ಇದಕ್ಕೆ ನಮ್ಮಲ್ಲಿ ಅತ್ತಿ ಹಣ್ಣು ಎಂದೇ ಕರೆಯುತ್ತಾರೆ. ದನಗಳು, ಮಂಗಗಳು, ಹಾರುಬೆಕ್ಕು ಇತ್ಯಾದಿ ಪ್ರಾಣಿಗಳು ಇದನ್ನು ತಿನ್ನುತ್ತವೆ. ಇದರ ಒಳಪದರಕ್ಕೆ ಪುಟ್ಟ ಬೀಜಗಳು ಅಂಟಿಕೊಂಡಂತೆ ಇರುತ್ತವೆ. ಇದು ನೋಡಲು ಅಂಜೂರದ ಹಣ್ಣಿನಂತೆ ಇರುತ್ತದೆ. ಇದರ ಕಾಂಡ ಗಳನ್ನು ಹೋಮಗಳಲ್ಲಿ ಸಮಿದವಾಗಿ ಬಳಸುತ್ತಾರೆ. ಇದರ ಬೇರನ್ನು ಸ್ವಲ್ಪ ಕಡಿದು ಅದರಡಿ ಪಾತ್ರೆಗಳನ್ನಿಟ್ಟು ಅದರಿಂದ ಸುರಿಯುವ ನೀರನ್ನು ಮಡಿ ಮಾಡುವ ದಿನಗಳಲ್ಲಿ ಅಕ್ಕಿಯಿಂದ ಮಾಡುವ ಪದಾರ್ಥಗಳ ತಯಾರಿಯಲ್ಲಿ ಉಪಯೋಗಿಸುತ್ತಾರೆ. ಹೊಟ್ಟು ಕೆಮ್ಮು ಆದಲ್ಲಿ ಇದರ ಕೆತ್ತೆ (ಚಕ್ಕೆ) ಯ ಕಷಾಯ ಮಾಡಿ ಹಾಲಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಇದು ಪವಿತ್ರ ಹಾಗೂ ಔಷಧೀಯ ಮರವಾಗಿ ಪರಗಣಿತ.
ಧನ್ಯವಾದಗಳು
ಹೌದು ಹುಳ ಇರುತ್ತೆ ...ಆದರೆ ಸ್ಕೂಲ್ ಗೆ ಹೋಗುವಾಗ ನಾವುನು ಈ ಹಣ್ಣನ್ನ ತಿಂದಿದ್ದು ನೆನಪಿದೆ ,ಅದರ ಒಳಗೆ ಸ್ವಲ್ಪ ಹೂ ಥರ ಇರೋ ಭಾಗ ತೆಗಿದ್ರೆ ಹುಳಗಳು ಹೋಗುತ್ತೆ , ಉಶಾರಾಗಿ ತೆಗೆದು ತಿನ್ತಿದ್ವಿ ...
ಈ ಮರದ ಎಳೆಗಳನ್ನ ಶಾಂತಿ ಪೂಜೆಗಳಿಗೆ ಬಳಸ್ತಾರೆ ..ಎಲ್ಲ ಪಕ್ಷಿಗಳ ಪ್ರಿಯ ಸ್ತಳ ...
ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಭಾಗದಲ್ಲಿ ಅತ್ತಿ ಹಣ್ಣನ್ನು ವರ್ಷಕ್ಕೊಂದು ಬಾರಿ ಕಡಾಖಂಡಿತವಾಗಿ ಸೇವಿಸಲೇಬೇಕು ಎನ್ನುವ ಅಲಿಖಿತ ನಿಯಮವಿದೆ. ಅದಕ್ಕೆ ಹಿರಿಯರು ಕೊಡುವ ಹೇಳಿಕೆ ಏನೆಂದರೆ; ಅತ್ತಿ ಹಣ್ಣನ್ನು ಸವಿಯಲಿಕ್ಕಾಗಿಯೇ ದೇವರು ನಮಗೆ ಒಂದು ಕರುಳನ್ನು ಕೊಟ್ಟಿದ್ದಾನಂತೆ. ಅದನ್ನು ಶಮನ ಮಾಡಲು ನಾವು ಇದನ್ನು ಸೇವಿಸಲೇಬೇಕೆಂದು ಅವರ ಅಂಬೋಣ.
ದತ್ತಾತ್ರೇಯ ಸ್ವಾಮಿಯ ಮಹಿಮೆಯನ್ನು ಸಾರುವ ಗುರುಚರಿತ್ರೆಯಲ್ಲೂ ಅತ್ತಿ ಹಣ್ಣಿನ ಬಗ್ಗೆ ಪ್ರಸ್ತಾಪವಿದೆ. ಅದರ ಪ್ರಕಾರ ಇದನ್ನು ಔದುಂಬರ ವೃಕ್ಷವೆನ್ನುತ್ತಾರೆ ಮತ್ತು ಇದರ ಮೂಲದಲ್ಲಿ ಶಿವ, ಮಧ್ಯದಲ್ಲಿ ಬ್ರಹ್ಮ ಮತ್ತು ತುದಿಯಲ್ಲಿ ವಿಷ್ಣು ಇವರುಗಳು ವಾಸವಾಗಿರುತ್ತಾರೆ. ಆದ್ದರಿಂದ ದತ್ತಾತ್ರೇಯ ಸ್ವಾಮಿಯನ್ನು ಔದುಂಬರ ವಾಸಿಯೆಂದು ಕರೆಯುತ್ತಾರೆ. ಇದರ ಬಗ್ಗೆ ಇನ್ನೊಂದು ಕಥೆಯೂ ಅದರಲ್ಲಿ ಬರುತ್ತದೆ. ಅದರ ಪ್ರಕಾರ ಹಿರಣ್ಯ ಕಶಪುವಿನ ಕರುಳನ್ನು ಸೀಳಿದ ಉಗ್ರ ನರಸಿಂಹನ ಉಗುರುಗಳಿಗೆ ಸಹಿಸಲಸಾಧ್ಯವಾದ ಉರಿ ಉಂಟಾಯಿತಂತೆ. ಅದನ್ನು ಅತ್ತಿ ಹಣ್ಣಿನಲ್ಲಿ ಅದ್ದಿದ ಮೇಲೆ ಅದು ಶಮನವಾಯಿತಂತೆ. ಆದ್ದರಿಂದ ಇದು ಶ್ರೇಷ್ಠವಾದ ಫಲವೆನ್ನುತ್ತಾರೆ.
ಮೇಲಿನ ಜನಪದ ಹಾಗೂ ಪೌರಾಣಿಕ ಕಥೆಗಳ ಪ್ರಕಾರ ಇದರಲ್ಲಿ ಅಸಿಡಿಟಿ ಮತ್ತು ಕರುಳು ಬೇನೆಯನ್ನು ಶಮನ ಮಾಡುವ ಗುಣವುಂಟೆಂದು ತಿಳಿಯಬಹುದು. ಇದಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಮಾಹಿತಿ ಸಿಗಬಹುದು.
ಈ ಸುಂದರವಾದ ಚಿತ್ರವನ್ನು ಹಾಕಿದ ದೇವರು ಅವರಿಗೆ ಧನ್ಯವಾದಗಳು.
ಔದುಂಬರ ವೃಕ್ಷದ ಬಗ್ಗೆ ಸವಿಸ್ತಾರವಾಗಿ ಧಾರ್ಮಿಕ ಮತ್ತು ಅದರಲ್ಲಿಯ ಔಷಧಿಯ ಗುಣಗಳ ಬಗ್ಗೆ ಸವಿವರವಾಗಿ ಬರೆದಿದ್ದೀರಿ. ನನಗೆ ಬಾಲ್ಯದ ನೆನಪುಗಳು ಬಂದವು, ನನ್ನ ದೊಡ್ಡಮ್ಮ ದತ್ತಾತ್ರಯನನ್ನು ಆರಾಧಿಸುತ್ತಿದ್ದರು, ಕಾಕಡಾರತಿಗೆ ನಮ್ಮನ್ನು ಎಬ್ಬಿಸಿ ಕರೆದೊಯ್ಯುತ್ತಿದ್ದರು, ಅದರಿದಾಗಿ ಬೆಳಗಿನ ಅಪೂರ್ವ ದರ್ಶನ ನಮಗಾಗುತ್ತಿತ್ತು, ನಿಮ್ಮ ಪ್ರತಿಕ್ರಿಯೆ ಅವೆಲ್ಲವನ್ನು ನೆನಪಿಗೆ ತಂದವು. ನಾವು ಅತ್ತಿ ಹಣ್ಣುಗಳನ್ನು ಬಿಡಿಸಿ ಕುಸುಮವನ್ನು ಝಾಡಿಸಿದರೆ ಅದರಲ್ಲಿಯ ಹುಳುಗಳು ಹಾರಿ ಹೋಗುತ್ತಿದ್ದವು, ಹದವಾದ ಸಿಹಿಯನ್ನು ಹೊಂದಿದ ಅವು ರುಚಿಕರ ವಾಗಿರುತ್ತಿದ್ದವು, ಬಹಳ ಚೆನ್ನಾಗಿ ಪ್ರತಿಕ್ರಿಉಯಿಸಿದ್ದೀರಿ, ಧನ್ಯವಾದಗಳು.
ಪ್ರತಿಕ್ರಿಯೆಗಳು
ಉ: ಅತ್ತಿ
ದೇವರೇ..!!
ಅದು ಅತ್ತಿ ಹಣ್ಣಿನ ಗಿಡ-
ಅದು ಅತ್ಟಿ ಹಣ್ಣು ಅಲ್ಲವೇ?...
\|/
ಉ: ಅತ್ತಿ
ಇದಕ್ಕೆ ನಮ್ಮಲ್ಲಿ ಅತ್ತಿ ಹಣ್ಣು ಎಂದೇ ಕರೆಯುತ್ತಾರೆ. ದನಗಳು, ಮಂಗಗಳು, ಹಾರುಬೆಕ್ಕು ಇತ್ಯಾದಿ ಪ್ರಾಣಿಗಳು ಇದನ್ನು ತಿನ್ನುತ್ತವೆ. ಇದರ ಒಳಪದರಕ್ಕೆ ಪುಟ್ಟ ಬೀಜಗಳು ಅಂಟಿಕೊಂಡಂತೆ ಇರುತ್ತವೆ. ಇದು ನೋಡಲು ಅಂಜೂರದ ಹಣ್ಣಿನಂತೆ ಇರುತ್ತದೆ. ಇದರ ಕಾಂಡ ಗಳನ್ನು ಹೋಮಗಳಲ್ಲಿ ಸಮಿದವಾಗಿ ಬಳಸುತ್ತಾರೆ. ಇದರ ಬೇರನ್ನು ಸ್ವಲ್ಪ ಕಡಿದು ಅದರಡಿ ಪಾತ್ರೆಗಳನ್ನಿಟ್ಟು ಅದರಿಂದ ಸುರಿಯುವ ನೀರನ್ನು ಮಡಿ ಮಾಡುವ ದಿನಗಳಲ್ಲಿ ಅಕ್ಕಿಯಿಂದ ಮಾಡುವ ಪದಾರ್ಥಗಳ ತಯಾರಿಯಲ್ಲಿ ಉಪಯೋಗಿಸುತ್ತಾರೆ. ಹೊಟ್ಟು ಕೆಮ್ಮು ಆದಲ್ಲಿ ಇದರ ಕೆತ್ತೆ (ಚಕ್ಕೆ) ಯ ಕಷಾಯ ಮಾಡಿ ಹಾಲಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಇದು ಪವಿತ್ರ ಹಾಗೂ ಔಷಧೀಯ ಮರವಾಗಿ ಪರಗಣಿತ.
ಧನ್ಯವಾದಗಳು
ಉ: ಅತ್ತಿ
ಗುರುಗಳೇ ಇದರಲ್ಲಿ ಹುಳುಗಳು ಇರುತ್ತಲ್ವ?
ಉ: ಅತ್ತಿ
ಹೌದು ಹುಳ ಇರುತ್ತೆ ...ಆದರೆ ಸ್ಕೂಲ್ ಗೆ ಹೋಗುವಾಗ ನಾವುನು ಈ ಹಣ್ಣನ್ನ ತಿಂದಿದ್ದು ನೆನಪಿದೆ ,ಅದರ ಒಳಗೆ ಸ್ವಲ್ಪ ಹೂ ಥರ ಇರೋ ಭಾಗ ತೆಗಿದ್ರೆ ಹುಳಗಳು ಹೋಗುತ್ತೆ , ಉಶಾರಾಗಿ ತೆಗೆದು ತಿನ್ತಿದ್ವಿ ...
ಈ ಮರದ ಎಳೆಗಳನ್ನ ಶಾಂತಿ ಪೂಜೆಗಳಿಗೆ ಬಳಸ್ತಾರೆ ..ಎಲ್ಲ ಪಕ್ಷಿಗಳ ಪ್ರಿಯ ಸ್ತಳ ...
ಉ: ಅತ್ತಿ
ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಭಾಗದಲ್ಲಿ ಅತ್ತಿ ಹಣ್ಣನ್ನು ವರ್ಷಕ್ಕೊಂದು ಬಾರಿ ಕಡಾಖಂಡಿತವಾಗಿ ಸೇವಿಸಲೇಬೇಕು ಎನ್ನುವ ಅಲಿಖಿತ ನಿಯಮವಿದೆ. ಅದಕ್ಕೆ ಹಿರಿಯರು ಕೊಡುವ ಹೇಳಿಕೆ ಏನೆಂದರೆ; ಅತ್ತಿ ಹಣ್ಣನ್ನು ಸವಿಯಲಿಕ್ಕಾಗಿಯೇ ದೇವರು ನಮಗೆ ಒಂದು ಕರುಳನ್ನು ಕೊಟ್ಟಿದ್ದಾನಂತೆ. ಅದನ್ನು ಶಮನ ಮಾಡಲು ನಾವು ಇದನ್ನು ಸೇವಿಸಲೇಬೇಕೆಂದು ಅವರ ಅಂಬೋಣ.
ದತ್ತಾತ್ರೇಯ ಸ್ವಾಮಿಯ ಮಹಿಮೆಯನ್ನು ಸಾರುವ ಗುರುಚರಿತ್ರೆಯಲ್ಲೂ ಅತ್ತಿ ಹಣ್ಣಿನ ಬಗ್ಗೆ ಪ್ರಸ್ತಾಪವಿದೆ. ಅದರ ಪ್ರಕಾರ ಇದನ್ನು ಔದುಂಬರ ವೃಕ್ಷವೆನ್ನುತ್ತಾರೆ ಮತ್ತು ಇದರ ಮೂಲದಲ್ಲಿ ಶಿವ, ಮಧ್ಯದಲ್ಲಿ ಬ್ರಹ್ಮ ಮತ್ತು ತುದಿಯಲ್ಲಿ ವಿಷ್ಣು ಇವರುಗಳು ವಾಸವಾಗಿರುತ್ತಾರೆ. ಆದ್ದರಿಂದ ದತ್ತಾತ್ರೇಯ ಸ್ವಾಮಿಯನ್ನು ಔದುಂಬರ ವಾಸಿಯೆಂದು ಕರೆಯುತ್ತಾರೆ. ಇದರ ಬಗ್ಗೆ ಇನ್ನೊಂದು ಕಥೆಯೂ ಅದರಲ್ಲಿ ಬರುತ್ತದೆ. ಅದರ ಪ್ರಕಾರ ಹಿರಣ್ಯ ಕಶಪುವಿನ ಕರುಳನ್ನು ಸೀಳಿದ ಉಗ್ರ ನರಸಿಂಹನ ಉಗುರುಗಳಿಗೆ ಸಹಿಸಲಸಾಧ್ಯವಾದ ಉರಿ ಉಂಟಾಯಿತಂತೆ. ಅದನ್ನು ಅತ್ತಿ ಹಣ್ಣಿನಲ್ಲಿ ಅದ್ದಿದ ಮೇಲೆ ಅದು ಶಮನವಾಯಿತಂತೆ. ಆದ್ದರಿಂದ ಇದು ಶ್ರೇಷ್ಠವಾದ ಫಲವೆನ್ನುತ್ತಾರೆ.
ಮೇಲಿನ ಜನಪದ ಹಾಗೂ ಪೌರಾಣಿಕ ಕಥೆಗಳ ಪ್ರಕಾರ ಇದರಲ್ಲಿ ಅಸಿಡಿಟಿ ಮತ್ತು ಕರುಳು ಬೇನೆಯನ್ನು ಶಮನ ಮಾಡುವ ಗುಣವುಂಟೆಂದು ತಿಳಿಯಬಹುದು. ಇದಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಮಾಹಿತಿ ಸಿಗಬಹುದು.
ಈ ಸುಂದರವಾದ ಚಿತ್ರವನ್ನು ಹಾಕಿದ ದೇವರು ಅವರಿಗೆ ಧನ್ಯವಾದಗಳು.
ಉ: ಅತ್ತಿ
ಶ್ರೀದರ ಬಂಡ್ರಿ ಯವರೆ ವಂದನೆಗಳು