19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಮ್ಮ ಮನೆಯಲ್ಲಿ ಗಣೇಶ - ೨ !!

July 14, 2012 - 12:39pm
partha1059

ಆಶ್ಚರ್ಯ ಬೇಡ ಗಣೇಶನೆಂದರೆ ಸಂಪದದ ಗಣೇಶನಲ್ಲಿ !

ನಮ್ಮ ಮನೆಯ  ಹಾಲಿನಲ್ಲಿರುವ ಶೋಕೇಸಿನಲ್ಲಿರುವ ಗಣೇಶನ ವಿಗ್ರಹ .

ಪ್ರತಿಕ್ರಿಯೆಗಳು

Submitted by swara kamath on

ಪಾರ್ಥ ಅವರೆ, ನನ್ನ ಇಷ್ಟದೇವರ ಎರಡು ಚಿತ್ರಗಳೂ ಚನ್ನಾಗಿವೆ.

ಪಬ್ಲಿಕ್ ಟಿವಿಯ ಬೆಳಿಗ್ಗೆ 9 ಘಂಟೆಯ ಸುದ್ದಿಯಲ್ಲಿ ಗಣೇಶನ ವಿಗ್ರಹಕ್ಕೆ ಹಾಲು ಕುಡಿಸುವ ಜನರ ಭರಾಟೆಯ ನೋಡಿ ನಂಬಬೇಕೊ ಅಥವಾ ಬಿಡಬೇಕೊ ಎಂದು ತಿಳಿಯಲಿಲ್ಲಾ. ಕೆಲವು ವರುಷಳ ಹಿಂದೆ ಇದೇ ತರಹದ ಸುದ್ಧಿ ಹರಡಿತ್ತು.
ವಂದನೆಗಳು.

Submitted by partha1059 on

ರಮೇಶ ಕಾಮತರೆ ತಮಗೆ ಚಿತ್ರ ಇಷ್ಟವಾಗಿದ್ದು ನನಗೆ ಖುಷಿಯಾಯಿತು
ಹಿಂದೆ ಒಮ್ಮೆ ಮೊಬೈಲ್ ನಲ್ಲಿ ತೆಗೆದಿದ್ದೆ ಹಾಗೆ ಸುಮ್ಮನೆ ಹಾಕಿದೆ
.
ಮತ್ತೆ ನಮ್ಮ ಮನೆ ಗಣೇಶ ಹಾಗೆಲ್ಲ ಹಾಲು ಕುಡಿಯುವನಲ್ಲ !!

ಪಾರ್ಥಸಾರಥಿ

Submitted by ಗಣೇಶ on

ಪಾರ್ಥಸಾರಥಿಯವರೆ,
ಮೊದಲಿಗೆ ನಿಮ್ಮ ಮನೆಯ ಗಣೇಶರಿಗೆ ಉದ್ದಂಡ ಪ್ರಣಾಮಗಳು.
*********
>>ನಮ್ಮ ಮನೆಯ ಹಾಲಿನಲ್ಲಿರುವ ಶೋಕೇಸಿನಲ್ಲಿರುವ ಗಣೇಶನ ವಿಗ್ರಹ .
>>ಮತ್ತೆ ನಮ್ಮ ಮನೆ ಗಣೇಶ ಹಾಗೆಲ್ಲ ಹಾಲು ಕುಡಿಯುವನಲ್ಲ !!
-ನಿಮ್ಮ ಮನೆಯ "ಹಾಲಿ"ನಲ್ಲಿರುವ ಗಣೇಶ "ಹಾಲು" ಕುಡಿಯುವುದಿಲ್ಲ !
ಆ ಕೆಲಸ ಈ ಗಣೇಶ ನಿಮ್ಮ ಮನೆಗೆ ಬಂದಾಗ ನೇರ ಅಡುಗೆ ಕೋಣೆಗೇ ಧಾಳಿಯಿಟ್ಟು ಮಾಡುವನು :)
- ಸಂಪದದ ಗಣೇಶ.

Submitted by venkatb83 on

ಗುರುಗಳೆ
ಛಿತ್ರ ತುಮ್ಬಾ ಛೆನ್ನಾಗಿದೆ..
ನೆರಳು ಬೆಳಕಿನ ಹಿನ್ನೆಲೆ ಛಿತ್ರಕ್ಕೆ ಮೆರುಗು ತನ್ದಿದೆ...
ಪ್ರತಿಕ್ರಿಯೆಗಳು ಮುದ ನಿಡಿದವು,....!!

ಶುಭವಾಗಲಿ....

\|/

Submitted by partha1059 on

ಸಪ್ತಗಿರಿಯವರೆ
ಪ್ರತಿಕ್ರಿಯೆಗೆ ವಂದನೆಗಳು

ಗಣೇಶರೆ

ನೀವೊಮ್ಮೆ ಬನ್ನಿ ಸಾಕು!

ಅಡುಗೆ ಮನೆಯಲ್ಲಿ ನಿಮಗೆ ಬೇಕಾದೆಲ್ಲ ಸಿದ್ದ ಮಾಡಿಬಿಡೋಣ‌
ಹೇಗಿದ್ದರು ನೀವು ಅಪ್ಪಟ ಸಸ್ಯಾಹಾರಿ ಎಂದಿದ್ದೀರಿ
ನಾನು ಅಡುಗೆಯ ಎಲ್ಲ ಪ್ರಯೋಗ ನಡೆಸಬಹುದು
ಪಾರ್ಥಸಾರಥಿ

Submitted by venkatb83 on

ಗುರುಗಳೆ
ಹಾಗೆಯೇ ನಮ್ಮ ಪ್ರಿಯ ಗಣೇಶ್ ಅಣ್ಣ ಅವ್ರಿಗೆ ಕಹಿ ಕಷಾಯ ಅಂದ್ರೆ ಅಚ್ಚು ಮೆಚ್ಚು...!!
ಅದ್ಕೆ ಕಷಾಯ ಮತ್ತು ಹಸಿರು ಸೊಪ್ಪಿನ ಸಾರು (ಬರೀ ಸಸ್ಯಾಹಾರವೇ ಜಾಸ್ತಿ ಇರಲಿ..!!) ಇರಲಿ...

ಹೋಳಿಗೆ ಕಡುಬು ಇತ್ಯಾದಿ ಇದ್ದದ್ದೇ..
ಸ್ವಲ್ಪ ಬೇರೆ ರೀತಿಯ ಅತಿಥಿ ಸತ್ಕಾರ ಮಾಡುವ....(ಛೇ ಛೇ ಆ ರೀತಿ ಅಲ್ಲ ಗಣೇಶ್ ಅಣ್ಣ..!!_)

ನಿಮ್ಮ ಅಧ್ರಸ್ತ ನೋಡಿ ಎಲ್ಲ ಸಂಪದಿಗರನ್ನು ಬಿಟ್ಟು ಅವರು ನಿಮ್ಮ ಮನೆ ಆಯ್ದುಕೊಂಡಿರುವರು......

\|/

Submitted by ಗಣೇಶ on

ಪಾರ್ಥಸಾರಥಿಯವರೆ,
ಖಂಡಿತ ಬರುವೆ.. ನಿಮ್ಮ ಎಲ್ಲಾ ಪ್ರಯೋಗಗಳನ್ನೂ ಪ್ರಯೋಗಿಸಬಹುದು. :)
ಸಪ್ತಗಿರಿವಾಸಿಯವರೆ,
ಕಡುಬು ಹೋಳಿಗೆ ಇರುವುದಾದರೆ ಕಹಿ ಕಷಾಯ ಎಷ್ಟಾದರೂ ಕುಡಿದೇನು :)
ಶ್ರೀಧರ್‌ಜಿ,
"ಗಣೇಶ ಹಾಲು ಕುಡಿದ" ಪ್ರಸಂಗ ನೆನಪಾಯಿತು. ಆದಿನ ಸಂಜೆ ನಾನು ಅಂಗಡಿಯಲ್ಲಿದ್ದೆ. ಜನರು ಗುಂಪು ಗುಂಪಾಗಿ ಹೋಗುವುದು ಕಂಡು ವಿಚಾರಿಸಿದಾಗ ತಿಳಿಯಿತು. ಭಕ್ತಿಯಲ್ಲಿ ಮೈಮರೆತಿದ್ದ ಜನರಿಗೆ, "ನನಗೆ ಕೊಡಿ..ಯಾಕೆ ದೇವಸ್ಥಾನಕ್ಕೆ ಓಡುತ್ತೀರಿ.." ಇತ್ಯಾದಿ ಹಾಸ್ಯ ರುಚಿಸಲಿಲ್ಲ. ಆಗ ಮೊಬೈಲ್ ಕಾಲವಲ್ಲ..ಲ್ಯಾಂಡ್ ಲೈನ್ ಸಿಗಲೂ ಇಲ್ಲ. ಮನೆಗೆ ಹೋದಾಗ ಮನೆಯಾಕೆ,ಮತ್ತು ತಾಯಿ ಸಹ ಸ್ನಾನ ಮಾಡಿ ಪಕ್ಕದ ಮನೆಗೆ ಹೋಗಿದ್ದರು! ನಾನು ಜೋರುಮಾಡಿದಾಗ- "ನಮ್ಮ ಮನೆಯಲ್ಲಿ ಗಣೇಶ ಹಾಲು ಕುಡಿದಿರಲಿಲ್ಲ :( ಪಕ್ಕದ ಮನೆಯವರು ಒತ್ತಾಯಮಾಡಿದ್ದಕ್ಕೆ ಸ್ನಾನ ಮಾಡಿ ಹೋಗಬೇಕಾಯಿತು" ಅಂದಳು ನನ್ನ ಪತ್ನಿ.
-ಗಣೇಶ.

Submitted by makara on

ಪಾರ್ಥಸಾರಥಿಗಳೆ,
ನಿಮ್ಮ ಮನೆಯ ಹಾಲಿನ ಷೋಕೇಸಿನ ಗಣೇಶನನ್ನು ಮಾತ್ರ ಪರಿಚಯಿಸಿದ್ದೀರಿ. ನಿಮ್ಮ ಮನೆಯ 'ಹಾಲ್ ' ನಲ್ಲಿ ಕುಳಿತು 'ಹಾಲು' ಕುಡಿಯುವ ಗಣೇಶರ‌ ಫೋಟೋವನ್ನು ಹಾಕಿದರೆ ಸಪ್ತಗಿರಿಯವರಿಗೆ ಸಂತೋಷವಾದೀತು :))

Submitted by venkatb83 on

ಅಚ್ಹ್ಹರೀ
ಗುರುಗಳ ಈ ಬರಹದ ಕೆಳಗೇ ಈ ಬರಹಗಳೂ ಇವೆ....\

>>> ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ<<<<

ನಮ್ಮ ಮನೆಯಲ್ಲಿ ಗಣೇಶ !!
ಹೊಸ ವರುಷದ ಹೊಸ ಕ್ಯಾಲೆಂಡರ್..
ಆಫ್ರಿಕಾದಲ್ಲಿ ಗಣೇಶ
ಎಲೆಯಲ್ಲಿ ಗಣೇಶ !
ಹೊಳಲ್ಕೆರೆಯ ತೂಗುತಲೆ ಗಣೇಶ- ದೇವಸ್ಥಾನ ಕಟ್ಟುವ ಮೊದಲು !

!!!!!!!

ಇನ್ನು ಯಾವ್ಯಾವ್ ಗಣೇಶ್ ಇರ್ವರೊ?.....

\|/

Submitted by partha1059 on

ಸಪ್ತಗಿರಿ
ಇದೆ ನೋಡಿ ಜಗತ್ತಿನ ಕೆಲವು ಅಚ್ಚರಿಗಳು
>> ನಮ್ಮ ಮನೆಯಲ್ಲಿ ಗಣೇಶ !!

ಆ ಚಿತ್ರವನ್ನು ನಾನು ಮೊದಲಿಗೆ ಹಾಕಿದೆ ಆದರೆ ಅದೇನಾಯಿತೊ ಆ ಚಿತ್ರ ಎರಡು ಸಾರಿ ಪ್ರಕಟವಾಯಿತು (ಗುರುರಾಜರ ಪರಿಣಾಮ?)
ಸರಿ ಏನು ಮಾಡೋದು ಎಂದು ತಕ್ಷಣ ಇನ್ನೊಂದು ಚಿತ್ರವನ್ನು ಅಲ್ಲಿ ಕಾಪಿ ಮಾಡಿ ಅದಕ್ಕೆ ನಮ್ಮ ಮನೆಯಲ್ಲಿ ಗಣೇಶ ‍‍ 2
ಎಂದು ಬದಲಾಯಿಸಿದೆ. ಎರಡನೆ ಚಿತ್ರವನ್ನು ಎಲ್ಲರು ಗಮನಿಸಿದರು. ಮೊದಲ ಗಣಪನಿಗೆ ಯಾರು ಕೇರ್ ಮಾಡಲೆ ಇಲ್ಲ. (ಇಬ್ಬರು ಒಬ್ಬರೆ ಒಂದು ಹತ್ತಿರದಿಂದ ಮತ್ತೊಂದು ದೂರದಿಂದ)
ಪಾರ್ಥಸಾರಥಿ

Submitted by partha1059 on

ಹಾಕೋಣ ಶ್ರೀಧರ್ ಭಂಡ್ರಿಯವರೆ ಹಾಲಿನಲ್ಲಿ ಕುಳಿತು ಹಾಲು ಕುಡಿಯುತ್ತಿರುವ ಗಣೇಶರ ಪಕ್ಕದಲ್ಲಿರುವ ಶ್ರೀಧರರನ್ನು ಹಾಕೋಣ‌
:)))
ಪಾರ್ಥಸಾರಥಿ