ಯುಸೈನ್ ಬೋಲ್ಟ್ ಬಗ್ಗೆ ವಿಕಿಪಿಡಿಯಾದಲ್ಲಿ ಓದಲು ಕೊಂಡಿ :http://kn.wikipedia.org/wiki/%E0%B2%AF%E0%B3%81%E0%B2%B8%E0%B3%88%E0%B2%A8%E0%B3%8D_%E0%B2%AC%E0%B3%8B%E0%B2%B2%E0%B3%8D%E0%B2%9F%E0%B3%8D
ಅದೇನು ಓಟ ; ಜಿಂಕೆಯಂತೆ, ಇಲ್ಲ ನಾಗರ ಹಾವಿನಂತೆ ಇಲ್ಲ, ಇಲ್ಲ ಶರವೇಗದಂತೆ. ಅದ್ಯಾವುದು ಅಲ್ಲ ಯುಸೈನ್ ಬೋಲ್ಟ್ ನಂತೆ ? ಹಾ ಇದೆ ಸರಿ; ಯುಸೈನ್ ಬೋಲ್ಟ್ ಗೆ ಯುಸೇನ್ ಬೋಲ್ಟ್ ಒಬ್ಬನೇ ಸರಿಸಮಾನ ವ್ಯಕ್ತಿ ! ಸಧ್ಯಕ್ಕಂತೂ ಇದೇ ಸತ್ಯ ! ೧೦೦ ಮೀ. ದೂರವನ್ನು ಕ್ರಮಿಸಲು ಅವರು ತೆಗೆದುಕೊಂಡ ಸಮಯ ೯.೬೩ ಸೆಕೆಂಡ್ ಗಳು ! ೨೦೦ ಮೀ ಫೈನಲ್ಸ್ ನಲ್ಲೂ ೧೯.೩೨ ಸೆಕೆಂಡ್ ನಲ್ಲಿ ಓಡಿದ ಅವರೇ ಪಂದ್ಯ ಶ್ರೇಷ್ಠರು. ಓಡುವ ಇತಿಹಾಸಕ್ಕೆ ಅವರು ಬರೆದ ಭಾಷ್ಯ ಇನ್ನೂ ೪ ವರ್ಷಗಳಂತೂ ಜಾರಿಯಲ್ಲಿರುತ್ತದೆ. ಇನ್ನುಳಿದ ಪದಕಗಳಲ್ಲಿ ರಜತ ಪದಕವನ್ನು ಅವರ ಊರಿನವರೇ ಆದ, 'ಯೋಹಾನ್ ಬ್ಲೇಕ್', ೧೯.೪೪ ಸೆಕೆಂಡ್ ಗಳಲ್ಲಿ, ಮತ್ತು ಕಂಚಿನ ಪದಕವನ್ನು ಜಮೈಕಾದವರೇ ಆದ, 'ವಾರೆನ್ ವೇರ್' ೧೯.೮೪ ಸೆಕೆಂಡ್ ಗಳಲ್ಲಿ ಓಡಿ ತಮ್ಮದಾಗಿರಿಸಿಕೊಂಡರು. ಈಗಾಗಲೇ, ಅಮೇರಿಕಾದ 'ಕಾರ್ಲ್ ಲುಯಿಸ್, ಕೆನಡಾದ ಬೆನ್ ಜಾನ್ಸನ್ ಇದೇ ದಾರಿಯಲ್ಲಿ ಸಾಗಿ ತಮ್ಮ ತಮ್ಮ ಭಾಷ್ಯಗಳನ್ನು ಬರೆದು ಸಾಗಿಹೋಗಿದ್ದಾರೆ.
ಬಹುಶಃ ಬಿಳಿಯರಿಗೆ ಈ ವಲಯ ಸಾಧ್ಯವಾಗದಷ್ಟು ದುರ್ಗಮವೇ, ಎಂದು ಕಣ್ಣು ಮಿಟಿಗಿಸುವಷ್ಟು, ಸಂಕೀರ್ಣ, ಹಾಗೂ ದುರ್ಗಮವಾಗಿದೆ !
ನಾವು ಈ ೨೦೧೨ ರ ಲಂಡನ್ ಒಲಂಪಿಕ್ ಆಟೋಟಗಳನ್ನುಕೆನಡಾದ ಟೊರಾಂಟೋನಗರದಲ್ಲಿ ನಮ್ಮ ಮಗನ ಅಪಾರ್ಟ್ಮೆಂಟ್ ನಲ್ಲಿ ನೋಡಿ ಆನಂದಿಸಿದೆವು. ಓಟದ ಸ್ಪರ್ಧೆ ಜಮೈಕಾದ ಸ್ಪರ್ಧೆಯಾಗಿದ್ದು ಬಹಳಷ್ಟು ಜಮೈಕನ್ನರು ಭಾಗವಹಿಸಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಸ್ಟೇಡಿಯಮ್ ತುಂಬಾ ಜನ ಕೂಗಿ-ಕೇಕೆಹಾಕಿದರು ಮತ್ತು ನೃತ್ಯಮಾಡಿ ಸಂಭ್ರಮಿಸಿದರು.
* ನಮ್ಮ ಟೆಲಿವಿಶನ್ ನಲ್ಲಿ ಕಾಣಿಸಿದ ಚಿತ್ರವನ್ನೇ ಇಲ್ಲಿ ಲಗತ್ತಿಸಿದ್ದೇನೆ.
-ಹೊರಂಲವೆಂ,
ಟೊರಾಂಟೋನಗರ, ೨೦೧೨ ರ ಆಗಸ್ಟ್, ೧೦.




