20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕುಛ್ ನ ಕಹೋ ಕುಛ್ ಭೀ ನ ಕಹೋ !

July 18, 2012 - 6:10pm
venkatesh

ಹೌದು. ಯಾಕೋ ಈ ದೃಶ್ಯ ನೋಡಿದಾಗ ಒಂದು ಚಿತ್ರ ತೊಗೊಂಡು ನಮ್ಮ ಗೆಳೆಯರ ಜೊತೆಗೆ ಹಂಚಿಕೊಳ್ಳುವ ಮನಸ್ಸಾಯಿತು. ಯಾಕೆ ಅಂದ್ರೆ, ನಮ್ಮ ರೈಲ್ವೆ ಸ್ಟೇಶನ್ ಗಳನ್ನು ನೋಡಿ, ಅದು ಹಾಗೆಯೇ ಇರುತ್ತೆ,  ಅಂದುಕೊಂಡಿದ್ದ ನನಗೆ ಒಮ್ಮೆಲೆ ಹೀಗೂ ಇರುತ್ಯೇ ಅನ್ನಿಸಿತು !

ಒಟ್ಟಿನಲ್ಲಿ ಅದು ಹಾಗೆಯೇ

ಇದು ಹೀಗೆಯೇ !?

Taxonomy upgrade extras: 

ಪ್ರತಿಕ್ರಿಯೆಗಳು

Submitted by partha1059 on

ಏನು ಮಾಡುವುದ್ ವೆಂಕಟೇಶ್ ಸರ್
ಕೇಳಿದ್ದಿರಲ್ಲ
ಯೋಗಿ ಪಡೆದುದ್ದು ಯೋಗಿಗೆ ಭೋಗಿಯದು ಭೋಗಿಗೆ
.
ಅದಕ್ಕಾಗಿಯೆ ಹಿಂದೊಮ್ಮೆ ನಾನು ಹೇಳುತ್ತಿದ್ದೆ

ನಮ್ಮ ಯೋಗ್ಯತೆಗೆ ಮೀರಿದ ವಸ್ತು ನಮ್ಮ ಬಳಿ ಇರಬಾರದು ಏಕೆಂದರೆ ಅದರ ಸರಿ ಉಪಯೋಗ ನಮಗೆ ತಿಳಿದಿರುವದಿಲ್ಲ
ಉದಾಹರಣೆ; ಬೆಂಗಳೂರಿನಲ್ಲಿ ಉತ್ತಮ ರಸ್ತೆ ಕೊಟ್ಟರೆ ಅದನ್ನು ಉಪಯೋಗಿಸಲು ನಮ್ಮ ಸವಾರರಿಗೆ ತಿಳಿದಿಲ್ಲ. ರಸ್ತೆ ಎಂದರೆ ಶರವೇಗದಲ್ಲಿ ಸಾಗುವುದು ಅಂದುಕೊಳ್ಳುತ್ತಾರೆ ಹಲವರ ಪ್ರಾಣಕ್ಕೆ ಎರವಾಗುತ್ತಾರೆ. ಅದಕ್ಕೆ ನೋಡಿ ಎಂತಹ ಉತ್ತಮ ರಸ್ತೆ ಮಾಡಿದರು ಸರಕಾರದವರು ಅದರ ಮೇಲೆ ನೋರೊಂದು ಸ್ಪೋಡ್ ಬ್ರೇಕರ್ ಅಂದರೆ (ರೋಡ್ ಹಂಪ್) ಹಾಕಿರುತ್ತಾರೆ.

Submitted by venkatesh on

ನಮಸ್ಕಾರ. ನಿಮ್ಮ ವಿಷಯ ಪ್ರಸ್ಥಾವನೆ, ಸ್ವಲ್ಪ ಉಚ್ಚಮಟ್ಟದ್ದು.

ಹಿಂದೆ ಇದನ್ನು ಹಣೆಬರಹ ದೇವರು ಕಟ್ಟದ್ದನ್ನು ಸ್ವೀಕರಿಸಬೇಕಲ್ಲವೇ, ಎನ್ನುವ ವಾದಕ್ಕೆ ಚಕಾರ ಎತ್ತಿತ್ತಿರಲಿಲ್ಲ. ಈಗ ಆ ಮಾತಿನ ಜಾಡನ್ನು ನಮ್ಮ ಮನೆಯ ಮಕ್ಕಳು ಕಿತ್ತೊಗೆಯುತ್ತಾರೆ. ಕಾಲ ಬದಲಾಗುತ್ತಲೇ ಸಾಗಿದೆಯಲ್ಲ; ಅದನ್ನು ಒಪ್ಪದೆ ವಿಧಿಯಿಲ್ಲ.

ಬೆಂಗಳೂರಿನ ನೆಲೆ ಈಗಿನ ಜಾಗತಿಕ ಮಟ್ಟದಲ್ಲಿ ಮೇರುಸ್ಥಾನದಲ್ಲಿರುವುದನ್ನು ನಾವು ಒಪ್ಪದೆ ಉದ್ದರೆ ನಮ್ಮನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಇನ್ನು ರಸ್ತೆಗಳನ್ನು ೬೦ ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಉಪಯೋಗಿಸಿದರೆ, ಅದರ ಉಪಯೋಗದಲ್ಲಿ ಮೇರುತನ ಇರುವುದಿಲ್ಲ.

ನನ್ನ ಪ್ರಶ್ನೆ, ಇರುವುದು, ಯಾರೇ ಇರಲಿ ತಮಗೆ ಸಿಕ್ಕ/ಆರಿಸಿಕೊಂಡ ವಲಯದಲ್ಲಿ ಇರುವವರೆಗೂ ಅದರಲ್ಲಿ ಮನಸ್ಸಿಟ್ಟು ಕೆಲಸಮಾಡಬಾರದೇಕೆ ? ಆ ಕೆಲಸದಲ್ಲಿ ಖುಷಿಕಾಣಬಾರದೇಕೆ ? ಇದನ್ನು ನಾನು ಹೇಳುತ್ತಿರುವುದು. ಸಾಮಾಜಿಕವಲಯದಲ್ಲೂ ಇದನ್ನು ನಮ್ಮಲ್ಲಿ ಅನ್ವಯಿಸಿಕೊಳ್ಳುವುದು ಅಗತ್ಯ. ಇದಕ್ಕೆ ಮನೆಯಲ್ಲಿ ನಾವುಗಳು ನಮ್ಮ ಮಕ್ಕಳನ್ನು ಬೆಳೆಸುವ ರೀತಿಯಲ್ಲಿರುವ ತೃಟಿಯೇ ಮುಖ್ಯಕಾರಣವೆನ್ನುವುದು ನನ್ನ (೬೯ ವರ್ಷದವ) ಗಮನಕ್ಕೆ ಬಂದಿರುವ ಸಂಗತಿ !

ನಾನು ಮುಂಬೈನಲ್ಲಿ ೧೯೬೭-೨೦೦೪ ರ ವರೆಗೆ ಕೇಂದ್ರ ಸರಕಾರದ ಅನುಸಂಧಾನ ಸಂಸ್ಥೆಯೊಂದರಲ್ಲಿ ಕೆಲಸಮಾಡಿದೆ. ಎಂದೂ ನಾನು ಕಡಿಮೆ ಸಂಬಳ, ಬೇರೆಯವರ ತರಹ ಮಕ್ಕಳನ್ನು ಓದಿಸಲು ನನ್ನ ಮಿತಿಮೀರಿ ಹೋಗಲಿಲ್ಲ. ಅದರ ಬದಲಾಗಿ ಮಕ್ಕಳಿಗೆ ಮನೆಯಲ್ಲಿ ನಾನು ಮತ್ತು ನನ್ನ ಪತ್ನಿ ವಿದ್ಯಾಭ್ಯಾಸದ ಬಗ್ಗೆ, ಜವಾಬ್ದಾರಿಗಳಬಗ್ಗೆ ಮತ್ತು ಓದಿ ಒಳ್ಳೆಯ ಅಂಕಗಳಿಸಿದರೆ ಸಿಗುವ ಅತ್ಯುನ್ನತ ಅವಕಾಶಗಳಬಗ್ಗೆ ಮಕ್ಕಳಿಗೆ ತಿಳಿಯಹೇಳಿ, ಅವರ ಜೊತೆಗೆ ಸದಾ ಇದ್ದೆವು.

ನನ್ನ ತಮ್ಮ ಕಗ್ಗ ಹಳ್ಳಿಯಲ್ಲಿ, ಬಡಕುಟುಂಬದಲ್ಲಿ ಬೆಳೆದು, ಟ್ಯೂಷನ್ ಗಂಧವೂ ಇಲ್ಲದೆ, ಮುನಿಸಿಪಲ್ ಶಾಲೆಯಲ್ಲಿ ಓದಿ, ಎಸ್ .ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮೈಸೂರ್ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ.(೧೯೬೧ ರಲ್ಲಿ)

ಇದಲ್ಲದೆ ನಾನು ವರ್ಷಕ್ಕೆ ಬಹುಶಃ ೪-೫ ಬಾರಿ ತಡವಾಗಿ ಆಫೀಸ್ ತಲುಪಿದ್ದೆ. ನಮ್ಮ ಆಫ಼್ಹೀಸ್ ನಲ್ಲಿ ಆಯೋಜಿಸಿದ ರಾಷ್ಟ್ರೀಯ ಅಂತಾರಾಷ್ಟೀಯ ಕಾನ್ಫರೆನ್ಸ್ ಗಳಲ್ಲಿ ಎಂದೂ ತಪ್ಪಿಸಿಕೊಂಡಿಲ್ಲ ! (ರಜಕ್ಕೆ ಊರಿಗೆ ಹೋದಾಗ ಮಾತ್ರ)
ನನ್ನ ವೃತ್ತಿ-ಜೀವನದಲ್ಲಿ ನಾನು ನನ್ನ ಊರಿಗೆ ಪರಿವಾರದಜೊತೆಗೆ ರೈವೆಪ್ರಯಾಣ ಮಾಡಿದ್ದು ಕೇವಲ ಸೆಕೆಂಡ್ ಸ್ಲೀಪರ್ ನಲ್ಲಿ (ರಿಟೈರ್ ಆಗುವ ೨ ವರ್ಷಗಳಮುಂಚೆ ನನ್ನ ಗೆಳೆಯರ ಒತ್ತಾಯದ ಮೇಲೆ ೩ರ್ಡ್ ಏಸಿಯಲ್ಲಿ ಪ್ರಯಾಣಿಸಿದ್ದೆ ! ಏಕೆಂದರೆ ನನ್ನ ಲಿಮಿಟ್ ನನಗೆ ಗೊತ್ತಿತ್ತು. ಪತ್ನಿ, ಮಕ್ಕಳು ನನ್ನ ಮಾತನ್ನು ಮೀರುತ್ತಿರಲಿಲ್ಲ. ಕೊನೆಯಲ್ಲಿ ನಮ್ಮ ತಂದೆ, ತಾಯಿ, ಅಣ್ಣಂದಿರು ಜೀವನದ ತತ್ವಗಳನ್ನು ನಮ್ಮ ಮನಸ್ಸಿನಲ್ಲಿ ಎರಕಹೊಯ್ದಿದ್ದರು.

* ಕೊನೆಯಲ್ಲಿ ನಮ್ಮ ತಂದೆ, ತಾಯಿ, ಅಣ್ಣಂದಿರು ಜೀವನದ ತತ್ವಗಳನ್ನು ನಮ್ಮ ಮನಸ್ಸಿನಲ್ಲಿ ಎರಕಹೊಯ್ದಿದ್ದರು. ಅದನ್ನೇ ನಾನು ನನ್ನ ಪತ್ನಿ ಇದುವರೆಗೆ ಪಾಲಿಸುತ್ತಿದ್ದೇವೆ. ಈಗ ನಾನು ವಿಶ್ವ ಪರ್ಯಟನೆ ಮಾಡುತ್ತಿದ್ದೇನೆ, ಹಲವಾರು ನನ್ನ ಬಾಲ್ಯದಲ್ಲಿ ಅನುಭವಿಸದ ಹಲವಾರು ಹೊಸ ಹೊಸ ಅವಕಾಶಗಳನ್ನು ನನ್ನ ಪ್ರೀತಿಯ ಮಕ್ಕಳು ದೊರಕಿಸಿದ್ದಾರೆ.

* ಭಗವಂತನ ದಯೆಗೆ ನಾವು ಕೃತಜ್ಞರು !

Submitted by makara on

ವೆಂಕಟೇಶ್ ಸರ್,
<<ಒಟ್ಟಿನಲ್ಲಿ ಅದು ಹಾಗೆಯೇ
ಇದು ಹೀಗೆಯೇ !?>> ಇದಕ್ಕೆ ಉತ್ತರ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಮ್ ಅವರು ಹೀಗೆ ವಿವರಿಸುತ್ತಾರೆ. ಮುಂಬಯಿಯ ಶ್ರೀಮಂತರು ತಮ್ಮ ನಾಯಿಗಳನ್ನು ಬೆಳಿಗ್ಗೆ ಹೊತ್ತಿನಲ್ಲಿ ವಾಕಿಂಗ್ ಕರೆದುಕೊಂಡು ಹೋಗಿ ಅಲ್ಲಿನ ಫುಟ್ ಪಾತುಗಳ ಮೇಲೆ ಮಲ ಮೂತ್ರ ವಿಸರ್ಜನೆ ಮಾಡಿಸುತ್ತಾರೆ. ಹತ್ತು ಘಂಟೆಯ ಸಮಯದಲ್ಲಿ ಆಫೀಸಿಗೆ ಹೋಗುವಾಗ ಇದೇ ಜನ ಮುನಿಸಿಪಾಲಿಟಿಯವರಿಗೆ ಏನು ಮಾಡುತ್ತಿದ್ದೀರಿ ನೀವು ಫುಟ್ ಪಾತುಗಳನ್ನು ಸ್ವಚ್ಛವಾಗಿಡುವುದು ನಿಮ್ಮ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸುತ್ತಾರಂತೆ. ಇದೇ ಅಮೇರಿಕಾ ಅಥವಾ ಜಪಾನಿನಲ್ಲಿ ನಾಯಿಯ ಮಾಲೀಕನೇ ತನ್ನ ನಾಯಿ ಮಾಡಿದ ಗಲೀಜನ್ನು ತೊಳೆಯಬೇಕಂತೆ. ಅವರಿಗೆ ಆ ಕರ್ತವ್ಯ ಪ್ರಜ್ಞೆ ಮತ್ತು ಕಾನೂನಿನ ಭಯವಿರುವುದರಿಂದ ಅದು ಅಲ್ಲಿ ಸಾಧ್ಯ. ಹಾಗಾಗಿ ಅಲ್ಲಿ ಎಲ್ಲವೂ ಸ್ವಚ್ಛ. ನಮ್ಮಲ್ಲಿ ಮನೆ ಚೊಕ್ಕಟ ಊರು ಹೊಲಸು. ಹಾಗಿಗಿ ಅದು ಹಾಗೆಯೇ ಇದು ಹೀಗೆಯೇ. ನೀವೇ ಬರೆದಿರುವಂತೆ ನಮ್ಮ ಮಕ್ಕಳಿಗೆ ನಾವು ನಾಗರೀಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಕಲಿಸಬೇಕು.
(ಇದನ್ನು ಸಂತ್ ಗಜಾನನ್ ಮಹಾರಾಜ್ ಕಾಲೇಜ್ ಆಫ್ ಇಂಜನೀಯರಿಂಗ್ ಅವರು ಪ್ರಕಟಿಸಿರುವ ಡಾ! ಅಬ್ದುಲ್ ಕಲಾಮ್ ಸ್ಪೀಕ್ಸ್ ಟು ಯು ಪುಸ್ತಕದಿಂದ ಉಲ್ಲೇಖಿಸಿದ್ದೇನೆ.)