June 28, 2012 - 12:16pm
ಬಂಡಾರಬಡ್ಚಿಗೆ ಹುಳು ಮಲೆನಾಡು ಪ್ರದೇಶದಲ್ಲಿ ಈ ದಿನಗಳಲ್ಲಿ ಕಂಡುಬರುತ್ತದೆ. ಮರ-ಗಿಡ- ಪೊದೆಗಳಲ್ಲಿ ಮುಷ್ಠಿಗಾತ್ರದ ಗೂಡಿನಿಂದ ಪ್ರಾರಂಭವಾಗಿ ನೀರಿನ ದೊಡ್ಡ ಹಂಡೆಯ ಪ್ರಮಾಣದಲ್ಲಿ ಗೂಡುಗಳು ಇರುತ್ತವೆ. ಇದರ ಗೂಡಿಗೆ ಅಥವಾ ಯಾವುದಾದರೂ ಹುಳುವಿಗೆ ಸ್ವಲ್ಪ ಏನಾದರೂ ತಾಗಿದರೆ ಅಲ್ಲಿ ಓಡಾಡುವವರ ಗತಿ ಯಾರಿಗೂ ಹೇಳುವುದೇ ಬೇಡ. ಸಾಂಘಿಕ ಬದುಕು ಮಾಡುವ ಇವು ಎಲ್ಲವೂ ಒಟ್ಟಿಗೆ ಸೇರಿ ಸಿಕ್ಕ ಸಿಕ್ಕ ದನಕರುಗಳು, ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಮಾರಣಾಂತಿಕ ಹಲ್ಲೆ ನಡೆಸುತ್ತವೆ. ಇವುಗಳ ಗೂಡು ಮನುಷ್ಯ/ ಮಂಗಗಳ ಲದ್ದಿಗಳಿಂದ ತಯಾರಿಸಲ್ಪಡುತ್ತವಂತೆ. ಹಾಗೆ ಈ ಚಿತ್ರದಲ್ಲಿರುವ ಹುಳುಗಳು ಮಂಗಗಳ ಲದ್ದಿಯನ್ನು ಸುತ್ತುವರಿದಿರುವುದನ್ನು ನೋಡಬಹುದು.




