21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಥಟ್ಟಂತ ಹೇಳಿ !

June 26, 2012 - 4:52pm
venkatesh

ಈ ನಾಚ್ಗೆ ಪಕ್ಷಿಗಳ್ನ ಚಿತ್ರ ತೆಗೆಯಕ್ಕೆ ಕಾದ್ ಕಾದ್ ಬೇಜಾರಾಗತ್ತೆ !  ಓಳ್ಳೇ ಪಾರ್ಟಿ ಈ ಅಜ್ಜಂಗೆ ಕೆಲ್ಸಾ ಇಲ್ಲ ಏನೇನೋ ಬರೀತಾರೆ ಅಂತೀರಾ ಅನ್ನಿ ಪರ್ವಾಗಿಲ್ಲ. ಮೊದ್ಲ್ನೇದಾಗಿ ಈಗ ಕಾಣೆಯಾಗುತ್ತಿರುವ ಪಕ್ಷಿ; ಕೆನಡಾದಲ್ಲಿ ನಮ್ಮ ಮುಂದೇ ಪ್ರತ್ಯಕ್ಷಆದಾಗ ಏನ್ಮಾಡೋದ್ ಹೇಳಿ ?

ಪ್ರತಿಕ್ರಿಯೆಗಳು

Submitted by swara kamath on

ವೆಂಕಟೇಶ್ ಅವರೆ,
ನಿಮ್ಮೊಂದಿಗೆ ನಾನು ಸಹ ಇದ್ದೇನೆ.ನಾನು ಸಹ ತಮ್ಮಂತೆ ಆಗಾಗ ಮೊಬೈಲ್ನಲ್ಲಿ ಚಿತ್ರ ಗಳನ್ನು ತೆಗದು ಈ ಪುಟದಲ್ಲಿ ಹಾಕುತ್ತಿರುತ್ತೇನೆ. ವಂಟಿ ಗುಬ್ಬಿಯ ದರ್ಶನ ತಮಗೆ ಕೆನಡಾದಲ್ಲಿ ಆಗಿದೆ. ನಿಮ್ಮ ಮುಂದಿನ ಚಿತ್ರದಲ್ಲಿ ಗುಬ್ಬಿಗಳ ಗುಂಪನ್ನು ನೋಡುವ ಅಪೇಕ್ಷೆ.
ವಂದನೆಗಳು

Submitted by venkatesh on

ರಮೇಶ್ ಕಾಮತ್ತರೆ,

ಇನ್ನೊಂದು ಗುಬ್ಬಿ ಚಿತ್ರ ತೆಗೆಯೋ ಅವಕಾಶ ದೊರೆತಿದ್ದು ಎಲ್ಲಿ ಗೊತ್ತೇನು ? ನಾವು 'ನಯಾಗರ ಫಾಲ್ಸ್ 'ನ, 'ಮೇಡ್ ಆಫ್ ದ ಮಿಸ್ಟ್' ನೋಡಿದ್ದಾದ್ ಮೇಲೆ ಲಿಫ್ಟ್ ನಿಂದ ಹೊರಗೆ ಬರ್ತಿದ್ವಿ. ಆಗ ಅಲ್ಲಿ ೪-೫ ಜನ ಯುರೋಪಿಯನ್ನರು ಕ್ಯಾಮರಾ ಫೋಕಸ್ ಮಾಡ್ಕೊಂಡು ಕಾಯ್ತಿದ್ರು ! ನೋಡಿದ್ರೆ ಅವ್ರು ನನ್ನ ಸ್ನೇಹಿತರು. ವೊಂದ್ ಗುಬ್ಬಿ ಪುಟುಕ್ ಪುಟುಕ್ ಅಂತ ಕುಪ್ಪಳಿಸಿಕೊಂಡು ಕೈಗೆ ಸಿಕ್ಕದೆ ತರಲೆ ಹೊಡಿತಿತ್ತು.ನಾನೂ ಅವರ ಬದಿಯಲ್ಲಿ ನಿಂತು ಕಾದು ಚಿತ್ರ ತೆಗೆದೆ !

Submitted by partha1059 on

ವೆಂಕಟೇಶರೆ
ಗುಬ್ಬಿಗಳನ್ನು ಬೆಂಗಳೂರಿನ ನಮ್ಮ ಮನೆಯ ಹತ್ತಿರ ನೋಡಿದೆ , ಆದರೆ ಚಿತ್ರ ತೆಗೆಯಲು ಅವಕಾಶವಾಗಲಿಲ್ಲ.
ಅಲ್ಲದೆ ನಮ್ಮ ಮನೆಯ ನಂಜಬಟ್ಟಲ ಗಿಡಕ್ಕೆ ಮತ್ತೊಂದು ಪಕ್ಷಿ ಬರುತ್ತೆ, ಎಷ್ಟಿ ಚಿಕ್ಕದು ಅಂದ್ರೆ ಗುಬ್ಬಿಯ ಆಕಾರದದಲ್ಲಿ ಕಾಲು ಬಾಗವು ಇಲ್ಲ ಅಂತ ಚಿಕ್ಕದು ಆದರೆ ಹತ್ತಿರ ಹೋಗುವಷ್ಟಿಲ್ಲ ಪುರ್ ರ್ ರ್ ಅಂತ ಹಾರಿಬಿಡುತ್ತೆ ಕಣ್ಣಿಗೆ ಕಾಣದ ವೇಗದಲ್ಲಿ ಅದರ ಹೆಸರು ತಿಳಿಯದು.

*ಪಾರ್ಥಸಾರಥಿ

Submitted by venkatesh on

ಪಾರ್ಥಸಾರಥಿಯವರೇ,

ನೀವು ಪ್ರಯತ್ನಿಸುತ್ತಿರುವುದು 'ಹಮ್ಮಿಂಗ್ ಬರ್ಡ್' ಇರಬಹುದು. ಅತಿ ಚಿಕ್ಕದು ಅಂತಿರಿ. ಗುಬ್ಬಿ ಸ್ವಲ್ಪ ಕಷ್ಟವೇ ! ಕ್ಲಿಕ್ಕಿಸ್ತಾ ಹೋಗಿ ಎಲ್ಲೋ ನಿಮಗೆ ಯಶಸ್ಸು ಸಿಗತ್ತೆ !

Submitted by swara kamath on

ಪಾರ್ಥಸಾರಥಿ ಅವರೆ,
ತಮ್ಮ ಪ್ರತಿಕ್ರಿಯೆ ಓದಿದಾಗ ನನಗೆ ನಮ್ಮ ಮನೆಯ ರತ್ನಗಂಧಿ ಹೂವಿನ ಗಿಡದಲ್ಲಿ ಅತ್ತಿಂದ್ದಿತ್ತಾ ಸದಾ ಹಾರಾಡಿ ಸಣ್ಣ ಸಣ್ಣ ಕೀಟಗಳನ್ನು ಹೆರಕುವ ಪಕ್ಷಿಯ ನೆನಪಾಯಿತು. ಈ ಪಕ್ಷಿಯು ಸಹ ಅತಿ ಪುಟ್ಟದಾಗಿದೆ.ಇದರ ಕೊಕ್ಕು ಸುಮಾರು ಎರಡು ಇಂಚಿನಷ್ಟು ಉದ್ದವಿದ್ದು ಬಾಗಿದ ಆಕಾರದಲ್ಲಿದೆ. ತಲೆಯಿಂದ ರೆಕ್ಕೆಗಳವರೆಗೆ ತಿಳಿ ನೀಲಿ ಬಣ್ಣ ಹೊಂದಿದೆ. ಸುಧಾ ಪತ್ರಿಕೆ ಅಥವಾ ಸಾಪ್ತಾಹಿಕ ದಲ್ಲಿ ನಾನು ಇತ್ತೀಚೆಗೆ ಈ ಪಕ್ಷಿಯ ಹೇಸರು ಬೀ ಈಟರ್ ಎಂದು ಓದಿದ ನೆನಪು.
ವಂದನೆಗಳು