ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..

"ಭರತ ಭೂಮಿಯ ವೈಭವ ವರ್ಣಿಸಲಸದಳ.." ಭಾರತ ದರ್ಶನದ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾನಂದ ಶೆಣೈ

- Login or register to post comments
- 881 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ

"ಭರತ ಭೂಮಿಯ ವೈಭವ ವರ್ಣಿಸಲಸದಳ.." ಭಾರತ ದರ್ಶನದ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾನಂದ ಶೆಣೈ




ಪ್ರತಿಕ್ರಿಯೆಗಳು
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
"ಭಾರತದ ವೈಭವ " ?? ಬರಿ ಕಲ್ಪನೆ . ಎಲ್ಲಾ ದೇಶವು ಒ೦ದೇ .. ಎಲ್ಲಾ ಜನರೂ ಒ೦ದೇ.
ಭಾರತ ಸ್ಪೆಷಲ್ .. ಅಲ್ವೇ ಅಲ್ಲಾ. ಬಡತನ ಮತ್ತು ಸ್ವಾರ್ಥ ಹೆಚ್ಚಿದೆ.
ಎಲ್ಲಾ ದೇಶಗಳಲ್ಲಿ ರಾಜಕೀಯ ಬಿಕ್ಕಟ್ಟೂ ಮತ್ತು ಶೋಷಣೆ ತಾ೦ಡವ ವಾಡುತ್ತಿದೆ.
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
http://www.nst.com.my/Current_News/NST/Friday/National/20070427082909/Ar...
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಹೌದು ಮುರಳಿಯವರೆ,
ನೀವು ಸರಿ, ನಮ್ಮ ದೇಸದಲ್ಲಿ ಪ್ರಾಮಾಣಿಕತೆಯ ಪ್ರಮಾಣ ತುಂಬ ಕಮ್ಮಿ ಇದೆ ಅನ್ಸುತ್ತೆ. ಸುಮ್ನೆ ಬಡಾಯಿ ಕೊಚ್ಚ್ ಕೊತೀವಿ.
ನಮ್ಮ ಪರಿಸರವನ್ನೆ ತಕೋಳೀ...ನಾವು ಅದರ ಶುಚಿನ ಎಷ್ಟರ ಮಟ್ಟಿಗೆ ಕಾಪಾಡ್ತಾ ಇದೀವಿ..??
ನಮ್ಮನ್ನ ನಾವೇ ಪ್ರಶ್ನೆ ಮಾಡ್ಕೊಬೇಕಾಗುತ್ತೆ.
--------------------
ಈ ನಾನು, ಆ ನೀನು ಒಂದೇ ತಾನಿನ ತಾನು - ದ.ರಾ.ಬೇಂದ್ರೆ
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ವಯ್ಬವಣ್ಣ!!
ಯಾವುದಪ್ಪ ನಮ್ಮ ದೇಸ? ಈಗಿರುವ 'ಇಂಡಿಯಾ' ಅನ್ನೋ ದೇಸ ಬರಿ ೬೦ ಏಡು ಹಳೇದು. ಅದಕ್ಕಿ ಮುಂಚಿನ ಪಂರಗಿಯವರು ಆಳಿದ್ದ ದೇಸ ಅದು ಬರಿ ೨೦೦ ಏಡು ಹಳೇದು.
ಆದರೆ ನಮ್ಮ ಕನ್ನಡ ದೇಸ ಕಡ್ಮೆ ಅಂದ್ರೂ ೧೪೦೦ ಏಡು ಹಳೇದು.
ಕನ್ನಡ ದೇಸ ಅಂದರೆ, ಕನ್ನಡ ನೆಲ, ಕನ್ನಡ ನುಡಿ, ಕನ್ನಡರು, ಕನ್ನಡ ಅಡುಗೆ, ಕನ್ನಡ ಉಡುಗೆ, ಕನ್ನಡ ನಂಬಿಕೆಗಳು. ಕವಿರಾಜಮಾರ್ಗವೂ ಇದನ್ನೇ ಹೇಳುವುದು. ಬಂಗಾಳವನ್ನು ಆಳಿದ ಸೇನರು "ನಾವು ಕನ್ನಡರು" ಅಂತ ಹೆಮ್ಮೆ ತೋರಿದ್ದಾರೆ.
( ಇವೊತ್ತು ನಾವು ಯಾವುದೋ ಕಾರಣಗಳಿಂದ ಇಂಡಿಯ ಅನ್ನೋ 'ನೆಲಚೌಕಟ್ಟಿನ' ಒಂದು ಚೂರಾಗಿದ್ದೇವೆ, ಏಸಿಯಾ ಅನ್ನು continentನ ಲ್ಲಿ ಸಿರಿಲಂಕೆಯೆಂಬ ದೇಸದಂತೆ. ).
೧೯೪೭ ಗಂಟ ನಮ್ಮ ಎಮ್ಮೆನಾಡು(ಮೈಸೂರು) ಒಂದು ಸೊತಂತ್ರ ದೇಸವೇ ಆಗಿತ್ತು. ಪಂರಗಿಯವರಿಗೆ ಕಪ್ಪ ಕೊಡತಿದ್ವು ಅದಿರಲಿ, ಆದರೆ ಮೈಸೂರು ದೇಸಕ್ಕೆ ತನ್ನದೇ ಆದ ರಾಸ್ಟ್ರ ಹಾಡು, ಬಾವುಟ, ನುಡಿ ಇತ್ತು.
ಕನ್ನಡ ದೇಸದ ನಾಡುನುಡಿ, ದೇಸನುಡಿ( National language ) ಆಗಿ ಕಡ್ಮೆ ಅಂದ್ರು ೨೦೦೦ ಏಡುಗಳಿಂದ ಕನ್ನಡವೇ ಇತ್ತು. ೧೯೪೭ ಆದ ಮೇಲೆ ಅಲ್ವ ನಮ್ಮನ್ನು ಹಿಂದಿಯವರು ದೆಅಲಿ ಇಂದ ಆಳಕ್ಕೆ ಸುರು ಮಾಡಿದ್ದು. ಹಿಂದಿ ಮತ್ತು ಸಕ್ಕದದ ಮೇಲೆ ಏಡೇಡಿಗೂ ೬೦೦ ಕೋಟಿ ಚಲ್ಲಿ "ಹಿಂದಿ ಪ್ರಚಾರ ಸಭೆ", ಸಕ್ಕದ ಓದೋರಿಗೆ ರೊಕ್ಕ, ಸಕ್ಕದದ ಪಂಡಿತರನ್ನು ರಾಜ್ಯಪಾಲರು, ಹೀಗೆ ಮಾಡ ಹತ್ತಿದ್ದು.!!
೫೦೦೦ ಏಡುಗಳಿಂದ ಈ ತೆಂಕಣ ಏಸಿಯಾದಲ್ಲಿ ಒಂದೇ ನಡಾವಳಿ ಇತ್ತು, ಇದೆ ಅಂತ ಒಂದು ಗುಂಪು ಕೂಗ್ತಾನೆ ಇದೆ. ಆದರೆ ಅದು ದಿಟವೇ?
ಹಾಗಾದರೆ ಹರ್ಷವರ್ದನ ಕುರಿತು ಬರೆದ ಹರ್ಷಚರಿತೆಯಲ್ಲಿ ಪುಲಿಕೇಶಿಯ ಪಡೆಯನ್ನು ರಾಕ್ಷಸಪಡೆ, ಪುಲಿಕೇಶಿಯ ನಾಡು, ರಕ್ಕಸ ನಾಡು ಅಂತ ಏಕೆ ಕರೇತಿದ್ರು, ಆ ಬಡಗಿನವರು? ತೆಂಕಣದವರನ್ನು ಅನಾಗರಿಕರು, ಕಾಡುಜನ ಅನ್ನೋ ಹೊತ್ತಗೆಗಳೂ ಇವೆಯಂತೆ.!
ನಮ್ಮ ಕಾವೇರಿ ಸೀಮೆಯಲ್ಲೇ :
ಕನ್ನಡರು, ತಮಿಳರು(ಚೋಳರು, ಪಾಂಡ್ಯರು, ಕೊಂಗರು ), ಚೇರರು( ಕೇರಳರು), ಎಮ್ಮೆನಾಡಿಗರು( ಕನ್ನಡರು ಬೇರೆ, ಮಹಿಷಮಂಡಲದವರು ಬೇರೆ ಎಂದಿದ್ದ ಕಾಲವೂ ಇತ್ತು ), ತಿಗಳರು, ಬಡಗರು, ಸೋಲಿಗರು, ಇರುಳರು, ತೊದರು, ಒಕ್ಕಲಿಗರು, ಇರುಳಿಗರು, ಕಾಡು ಕುರುಂಬರು, ಜೇನು ಕುರುಂಬರು, ಕೊಡವರು, ಕನ್ನಡ ಹಾರುವರು, ತುಳುವರು ಇನ್ನು ಮುಂತಾದವರು...
ಇವರ ನಡೆ, ನಂಬಿಕೆ, ನುಡಿ, ಉಣಿಸು, ಉಡುಗೆ ಎಲ್ಲವೂ ಬೇರೆ ಬೇರೆ.
ಅದರಲ್ಲೂ ಬಡಗರು, ತೊದರು ಗಿಡಮರಗಳನ್ನು, ಬೆಟ್ಟವನ್ನು ಕಡವಳವೆಂದು ತಿಳಿದವರು. ಇವರು ಲಿಂಗವಾಗಲಿ, ಇನ್ಯಾವ ಬೊಂಬೆಯ ಮುಂದೆ ಕೈಮುಗಿದವರಲ್ಲ. ಆದರೆ ಇವರ ನಂಬಿಕೆಯನ್ನು ಬದಲಿಸಿ, ಇವರನ್ನು ಗೊಂಬೆಗಳ ಪೂಜೆ ಮಾಡಿಸಿದ್ದಾರೆ.
ಈ ಎಲ್ಲ ಬೇರೆತನಗಳನ್ನು ಒಂದೇ ಹೆಸರಲ್ಲಿ ಕರೆದು, ಇದು ಹಿಂಗೇ, ನಮ್ಮ ನಡೆ ಅಂದ್ರೆ ರಾಮಾಯಣ, ಮಾಬಾರತ, ವೇದ, ಬಾಗವತ ಇಲ್ವೇ ಇನ್ಯಾವುದು ಸಕ್ಕದಹೊತ್ತಗೆಯಲ್ಲಿ ಹೇಳಿದ ಹಂಗೆ ಅಂತ ಕರೆಯೋದು, ಏಟು ಸರಿ.!!
ಕನ್ನಡದ ನೆಲದ ನಡೆನುಡಿಯನ್ನು ಕನ್ನಡವಲ್ಲದ ನುಡಿಯ ಹೊತ್ತಗೆ ಸರಿಯಾಗಿ ಹೇಗೆ ಹೇಳಲಾದೀತು?
ಈ ಬೇರೆ ಬೇರೆ ನಡೆಗಳು, ಅವರ ನುಡಿಗಳನ್ನು ಅಳಿಸಿ, ಒಂದೇ ನಡೆಯ ಕಡೆಗೆ, ಒಂದೇ ನುಡಿಯ ಕಡೆಗೆ ಒಯ್ಯವುದು, ಒಂದು ನಡೆಯ ಉಳಿವಿಗಾಗಿ, ಬೆಳೆವಿಗಾಗಿ, ಹಲಹಲವು ನಡೆನುಡಿಗಳ ಬೇರನ್ನೇ ಕಡಿದಂತಾಗುವುದು.!!
ಇಂದು ನಮ್ಮ ಈ ಇಂಡಿಯಾ ದೇಸದಲ್ಲಿ, ನಡೆನುಡಿಗಳ ಸಕ್ಕದಿಸಿಕೆ( sanskritization), ಸಕ್ಕದಿಸಿದ ಕನ್ನಡದ ಹೇರಿಕೆ(ಇದು ಕನ್ನಡನೆಲದ official ಕನ್ನಡ), ಹಿಂದಿ ಹೇರಿಕೆ( Hindi imposition ) ಮತ್ತು ಇಂಗಲೀಸಿನ ಮರಳಿಂದ ನಮ್ಮ ನಮ್ಮ ಸಣ್ಣಪುಟ್ಟ ಪಂಗಡಗಳ ನಡೆನುಡಿ ಅಳಿಸಿ ಹೋಗುತ್ತಿದೆ.
ಹೀಗೆ ಹೇರಿಕೆ ಮುಂದುವರಿದರೆ, ಗರತಿಯ ಪದ, ಡೊಳ್ಳಿನ ಪದ, ಸೋಬಾನೆ ಹಾಡು, ಕೋಲಾಟದ ಹಾಡು, ಬಯಲಾಟ, ಗೊರವರ ಕುಣಿತ ಮುಂದಾವನ್ನು ಬರಿ ಇತಿಹಾಸದ ಹೊತ್ತಗೆಯಲ್ಲಿ ಅಪ್ಪಿತಪ್ಪಿ ಓದಬಹುದು.
ಜಪಾನ್ ದೇಸದಲ್ಲಿ, ಜನರು ಜಪಾನರು, ಅವರ ನುಡಿ ಜಪಾನಿ, ಅವರ ನಡೆ ಜಪಾನಿ ನಡೆ, ಅವರ ಉಡುಗೆ ಜಪಾನಿ ಉಡುಗೆ, ಅವರ ಅಡುಗೆ ಜಪಾನಿ ಅಡುಗೆ.
ಆದರೆ
"ಇಂಡಿಯ/ಬಾರತ" ಒಂದು ನೆಲದ ಚೌಕಟ್ಟ ಆಟೇ. "ಬಾರತ" ಎಂಬ ಒಂದು ನುಡಿಯಿಲ್ಲ, ಒಂದು ನಡೆಯಿಲ್ಲ. ಒಂದು ಉಡುಗೆ ಇಲ್ಲ, ಒಂದು ನಂಬಿಕೆಯಿಲ್ಲ, ಒಂದು ಅಡುಗೆಯಿಲ್ಲ.
ಇರುವುದು ಕನ್ನಡವೆಂಬ ನೆಲ, ಕನ್ನಡವೆಂಬ ನುಡಿ, ಕನ್ನಡವೆಂಬ ನಡೆ, ಕನ್ನಡವೆಂಬ ಉಡುಗೆ, ಕನ್ನಡವೆಂಬ ನಂಬಿಕೆಗಳು, ಕನ್ನಡರ ಅಡುಗೆ!
India is not a country, it is composite of countries. ಅದಕ್ಕೆ ನಮ್ಮ ನಮ್ಮ ನಡೆನುಡಿಗಳನ್ನು ಅವುಗಳ ತನ್ತನಗಳನ್ನು ಉಳಸಿಕೊಂಡು ಹೋಗಲು, ಈ ಹೇರಿಕೆಗಳ ದೊಡ್ಡ ಅಡೆತಡೆ ಇದೆ. ಇವು ನಮ್ಮ ನಮ್ಮ native ನಡೆನುಡಿಗಳು ಅಳಿಸ ಹಾಕುತ್ತಿವೆ.
===========================================================
ನಡೆ / ನಡಾವಳಿ = civilization, culture.
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಮಏಸಣ್ಣಾ ,
ತಲೆಬಾಗ್ದೆ ! ಅಡ್ಬಿದ್ದೆ !!,
ಕನ್ನಡ ರಾಷ್ಟ್ರೀಯತೆ ಅಂತ ಏನೋ ಪುಸ್ತಕ ಬಂದದ ; ಅಂಗಂದ್ರೇನು ಅಂತ ತಿಳ್ಕೊಳ್ಲಿಕ್ಕೆ ಓದಬೇಕು ಅಂದ್ಕೊಂಡಿದ್ದೆ .
ಇಲ್ಲಿರೋ ನಿಮ್ಮ ಟಿಪ್ಪಣಿ ನೋಡಿದ್ರ ಆ ಪುಸ್ತ್ಕಾ ಹುಡುಕೋ ಕಾರಣSನ ಇಲ್ಲಾ !
ಹೊಸ ನೋಟ ಕೊಟ್ರಿ !
ಭಾಳಾ ಥ್ಯಾಂಕ್ಸರೆಪಾ ನಿಮಗ .
"ಕನ್ನಡವೇ ತಾಯ್ನುಡಿಯು , ಕರುನಾಡು ತಾಯ್ನಾಡು ,
ಕನ್ನಡಿಗನು ನೀನೆಂಬ ಅಭಿಮಾನವಿರಲಿ"
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
"ಕನ್ನಡ ರಾಷ್ಟ್ರೀಯತೆ"
ಮಿಶ್ರಿಕೋಟಿ ಸರಾ,
ಆ ಹೊತ್ತಿಗೆ ಇನ್ನೂ ಓದಿಲ್ರೀ ನಾನು. ಓದ್ತೀನಿ. ಇತ್ತ ಕೊಂಚ ಓದಕ್ಕೆ ಬಿಡುವು ಇಲ್ಲ ಈಗೀಗ.
ಹೇಗೆ ಆಂದ್ರರು, ಆಂದ್ರವನ್ನು ರಾಷ್ಟ್ರ ಅಂತಲೇ ಕರೇತಾರೋ, ಹಾಗೆ
ನಮ್ಮದು ಕನ್ನಡ ರಾಷ್ಟ್ರವೇ, ನಮ್ಮ ರಾಷ್ಟ್ರೀಯತೆ ಕನ್ನಡವೇ, ನಮ್ಮ ರಾಷ್ಟ್ರಭಾಷೆಯೂ ಕನ್ನಡವೇ ಇವಿಷ್ಟಕ್ಕೂ ನಾವು ಕನ್ನಡಿಗರು ಸೇರಿರುವ 'ಇಂಡಿಯಾ ಒಕ್ಕೂಟ'ದಾಗ ಅನುವು ಐತಿ.
ನಮ್ಮ constitution ಮೊದಲಾಗೋದೇ ಹಿಂಗಾ
" India ie. Bharat is a Union of States. It is a Sovereign Socialist Democratic Republic with a parliamentary system of government. The Republic is governed in terms of the Constitution of India which was adopted by the Constituent Assembly on 26th November 1949 and came into force on 26th January 1950."
http://indiacode.nic.in/coiweb/introd.htm
"ಇಂಡಿಯ, ಅಂದ್ರೆ ಬಾರತ ಒಂದು 'ನಾಡು'ಗಳ ಒಕ್ಕೂಟ. ........(..."
ಇಂಗ್ಲೀಶ್ನಾಗ state ಅನ್ನೋದಕ್ಕೆ ಬಹಳ ಅರ್ಥಗೊಳು ಇವೆ. ಅದರಾಗೊಂದು
"A state is an organized political community occupying a definite territory, having an organized government, and possessing internal and external sovereignty."
ಇದನ್ನು ಕನ್ನಡದಲ್ಲಿ ಬರೆಯದೇ ಇರೋದಕ್ನೆ ನಂಗೆ ನೋವಿದೆ.
state = nation ಅಂತವು ತಗೋಬೋದು. ಆದ್ರೆ. ನಾವು ಕನ್ನಡಿಗರು ಈ ಇಂಡಿಯಾ ಒಕ್ಕೂಟದಿಂದ ಆಚೆ ಬರಬೇಕು ಅಂತ ನಂಗೆ ಯಾವ ಬಯಕೆ ಇಲ್ಲ. ಆದರೆ ನಮಗೆ ನಮ್ಮ ಕನ್ನಡ ನುಡಿ, ಕನ್ನಡ ನಡೆ, ಕನ್ನಡತನವನ್ನು ಉಳಿಸಿ ಬೆಳೆಸಲು ಎಲ್ಲಾ ಅನುವಿರಬೇಕು. ಆದ್ರೆ ಇಂದು ಕೋರ್ಟ್ನಾನಾಗೆ ಕನ್ನಡದಲ್ಲಿ ತೀರ್ಪು ಬರೆಯೋ ಹಾಗಿಲ್ಲ, ಬರೀ ಹಿಂದಿ ಇಲ್ವೇ ಇಂಗ್ಲೀಶ್ನಾಗೆ ಬರೇಬೋದು. central ಸರಕಾರದ ಯಾವುದೇ ಕೆಲಸ ಸಿಕ್ಕಬೇಕಾದರೆ ಹಿಂದಿ ಕಲಿಯಬೇಕು( ಆದ್ರೆ ತಮಿಳರಿಗೆ ಇದರ 'ಹೊರತು' ಇದೆ ). ಇದೆಲ್ಲ ನಮ್ಮ ಮೇಲೆ 'ಹಿಂದಿ/ಇಂಗ್ಲೀಶ್' ಹೇರಿಕೆ ಅಲ್ವಾ?
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಮುರಳಿ,
ನಿಮ್ಮ ಮಾತಿಗೆ ನನ್ನ ಒಪ್ಪಿಗೆ ಅಯ್ತೆ!
ಎಲ್ಲಿ ವರೆಗೆ ನಾವು "ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ, ನಮ್ಮ ಅದೂ ನಮ್ಮ ಇದೂ" ಅಂತ ಪೊಳ್ಳು ಜಂಬ ಬಿಟ್ಟು, ಈ ಇಂಡಿಯದೇಸದ ನಾವು ದಿಟವಾಗಲೂ ಎಲ್ಲದರಲ್ಲೂ ಹಿಂದೆ, ಗಬ್ಬುಗಳು, ಅಂತ ನಿಜ ಒಪ್ಪಿಕೊಳ್ಳಲ್ಲವೋ ಅಲ್ಲಿ ಗಂಟ ನಾವು ನಮ್ಮ ದೇಸ ಉದ್ದಾರ ಆಗಲ್ಲ.!!
ಆದ್ಯಾವುದೋ ಓಬಿರಾಯನ ಕಾಲದಾಗೆ ನಲಂದಾ ಅಂತ ಅದೆಲ್ಲೋ ಇತ್ತಂತೆ, ಅದಕ್ಕೆ ಹೆಮ್ಮೆ, ಯಾಕೆ? ಹಿಂದೆ ಇತ್ತು ಸರಿ ಅದಕ್ಕೇನೀಗ?
ಇವೊತ್ತು ಇದ್ದಾ? ಎಲ್ಲ ನಮ್ ಹೈಕಳೂ ಮುಂದೋದಕ್ಕೆ ಅಮೇರಿಕಾ, ಯೂರೋಪೂ ಅಂತ ಓಡ್ತಾವ್ರೆ. ಹೋದೋರಲ್ಲಿ ಸಿಕ್ಕಾಪಟ್ಟೆ ಮಂದಿ ಅಲ್ಲೇ ನೆಲೆಸ್ತಾವ್ರೆ, ಅವರಿಗೆ ತಿರುಗಿ ನಮ್ಮ ದೇಸಕ್ಕೆ ವಾಪಸ್ ಬರಕ್ಕೂ ರವಸ್ಟು ಇಸ್ಟಯಿಲ್ಲ!
======================================
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಮಹೇಸಣ್ಣ, ನಮ್ ಇಂಡಿಯಾನಾ ಒಂದ್ ಹೊತ್ತಲ್ಲಿ 'ಬಂಗಾರದ ಗುಬ್ಬಿ' ಅಂತಿದ್ರು ಹೊರಗಿನವರು ಗೊತ್ತನ? ಹೋಗಲಿ, ಈಗಿನ ಹೊತ್ತನ್ನೇ ತುಗೋರಿ, ಜಗದಾಗಿನ ಎಲ್ಲರಿಗಿಂತ ಚೆಂದ್ ಹೆಣ್‍ಮಗಳು ಅಂತಾ ಹೆಸರು ತುಗೊಂಡಿರಕ್ಕಿ(http://abclocal.go.com/wpvi/story?section=entertainment&id=5231013) ನಮ್ಮ ಇಂಡಿಯಾದಕ್ಕಿ. ೨೦೨೦ ರ ಹೊತ್ತಿಗೆ ಇಂಡಿಯಾ ಜಗದೊಳಗ ಎಲ್ಲರಿಗಿಂತ ಗಟ್ಟಿ ನಾಡ್ ಅನ್ಸ್ ಕೊತೈತಿ ಅಂತ ತಿಳದವರು ವಿಚಾರ ಮಾಡಿ ಹೇಳ್ಯಾರ್ ಗೊತ್ತೇನು? ಎಲ್ಲಾ ಐತಿ ನಮ್ ಇಂಡಿಯಾದಾಗ್, ಶ್ಯಾಣಾತನಕ್ಕಂತೂ ಏನೂ ಕಡಿಮಿ ಇಲ್ಲಾ, ಆದ್ರ ಏನ್ ಮಾಡೋದು ಮೊದ್ಲಿಂದ್ಲು ನಮ್ ಇಂಡಿಯಾ ಮ್ಯಾಲ್ ದಂಡೆತ್ತಿ ಬಂದು ನಮ್ಮನ್ ಲೂಟಿ ಮಾಡಿದ್ದೇ ಹೆಚ್ಚು. ಹಾಂಗ್ ಬಂದವರನ್ನು ಒದ್ದು ಓಡಿಸೋದ್ ಆಗಿಲ್ಲ ನಮ್ಮವ್ರಿಗೆ, ತಾಕತ್ ಇಲ್ಲಂತ್ ಅಲ್ಲಾ, ಒಗ್ಗಟ್ ಇಲ್ಲದಕ್ಕ. ತುರುಕ್ರು ನಮ್ ನಮ್ಮೊಳಗಿನ ಒಳಜಗಳಗಳ ಲಾಬ ತುಗೊಂಡು ಆಳಿದ್ರು, ಕತ್ತಿ ತೋರ್ಸಿ, ನಮ್ಮವ್ರನ್ನ್ ತಮ್ ಧರ್ಮಕ್ ಮತಾಂತರ ಮಾಡ್ಕೊಂಡ್ರು, ಇಂಗಲೀಸರೂ ಆದs ಆಟ ಆಡಿದ್ರು, ಅವರೂ ಬಳಕಿ ಮಾಡ್ಕೊಂಡಿದ್ ನಮ್ ಒಳಜಗಳಗಳನ್ನs. ಆದರೂ ನಾವ್ ನಮ್ ನಮ್ಮೊಳಗ್ ಜಗಳಾಡುದ್ ಬಿಟ್ಟಿಲ್ಲಾ, ಆಗ ಮರಾಟರು, ಚಾಲುಕ್ಯರು, ಅವ್ರು ಇವ್ರು ಅಂತೇಳಿ ನಾಡ್‍ಗೋಳ್ ಇದ್ದು, ಈಗ ರಾಜ್ಯಗೋಳ್ ಅದಾವು. ಇದರ ಲಾಬ ತುಗೊಂಡ್ ನಮ್ಮನ್ ಆಳಾಕ್ ಮುಂದ್ ಯಾರ್ ಬರ್ತಾರೋ?
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಗೌಡ್ರಾ!
ತುರುಕರಿಗೂ ಮುನ್ನ ನಮ್ಮ ತೆಂಕಣಕ್ಕೆ ದಮ್ಮ ಹರಡಕ್ಕೆ, ಬೌದ್ರು, ಜಿನಿಗರು, ವೈದಿಕರು, ಬಂದಿದ್ರು. ಅವರೂ ನಮ್ಮನ್ನ ಅವರವರ ದಮ್ಮಕ್ಕೆ ಮಾರ್ಪಡಿಸಿದ್ರು. ನಮ್ಮ ತಲೆಯೊಳಗೆ ಅವರ ನಂಬಿಕೆ ತುಂಬಿದ್ರು.
ಆ ಆ ದಮ್ಮದೋರು, ಅವರವರ ನುಡಿನೂ ಹೇರಿದ್ರು, ಬೌದ್ರು, ಜಿನಿಗರು ಬಂದು ಪಾಲಿ/ಪಾಗದ(ಪ್ರಾಕೃತ)' ವೈದಿಕರು ಸಕ್ಕದ; ಸಿರಿವೈಷ್ಣವರು ತಮಿಳು( ಮೇಲುಕೋಟೆ ನಾರಯಣಂಗೆ, ಹೊಳೆನರಸೀಪುರ ನರಸಿಂಹಂಗೆ ತಮಿಳು ಪೂಜೆ ನೋಡಿರೋರ್ಗೆ ಗೊತ್ತು); ತುರುಕರು ಪಾರಸೀ/ಉರ್ದು, ಕಿರಿಸ್ತಾನರು ಇಂಗಲೀಸು, ಪೋರ್ತುಗೀಸು,; ಈಗ ನಡೇತಾ ಇರೋದು ಹಿಂದೀ/ಇಂಗ್ಲೀಸಿನ ಕಾಲ.
ಹಿಂಗೆ ಅವರವರು ಬಂದು ನಮ್ ಕನ್ನಡಾನ ಮೂಲೆಗುಂಪು ಮಾಡಿ, ತಮ್ತಮ್ಮ ನಡೆನುಡಿ ಹೇರಿದ್ರು, ನಾವು ತಪ್ಪಗೆ ಬಾಯಿ ಮುಚ್ಕೊಂಡು ಹೇರಿಸ್ಕೊಂಡ್ವು!!
ನಮ್ ಕಣ್ಮಂದೇನೂ ನಡೇತಾ ಐತೆ. ಅಂದ್ರು ನಾವು ತೆಪ್ಗೆ ಇಲ್ವಾ?!!!
======================================
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಓದೋಕಿರಲಿ !!! ಒಬ್ಬ ಕೆಲಸ ಸಿಗದೆ ಇರಾಕ್ ನಲ್ಲಿ ಅಮೇರಿಕಾ ಸೇನೆಗೆ ಕೂಲಿ ಕೆಲ್ಸಾ ಮಾಡ್ತಾಯಿದ್ದಾನೆ.
ಅಲ್ಲಿಗೆ ಹೋಗಿ ಆ ದೇಶವೇ ಚೆನ್ನಾಗಿದೆ ಅ೦ತಾನೇ ? ಅಲ್ಲಿ ಅವನಿಗೆ ಎಲ್ಲಾ ವಿಷಯದಲ್ಲೂ "CARE" ತಗೋತ್ತಾರ೦ತೆ ಅಮೇರಿಕಾದವರು.
ನಮ್ಮಲ್ಲೆ ಯಾವುದೇ 'CARING System" ಇಲ್ವ೦ತೆ. ಇದಕ್ಕೆಲ್ಲಾ MAcaualay ಕಟ್ಟಿಟ್ಟಾ ಶಿಕ್ಷಣ ಪದ್ದತಿ ಯೆ ಕಾರಣ.
ನಮ್ಮನ್ನು ನಮ್ಮ ಭಾಷೆಯಿ೦ದ ಕಿತ್ತು ಬೇರೆ ಯಾರನ್ನೋ ಮಾಡಿಬಿಟ್ಟ.
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಮೇಕಲೆಯ ಮಿನಿಟ್ಟನ್ನು ಓದಿರಿ.. ಅವನು ಏಕೆ ಹಂಗೆ ಮಾಡಿದ ಎಂದು ತಿಳಿಯುವುದು.
ಅವನು ತನ್ನ ದೇಸಕ್ಕಾಗಿ, ತನ್ನ ರಾಣಿಗಾಗಿ ಹಾಗೆ ಮಾಡಿದ. ಅದು ಅವನು ಜಾಣತನ ಮತ್ತು ನಿಯತ್ತು ತೋರುತ್ತದೆ.
ಅವನ ಕಡೆ ಬೆಳ್ಳು ಮಾಡಿದ್ರೆ ಏನು ಬಂತು ಬಾಗ್ಯ?
ನಮ್ಮ ದೇಸಕ್ಕೂ ಸೊತಂತ್ರ ಅಂತ ಬಂದು ೬೦ ಏಡು ಆಯ್ತಲ್ಲ, ಇಲ್ಲಿ ಗಂಟ ಏನು ಕತ್ತ ಕಾಯ್ತಾವ್ರಾ ನಮ್ಮ ಆಳೋರು?
ನಮ್ಮ ಎಂಪಿನೇ ಹೋಗಿ ಒಂದು ಹೆಣ್ಣನ್ನ ಕೆನಡಕ್ಕ ಮಾರಿ ಬಂದವ್ನೆ. ಅದೂ ಅವನು 'BJP' ಅನ್ನೋ ದೊಡ್ಡ ಪಾರ್ಟಿಯವನು.
ಇನ್ನು ನಮ್ಮ ಬಾಸೆಯಲ್ಲಿ ಕಲಿಕೆ, ಒಂದು ಸರತಿ ಕನ್ನಡ ಮೀಡಿಯಂ maths ಮತ್ತು science ಬುಕ್ಕುಗಳನ್ನು ಓದಿ ನೋಡಿ ತಿಳಿಯುತ್ತೆ, ಅದೂ "ನಮ್ಮ ಕನ್ನಡ ನುಡಿಯೋ", ಇಲ್ವೇ ಯಾರ "ಕನ್ನಡ ಬಾಸೆ" ಅಂತ.
ಕನ್ನಡದಲ್ಲಿ B.Com, BSc, ಕೆಲವು BA ಮಾಡಕ್ಕೆ ಸವಲತ್ತಿಲ್ಲ. ಕನ್ನಡದಲ್ಲಿ ಹಲವೆಡೆ PUC science, commerce ಮಾಡಕ್ಕೂ ಆಗಲ್ಲ.
======================================
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಅಂತ ಕೆಟ್ಟ ಆಡಳಿತಗಾರರನ್ನ ಆಯ್ದು ಕಳಿಸಿದ ನಾವು ದಡ್ಡರು, ಬೇಕಾಬಿಟ್ಟಿ ಮಂದಿ!!
======================================
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಸ್ವಾಮೀ!! "ದೇಸ" ಅಲ್ಲ..... ದೇಶ....
India ಅಲ್ಲ "ಭಾರತ".... (ತಾವು ಕನ್ನಡಿಗರೋ ಆಂಗ್ಲರೋ ?)
ಮೊದಲು ಕನ್ನಡವನ್ನು ಕಲಿಯಿರಿ....
ನಿಮ್ಮ ದೇಶ ಭಾಷೆಗಳ ಬಗ್ಗೆ ಅಭಿಮಾನವಿರಲಿ...
ವಿದ್ಯಾನಂದರು ಎಲ್ಲಿಯೂ ಭಾರತ ಮಾತ್ರ ಶ್ರೇಷ್ಥ ಎಂದು ಹೇಳಿಲ್ಲ.ತಮ್ಮಲ್ಲಿ ಅಂಥ ಯಾವುದೇ ಪುರಾವೆಗಳಿದ್ದರೆ ದಯವಿಟ್ಟು ತೋರಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿ!!
ಸದಾ ನಿಮ್ಮವನೇ,
ಪ್ರಸಾದ
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
1) "ದೇಸ" ಇದು ನಿಕ್ಕುವ ಸರಿ ಪದವೇ. ನೀವು 'ದೇಸಿ' ಅಲ್ಲ 'ದೇಶಿ' ಅಂತ ಹೇಳಿದರೂ, ನಾವು 'ದೇಸಿ' ಅನ್ನೋದೇ. ಏಕೆಂದರೆ ಅಚ್ಚಕನ್ನಡದಲ್ಲಿ 'ಶ/ಷ' ಇಲ್ಲ.
2) ಕನ್ನಡಿಗರು ಯಾವ ಹಳೆಯ ಹೊತ್ತಗೆಯಲ್ಲೂ ಅವರು 'ಭಾರತ'ದವರು ಎಂದು ಹೇಳಿಕೊಂಡಿಲ್ಲ. ಏನಿದ್ದರು 1947 ಬಳಿಕ ನಮ್ಮ ಮೈಸೂರು ದೇಸ 'Indian Union'ಗೆ ಸೇರಿದ ಬಳಿಕ ನಮ್ಮ ಕೆಲವರು ಹೀಗೆ ಕರೆಯ ಹತ್ತಿದ್ದು.
ನಾನು ಕನ್ನಡಿಗನೇ, ನಮ್ಮ ದೇಸದ ಹೆಸರು ಇಂಡಿಯಾ! ಬೇಕಾದರೆ ನನ್ನ passport ತೋರಿಸುತ್ತೇನೆ
.
ಭಾರತ ಅಂತವೂ ಇನ್ನೊಂದು ಹೆಸರಿದೆ ಅದಕ್ಕೆ. !!
ನನ್ನ ದೇಸದ ಹೆಸರು "Indian Union".
ಈ ಸಂಗತಿಯಲ್ಲಿ ನಾನು ಯಾವ ಪುರಾವೆಯನ್ನು ತೋರಿಸಬೇಕಾಗಿಲ್ಲ. ಏಕೆಂದರೆ ನಾನು
ಬರೆದುದು ಹೀಗೆ
ನಿಮ್ಮ ಮಾತಿಗೆ ನನ್ನ ಒಪ್ಪಿಗೆ ಅಯ್ತೆ!
ಎಲ್ಲಿ ವರೆಗೆ ನಾವು "ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ, ನಮ್ಮ ಅದೂ ನಮ್ಮ ಇದೂ" ಅಂತ ಪೊಳ್ಳು ಜಂಬ ಬಿಟ್ಟು, ಈ ಇಂಡಿಯದೇಸದ ನಾವು ದಿಟವಾಗಲೂ ಎಲ್ಲದರಲ್ಲೂ ಹಿಂದೆ, ಗಬ್ಬುಗಳು, ಅಂತ ನಿಜ ಒಪ್ಪಿಕೊಳ್ಳಲ್ಲವೋ ಅಲ್ಲಿ ಗಂಟ ನಾವು ನಮ್ಮ ದೇಸ ಉದ್ದಾರ ಆಗಲ್ಲ.!!
ಆದ್ಯಾವುದೋ ಓಬಿರಾಯನ ಕಾಲದಾಗೆ ನಲಂದಾ ಅಂತ ಅದೆಲ್ಲೋ ಇತ್ತಂತೆ, ಅದಕ್ಕೆ ಹೆಮ್ಮೆ, ಯಾಕೆ? ಹಿಂದೆ ಇತ್ತು ಸರಿ ಅದಕ್ಕೇನೀಗ?
ಇವೊತ್ತು ಇದ್ದಾ? ಎಲ್ಲ ನಮ್ ಹೈಕಳೂ ಮುಂದೋದಕ್ಕೆ ಅಮೇರಿಕಾ, ಯೂರೋಪೂ ಅಂತ ಓಡ್ತಾವ್ರೆ. ಹೋದೋರಲ್ಲಿ ಸಿಕ್ಕಾಪಟ್ಟೆ ಮಂದಿ ಅಲ್ಲೇ ನೆಲೆಸ್ತಾವ್ರೆ, ಅವರಿಗೆ ತಿರುಗಿ ನಮ್ಮ ದೇಸಕ್ಕೆ ವಾಪಸ್ ಬರಕ್ಕೂ ರವಸ್ಟು ಇಸ್ಟಯಿಲ್ಲ!
ಇಲ್ಲಿ ವಿದ್ಯಾನಂದರು ಅನ್ನೋರ ಬಗ್ಗೆ ಹೇಳೇ ಇಲ್ಲ ನಾನು. ನಾನು ಮುರುಳಿ ಅವರ ಮಾತಿಗೆ ದನಿ ಸೇರಿಸಿದ್ದು! ನನಗೆ ಈ ವಿದ್ಯಾನಂದರು ಯಾರು ಎಂದು ಈ ಎಳೆ ನೋಡಿದ ಮೇಲೇ ತಿಳಿದುದು.
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
technically ..small correction.
ನಮ್ಮ ದೇಶದ ಹೆಸರು : ಇಂಡಿಯಾ ಅಥವಾ ಭಾರತ ಅಷ್ಟೆ! Indian Union ಅಲ್ಲ.
Article 1 : India, that is Bharat, shall be a Union of States. Ref : http://lawmin.nic.in/legislative/Art1-242%20(1-88).doc
ಸಂಪೂರ್ಣ ಸಂವಿಧಾನಕ್ಕಾಗಿ : http://indiacode.nic.in/coiweb/welcome.html
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ನಮ್ಮ constitution ಶುರುವಾಗೋದೇ ಹಿಂಗಾ
"
India ie. Bharat is a Union of States. It is a Sovereign Socialist Democratic Republic with a parliamentary system of government. The Republic is governed in terms of the Constitution of India which was adopted by the Constituent Assembly on 26th November 1949 and came into force on 26th January 1950."http://indiacode.nic.in/coiweb/introd.htm
"ಇಂಡಿಯ, ಅಂದ್ರೆ ಬಾರತ ಒಂದು 'ನಾಡು'ಗಳ ಒಕ್ಕೂಟ. ........(..."..
ಕನ್ನಡದಾಗೆ ನಮ್ಮ Constitution ಸಿಕ್ತದಾ? ಅಂತ ಹುಡುಕ್ತಿವ್ನಿ. ಸಿಕ್ದೋರು, ತೋರ್ಸಿ!
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
"....ಇಂಡಿಯ, ಅಂದ್ರೆ ಬಾರತ ಒಂದು 'ನಾಡು'ಗಳ ಒಕ್ಕೂಟ....."
ಇಲ್ಲಿ ನಾಡು = ದೇಶ=ದೇಸ ಅಲ್ವ. ನಾಡು= ರಾಜ್ಯ ಅಲ್ಲ
ನೀವು ಹೇಳದೂ.....ಕನ್ನಡ, ತಮಿಳು, ತೆಲುಗು...ಹೀಗೆ ಹಲವು ನಾಡು(ದೇಸ) ಗಳಿಂದಾದ ದೊಡ್ಡ ನಾಡು ಬಾರತ ಅಂತಲೇ ?
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಅವ್ದು.. ನೀವೇನು ಅಂತೀರ?
ರಾಜ್ಯ ಅಂದ್ರೂ ದೇಸವೇ!!
ನಾಡು (ದೇ) (ನಾ) ೧ ಜನವಸತಿಯುಳ್ಳ ಪ್ರದೇಶ ೨ ದೇಶ, ಪ್ರಾಂತ್ಯ, ರಾಜ್ಯ
-Prism!!
Ka. nāḍu (cultivated, planted) country (in opposition to kāḍu), province, district, country (in opposition to the town)
-ದ್ರಾವಿಡ ಒರೆಗಂಟು!
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ನಾನು ತಿಳಿದುಕೊಂಡಿರುವ ಮಟ್ಟಿಗೆ, ನಮ್ಮ ದೇಸದ ರಾಜ್ಯಗಳಿಗೆ ತಮ್ಮದೇ ಆದ ಯಾವುದೆ ಬಾವುಟವಿರುವುದಿಲ್ಲ, ಸೇನೆಯಿರುವುದಿಲ್ಲ. ಪಾಸ್ ಪೋರ್ಟ್ ಇರುವುದಿಲ್ಲ.(ಹೀಗೆ ಇನ್ನು ಹಲವು) ಆದ್ರೆ ದೇಸಕ್ಕೆ ಇವೆಲ್ಲ ಇರುತ್ತೆ.
ಒಪ್ದೆ... ನಮ್ದು ಕನ್ನಡ ನಾಡು(ದೇಸ) ಆಗಿತ್ತು. ಈಗ ಬಾವುಟವೊಂದು ಮಾತ್ರ ಇದೆ. ...ಅಂದ್ರೆ ನಮ್ಮದು ಕನ್ನಡ ಒಟ್ಟಾರೆಯಾಗಿ ನಾಡಾಗಿ ಉಳಿದಿಲ್ಲ.. ಈ ಅದು ರಾಜ್ಯ
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
"ಬಾವುಟವಿರುವುದಿಲ್ಲ, ಸೇನೆಯಿರುವುದಿಲ್ಲ. ಪಾಸ್ ಪೋರ್ಟ್ ಇರುವುದಿಲ್ಲ."
ಇವೆಲ್ಲ ಬರೀ ಗುರುತುಗಳು. ಇವೆಲ್ಲ ಇರದಿದ್ದರೂ ದೇಸ ಇರಬಹುದು. ಪಡೆ ಇಲ್ಲ ಯಾಕೆ, ಇರುವ ಕನ್ನಡಿಗರಲ್ಲಾ ಆ ಕನ್ನಡಪಡೆಯಾಳುಗಳೇ.!!
ಒಂದು "ನಾಡು"ಇಗೆ ನೆಲಬೇಕು, ನಾಡಿಗರು ಬೇಕು, ಅವರ ನಡುವೆ ಒಂದು ನುಡಿಬೇಕು. ಇಷ್ಟು ಸಾಕು.!!
ರಾಜ್ಯ ಪದದ ಅರ್ಥವೂ ನಾಡು, ದೇಸ ಅಂತವೇ!!!
ಈಗಲೂ ಕನ್ನಡ "ನಾಡು" ಆಗೇ ಇದೆ.
ಭಾರತ "ಗಣರಾಜ್ಯ"
ಪೇಯ = ಕುಡಿಯಲ್ಪಡುವ/ಕುಡಿಯಬೇಕಾದ
ಭೋಗ್ಯ = ಸವಿಯಲ್ಬಡುವ/ಸವಿಯಬೇಕಾದ
ಯೋಗ್ಯ = ಸೇರಲ್ಪಡುವ/ಸೇರಬೇಕಾದ
ರಾಜ್ಯ = ಆಳ್ವಿಕೆ ಮಾಡಲ್ಪಡುವ/ಆಳ್ವಿಕೆ ಮಾಡಬೇಕಾದ
ಉ: ಭಾರತ ದರ್ಶನದ ಶ್ರೀ ವಿದ್ಯಾನಂದ ಶೆಣೈ ಒಂದು ನೆನಪು..
ಓಂದು ಕಥೆ ನೆಂಪಾಯಿತು
ಲೋಕ ಸೃಷ್ಟಿಸಿದ ದೇವೆರ ಹತ್ರ ಬೇರೆ ದೇಶದವರು ಕೇಳಿದ್ರಂತೆ ಯಾಕೆ ಭಾರತಕ್ಕೆ ಮಾತ್ರ ಬೆಟ್ಟ, ಗುಡ್ಡ, ನಧಿ, ಫಲವತ್ತಾದ ಭೂಮಿ ಯೆಲ್ಲಾ ಕೊಟ್ಟಿರೋದು ಯಾಕೆ ಅಂತ. ಅದಕ್ಕೆ ದೇವರು ಅಂದ್ರಂತೆ ಯೆಲ್ಲಾ ಕೊಟ್ಟಿದ್ದೇನೆ ಹಾಗೆ ಅಲ್ಲಿ ಜನಕ್ಕೆ ಅದ್ರ ಬಗ್ಗೆ ಅರಿವು ಇಲ್ಲದಂತೆ ಮಾಡಿದ್ದಿನಿ.