ಹಿರಿಯ ಗೌರವಾನ್ವಿತ ನಟ, ದಿಲೀಪ್ ಕುಮಾರ್ ರವರಿಗೆ ೨೦೦೭ ರ, " ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿ".

೮೦ ರ ಗಡಿಯನ್ನು ದಾಟಿಯೂ ತಮ್ಮ ಮೃದುವಾದ ಮಾತುಗಳು ಮತ್ತು ಅಚ್ಚುಕಟ್ಟಾದ ವ್ಯಕ್ತಿತ್ವ, ಯಾವಾಗಲೂ ಮಂದಹಾಸ ಇನ್ನೂ ಉಳಿಸಿಕೊಂಡಿರುವ ಯೂಸುಫ್ ಖಾನ್ [ದಿಲೀಪ್ ಕುಮಾರ್] ರ ಗುಟ್ಟು ಇನ್ನೂ ಯಾರಿಗೂ ಗೊತ್ತಿಲ್ಲ. ಯಾವುದಕ್ಕೂ ಅವರು ಸುಮ್ಮನೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಶಸ್ತಿಗಳು ಸಿಗಲಿ ಬಿಡಲಿ !
ಆದರೆ ಈ ವರ್ಷ, ಅವರಿಗೆ ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿಯನ್ನು, ಭಾರತೀಯ ಚಿತ್ರರಂಗದಲ್ಲಿ ಮಾಡಿದ ಅನುಪಮ ಸೇವೆಯನ್ನು ಗುರುತಿಸಿ, ಕೊಡಲು ಫಾಲ್ಕೆ ಅಕ್ಯಾಡಮಿ ನಿರ್ಧರಿಸಿದೆ. ಆ ಪ್ರಶಸ್ತಿಯನ್ನು ಈ ದಿನವೇ ಸಾಯಂಕಾಲ ೩೦ರ ಏಪ್ರಿಲ್, ೨೦೦೭ ರಂದು ಮುಂಬೈ ನ ವಿಲೆಪಾರ್ಲೆಯಲ್ಲಿರುವ, ಭವ್ಯ 'ಭಾಯಿದಾಸ್ ಸಭಾಂಗಣ'ದಲ್ಲಿ, ಇನ್ನು ಕೆಲವೇ ಗಂಟೆಗಳಲ್ಲಿ ಪ್ರದಾನ ಮಾಡಲಾಗುವುದು.
ದಿಲೀಪ್ ಕುಮಾರರಿಗೆ ಈಗಾಗಲೇ ಭಾರತ ಸರ್ಕಾರ ಪ್ರತಿವರ್ಷ ಪ್ರದಾನ ಮಾಡುವ ಪ್ರತಿಷ್ಟಿತ " ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ," ೧೯೯೪ ರಲ್ಲೇ ಸಂದಿತ್ತು. ಈ ಪ್ರಶಸ್ತಿ ವ್ಯಕ್ತಿಯ ಜೀವನ ಪರ್ಯಂತ ಚಿತ್ರರಂಗಕ್ಕೆ ಕೊಟ್ಟ ಕಾಣಿಕೆಯನ್ನು ಪರಿಗಣಿಸಿ ಕೊಡಲಾಗುತ್ತದೆ. ಇಂದು ದೊರೆಯುತ್ತಿರುವ "ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿ " ಎರಡನೆಯದು.
ಈ ವರ್ಷ ೫೫ ಮಂದಿ, ಸಿನಿಮಾರಂಗದಲ್ಲಿ ಮೇರು ಸೇವೆಸಲ್ಲಿಸಿದ ಕಲಾಕಾರರಿಗೆಲ್ಲಾ ಸನ್ಮಾನ ಮಾಡಲಾಗುವುದು. [ಟೆಕ್ನೀಷಿಯನ್ ಗಳಿಂದ ಹಿಡಿದು ನಟಸಾರ್ವಭೌಮರಿಗೆ, ದಿಗ್ದರ್ಶಕರಿಗೆ, ಚಲನ ಚಿತ್ರ ತಯಾರಕರಿಗೆ, ಇತ್ಯಾದಿ.]
ದಾದಾ ಸಾಹೇಬ್ ಫಾಲ್ಕೆ ಯವರ, ೧೩೮ ನೆಯ ಹುಟ್ಟಿದಹಬ್ಬದ ವಾರ್ಷಿಕ ಉತ್ಸವವನ್ನು ನೆರೆವೇರಿಸಲು ಸುಮಾರು ೩೬ ಸಿನಿಮಾರಂಗದ ಅಕ್ಯಾಡಮಿಗಳು ಒಟ್ಟಿಗೆ ಜೊತೆಗೂಡಿ ನಿರ್ಣಯ ತೆಗೆದುಕೊಂಡಪ್ರಕಾರ, ಈ ದಿನ ಸಾಯಂಕಾಲ ಅದು ಪ್ರದರ್ಶನಗೊಳ್ಳುತ್ತದೆ.
ಇಗಾಗಲೇ, 'ದಾದಾಸಾಹೆಬ್ ಫಾಲ್ಕೆ ರತ್ನ ಅವಾರ್ಡ್,' ಪಡೆದ ಪದಕ ವಿಜೇತರುಗಳ ಹೆಸರುಗಳು ಹೀಗಿವೆ.
೧. ಜಿತೇಂದ್ರ, ೨. ಶಶಿಕಲ, ೩. ಅರುಣಾ ಇರಾನಿ, ೪. ಬಿನ ರಾಯ್, ೫. ರಾಜ್ ಕುಮಾರ್, ೬. ಲೇಖ್ ತಂಡನ್ [ಡೈರೆಕ್ಟರ್], ೭. ಸುಶೀಲ ರಾಣಿ ಪಾಟಿಲ್, ೮. ರಾಜ್ ಕುಮಾರ್ ಭಾರಜಾತ್ಯ [ಪ್ರೊಡಕ್ಷನ್] ಇತ್ಯಾದಿ.
ದಿಲೀಪ್ ಕುಮಾರ್ ರವರಿಗೆ, ನಮ್ಮ ’ಸಂಪದಿಗರ ’ ಪರವಾಗಿ ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿಯ ಹಾರ್ದಿಕ ಶುಭೇಚ್ಛೆಗಳು.

- Login or register to post comments
- 582 hits
- Email this image
- Thumbnail






RSS: