ಇಲ್ಲ ಸಾರ್...ಯಾವ ಎಡಿಟಿಂಗ್ ಇಲ್ಲ (ಆಗೆಲೆ ಪ್ರಮಾಣಿಸಿ ನೋಡ್ತಾ ಇದ್ದೀರ ) ...ಬೆಳಿಗ್ಗೆ ಸುಮಾರಿಗೆ ೬:೩೦ಕ್ಕೆ ತೆಗೆದಿದ್ದು ಸಿಂಗಾಪುರದಲ್ಲಿ. ಕ್ಯಾಮೆರ ಸೆಟ್ಟಿಂಗ್ಸ್ ಈ ರೀತಿ ಇತ್ತು.
Camera Model Name Canon PowerShot A700 Shooting Mode Landscape My Colors Mode Off Tv (Shutter Speed) 1/400 Av (Aperture Value) 4.8 Light Metering Evaluative Exposure Compensation 0 ISO Speed Auto Lens 5.8 - 34.8 mm Focal Length 34.8 mm Digital Zoom None Image Size 2816x2112 Image Quality Fine Flash Off White Balance Auto AF Mode Single AF Parameters Contrast Normal Sharpness Normal Saturation Normal Color Space sRGB File Size 942 KB Drive Mode Single-frame shooting
ಅದು ನಿಮ್ಮ presumptionಉ. ನಾನು ನನಗನ್ನಿಸಿದ್ದನ್ನು ಬರೆದೆನಷ್ಟೆ.
ಅಲ್ಲಿ ಸೂರ್ಯನ ಪ್ರಕಾಶಕ್ಕಂಟಿಕೊಂಡಿರುವುದು ಚಂದ್ರನೇ ಆಗಿದ್ದರೆ ಅಷ್ಟು ದೊಡ್ಡದಾಗಿ ಚಂದ್ರ ನಾ ಕಂಡದ್ದು ಚಂದ್ರಗ್ರಹಣದ ಸಮಯದಲ್ಲಿ ಮಾತ್ರ. ಇದು ಸಿಂಗಪುರದಲ್ಲಾದ್ದರಿಂದ ಅಲ್ಲಿ ಹೀಗೆ ಕಾಣಸಿಗುತ್ತದೇನೊ. ಚಿತ್ರ ಮಾತ್ರ ಒಂದು ರೇರ್ ಸೆಲೆಸ್ಟಿಯಲ್ ಘಟನೆಯ ಕ್ಯಾಪ್ಚರ್ ಇದ್ದ ಹಾಗಿದೆ. ಈ ರೀತಿಯ view ಅಪರೂಪವೋ ಅಲ್ವೊ ತಿಳಿದವರಿಗೆ ಕೇಳಿದರೆ ಗೊತ್ತಾಗುವುದು.
ಮೂಲದ್ರಾವಿಡವೆ೦ದರೆ protodravidian. ಅದು ತಮಿಳಲ್ಲ, ಅದಕ್ಕಿ೦ತಲೂ ಹಿ೦ದಿನದ್ದೆ೦ದು ಹೇಳುತ್ತಾರೆ. ತಮಿಳರ ಪ್ರಕಾರ protodravidian ಮತ್ತು ತಮಿಳು ಎರಡೂ ಒ೦ದೇ. ಅದಕ್ಕಾಗಿಯೇ ಅಲ್ಲವೇ ತಮಿಳು ಶಾಸ್ತ್ರೀಯ ನುಡಿಯೆ೦ದರೆ ನಾವು ಉರಿದುಕೊಳ್ಳುವುದು.
ಅಷ್ಟೇ ಅಲ್ಲ, ಮೇಲಿನ ಉದಾಹರಣೆ ನನಗೆ ಸಿಕ್ಕಿದ್ದು ಬಳ್ಳಕ್ಕೂರು ರಾಮಚ೦ದ್ರರಾಯರು ಸ೦ಪಾದಿಸಿದ "ಕನ್ನಡ ಭಾಷೆಯ ಇತಿಹಾಸ"ವೆ೦ಬ ಹೊತ್ತಗೆಯಿ೦ದ. ಅವರಿಗೂ ಮುಖ್ಯ ಆಧಾರವಾಗಿದ್ದುದು ಬರೋ ಮಹಾಶಯನು ಬರೆದಿರುವ ಗ್ರ೦ಥ. ಬರೋ ಮಹಾಶಯನು ಯಾರೆ೦ದು ನೀವು ಬಲ್ಲಿರಿ.
ಕನ್ನಡ protodravidian ಅಲ್ಲ. ಕನ್ನಡ ಭಾಷೆಯ ಇತಿಹಾಸ ಮತ್ತು ಬರೋ ಮಹಾಶಯನ ಹೊತ್ತಗೆಗಳಲ್ಲಿ ವಿವರಗಳಿವೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಇಲ್ಲಿ ವಿಷ್ಯ ಏನಪ್ಪಾ೦ತ೦ದ್ರೆ.......ಮೂಲದ ಞಾಯಿಱ್ ಕನ್ನಡದಲ್ಲಿ ನೇಸರ್/ನೇಸಱ್ ಆಗಿದೆ. ಮೂಲದ್ರಾವಿಡವೆ೦ದಾಗ ನನ್ನ ಮನಸ್ಸಿಗೆ ಬ೦ದುದು ಯಾವ ನುಡಿಯಿ೦ದ ಕನ್ನಡವು ಕವಲೊಡೆಯಿತೋ ಆ ನುಡಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಕಿರುನುಡಿಯೆ೦ಬ ಪ್ರಯೋಗ ಚೆನ್ನಾಗಿದೆ. )
ಪ => ಹ ಆಗಿರುವುದು.....ಬಹುಶ: ನಿಮಗೆ ಗೊತ್ತಿರಬಹುದು, ನಮ್ಮ ಊರಿನ ಕನ್ನಡದಲ್ಲಿ ಮಲೆಯಾಳದಿ೦ದ ಬ೦ದ ಎರವಲು ಒರೆಗಳು ಹಲವಾರಿವೆ. ಅದಕ್ಕೆ ಒ೦ದು ಉದಾಹರಣೆ 'ಹೊಟ್ಟು'. ಇದು ಮಲೆಯಾಳದ 'ಪೊಟ್ಟು'ವಿನಿ೦ದ ಬ೦ದಿದೆ. ಅದರ ಅರ್ಥ 'ಒಡೆಯು' ಅ೦ತ. ಅದೇ ಅರ್ಥದಲ್ಲಿ ಕನ್ನಡದಲ್ಲೂ ಬಳಸುತ್ತೇವೆ.
ಉಳಿದವುಗಳು ಮೇಲೆ ತಿಳಿಸಿದ೦ತೆ.
ಕನ್ನಡ ಮತ್ತು ತುಳು proto-south-dravidianಗೆ ಹತ್ತಿರವಾದ ನುಡಿಗಳೆಂಬುದರ ಬಗ್ಗೆ ನಿಮಗೆ ಆಧಾರಗಳೇನಾದರೂ ಸಿಕ್ಕಿದ್ದರೆ ತಿಳಿಸಿ.ಇದರ ಬಗ್ಗೆ ಬರೋ ಏನೆನ್ನುತ್ತಾನೆ...
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಇಲ್ಲ, ಇದು ಚಂದ್ರ ಆಗಿರಲು ಸಾಧ್ಯವಿಲ್ಲ. ಏನೋ ಒಂದು optical effect ಆಗಿರಬೇಕಷ್ಟೇ.
ಮೊದಲಿಗೆ, ಬೆಳಗ್ಗೆ ಸೂರ್ಯ ಹುಟ್ಟುವ ಸಮಯ, ಚಂದ್ರ ಅವನ ಬಳಿ ಕಂಡರೆ, ಅದು ಅಮಾವಾಸ್ಯೆಯ ದಿನ. ಅಲ್ಲವೇ? ಅಂದರೆ, ಚಂದ್ರನ ಆಕಡೆಯ (ಅಂದರೆ, ನಮಗೆ ಕಾಣದ) ಭಾಗದ ಮೇಲೆ ಸೂರ್ಯನ ಬೆಳಕು ಬೀಳುತ್ತಿರುತ್ತೆ. ಹಾಗಾಗಿ, ನಮ್ಮ ಕಡೆ ಇರುವ ಭಾಗ ಕಪ್ಪಗಿರಬೇಕು, ಅಂದರೆ, ಅದು ಕಾಣಲಾರದು.
ಪ್ರತಿಕ್ರಿಯೆಗಳು
Re: ನೇಸರನ ಉದಯವೇ ಅಥವ ಚಂದ್ರನ ಕಣ್ಮರೆಯೆ?
ಅರೆರೆ. ಎಷ್ಟು ಚೆನ್ನಾಗಿದೆಯಲ್ಲ! ಡಿಜಿಟಲ್ಲಾಗಿ ಏನಾದ್ರೂ ಎಡಿಟ್ ಮಾಡಿದ್ದೀರೋ ಹೇಗೆ?
Re: ನೇಸರನ ಉದಯವೇ ಅಥವ ಚಂದ್ರನ ಕಣ್ಮರೆಯೆ?
ಇಲ್ಲ ಸಾರ್...ಯಾವ ಎಡಿಟಿಂಗ್ ಇಲ್ಲ
(ಆಗೆಲೆ ಪ್ರಮಾಣಿಸಿ ನೋಡ್ತಾ ಇದ್ದೀರ
) ...ಬೆಳಿಗ್ಗೆ ಸುಮಾರಿಗೆ ೬:೩೦ಕ್ಕೆ ತೆಗೆದಿದ್ದು ಸಿಂಗಾಪುರದಲ್ಲಿ. ಕ್ಯಾಮೆರ ಸೆಟ್ಟಿಂಗ್ಸ್ ಈ ರೀತಿ ಇತ್ತು.
Camera Model Name Canon PowerShot A700
Shooting Mode Landscape
My Colors Mode Off
Tv (Shutter Speed) 1/400
Av (Aperture Value) 4.8
Light Metering Evaluative
Exposure Compensation 0
ISO Speed Auto
Lens 5.8 - 34.8 mm
Focal Length 34.8 mm
Digital Zoom None
Image Size 2816x2112
Image Quality Fine
Flash Off
White Balance Auto
AF Mode Single AF
Parameters Contrast Normal
Sharpness Normal
Saturation Normal
Color Space sRGB
File Size 942 KB
Drive Mode Single-frame shooting
ಉ: ನೇಸರನ ಉದಯವೇ ಅಥವ ಚಂದ್ರನ ಕಣ್ಮರೆಯೆ?
ಅದು ನಿಮ್ಮ presumptionಉ. ನಾನು ನನಗನ್ನಿಸಿದ್ದನ್ನು ಬರೆದೆನಷ್ಟೆ.
ಅಲ್ಲಿ ಸೂರ್ಯನ ಪ್ರಕಾಶಕ್ಕಂಟಿಕೊಂಡಿರುವುದು ಚಂದ್ರನೇ ಆಗಿದ್ದರೆ ಅಷ್ಟು ದೊಡ್ಡದಾಗಿ ಚಂದ್ರ ನಾ ಕಂಡದ್ದು ಚಂದ್ರಗ್ರಹಣದ ಸಮಯದಲ್ಲಿ ಮಾತ್ರ. ಇದು ಸಿಂಗಪುರದಲ್ಲಾದ್ದರಿಂದ ಅಲ್ಲಿ ಹೀಗೆ ಕಾಣಸಿಗುತ್ತದೇನೊ. ಚಿತ್ರ ಮಾತ್ರ ಒಂದು ರೇರ್ ಸೆಲೆಸ್ಟಿಯಲ್ ಘಟನೆಯ ಕ್ಯಾಪ್ಚರ್ ಇದ್ದ ಹಾಗಿದೆ. ಈ ರೀತಿಯ view ಅಪರೂಪವೋ ಅಲ್ವೊ ತಿಳಿದವರಿಗೆ ಕೇಳಿದರೆ ಗೊತ್ತಾಗುವುದು.
Re: ಉ: ನೇಸರನ ಉದಯವೇ ಅಥವ ಚಂದ್ರನ ಕಣ್ಮರೆಯೆ?
ಒಳ್ಳೇದು ಸಾರ್. ನನಗೂ ಅವನು ಚಂದ್ರನೇ ಅಂತ ಸರಿಯಾಗಿ ಗೊತ್ತಿಲ್ಲ ...ಅದಕ್ಕೆ ? ಹಾಕ್ಕಿದ್ದೆ ತಲೆಬರಹದಲ್ಲಿ...
ತಮ್ಮ ಸವಿನುಡಿಗಳಿಗೆ ನನ್ನಿ!
ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
ವೈಬವ..
ನೀವು ಸೆರೆವಿಡಿದ ಪಾಪೆ ಬೊಂಬಾಟ್...
ಚೆನ್ನಾಗಿದೆ!
======================================
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
ನೇಸರ ಸರಿಯಾದ ಪ್ರಯೋಗವಲ್ಲ. ನೇಸರ್/ನೇಸಱ್. ಮೂಲದ್ರಾವಿಡದಲ್ಲಿ 'ಞಾಯಿಱ್'.
so, ನೇಸರನ ಎನ್ನುವ ಬದಲು ನೇಸರಿನ ಎನ್ನಬಹುದು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
ಬೊಳುಂಬು
ನೇಸರನ ಯಾಕೆ ಸರಿ ಅಂದ್ರೆ, ಕಬ್ಬಿಗರು ಉಸಿರಿಲ್ಲದ ಜೀವವಿಲ್ಲದವನ್ನು ಮನುಷ್ಯರಂತೆ ಕರೆಯುವುದುಂಟು...
ಇಲ್ಲಿ ನೇಸರನ ಅಂದ್ರೆ ನೇಸರ ಎಂಬ ಗಂಡಸಿನ..
ನೇಸರದ ಎಂಬುದು ಸರಿ..
ನೇಸರಿನ ಎಂಬುದೂ ಸರಿ...
ಆದರೆ ಇಲ್ಲಿ ನೇಸರನು ಮತ್ತು ಚಂದಿರನು ಎಂದು ನೇಸರ ಮತ್ತು ತಿಂಗಳು ಇವನ್ನು ಮನುಷ್ಯರಂತೆ ಕರೆದುದು, ಕವಿಶೈಲಿ.
ನಿಮ್ಮ ವಿಚಾರವೂ ಸರಿ... ಆದ್ರೆ ಈ ಕವಿಸಮಯಕ್ಕೆ ಕವಿಶೈಲಿ ಒಪ್ಪುವುದು.
ದ್ರಾವಿಡಬೇರು ತಿಳಿಸಿದ್ದಕ್ಕೆ ನನ್ನಿ!!
ಆದ್ರೆ ಕನ್ನಡದಲ್ಲಿ ಞ,ಙ ಗಳಿಂದ ಒರೆಗಳು ಮುದಲಾಗವು.. ಅಲ್ವಾ?
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
ಹೌದು, ಮೂಲದ್ರಾವಿಡದ ಒರೆಯ ಮೊದಲಿಗೆ ಬರುವ ಞಕಾರ ಕನ್ನಡದಲ್ಲಿ ನಕಾರವಾಗುತ್ತದೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
"ಮೂಲದ್ರಾವಿಡದ ಒರೆಯ ಮೊದಲಿಗೆ ಬರುವ ಞಕಾರ ಕನ್ನಡದಲ್ಲಿ ನಕಾರವಾಗುತ್ತದೆ."
ಇಲ್ಲಿ ಮೂಲದ್ರಾವಿಡ ಅಂದ್ರೇ ಯಾವುದು..
ಬೊಳುಂಬು ಸಿಟ್ಟು ಮಾಡಿಕೊಬೇಡ್ರಿ...ರೀ
ದ್ರಾವಿಡನುಡಿಕೂಟದಾಗೆ ಮೂರು ಕವಲುಗಳು ತೆಂಕಣ, ನಡು, ಮತ್ತು ಬಡಗಣ.
ನಾವು ಕನ್ನಡ+ತಮಿಳು.. ತೆಂಕಣ ಕವಲಿನವರು. ತೆಲುಗು ನಡು, Brahui(ಬ್ರಾಹಿಯಿ?) ಇದು ಬಡಗಣ..
ನೀವು ಹೇಳುವ ಮೂಲದ್ರಾವಿಡ ಯಾವುದು? ಮತ್ತು ಅದು ಹೇಗೆ ತಿಳಿಯಿತು?
ಕನ್ನಡ ಮತ್ತು ತುಳು ಇವೇ ತೆಂಕುಮೂಲದ್ರಾವಿಡ(proto-south-dravidian)ಗೆ ಹತ್ತಿರವಾದ ನುಡಿಗಳೆಂದು ದೊಡ್ಡ ವಾದ ಐತೆ. ಸಂಗನಗೌಡರು ಈ ಬಗ್ಗೆ ಎಲ್ಲೋ ಬರೆದಿದ್ದಾರೆ.
ಇಲ್ಲಿ ತುಸು ಗೊಂದಲ..! ದಯವಿಟ್ಟು ಬಿಡಿಸಿರಿ
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
ಮೂಲದ್ರಾವಿಡವೆ೦ದರೆ protodravidian. ಅದು ತಮಿಳಲ್ಲ, ಅದಕ್ಕಿ೦ತಲೂ ಹಿ೦ದಿನದ್ದೆ೦ದು ಹೇಳುತ್ತಾರೆ. ತಮಿಳರ ಪ್ರಕಾರ protodravidian ಮತ್ತು ತಮಿಳು ಎರಡೂ ಒ೦ದೇ. ಅದಕ್ಕಾಗಿಯೇ ಅಲ್ಲವೇ ತಮಿಳು ಶಾಸ್ತ್ರೀಯ ನುಡಿಯೆ೦ದರೆ ನಾವು ಉರಿದುಕೊಳ್ಳುವುದು.
ಅಷ್ಟೇ ಅಲ್ಲ, ಮೇಲಿನ ಉದಾಹರಣೆ ನನಗೆ ಸಿಕ್ಕಿದ್ದು ಬಳ್ಳಕ್ಕೂರು ರಾಮಚ೦ದ್ರರಾಯರು ಸ೦ಪಾದಿಸಿದ "ಕನ್ನಡ ಭಾಷೆಯ ಇತಿಹಾಸ"ವೆ೦ಬ ಹೊತ್ತಗೆಯಿ೦ದ. ಅವರಿಗೂ ಮುಖ್ಯ ಆಧಾರವಾಗಿದ್ದುದು ಬರೋ ಮಹಾಶಯನು ಬರೆದಿರುವ ಗ್ರ೦ಥ. ಬರೋ ಮಹಾಶಯನು ಯಾರೆ೦ದು ನೀವು ಬಲ್ಲಿರಿ.
ಕನ್ನಡ protodravidian ಅಲ್ಲ. ಕನ್ನಡ ಭಾಷೆಯ ಇತಿಹಾಸ ಮತ್ತು ಬರೋ ಮಹಾಶಯನ ಹೊತ್ತಗೆಗಳಲ್ಲಿ ವಿವರಗಳಿವೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
ಬೊಳುಂಬು,,
ತುಸು ನಿಧಾನ..
proto-dravidian.. ಬಲು ದೂರ ಆಯ್ತು.
ದಯವಿಟ್ಟು ತುಸು ನಿಧಾನವಾಗಿ ಓದ್ರಿ....
ಕನ್ನಡ ಮತ್ತು ತಮಿಳು proto-south-dravidian ಯಿಂದ ಕವಲಾದವು... ಇನ್ನು proto-dravidian, proto-south-dravidianಗೆ ತಾಯಿ.. ಇ
ಕನ್ನಡ ಮತ್ತು ತುಳು proto-south-dravidianಗೆ ಹತ್ತಿರ ಅಂತ ಹೇಳಿದ್ದೀನಿ.. ಕನ್ನಡವೇ proto-dravidian ಅಲ್ಲ... ಕನ್ನಡವು ತೆಂಕಣದ್ರಾವಿಡದಲ್ಲಿ ಬಲು ಬೇರೆಯಾದ ಕವಲು...
ಕನ್ನಡ + ಅದರ ಕಿರುನುಡಿಗಳು ಬಲು ಬೇರೆ ಬಗೆ.. ಇವುಗಳಲ್ಲಿ ಮುಖ್ಯವಾಗಿ ಪ => ಹ ಆಗಿರುವುದು, ಕಾಣುವುದು ಅಲ್ವಾ?
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
ಇಲ್ಲಿ ವಿಷ್ಯ ಏನಪ್ಪಾ೦ತ೦ದ್ರೆ.......ಮೂಲದ ಞಾಯಿಱ್ ಕನ್ನಡದಲ್ಲಿ ನೇಸರ್/ನೇಸಱ್ ಆಗಿದೆ. ಮೂಲದ್ರಾವಿಡವೆ೦ದಾಗ ನನ್ನ ಮನಸ್ಸಿಗೆ ಬ೦ದುದು ಯಾವ ನುಡಿಯಿ೦ದ ಕನ್ನಡವು ಕವಲೊಡೆಯಿತೋ ಆ ನುಡಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
ಕಿರುನುಡಿಯೆ೦ಬ ಪ್ರಯೋಗ ಚೆನ್ನಾಗಿದೆ. )
ಪ => ಹ ಆಗಿರುವುದು.....ಬಹುಶ: ನಿಮಗೆ ಗೊತ್ತಿರಬಹುದು, ನಮ್ಮ ಊರಿನ ಕನ್ನಡದಲ್ಲಿ ಮಲೆಯಾಳದಿ೦ದ ಬ೦ದ ಎರವಲು ಒರೆಗಳು ಹಲವಾರಿವೆ. ಅದಕ್ಕೆ ಒ೦ದು ಉದಾಹರಣೆ 'ಹೊಟ್ಟು'. ಇದು ಮಲೆಯಾಳದ 'ಪೊಟ್ಟು'ವಿನಿ೦ದ ಬ೦ದಿದೆ. ಅದರ ಅರ್ಥ 'ಒಡೆಯು' ಅ೦ತ. ಅದೇ ಅರ್ಥದಲ್ಲಿ ಕನ್ನಡದಲ್ಲೂ ಬಳಸುತ್ತೇವೆ.
ಉಳಿದವುಗಳು ಮೇಲೆ ತಿಳಿಸಿದ೦ತೆ.
ಕನ್ನಡ ಮತ್ತು ತುಳು proto-south-dravidianಗೆ ಹತ್ತಿರವಾದ ನುಡಿಗಳೆಂಬುದರ ಬಗ್ಗೆ ನಿಮಗೆ ಆಧಾರಗಳೇನಾದರೂ ಸಿಕ್ಕಿದ್ದರೆ ತಿಳಿಸಿ.ಇದರ ಬಗ್ಗೆ ಬರೋ ಏನೆನ್ನುತ್ತಾನೆ...
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಮೂಡುವ ನೇಸರನೋ, ಮರೆಸರಿಯುವ ಚಂದಿರನೋ!!
. ಇದು ಮಲೆಯಾಳದ 'ಪೊಟ್ಟು'ವಿನಿ೦ದ ಬ೦ದಿದೆ
ಹಾಗೇ ಹೇಳಲಾಗದು..
ಹಳೆಗನ್ನದಲ್ಲಿ ಪೊಟ್ಟೇ ಇರ್ತದೆ, ಪ=>ಹ ಹೆಚ್ಚಾದುದು ನಡುಗನ್ನಡದಲ್ಲಿ ಅಲ್ವಾ?

-ಹಂಸಾನಂದಿ