ಮಂತ್ರಾಲಯಂ ಹತ್ತಿರ, ಬೃಹತ್ ಕಲ್ಲಿನ ಬಂಡೆಗಳು ಒಂದರ ಮೇಲೊಂದು.- ಒಂದು ಪುಷ್ಪಕ ವಿಮಾನ, ಇನ್ನೊಂದು ದಿಂಬು. ಉಳಿದ ನಾಲ್ಕು...
*
ಮಂತ್ರಾಲಯಂ ರೋಡಿನ ರಾಘವೇಂದ್ರಸ್ವಾಮಿಗಳ ಮಠವನ್ನು ಸಂದರ್ಶಿಸಿ, ಸೇವೆ ಮಾಡಿದವರು ಮೇಲಿನ ಆರು ಭಾರಿ ಕಲ್ಲುಗಳ ಬಗ್ಗೆ ಖಂಡಿತ ತಿಳಿದಿರುತ್ತಾರೆ. ಹತ್ತಿರದಲ್ಲೇ, ಶ್ರೀ ಆಂಜನೇಯ ಸ್ವಾಮಿ ದೇಗುಲವಿದೆ. ಅಲ್ಲಿ ರಾಘವೇಂದ್ರರು ತಮ್ಮ ಯತಿಗಳಾಗುವ ಪೂರ್ವಾಶ್ರಮದಲ್ಲಿ, ಅಲ್ಲಿಗೆ ಬಂದು ತಪಸ್ಸನ್ನು ಮಾಡಿದ್ದರಂತೆ. ಹತ್ತಿರದಲ್ಲೇ ೬ ಬೃಹತ್ ಬಂಡೆಗಳು ಒಂದರ ಮೇಲೊಂದು ಪೇರಿಸಿಟ್ಟರೀತಿಯಲ್ಲಿ ಹಲವಾರು ವರ್ಷಗಳಿಂದ ನಿಂತಿವೆ. ಮಳೆ- ಗಾಳಿ ಅವಕ್ಕೆ ಲೆಕ್ಕಕ್ಕಿಲ್ಲ. ಒಂದು ಶ್ರೀರಾಮನಿಗೆ ತಲೆದಿಂಬಂತೆ . ಇನ್ನೊಂದು ಪುಷ್ಪಕವಿಮಾನ,... ಉಳಿದ ೪ ಬಂಡೆಗಳು ಬೇರೆ ಬೇರೆ ಕೆಲಸಗಳಲ್ಲಿ ಉಪಯೋಗಕ್ಕೆ ಬರುವುದಂತೆ. ಅದರ ಬಗ್ಗೆ ಅನೇಕ ಜನ ಅನೇಕ ರೀತಿಯಲ್ಲಿ ಅರ್ಥೈಸಿದ್ದಾರೆ. ಒಟ್ಟಿನಲ್ಲಿ, ನೋಡಲು ಬಹಳ ಸುಂದರವಾದ ಸ್ಥಳವೆನ್ನುವುದರಲ್ಲಿ ಎರಡು ಮಾತಿಲ್ಲ .
-*ನಮ್ಮ ಫ್ಯಾಮಿಲಿ ಆಲ್ಬಮ್ ನಿಂದ.

- Login or register to post comments
- 515 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS: