ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚಿತ್ರ ಪುಟಗಳು › misc (Uncategorized) pictures

ವಿಶ್ವದ ಅತ್ಯಂತ ಉತ್ಕೃಷ್ಟವಾದ ಹತ್ತಿ- ಸೀ ಐಲೆಂಡ್ ಹತ್ತಿ ; ವಿಶ್ವದ ಹತ್ತಿ ಗುಣವನ್ನು ಸುಧಾರಿಸುವ ದಿಕ್ಕಿನಲ್ಲಿ ಇದರದು ಅಮೂಲ್ಯ ಕೊಡುಗೆ

April 29, 2007 - 7:26am — venkatesh
ವಿಶ್ವದ ಅತ್ಯಂತ ಉತ್ಕೃಷ್ಟವಾದ ಹತ್ತಿ- ಸೀ ಐಲೆಂಡ್ ಹತ್ತಿ ;  ವಿಶ್ವದ ಹತ್ತಿ ಗುಣವನ್ನು ಸುಧಾರಿಸುವ ದಿಕ್ಕಿನಲ್ಲಿ ಇದರದು ಅಮೂಲ್ಯ  ಕೊಡುಗೆ

"ಸೀ ಐಲೆಂಡ್ ಹತ್ತಿ " ತಾಯಿಯಂತೆ ಪಾತ್ರವಹಿಸಿದ್ದು ವಿಶ್ವದ ಸೂಕ್ಷ್ಮಹತ್ತಿಗಳಿಗೆ ದಾರಿಯಾಗಿದೆ !

ಹತ್ತಿಗಳ ಬಗ್ಗೆ ಈ ಒಂದು ಕಿರುಲೇಖನ ಸಂಪದಿಗರಿಗೆ ಇಷ್ಟವಾಗಬಹುದು. ವಿಶ್ವದ ಹತ್ತಿಗಳು ಕೇವಲ ೪ ಎಂದು ಪರಿಗಣಿಸಲಾಗಿದೆ. ಒಟ್ಟು ೩೨ ಹತ್ತಿ ಜಾತಿಗಳಿದ್ದರೂ ಫೈಬರ್ ಹೊಂದಿದ ಹತ್ತಿಗಳು ನಾಲ್ಕು ಮಾತ್ರ !

ನಮ್ಮ ಭಾರತದೇಶದ ಹತ್ತಿಗಳನ್ನು ದೇಸಿ ಹತ್ತಿಗಳು * [ ಗಾ. ಅರ್ಬೋರಿಯಮ್ಸ್ ಮತ್ತು ಗಾ. ಹರ್ಬೇಸಿಯಮ್ಸ್ ]ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಇವು ’ಚಿಕ್ಕಹತ್ತಿ ’ಯೆಂದು ಕರೆಯಲ್ಪಡುತ್ತವೆ. ಇವುಗಳ ಸ್ಟೇಪಲ್ ಲೆಂಥ್ ೨೩ ಮಿ. ಮೀ ನಿಂದ ೨೫ ಮಿ. ಮೀ ಮಾತ್ರ ಇರುತ್ತದೆ. ಇದನ್ನೇ ಉಪಯೋಗಿಸಿಕೊಂಡು ನಮ್ಮ ನೇಯುವ ಕೆಲಸಗಾರರು" ಢಾಕ ಮಸ್ಲಿನ್ "ಎಂಬ ಅತ್ಯಂತ ನವಿರಾದ, ವಿಶ್ವವಿಖ್ಯಾತ ಬಟ್ಟೆಗಳನ್ನು ನೇಯುತ್ತಿದ್ದರು. ತಮ್ಮ ಬೆರಳಿನ ತುದಿಯಲ್ಲಿ ಉದ್ದವಾದ ಉಗುರುಗಳನ್ನು ಬೆಳಸಿಕೊಂಡು ಅದರ ಉಪಯೋಗದಿಂದ "ಅತಿ ಸೂಕ್ಷ ದಾರಗಳನ್ನು " ನೂಲುತ್ತಿದ್ದರು. ಅದರ ದಾಖಲೆಗಳಿವೆ. [ ಕೌಂಟ್ ೩೫೦ ರಿಂದ ೪೦೦ ರವರೆಗೆ]

ಇವನ್ನು, ಅಂದರೆ ಇಂತಹ ದಾರಗಳನ್ನು ಯಂತ್ರಗಳಲ್ಲೂ ನೂಲುವುದು ಸಾಧ್ಯ. ಆದರೆ ದೇಸಿಹತ್ತಿಯಿಂದ ಅಷ್ಟು ಸೂಕ್ಷ್ಮ ದಾರ ತಯಾರಿಸುವುದು ಒಂದು ಸವಾಲು ; ಮತ್ತು ಅಸಾಧ್ಯ.

ದೊಡ್ಡಹತ್ತಿಗಳು ಎರಡು. ** ಅವು ಗಾ. ಹರ್ಸುಟಮ್ ಮತ್ತು ಗಾ. ಬಾರ್ಬಡೆನ್ಸಿ ಎಂದು. ನಾನು ಉಲ್ಲೇಖಿಸಿರುವ ಒಂದು ಪ್ರಜಾತಿ- ಸೀ ಐಲೆಂಡ್ ಕಾಟನ್. ಇದರ ಸ್ಟೇಪಲ್ ಲೆಂಥ್ ೩೮ ರಿಂದ ೪೦ ಮಿ. ಮೀಗಳವರೆಗೆ ಇರುತ್ತೆ. ಇದು ಅತ್ಯಮೂಲ್ಯವಾದ ಜಾತಿ ಹತ್ತಿ. ಇದನ್ನು ಉಪಯೋಗಮಾಡಿ, ಇಜಿಪ್ಷಿಯನ್, ಮತ್ತು ಇಂದು ವಿಶ್ವದಲ್ಲೇ ಮಂಚೂಣಿಯಲ್ಲಿರುವ ಅಮೆರಿಕನ್ ಇಜಿಪ್ಷಿಯನ್ ಹತ್ತಿ, " ಪಿಮಾ " ಎಂಬುದು. ಇವುಗಳನ್ನು ಅಭಿವೃದ್ಧಿ ಪಡಿಸಲು ಸುಮಾರು ೧೩೦ ವರ್ಷಗಳಿಂದ ಭಾರತವೂ ಸೇರಿದಂತೆ ಅನುಸಂಧಾನಗಳು ಬೃಹತ್ ಪ್ರಮಾಣದಲ್ಲಿ ನಡೆದವು. ಇನ್ನೂ ನಡೀತಾನೆ ಇವೆ. ಒಂದು ಕೊಡುಗೆ ಎಂದರೆ, ನಮ್ಮದೇಶದ ತಮಿಳ್ನಾಡಿನಲ್ಲಿ ’ ಸುವಿನ್ ’ ಎಂಬ ಹತ್ತಿ ಒಳ್ಳೆ ಗುಣಮಟ್ಟ ಸಾಧಿಸಿದೆ. ಧಾರವಾಡ, ರಾಯ್ಚೂರ್, ಗುಂಟೂರ್ ಗಳಲ್ಲೂ ಉತ್ತಮ ಫಲಿತಾಂಶಗಳು ಕಂಡುಬಂದಿವೆ.

ಆದರೆ ಈ ಗಡಿಬಿಡಿ ಕೆಲಸಗಳಲ್ಲಿ, "ಸೀ ಐಲೆಂಡ್ ಹತ್ತಿ " ಈಗ ಕಾಣೆಯಾಗಿದೆ. ಜೀನ್ ಬ್ಯಾಂಕುಗಳಲ್ಲಿ ಮಾತ್ರ ಉಪಲಬ್ಧ ಅಷ್ಟೆ !

ಸದ್ಯಕ್ಕೆ ಇಷ್ಟು ಸಾಕು. ಅಲ್ಲವೇ !

-*G. Arboreum and G. Herbesium

-**G. Hirsutum and G. Barbadense

  • misc (Uncategorized) pictures
~.~
  • Login or register to post comments
  • 510 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !
  • ಹತ್ತಿ ಬೀಜವನ್ನು ಬಿತ್ತಿದ ಮೇಲೆ ವಾರಗಳಲ್ಲಿ ಹತ್ತಿ ಹೂವು ಕಾಟಿಸಿಕೊಳ್ಳುತ್ತದೆ ನಂತರ ಕಾಯಿ ; ಮತ್ತೆ ಅದು ಒಣಗಿ ಬಿರಿದು ಶುಭ್ರ ಹತ್ತಿ, ತಯಾರು !
  • ಹತ್ತಿಯಿಂದ ಬೀಜ ಬೇರ್ಪಡಿಸುವ ಯಂತ್ರ ಅಮೆರಿಕದ ಕೊಡುಗೆ- ಅದು ವಿಶ್ವದ ಹತ್ತಿ ವಸ್ತ್ರೋದ್ಯಮದ ದ್ವಾರವನ್ನು ತೆರೆದು ಕ್ರಾಂತಿಯನ್ನೇ ಮಾಡಿತು !
  • ಹತ್ತಿ ಕಾಯಿ ದಪ್ಪಕ್ಕೆ ಧೃಢವಾಗಿದ್ದಷ್ಟೂ ಒಳ್ಳೇದು. ಒಳ್ಳೆ ಹತ್ತಿ ಸಿಗತ್ತೆ !
  • ಗಾಂಧಿಯವರನ್ನು, ಮ್ಯಾಂಚೆಸ್ಟರ್ ನ ಹತ್ತಿ-ಗಿರಣಿ ಕೆಲಸಗಾರರು ಅಭಿನಂದಿಸುತ್ತಿರುವ ದೃಶ್ಯ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಕುಂತಿ ಬೆಟ್ಟ

ಇತ್ತೀಚಿನ ಪ್ರತಿಕ್ರಿಯೆಗಳು

  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
ಇನ್ನಷ್ಟು


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator