ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !

[ಜುಲೈ, ೩೧ ರ ೧೯೦೨- ಡಿಸೆಂಬರ್, ೨೬, ೧೯೮೯]
" ಶಂಕರ್ಸ್ ವೀಕ್ಲಿ "ಯ ಬಗ್ಗೆ ಎಷ್ಟುಜನ ಕೇಳಿದ್ದೀರಿ ? ಈ ವ್ಯಂಗ್ಯ-ಚಿತ್ರ ಸಾಪ್ತಾಹಿಕವನ್ನು ದೆಹಲಿಯಲ್ಲಿ ನಡೆಸಿಕೊಂಡು ಬಂದ ಶ್ರೇಯಸ್ಸು, ಶಂಕರ್ ರವರದು. ಅವರು ನೆಹರೂರವರಿಗೆ ಪ್ರಿಯರಾದವರು. ಆದರೆ ಅವರ ತಪ್ಪುಗಳನ್ನು ಮುಲಾಜಿಲ್ಲದೆ, ತಮ್ಮ ಚಿತ್ರಗಳಲ್ಲಿ ವರದಿ ಮಾಡುತ್ತಿದ್ದರು.
ನಮ್ಮ ಚಿತ್ರ- ಬ್ರಹ್ಮ , ಆರ್. ಕೆ. ಲಕ್ಷ್ಮಣ್ ರಿಗೂ ಅವರೇ ಗುರುಗಳಂತೆ !
ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಡಾ. ಕೇಶವ ಶಂಕರ ಪಿಳ್ಳೆ, ಹುಟ್ಟಿದ್ದು, ಕಾಯಮ್ ಕುಲಮ್ ಎಂಬ ಕೇರಳದ ಹಳ್ಳಿಯಲ್ಲಿ. ಅವರು ೧೯೨೭ ರಲ್ಲಿ ಬೊಂಬಾಯಿಗೆ ಬಂದರು. ಮೊದಲು ಲಾ ಓದುವ ಇಚ್ಛೆ ಇತ್ತು. ಆದರೆ ಅವರು ತಮ್ಮ ಪ್ರವೃತ್ತಿಯಾದ, ವ್ಯಂಗ್ಯಚಿತ್ರ ಬರೆಯುವುದರಲ್ಲಿ ಮುಂದುವರೆಯಲು ಇಷ್ಟಪಟ್ಟರು. ೧೯೩೨ ರಲ್ಲಿ ಹಿಂದೂಸ್ಥಾನ್ ಟೈಮ್ಸ್ ನಲ್ಲಿ ಸೇರಿದರು. ೧೯೪೬ ರವರೆಗೂ ಅಲ್ಲೇ ಕೆಲಸಮಾಡಿದರು. "ಶಂಕರ್ಸ್ ವೀಕ್ಲಿ " ಪ್ರಾರಂಭಿಸಿದ್ದು ೧೯೪೮ ರಲ್ಲಿ. ೧೯೭೫ ರಲ್ಲಿ ಅದನ್ನು ಮುಚ್ಚಿ, [Children's World, Monthly ] ನ್ನು ಸ್ಥಾಪಿಸಿದರು. ೧೯೫೭ ರಲ್ಲಿ ತಮ್ಮ ಪ್ರಖ್ಯಾತ, Children's Book Trust, ನಂತರ, Association of Writers' and Illustrators' for Children, ( AWIC) ಶುರುಮಾಡಿದರು.
೧೯೪೯ ರಲ್ಲೇ [Shankar's International Children's Competition] ಹೆಸರು ಮಾಡಿತ್ತು.
ಶಂಕರ್ ೧೯೮೯ ರಲ್ಲಿ ಕಣ್ಣುಮುಚ್ಚಿದರು.

- Login or register to post comments
- 612 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !
- *'ಜೆ,' ರವರ ಕನಸಿನ ಕೂಸು, ಏರ್ ಇಂಡಿಯದ, ವಿಮಾನ ಹಾರಾಟ : ಇಂದಿನಿಂದ, ಬೊಂಬಾಯಿನಿಂದ ಎಲ್ಲೂ ನಿಲ್ಲಿಸದೆ, ನೇರವಾಗಿ ನ್ಯೂಯಾರ್ಕಿಗೆ !
- ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
- ಅರರೆ, ಹೌದು. ಇವತ್ತು ಲತಕ್ಕಂಗೆ ೮೧ ತುಂಬ್ತಲ್ವಾ !
- ಭಾರತದ ಮಾಜಿಪ್ರಧಾನಿ , ಶ್ರೀ. ಚಂದ್ರಶೇಖರ್ ನಿಧನ !


RSS: