ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚಿತ್ರ ಪುಟಗಳು › misc (Uncategorized) pictures

ಡಾ. ಜೀ. ವಿ. ಲೋಗನಾಥನ್ ಮತ್ತು ಮಿನಾಲ್ ಪಾಂಚಾಲ್ ರವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿಗಳು !

April 18, 2007 - 10:41am — venkatesh
ಡಾ. ಜೀ. ವಿ. ಲೋಗನಾಥನ್ ಮತ್ತು ಮಿನಾಲ್ ಪಾಂಚಾಲ್  ರವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿಗಳು !

ಅಮೆರಿಕದ ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದಲ್ಲಿ ಪ್ರೊ. ಲೋಗನಾಥನ್ ಅಲ್ಲದೆ, ಒಟ್ಟು ೩೦ ಜನರ ಬರ್ಬರ ಹತ್ಯೆ !

ಪ್ರೊ. ಜಿ. ವಿ. ಲೋಗನಾಥನ್ ಅಮೆರಿಕದ ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದ ಸಿವಿಲ್ ಮತ್ತು ಎನ್ವಿರ್ನ್ಮೆಂಟಲ್ ಇಂಜಿನೀರಿಂಗ್ ಶಾಖೆಯಲ್ಲಿ ಸುಮಾರು ೧೫ ವರ್ಷಗಳಿಂದ ಪ್ರೊಫೆಸರ್ ಆಗಿ ಸೇವೆಸಲ್ಲಿಸುತ್ತಿದ್ದರು. ಗನ್ ಮ್ಯಾನ್, ಚೊ. ಸ್ಯೂಂಗ್- ಹುಯ್ ಅವರನ್ನು ಗುಂಡಿಕ್ಕಿ ಕೊಂದಾಗ ಅವರು ತಮ್ಮ ತರಗತಿಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ದಕ್ಷಿಣ ಕೊರಿಯಾ ದೇಶದ ಚೊ, ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಮೆಜರ್ ತೆಗೆದುಕೊಂದು ಅಬ್ಯಾಸಮಾಡುತ್ತಿದ್ದನಂತೆ.

ಈ ಅನಿರೀಕ್ಷಿತ ಘಟನೆ, ಸೋಮವಾರ ಬೆಳಿಗ್ಯೆ ೭-೧೫ ಕ್ಕೆ ನಡೆಯಿತು. ಇವರಲ್ಲದೆ, ಒಟ್ಟು ೩೦ ಜನ ಬಲಿಯಾಗಿರುವ ಸಂಗತಿ ವರದಿಯಾಗಿದೆ. ಕೊನೆಗೆ ಅವನೂ ತನ್ನ ತಲೆಗೆ ಗುಂಡು ಹೊಡೆದುಕೊಂಡು ಮರಣಹೊಂದಿದ್ದಾನೆ. ಮೊದಲು ಅವನು ತನ್ನ ಗರ್ಲ್ ಫ್ರೆಂಡ್ ಜೊತೆ ಬಿರುಸಿನ ಧ್ವನಿಯಲ್ಲಿ ಮಾತಾಡಿ, ನಂತರ ಗುಂಡಿನ ಮಳೆಗರೆದನು. ಕೆಲವರ ಹೇಳಿಕೆಯ ಪ್ರಕಾರ, ಅವನಿಗೆ ಪ್ರೊಫೆಸರ್ ಮೇಲೂ ಕೋಪವಿತ್ತಂತೆ. ಏನೇ ಇರಲಿ, ಹೀಗೆ ಗನ್ ಹಿಡಿದು ಕಾಲೇಜಿನ ಆಂಗಣದಲ್ಲಿ ಸುತ್ತಾಡುವುದು. ಮತ್ತೆ ಮನಸ್ಸಿಗೆ ಘಾಸಿಯಾದಾಗ ಗನ್ನಿಗೆ ಶರಣಾಗುವ ಸಂಸ್ಕೃತಿ ಹಿತವಾದದ್ದಲ್ಲ.

ಪರಿವಾರದ ಸದಸ್ಯರಲ್ಲಿ ಹಿತಕರವಾದ ಸಂಬಂಧಗಳಿಲ್ಲದಿರುವುದು, ಪ್ರೀತಿ ಪ್ರೇಮಗಳಲ್ಲಿ ಭ್ರಮ ನಿರಸನ, ಮತ್ತೆ ಹಣ, ಅದರೊಡನೆ ಬೆರೆತ ಸ್ವಚ್ಛಂದ ಪ್ರವೃತ್ತಿ, ಇದಕ್ಕೆ ಕಾರಣಗಳು ಎಂದು ಬೇರೆ ಹೇಳಬೇಕಾಗಿಲ್ಲ.

೫೧ ವರ್ಷದ ಹರೆಯದ, ಶ್ರೀ ಲೋಗನಾಥನ್ ರವರಿಗೆ, ಇಬ್ಬರು ಹೆಣ್ಣು ಮಕ್ಕಳು ಮತ್ತು ಹೆಂಡತಿ ಇದ್ದಾರೆ. ಈತ ತಮಿಳುನಾಡಿನ ಈರೋಡ್ ಜಿಲ್ಲೆಯ, ಗೊಬಿಚೆಟ್ಟಿ ಪಾಲಯಮ್ ನ ವಾಸಿ. ಪ್ರೊ. ಜೀ. ವಿ. ಲೋಗನಾಥನ್, ಅಮೆರಿಕಾದ ವರ್ಜೀನಿಯ ವಿಶ್ವವಿದ್ಯಾಲಯಕ್ಕೆ ಪಾದಾರ್ಪಣೆ ಮಾಡುವ ಮುಂಚೆ, ತಮ್ಮ ಬೀ. ಇ. ವಿದ್ಯಾಭ್ಯಾಸವನ್ನು, ತಮಿಳ್ನಾಡಿನಲ್ಲಿ ಮುಗಿಸಿ, ಐ. ಐ. ಟಿ. ಕಾನ್ಪುರದಲ್ಲಿ, ಎಮ್. ಟೆಕ್ ಮಾಡಿ ಮುಂದೆ, ಅಮೆರಿಕಾದ ಪರ್ಡ್ಯು ವಿಶ್ವವಿದ್ಯಾಲಯದಲ್ಲಿ ಪೀ. ಎಚ್ ಡಿ ಪಡೆದಿದ್ದರು.

ಈ ಬರ್ಬರ ಹತ್ಯೆಯ ಸಮಯದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿನಿ, ಮಿನಲ್ ಪಾಂಚಾಲ್ , ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಜಾ ಸಮಾಚಾರ :

ಈಗ ನೆಟ್ ನಲ್ಲಿ ಬಂದಿರುವ ಸಮಾಚಾರದ ಪ್ರಕಾರ, ಮಿನಾಲ್ ಸಾವನ್ನು ಅಪ್ಪಿರುವುದು ಬಹಳ ಬೇಸರದ ಸಂಗತಿ. ೨೬ ವರ್ಷದ ಮಿನಾಲ್, ಮುಂಬೈ ನ ’ರಿಝ್ವಿ” ಕಾಲೇಜಿನಿಂದ ೧೯೯೮ ರಲ್ಲಿ ತನ್ನ ಗ್ರಾಜುಯೇಷನ್ ಮುಗಿಸಿ, ಬಿಲ್ಡಿಂಗ್ ಸೈನ್ಸ್ ಶಾಖೆಯಲ್ಲಿ ಮಾಸ್ಟರ್ಸ್ ಡಿಗ್ರಿಗೆ, ವರ್ಜೀನಿಯ ಟೆಕ್ನಿಕಲ್ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಳು. ಗುಂಡಿನ ಚಕ-ಮಕಿಯಾದ ಸಮಯದಲ್ಲಿ ಅವಳು, ವಿಶ್ವವಿದ್ಯಾಲಯದ "ನಾರಿಸ್ ಹಾಲ್ " ನಲ್ಲಿದ್ದಳು. ಮಂಗಳವಾರ ಮಧ್ಯರಾತ್ರಿ ಬಂದ ವರದಿಗಳ ಪ್ರಕಾರ ಅವಳು ಮೃತಳಾಗಿರುವುದು ಖಾತ್ರಿಯಾಯಿತು.

ನಮ್ಮ ಸಮಸ್ತ ಸಂಪದದ ಪರಿವಾರದವರ ಪರವಾಗಿ ನಾವೆಲ್ಲಾ , ಈ ಬರ್ಬರ ಘಟನೆಯಿಂದ ಬಹಳ ನೊಂದಿದ್ದೇವೆ ಎಂದು ತಿಳಿಸಲು ಇಚ್ಛಿಸುತ್ತೇವೆ. ಶ್ರೀ ಲೋಗನಾಥನ್, ಮಿನಾಲ್ ಪಾಂಚಾಲ್ ಮತ್ತು ಈ ಘಟನೆಯಲ್ಲಿ ಮಡಿದ ಸಮಸ್ತರಿಗೂ ನಮ್ಮ ಸಂತಾಪಗಳು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಮೊರೆಯಿಡುತ್ತೇವೆ.

  • misc (Uncategorized) pictures
~.~
  • Login or register to post comments
  • 614 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 18, 2007 - 10:52am — ಶ್ರೀನಿಧಿ

Re: ಡಾ. ಜೀ. ವಿ. ಲೋಗನಾಥನ್ ರವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿಗಳು !

ಶ್ರೀನಿಧಿ's picture

ಲೋಗನಾಥನ್ ಮತ್ತು ಮೃತರಿಗೆಲ್ಲ ನನ್ನ ಶ್ರದ್ಧಾಂಜಲಿಗಳು.

ವೆಂಕಟೇಶ್ ಅವರೆ ಒಂದು ತಿದ್ದುಪಡಿ,

ಅದು ಇಲಿನಾಯ್ ವಿಶ್ವವಿದ್ಯಾಲಯ ಅಲ್ಲ. "ವರ್ಜೀನಿಯ ಟೆಕ್".

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2007 - 12:52pm — venkatesh

Re: ಡಾ. ಜೀ. ವಿ. ಲೋಗನಾಥನ್ ರವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿಗಳು !

venkatesh's picture

ಥ್ಯಾಂಕ್ಸ್. ಸರಿಪಡಿಸಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2007 - 6:28pm — muralihr

Re: ಡಾ. ಜೀ. ವಿ. ಲೋಗನಾಥನ್ ರವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿಗಳು !

muralihr's picture

ನಮ್ಮ (PES) ಕಾಲೇಜ್ ವಿದ್ಯಾರ್ಥಿಗಳು ಕೆಲವೊಮ್ಮೆ ಹೀಗೆ ಮಾತಾಡುವುದು೦ಟು.
ಒಮ್ಮೆ ಬಾ೦ಬ್ ಇದೆ ಎ೦ಬ ಸುದ್ದಿ ಬ೦ತು . ಕಾಲೇಜ್ಗೆ ರಜೆ ಘೋಷಿಸಲಾಯಿತು.
ವಿದ್ಯಾರ್ಥಿಗಳ ಪ್ರತಿಕ್ರಿಯೆ "ಹಾಳಾಗಿ ಹೋಗಲಿ ಈ ಕಾಲೇಜು . ಸುಟ್ಟು ಭಸ್ಮ ವಾಗಲಿ".
ಈ ರೀತಿ ಆಗಿರುವುದಕ್ಕೆ ಕಾರಣ ವಿದ್ಯಾ ಸ೦ಸ್ಥೆಗಳು ಕೇವಲ್ ದುಡ್ಡೂ ಮಾಡಿಕೊಳ್ಳುವ
ಹೊ೦ಚು ಹಾಕುತ್ತಾ ಇರುತ್ತವೆ ಹೊರತು ವಿದ್ಯಾರ್ಥಿ ಗಳ ಪರವಾಗಿ ಕೆಲಸ ಮಾಡುವುದಿಲ್ಲಾ.
ಕಾಲೇಜಿಗೆ ಹೋಗುವುದೇ ಜಿಗುಪ್ಸೆ ತರುತ್ತದೆ. ನೀವು ನಮ್ಮ ಕಾಲೇಜಿನ ORKUT ನಲ್ಲಿ ವಿದ್ಯಾರ್ಥಿಗಳ ಪರಸ್ಪರ ಚರ್ಚೆ ನೋಡಿದರೆ
ನಮ್ಮ ದೇಶದಲ್ಲಿ ಕೂಡ ಈ ದುರ್ಘಟನೆಗಳಾಗುವ ಕಾಲ ದೂರವಿಲ್ಲ ಎ೦ಬ ವಿಷಯ ಸ್ಪಷ್ಟ ವಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಿನಾಲ್ ಪಾಂಚಾಲ್ ಒಬ್ಬ ಮುಂಬೈ ಪೋರಿ ; ಅಮೆರಿಕೆಯಲ್ಲಿ ನಡೆದ ಅನಿಷ್ಟ ಗುಂಡಿನೇಟಿನಲ್ಲಿ ಮೃತಳಾಗಿದ್ದಾಳೆ.
  • UMC - ಸಂವಿಧಾನದ-ಕರಡು-ಪ್ರತಿ ತಯಾರಕ, ಮಾಜೀ ಅಮೆರಿಕದ ಅಧ್ಯಕ್ಷ, ಥಾಮಸ್ ಜೆಫರ್ಸನ್ ರವರ ಕನಸಿನ ಕೂಸು !
  • ಬಾಬಿ ಜಿಂದಾಲ್, ಭಾರತೀಯ ಮೂಲದ ಪ್ರಪ್ರಥಮ ಗವರ್ನರ್- ಅಮೆರಿಕದ ಲ್ಯೂಸಿಯಾನದಲ್ಲಿ !
  • ಮುಂಬೈ ನ 'ಗೀತಗೋವಿಂದ ಹಾಲ್,' ನಲ್ಲಿ "ಕರ್ಣಾಟಕ ಭಾಗವತ," ದ 'ಕೃಷ್ಣಾರ್ಪಣಾ ಸಮಾರಂಭ' !
  • "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಮಲೆನಾಡಿನ ಜಾನುವಾರುಗಳ ಬಿದಿರಿನ ಘಂಟೆ

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator