19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

'ಸೀತಾಮಡಿ', ಎನ್ನುವ ಸ್ಥಳದಲ್ಲಿ ವೈದೇಹಿ, ಭೂಮಿತಾಯಿಯ ಮಡಿಲಲ್ಲಿ ಐಕ್ಯವಾದಳು !

May 1, 2012 - 6:23am
venkatesh

'ಮರ್ಯಾದ ಪುರುಷೋತ್ತಮ, ಶ್ರೀರಾಮಚಂದ್ರನ ಮಡದಿ',  'ಸೀತಾದೇವಿ'ಯ ಜೀವನದಲ್ಲಿ ಸುಖೋಲ್ಲಾಸಾಗಳ ದಿನಗಳು ಬರಲಿಲ್ಲವೇನೋ ! ಶ್ರೀ ರಾಮರನ್ನು ಮದುವೆಯಾದದಿನದಿಂದ  ಕಷ್ಟಕೋಟಲೆಗಳ ಜೀವನವನ್ನೇ ಅನುಭವಿಸುವುದು ಎಂದು ಅವರ ಹಣೆಯಲ್ಲಿ ವಿಧಿ ಬರೆದಿತ್ತು. ಶ್ರೀರಾಮನ ಪ್ರಜೆಗಳಲ್ಲೊಬ್ಬ ಸೀತಾದೇವಿಯ ಶೀಲದ  ಬಗ್ಗೆ ನುಡಿದ ಮಾತುಗಳಿಂದ ವಿಚಲಿತನಾದ ಶ್ರೀರಾಮನು, ಆಕೆಯನ್ನು ತ್ಯಜಿಸುವ ಅತ್ಯಂತ ಕಷ್ಟಕರವಾದ  ಧೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. 'ಶ್ರೀರಾಮ', ಮತ್ತು 'ಲಕ್ಷ್ಮಣ'ರು ಹೀಗೆ 'ವಿಧಿಯ ಕೈವಾಡ'ಕ್ಕೆ ಬಲಿಯಾದರು. 'ಸೀತಾಮಡಿ' ಎಂಬ ಸ್ಥಳದಲ್ಲಿ 'ರಾಮಾಯಣದ ಕೊನೆಯ ಭಾಗ'ದಲ್ಲಿ 'ವೈದೇಹಿ', ಶ್ರೀರಾಮನ ಬಿರುನುಡಿಗಳಿಗೆ ಒತ್ತು ಕೊಟ್ಟು, ತನ್ನ ಮಾತೆ 'ಭೂದೇವಿಯ ಗರ್ಭ'ದಲ್ಲಿ ಸೇರುತ್ತಾಳೆ.  ಆ ಸಂದರ್ಭವನ್ನು ನೆನೆಪಿಸಲು ಸೀತಾಮಡಿಯಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಕೆಳಗೆ ತೋರಿಸಿರುವುದು, ಸೀತಾ ಮಾತೆಯ ವಿಗ್ರಹ. ಭೂಮಿಯ ಕೆಳಗೆ, ಸುರಂಗದಲ್ಲಿ ತಲೆ ತಗ್ಗಿಸಿ ಹೋದರೆ, ಅಲ್ಲಿ ಸೀತಮ್ಮನವರು ತಮ್ಮ ತಾಯಿಯವರನ್ನು ಸೇರಿಕೊಳ್ಳುವ ದೃಶ್ಯವನ್ನು ಕಲ್ಪಿಸಿದ್ದಾರೆ. ಇದು ಬಹುಶಃ ನಮ್ಮ ಟೂರಿನ ಅತ್ಯಂತ ಖೇದಕರವಾದ ದೃಶ್ಯವಾಗಿತ್ತು. ಕೆಲವರಂತು ಇಲ್ಲಿ ಕಣ್ಣೀರಿಟ್ಟರು !ಸೀತಾಮಡಿಯ ಹತ್ತಿರ, 'ಆಂಜನೇಯನ ಬೃಹತ್ ಮೂರ್ತಿ'ಯನ್ನು ನಿರ್ಮಿಸಿದ್ದಾರೆ. ಈಗ ಅದು ಪರ್ಯಟಕರ ಪ್ರಮುಖ ಆಕರ್ಷಣೆಯ ಕೆಂದ್ರಗಳಲ್ಲೊಂದಾಗಿದೆ.