮುಗಿಲೆತ್ತರಕ್ಕೆ ಎದ್ದು ನಿಲ್ಲುತ್ತಾರೆ. ದಕ್ಷಿಣ ಆಫ್ರಿಕದಿಂದ ಶುರುವಾಗಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವವರೆಗೂ ಜಿಗಣಿಯಂತೆ ಪಟ್ಟುಹಿಡಿದು, ರಾಷ್ಟ್ರ ಬ್ರಿಟಿಷರ ಆಡಳಿತದಿಂದ ಮುಕ್ತವಾಗುವವರೆಗೂ ಹೋರಾಡಿದರವರು. ಭಾರತ ದೇಶ ಅವರಿಗೆ ಚಿರಋಣಿಯಾಗಿದೆ. ಮಹಾತ್ಮರ ಮಕ್ಕಳಲ್ಲಿ ಒಬ್ಬರೂ ಮೆಟ್ರಿಕ್ ಮಾಡಲಿಲ್ಲ. ಅಥವಾ ಬಾಪು ಅದರ ಬಗ್ಗೆ ತಲೆಕೆಡೆಸಿಕೊಳ್ಳಲಿಲ್ಲ. ದೇಶದ ಒಬ್ಬ ವಿಲಾಯತಿ ಶಿಕ್ಷಣ ಗಳಿಸಿದ ವಕೀಲನ ಮಕ್ಕಳು, ಅವಿದ್ಯಾವಂತರ ಶ್ರೇಣಿಯಲ್ಲಿ ! ಇದನ್ನು ಅರಗಿಸಿಕೊಳ್ಳುವುದು ಎಷ್ಟು ಕಷ್ಟ ನೋಡಿ. ಬಾಪು ಮನಸ್ಸುಮಾಡಿದ್ದರೆ ಅವರ ಹಿರಿಯ ಮಗ ಹರಿಲಾಲ್ ನನ್ನು ವಿದೇಶಕ್ಕೆ ಕಳಿಸಬಹುದಿತ್ತು. ಅವರು ಅದನ್ನು ಸಮರ್ಥಿಸಲಿಲ್ಲ. ಅದರ ಬಗ್ಗೆ ಯೋಚಿಸುವಷ್ಟು ಸಮಯವೂ ಆಗ ಅವರಿಗಿರಲಿಲ್ಲ. ಅವರ ದೃಷ್ಟಿಯಲ್ಲಿ ಆಗ ಅದು ಅಷ್ಟೇನು ಮಹತ್ವದ ವಿಶಯವೆಂದು ಅನ್ನಿಸಿರಲಿಲ್ಲ. ಇದು ಮಹಾತ್ಯಾಗಕ್ಕೊಂದು ಪರಮೋಚ್ಚ ಉದಾಹರಣೆ. ಮನಮನದಲ್ಲೂ, ಕನಸಿನಲ್ಲೂ ಸ್ವಾತಂತ್ರ್ಯದ ಹಸಿವು ಅವರ ರೋಮರೋಮಗಳಲ್ಲಿ ಮನೆಮಾಡಿತ್ತು.
ಅದೇಷ್ಟೊ ಮಂದಿ ಗಾಂಧೀಜಿಯವರಿಗೆ ಮೊದಲೇ ದೇಶದ ಪರತಂತ್ರದ ಬಗ್ಗೆ ತೆಲೆಕೆಡಿಸಿಕೊಂಡು ದುಡಿದ ಚೇತನಗಳು ದಾಖಲೆಯಲ್ಲಿವೆ.
ಆದರೆ ಸಮಗ್ರ ರಾಷ್ಟ್ರದ ಜನಸಂಘಟನೆಮಾಡಿ ಕೊನೆಯವರೆಗೂ ಹೋರಾಟದ ಕಹಳೆಯನ್ನು ಊದಿ, ಎಲ್ಲರೊಂದಿಗೆ ಯುದ್ಧಭೂಮಿಗಿಳಿದು, ತಮ್ಮ ಅನುಪಮ, ಕಾರ್ಯವೈಖರಿಗಳಿಂದ ಸತತವಾಗಿ ನಾಯಕತ್ವವನ್ನು ನೀಡಿ, ದೇಶದ ಐಕ್ಯತೆಯನ್ನು ಧೃಢಪಡಿಸಿ, ತಮ್ಮ ಜೀವವನ್ನೇ ಮುಡಿಪಾಗಿಟ್ಟು ಶ್ರಮಿಸಿದ ಬಾಪುರವರನ್ನು ಮಹಾತ್ಮನೆಂದು ಕರೆಯುವುದು ಅತಿ ಚಿಕ್ಕ ಉಪಾಧಿಯನ್ನು ಕೊಟ್ಟಂತೆ; ಅವರು ಮಹಾಮಹಾ ಮಹಾತ್ಮರು !
'ಭಾರತ ಭಾಗ್ಯ ವಿಧಾತ' ಯಾರೂ ಬೇರೆ ಇನ್ಯಾರೂ ಅಲ್ಲ. ಅವರೇ ನಮ್ಮ ನಿಮ್ಮ ಮೆಚ್ಚಿನ ಬಾಪುರವರು !! ನಮಗಾಗಿ ಸ್ವಾತಂತ್ರ್ಯವನ್ನು ದೊರಕಿಸಿಕೊಡಲೋಸುಗವೇ ಜನ್ಮತಳೆದು, ಆ ಕಾರ್ಯ ಮುಗಿಯುತ್ತಿದ್ದಂತೆಯೇ ಸದ್ದಿಲ್ಲದೇ ದಿಗಂತದಲ್ಲಿ ಕಣ್ಮರೆಯಾದ ದಿವ್ಯ ಜ್ಯೋತಿ ಅವರು.
ಜವಹರಲಾಲ್ ರವರ ಮನೆಯ ಒಂದು ಕೋಣೆ !

ಪಂ.ನೆಹರುರವರ ಓದುವ ಕೋಣೆ ...

ಮೋತಿಲಾಲ್ ರವರನ್ನು ಭೇಟಿಮಾಡಲು ಬಾಪು ಬಂದಾಗ, ಈ ಜಾಗದಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತಿದ್ದರಂತೆ.

ನಮ್ಮ ಪ್ರೀತಿಯ ಜವಹರ್ಲಾಲ್ ನೆಹರು ವಾಸವಾಗಿದ್ದ ಮತ್ತು ನಮ್ಮ ಪ್ರೀತಿಯ ಪ್ರಧಾನಿ ಇಂದಿರಮ್ಮನವರ ಜನ್ಮ ಸ್ಥಳವನ್ನು ಒಮ್ಮೆ ಭೇಟಿ ಮಾಡಿದಾಗ ಆಕೆಯ ಪರಿವಾರ ಮಾಡಿದ ತ್ಯಾಗ, ಮತ್ತು ಬಲಿದಾನಗಳು ನಮ್ಮ ಮನಸ್ಸಿನಲ್ಲಿ ಅಲೆ ಅಲೆಯಾಗಿ ತೇಲಿಬಂತು. ಹೀಗೆ ರಾಷ್ಟ್ರಕ್ಕಾಗಿ ತನುಮನಧನಗಳನ್ನು ಮುಡುಪಾಗಿಟ್ಟ ಭಾರತಿಯರಲ್ಲಿ ನೆಹರು ಪರಿವಾರವು ಒಂದು !
ಆನಂದ ಭವನ, ಮುಂಬೈನ ಮಣಿಭವನ ಹೋಲಿಕೆಯಲ್ಲಿ ಒಂದೆ. ಆದರೆ ಆನಂದ ಭವನ ಅತಿ ವಿಶಾಲವಾಗಿದ್ದು, ಭವ್ಯವಾಗಿದೆ. ಭವನದ ಮುಂದೆ ಸುಂದರವಾದ ಹುಲ್ಲುಗಾವಲು ಇದೆ. ಆದರೆ ಅತಿ ಹೆಚ್ಚಿನ ಸೆಕ್ಯುರಿಟಿ ಇಲ್ಲ. ಈಗಂತು ನಮಗೆ ಸೆಕ್ಯುರಿಟಿ ಎಂದರೆ ಆ ಜಾಗಕ್ಕೆ ಹೋಗುವುದೇ ಬೇಡಪ್ಪ ಅನ್ನಿಸಿದೆ. ಆದರೆ ಆತಂಕವಾದಿಗಳು ಮುಂತಾದವರನ್ನು ಹತ್ತಿಕ್ಕಲು ಅದು ಬೇಕೇ ಬೇಕು !