ಹತ್ತಿ ಬೀಜವನ್ನು ಬಿತ್ತಿದ ಮೇಲೆ ವಾರಗಳಲ್ಲಿ ಹತ್ತಿ ಹೂವು ಕಾಟಿಸಿಕೊಳ್ಳುತ್ತದೆ ನಂತರ ಕಾಯಿ ; ಮತ್ತೆ ಅದು ಒಣಗಿ ಬಿರಿದು ಶುಭ್ರ ಹತ್ತಿ, ತಯಾರು !

ಹತ್ತಿ ಬೀಜವನ್ನು ಬಿತ್ತಿ, ೧೮೦ ದಿನಗಳಲ್ಲಿ ಅದು ಹತ್ತಿ ಯನ್ನು ಬಿಡುತ್ತಿತ್ತು. ಮತ್ತು ಕಟಾವ್ ಮಾಡಲಾಗುತ್ತಿತ್ತು. ಆದರೆ ವಿಶ್ವದ ಎಲ್ಲಾ ಭಾಗಗಳಲ್ಲೂ ನಡೆಸಿದ ತೀವ್ರ ಸಂಶೋಧನೆಗಳು, ಮತ್ತು ವೈಜ್ಞಾನಿಕ ಪದ್ಧತಿಗಳಿಂದಾಗಿ, ಅದು ಸುಮಾರು ೧೩೦ ದಿನಗಳಲ್ಲೇ ಕೊಯ್ಲಿಗೆ ತಯಾರಾಗುತ್ತದೆ.
ಹತ್ತಿಯನ್ನು" ಕೃಷ್ಣ ಫೈಬರ್ " ಎಂದು ಕರೆಯೋಣ ಅನ್ನಿಸುತ್ತೆ. ಕೃಷ್ಣನಿಗೆ ಜನ್ಮ ಕೊಟ್ಟಿದ್ದನ್ನು ಬಿಟ್ಟರೆ, ದೇವಕಿ ಬೇರೆ ಯೇನೂ ಮಾಡಲಿಲ್ಲ. ಅವನನ್ನು ಸಾಕಿ-ಸಲಹಿದ್ದು ಯಶೋದೆಯಲ್ಲವೇ ? ಇಲ್ಲೂ ಅಷ್ಟೆ ; ಹತ್ತಿ ಬಟ್ಟೆಗಳನ್ನು ಮಾಡುವ ವಿಧಾನ ವಿಶ್ವಕ್ಕೆ ತೋರಿಸಿ ನಾವು ಸುಮ್ಮನಾದೆವು. ಅದನ್ನು ವೃದ್ಧಿಪಡಿಸಲಿಲ್ಲ.
ಆ ತಂತ್ರಜ್ಞಾನ, ವಿಶ್ವದಾದ್ಯಂತ ಬಿರುಗಾಳಿಯಂತೆ ಹರಡಿ, ವಸ್ತ್ರೋದ್ಯೋಗದಲ್ಲೆ ಒಂದು ಬೃಹತ್ ಕ್ರಾಂತಿ ತಂದದ್ದು -ಯೂರೋಪಿಯನ್ನರು. ಅಮೆರಿಕನ್ನರು. ಬಹುಪಾಲು ಅಮೆರಿಕನ್ನರೂ ಯೂರೋಪಿನವರಲ್ಲವೇ ! ಮುಂದಿನದೆಲ್ಲಾ ಇತಿಹಾಸ !
ಹತ್ತಿ, ಮತ್ತು ಹತ್ತಿಪದಾರ್ಥಗಳ ಬಗ್ಗೆ ಮಾಡಿದ ಸಂಶೋಧನೆಗಳು, ವಿಶ್ವದ ಪುಟಗಳಲ್ಲಿ ಮೊದಲನೆಯದೆಂದು ದಾಖಲಾಗಿದೆ. ಆದರ ಗಾತ್ರ, ಬಹುಶ: ವಿಶ್ವದ ಇತಿಹಾಸದಲ್ಲೇ ನಡೆಸಿದ ಎಲ್ಲಾ ಫೈಬರ್ ಗಳ ಸಂಶೋಧನೆಗಳಿಗಿಂತ ಅಂದಿನಕಾಲದಲ್ಲಿ - ಸಿಂಹಪಾಲು ಪಡೆದಿತ್ತು, ಎನ್ನುವ ವಿಷಯ ಇಲ್ಲಿ ತಿಳಿಸಲು ಹರ್ಷವಾಗುತ್ತದೆ !

- Login or register to post comments
- 536 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಹತ್ತಿ ಕಾಯಿ ದಪ್ಪಕ್ಕೆ ಧೃಢವಾಗಿದ್ದಷ್ಟೂ ಒಳ್ಳೇದು. ಒಳ್ಳೆ ಹತ್ತಿ ಸಿಗತ್ತೆ !
- ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !
- ಹತ್ತಿಯಿಂದ ಬೀಜ ಬೇರ್ಪಡಿಸುವ ಯಂತ್ರ ಅಮೆರಿಕದ ಕೊಡುಗೆ- ಅದು ವಿಶ್ವದ ಹತ್ತಿ ವಸ್ತ್ರೋದ್ಯಮದ ದ್ವಾರವನ್ನು ತೆರೆದು ಕ್ರಾಂತಿಯನ್ನೇ ಮಾಡಿತು !
- ವಿಶ್ವದ ಅತ್ಯಂತ ಉತ್ಕೃಷ್ಟವಾದ ಹತ್ತಿ- ಸೀ ಐಲೆಂಡ್ ಹತ್ತಿ ; ವಿಶ್ವದ ಹತ್ತಿ ಗುಣವನ್ನು ಸುಧಾರಿಸುವ ದಿಕ್ಕಿನಲ್ಲಿ ಇದರದು ಅಮೂಲ್ಯ ಕೊಡುಗೆ
- ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?


RSS: