22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

" ಅಪರೂಪದ ಅತಿಥಿ "

July 11, 2012 - 4:40pm
swara kamath

ಮನೆಯ ಹಿತ್ತಲಿನ ಮಾವಿನ ಮರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಈ ಕೊಕ್ಕರೆ ಜಾತಿಯ ಪಕ್ಷಿಯು ನನಗೆ ನೋಡಲು ಸಿಕ್ಕಿತು. ಕೂಡಲೆ ನನ್ನ ಮೊಬೈಲ್ ನಲ್ಲಿ ಅದರ ಹತ್ತಿರ ಹೋಗದೆ ದೂರ ದಿಂದಲೆ ಕ್ಲಿಕ್ಕಿಸಿದೆ. ಕುತುಹಲದಿಂದ ಪದೆ ಪದೆ ಹೋಗಿ ಅದನ್ನು ನೋಡುತ್ತಲಿದ್ದೆ. ಅದು ಮರದ ರೆಂಬೆಯಿಂದ ಹಾರಲಾರದೆ ಅಲ್ಲೇ ಕೆಳಗೆಳಿದು ಸುಮ್ಮನೆ ಕುಳಿತಿತ್ತು.ಅದರ ರೆಕ್ಕೆಗೆ ಏಟು ಬಿದ್ದು ತೊಂದರೆ ಯಾಗಿ ಮೂರು ದಿನಗಳಕಾಲ ಅಲ್ಲೇಇದ್ದು ಚೇತರಿಸಿಕೊಂಡು ನಾನು ನೋಡುತ್ತಿದ್ದಂತೆ ನನ್ನ ಕಣ್ಮುಂದೆಯೆ ಹಾರಿಹೋಯಿತು.ಅದಕ್ಕೆ ಯಾವ ಆಹಾರ ಕೊಡುವುದೆಂದು ತಿಳಿಯದೆ ಕುಡಿಯಲು ಒಂದು ತಟ್ಟೆಯಲ್ಲಿ ನೀರನ್ನು ಸ್ವಲ್ಪ ದೂರದಲ್ಲಿ ಇರಿಸಿದ್ದೆ.

                  ಈ ಅಪರೂಪದ ಅತಿಥಿಯು ನೋಡಲು ಸುಂದರ ವಾಗಿತ್ತು.ಕಣ್ಣಿನ ಸುತ್ತ ಹಸಿರು ಬಣ್ಣ, ನೀಲಿ ಬಣ್ಣದ ಉದ್ದನೆಯ ಕೊಕ್ಕು.ಬಿಳಿಬಣ್ಣದ ದೇಹ ಹಾಗು ನಿಡಿದಾದ ಕಾಲ್ಗಳು ಇದ್ದವು.

          ಯಾವ ಶತ್ರುಗಳ ಬಾದೆ ಇಲ್ಲದೇ ಸುರಕ್ಷಿತವಾಗಿ ಜಿವ ಉಳಿಸಿಕೊಂಡು ಹಾರಿಹೋಗಿದ್ದಕ್ಕೆ ನನಗೆ ಉಂಟಾದ ಸಂತೋಷ ಅಷ್ಟಿಷ್ಟಲ್ಲಾ  !

ಪ್ರತಿಕ್ರಿಯೆಗಳು

Submitted by H A Patil on

ಎನ್.ರಮೇಶ ಕಾಮತರಿಗೆ ವಂದನೆಗಳು,

" ಅಪರೂಪದ ಅತಿಥಿ " ಎಂಬ ಸಚಿತ್ರ ಲೇಖನ ಹಿಡಿಸಿತು. ನಿಮ್ಮ ಈ ಹಕ್ಕಿಗಳ ಬಗೆಗಿನ ಕಾಳಜಿ ಗಾಯಗೊಂಡ ಅದಕ್ಕೆ ನೀವು ಉಪಚರಿಸಿ ಹಾರಿ ಹೋಗಲು ಬಿಟ್ಟು ಜೀವದಾನ ಮಾಡಿದ್ದೀರಿ. ಈ ನಿಮ್ಮ ಕಾಳಜಿ ಪಕ್ಷಿಗಳ ಬಗೆಗಿನ ಅನುಕಂಪ ಶ್ಲಾಘನೀಯ, ಈ ಪ್ರಾಣಿ ಪಕ್ಷಿ ಕಾಳಜಿ ಹೀಗೆಯೆ ಮುಂದುವರಿಯಲಿ, ಧನವ್ಯವಾದಗಳು.

Submitted by swara kamath on

ಪಾಟೀಲರಿಗೆ ನಮಸ್ಕಾರಗಳು
ಎಂದಿನಂತೆ ಅಪರೂಪದ ಚಿತ್ರ ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ,ಸಂತೋಷವಾಯಿತು.

Submitted by ಗಣೇಶ on

ರಮೇಶ್ ಅವರೆ,
ನಿಮ್ಮ ಹಕ್ಕಿಯ ಕತೆ ಓದಿದಾಗ ನನ್ನದೂ ಒಂದು ಹಳೇ ನೆನಪು-
ಕಲ್ಲು ಹೊಡೆಯುತ್ತಿದ್ದ ಮಕ್ಕಳನ್ನು ದೂರ ಸರಿಸಿ, ನಾನು ಮತ್ತು ನನ್ನ ಗೆಳೆಯ ಸೇರಿ ಹೀಗೇ ಒಂದು ದೊಡ್ಡ ಹಕ್ಕಿಯನ್ನು ರಕ್ಷಿಸಿ ತಂದು, ನಮ್ಮ ಹಾಸ್ಟೆಲ್‌ನ ಬಾತ್‌ರೂಮಲ್ಲಿ ಕೂಡಿಹಾಕಿ, ಕುಡಿಯಲು ತಿನ್ನಲು ಇಟ್ಟು ಬಂದೆವು. ಹಕ್ಕಿಯೇನೋ ಬೆಳಗ್ಗೆ ಬಾಗಿಲು ತೆರೆದ ಕೂಡಲೇ ಹಾರಿಹೋಯಿತು...
.....
ನಮಗೆ ಮತ್ತೆ ಎರಡು ಗಂಟೆ ಕ್ಲೀನಿಂಗ್ ಕೆಲಸ! ಬಾತ್ ರೂಮ್ ಪೂರ್ತಿ ಗಲೀಜು ಮಾಡಿತ್ತು :(
-ಗಣೇಶ.

Submitted by swara kamath on

ಗಣೇಶ್ ಅವರೆ,

ನನ್ನ ಈ ಚಿತ್ರವು ತಮ್ಮ ಹಳೆಯ ನೆನಪುಗಳನ್ನು ಕೆದಕಿ ತಾವು ಸಹ ಒಂದು ಹಕ್ಕಿಯ ರಕ್ಷಣೆಗೆ ಕಾರಣರಾಗಿದ್ದೀರಿ ಎಂದು ತಿಳಿದು ಬಹಳ ಸಂತೋಷ ವಾಯಿತು.
ವಂದನೆಗಳು.

Submitted by venkatb83 on

+

ಹಿರಿಯರೇ

ಆ ಪಕ್ಷಿಯನ್ನು ರಕ್ಚಿಸಿದ್ದು ಕೇಳಿ ಸಂತೋಷ ಆಯ್ತು..
ಹಾಗೆಯೇ ಗಣೇಶ್ ಅಣ್ಣ ಅವರ ಅನುಭವ ಕಥನ ಕೇಳಿ ನನಗೆ ನನ್ನ ಅನುಭವ ಹಂಚಿಕೊಳ್ಳಬೇಕು ಅನ್ನಿಸಿತು...
ಅದೋಮೆಂ ನಾ ಪಾರಿವಾಳಗಳ ಬಗ್ಗೆ ಬಹು ಆಕರ್ಷಿತ ಆಗಿದ್ದೆ. ನಮ್ಮ ಊರಿನಲ್ಲಿ ಪಾರಿವಾಳ ಹಿಡಿಯಲು ಎಸ್ಟೆಲಾ ಸಾಹಸಮಾಡಿ ಒಂದೂ ಹಿಡಿಯಲು ಆಗಿರಲಿಲ್ಲ... ಹೀಗೆಯ್ ಎಪಾರಿವಾಳ ಹಿಡಿಯಲು ಹುಡುಕುವಾಗ ಒಂದು ದಿನ ನಾಮಾಮ್ ಊರಿನ ಗೋದಾಮೀನನಲ್ಲಿ ಪಾರಿವಾಳ ಮರಿ ಹಾಕಿಡುೂ ತಿಳಿಯಿತು... ನಮ್ಮ ಊರಿನ ಗೋದಾಮಿನ ಕಿಟಕಿಯಲ್ಲಿ ಒಂದು ಪಾರಿವಾಳ ಹಾಕಿದ ಮರಿಯನ್ನ ಬಹು ಜಾಗ್ರತೆಯಿಂದ ಹಿಡಿದು (ಆಗ ಆಯಾ ತಪ್ಪಿ ಬಿದ್ದಿದ್ದರೆ ಕೈ ಕಾಲು ಗೋಣು ಮುರಿಯೋದು ಖಾತ್ರಿಯಾಗಿತ್ತು..!!) ಮನೆಗೆ ತಂದು ಒಂದು ಚಿಕ್ಕ ಮನೆ ಮಾಡಿ ಅರಾಳೆಯನ್ನು ಬೆಡ್ ತರಹ ಮಾಡಿ ಅದರ ಮೇಲೆ ಮಲಗಿಸಿ ಅದ್ಕೆ ಅಕ್ಕಿ ನುಚ್ಚು ತಿನ್ನಿಸ ಹೋದರೆ ಅದಕ್ಕೆ ತಿನ್ನಲು ಆಗಲಿಲ್ಲ ಆಗ ಬೇಯಿಸಿದ ಅಕ್ಕಿಯ ಕೆಲ ಅಗುಳು ತಿನ್ನಿಸಿದೆ, ತಿನ್ಟೂ ಸ್ವಲ್ಪ ನೀರು ಕುಡಿಸಿ ಮಲಗಿಸಿ ಶಾಲೆಗೆ ಹೋಗಿ ಬರುವುದರ್ ಹೊಳಗ್ ಆ ಪಾರಿವಾಳದ ಮರಿಗೆ ಚಿಕ್ಕ ಕೆಂಪು ಇರುವೆಗಳು ಮುತ್ತಿಕೊಂಡು ಕಚ್ಚಿ ಸಾಯಿಸಿದ್ದವು....:(((

ಆಗ ನನಗೆ ಪಾಪ ಭೀತಿ ಕಾದಿದ್ದು ಸುಳ್ಳಲ್ಲ.. ಅದರ ಸಾವಿಗೆ ನಾನೇ ಕಾರಣನಾದೆ ಅನ್ನಿಸಿದೆ...

ಇದೆ ತರಹದ ಕಥೆಯನ್ನ(ನಿಜ ಬರಹ) ಪೂರ್ಣ ಚಂದ್ರ ತೇಜಸ್ವಿ ಅವರು ಸುಶ್ಮಿತ ಮತ್ತು ಹಕ್ಕಿ ಮರಿ ಎಂದು ಬರೆದದ್ದು ಏನೇನಪು...

ಈಗಲೂ ನನಗೆ ಪಾರಿವಾಳ ಗಿಣಿ ಇತ್ಯಾದಿ ತಂದು ಸಲಹುವ ಬಯಕೆ ಆದರೆ ನನ್ನ ಈ ಪ್ರೀತಿ ಅವುಗಳಿಗೆ ಸ್ವಾತಂತ್ರ್ಯ ಹರಣ ಮಾಡಿಸೀತೇ ಅಂತ ಇನ್ನೂ ತಂದಿಲ್ಲ...

ಪ್ರಕೃತಿ-ಪ್ರಾಣಿ-ಪಕ್ಚಿ ನಾವು ನೋಡಿ ಖುಷಿ ಪಡಬೇಕು ಅದು ನಮ್ಮದೇ ಆದರೆ ಎಸ್ಟು ಚೆನ್ನ ಅಂದ್ರೆ ಸ್ವಾರ್ಥ ಆದೀತು... ಅಲ್ಲವೇ..?
ಶುಭವಾಗಲಿ..

\|/

Submitted by swara kamath on

ಸಪ್ತಗಿರಿಯವರೆ,
ಮೊದಲಾಗಿ ತಮ್ಮ ಚಿಕ್ಕಮ್ಮನ ಮಗನ ಅನೀರಿಕ್ಷಿತ ಸಾವಿಗೆ ನನ್ನ ಸಂತಾಪವಿದೆ.ಈ ಅಘಾತ ದಿಂದ ಚೇತರಿಸಿ ಕೊಳ್ಳವ ಶಕ್ತಿ ಭಗವಂತ ದಯಪಾಲಿಸಲಿ.

ಎಂದಿನಂತೆ ತಮ್ಮ ಪ್ರತಿಕ್ರಿಯೆಗಳನ್ನು ಓದುವುದೇ ಒಂದು ಸಂತೋಷ ತರುವ ವಿಚಾರ.ಈಗ ಮತ್ತೆ ಸಕ್ರಿಯರಾಗಿದ್ದೀರಿ.

<<ಪ್ರಕೃತಿ-ಪ್ರಾಣಿ-ಪಕ್ಚಿ ನಾವು ನೋಡಿ ಖುಷಿ ಪಡಬೇಕು ಅದು ನಮ್ಮದೇ ಆದರೆ ಎಸ್ಟು ಚೆನ್ನ ಅಂದ್ರೆ ಸ್ವಾರ್ಥ ಆದೀತು... ಅಲ್ಲವೇ..?
>>
ನೂರಕ್ಕೆ ನೂರರಷ್ಟು ಸತ್ಯವಾದ ಮಾತು ಸಪ್ತಗಿರಿ ಅವರೆ,
ವಂದನೆಗಳು

Submitted by venkatb83 on

ಹಿರಿಯರೆ

ನಿಮ್ಮ ಮರು ಪ್ರತಿಕ್ರಿಯೆಯನ್ನ ತಡವಾಗಿ ನೋಡಿದೆ...

ಅದ್ಕೆ ಮಾರುತ್ತರವೂ ತಡವಾಗುತ್ತಿದೆ ಕ್ಛಮಿಸಿ..

ತಮ್ಮ ಸಾನ್ತ್ವಾನಕ್ಕೆ ನನ್ನಿ

\|/