April 23, 2012 - 7:01am
ಇದು ಮೊಘಲ್ ಬಾದಶಹ ಷಹಜಹಾನನ ವೃದ್ಧಾಪ್ಯದ ಅವಸ್ಥೆಯನ್ನು ಸೂಚಿಸುವ ಚಿತ್ರ. ಹೆಂಡತಿಗಾಗಿ ವಿಶ್ವ ಪ್ರಸಿದ್ಧ ಇಮಾರತ್, ತಾಜ್ ಮಹಲ್ ನೇನೋ ಕಟ್ಟಿದ . ಆದರೆ, ಅದರ ಹತ್ತಿರ ಸುಳಿಯಲು ಮಗ ಔರಂಗ್ ಝೇಬ್ ಬಿಡಬೇಕಲ್ಲ. ತನ್ನ ತಂದೆಯನ್ನೇ ಬಂದಿಖಾನೆಯಲ್ಲಿ ಹಾಕಿ ತಾನು ಚಕ್ರವರ್ತಿಯಾದ ! ಇದೆ ತಾನೇ ಮೊಘಲರ ಆಳ್ವಿಕೆಯ ವೈಖರಿ ನಮಗೆ ಕಾಣಿಸುವುದು !
ಒಂದು ಸಮಾಧಾನ ಅಂದ್ರೆ ತಾನು ನಿರ್ಮಿಸಿದ ತಾಜ್ ಮಹಲ್ ನ್ನು ಪ್ರತಿದಿನ, ಪ್ರತಿ ಕ್ಷಣ ಆಗ್ರಾ ಕೋಟೆಯಿಂದ ನೋಡಿ ನೋಡಿ ಕಣ್ತುಂಬಿಸಿ ಕೊಳ್ಳುವ ಸೌಲಭ್ಯ ಕೊಟ್ಟಿದಾನಲ್ವ . ಅದೇ ಸಾಕು. ಆ ಮುದಿಯಸ್ಸಿನಲ್ಲೇ ಇನ್ನೆನ್ ತಾನೇ ಎಲ್ಲರು ಆಶಿಸುವುದು ?
ಈ ಕೆಳಗಿನ ಇನ್ನೂ ಹತ್ತಿರದ ಚಿತ್ರದಲ್ಲಿ ಬಾದಶಹರು ತಮ್ಮ 'ಮುದ್ದಿನ ಮಡದಿಯ ಮುಸೋಲಿಯಂ'ನ್ನು ಹತ್ತಿರದಲ್ಲಿ ವೀಕ್ಷಿಸಿ ಆಕೆಯ ಜೊತೆಯಲ್ಲಿ ಕಳೆದ ಸುಂದರ ಪಲ್ ಗಳ ಯಾದ್ ಗಳನ್ನು ತಾಜಾಮಾಡಿಕೊಳ್ಳುವ ಸುಸಂಧಿಯನ್ನು ಹೊಂದುತ್ತಾರೆ.
ನಾವೂ ಇಲ್ಲಿಂದಲೇ ಮೊದಲು 'ತಾಜ್ ಮಹಲ್' ನ್ನು ವೀಕ್ಷಿಸಿ ಸಂಭ್ರಮಪಟ್ಟೆವು !
