’ರೇಷ್ಮೆ ಸೀರೆ,’ ’ ಅಹಿಂಸಾ ರೇಷ್ಮೆ ಸೀರೆ”-ಏನಿದೆಲ್ಲಾ ? ರೇಷ್ಮೆ ಹೌದೋ ಅಲ್ವೋ, ಸೀರೆಗಳ ಸೌಂದರ್ಯ ನೋಡಿ - ಮೆಚ್ಚಿ !

ರೇಷ್ಮೆ ಸೀರೆಗಳು ನಮ್ಮ ಹಬ್ಬ ಹರಿದಿನ, ಮದುವೆ, ಮುಂಜಿ, ನಿಶ್ಚಿತಾರ್ಥ, ಸೀಮಂತ, ನಾಮಕರಣ, ಅನ್ನಪ್ರಾಶನ, ಇತ್ಯಾದಿಗಳ ಪ್ರಮುಖ ಆಕರ್ಷಣೆ ಮತ್ತು ಅವಶ್ಯಕತೆಗಳಲ್ಲಿ ಒಂದು. ಒಂದು ಗಾದೆ ಇದೆಯಲ್ಲ " ಹತ್ತು ಇಟ್ಟೋಳಿಗಿಂತ ಒಂದು ಉಟ್ಟೋಳ್ ಲೇಸು " ಅಂತ. ಹತ್ತಿ ಫೈಬರ್ ರಾಜ ಆದರೆ, ರೇಷ್ಮೆಗೆ ರಾಣಿ, ಸ್ಥಾನ ಅಲ್ಲವೇ !
ಹಿಂಸೆ ಮಾಡದೆ ಸಿಲ್ಕ್ ತಯಾರಿಸಲು ಸಾಧ್ಯವೇ ? ಇಲ್ಲ. ಹೌದು. ಇಲ್ಲ. ಹೌದು.
ಮುಂದೆ ಇದರ ಬಗ್ಗೆ ಚರ್ಚೆ ಮಾಡೋಣ. ಇದನ್ನು ನಮ್ಮ ಹುಡುಗಿಯರಿಗೆ ಹೇಳಿದಾಗ ಅವರ ಕೆನ್ನೆ ಕೆಂಪು ; ಆದರೆ ನಮಗೆ ಸೀರೆ ಬೇಕಲ್ಲಾ ! ? ಎನ್ನುವ ಅವರ ಭಾವ ಭಂಗಿ, ರೇಷ್ಮೆಯ ಹೇಸರು ಹೇಳುತ್ತಿದ್ದಂತೆ ಅವರ ಮುಖದ ಮೇಲೆ ಮೂಡುವ ಮಂದಹಾಸಕ್ಕೆ, ಎಷ್ಟು ಬೆಲೆ ಕೊಟ್ಟರು ಸಾಲದು.
ನಮಗೆ ಗೊತ್ತಿರುವ ರೇಷ್ಮೆ ತಯಾರಿಕೆಯಲ್ಲಿ ಪಕ್ವವಾಗುವ ಸ್ವಲ್ಪ ಮೊದಲಿಗೇ ರೇಷ್ಮೆ ಕಕೂನ್ ಗಳನ್ನು ಕುದಿಯುವ ಬಿಸಿನೀರಿನಲ್ಲಿ ಹಾಕಿ ಅಲ್ಲಿಂದ 'ಫಿಲೇಚರ್ ಯಂತ್ರ'ದಿಂದ ಎಳೆ ತೆಗೆಯುವ ವಾಡಿಕೆ ಸಾವಿರಾರು ವರ್ಷದಿಂದ ಪ್ರಚಲಿತದಲ್ಲಿದೆ.ವಾಸ್ತವವಾಗಿ ಒಳಗಿನ ಹುಳುಗಳು ಸಾಯಲೇ ಬೇಕು. ಇಲ್ಲದಿದ್ದರೆ ರೇಷ್ಮೆ ಪಡೆಯುವುದಾದರೂ ಹೇಗೆ ?
ಭಾರತದ ೭೦ % ಗಿಂತ ಹೆಚ್ಚು ರೇಷ್ಮೆ ಉತ್ಪಾದನೆ ನಮ್ಮ ಕರ್ನಾಟಕದಲ್ಲೇ ಆಗುತ್ತೆ, ಎಂದರೆ ಹೆಮ್ಮೆಯಲ್ಲವೆ ? ನಮ್ಮ ಜಗದ್ವಿಖ್ಯಾತ ವಾದ ಮೈಸೂರ್ ಸಿಲ್ಕ್ ಸೀರೆಗಳು, ಅಂಗವಸ್ತ್ರಗಳು, ಶಲ್ಯಗಳು, ಕರವಸ್ತ್ರಗಳು, ಪಂಚೆಗಳು , ಬ್ಲೌಸ್ ಪೀಸ್ ಗಳು ಮತ್ತು ಅನೇಕ ಚೂಡಿದಾರ್ ಡ್ರೆಸ್ ಮಟಿರಿಯಲ್ ಗಳು ಭಾರತದಲ್ಲೂ ಮತ್ತು ವಿದೇಶದಲ್ಲೂ ಅತ್ಯಂತ ಒಳ್ಳೆ ಹೆಸರನ್ನು ಗಳಿಸಿವೆ. ಮೈಸೂರ್ ಸಿಲ್ಕ್ ಸೀರೆಗಳಿಗೆ ಈಗ "ಬ್ರಾಂಡ್ ನೇಮ್" ಸಿಕ್ಕಿದೆ ಮತ್ತು 'ಸಿಲ್ಕ್ ಮಾರ್ಕ್' ಕೂಡ ದೊರೆತಿರುವುದರಿಂದ ಅದನ್ನು ಅನುಕರಿಸಲು ಬೇರೆಯಾರಿಗೂ ಅನುಮತಿಯಿಲ್ಲ. ಕರ್ನಾಟಕದ ರೇಷ್ಮೆ ಸೀರೆ ನೇಯುವ ಕಾರೀಗಾರರು ಮೈಸೂರ್ ಸಿಲ್ಕ್ ಸೀರೆಗಳ ಹೊಸ ಹೊಸ ನಮೂನೆಗಳನ್ನು ತಂದು ಫ್ಯಾಷನ್ ಪ್ರಿಯರ ಮನಸ್ಸನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ಎಲ್ಲಾ ಸಿಲ್ಕ್ ಪದಾರ್ಥಗಳ ತಯಾರಕರೂ ಈಗ " ಕರ್ನಾಟಕ ರೇಷ್ಮೆ ಬೋರ್ಡ್ "ಗೆ ಸದಸ್ಯರಾಗಿ, ತಮಗೆ ಬೇಕಾದ ಬ್ರಾಂಡ್ ಗಳನ್ನು ಚುನಾಯಿಸಿ, ತಮ್ಮ ಹೆಸರುಗಳನ್ನು ನೋದಣಿ ಮಾಡಿಕೊಳ್ಳಬಹುದು. ಆದರೆ ನಮ್ಮಿಂದಲೇ ರೇಷ್ಮೆ ಖರೀದಿಸಿ, ಪಕ್ಕದ ತಮಿಳುನಾಡಿಗೆ ಕೊಂಡೊಯ್ದು ಅಲ್ಲಿ ಮಗ್ಗದಲ್ಲಿ ತಯಾರಿಸಿದ ಕಾಂಜೀವರಂ ಸೀರೆಗಳ ಬೆಲೆ ಮೂರುಪಾಲು ಹೆಚ್ಚು. ವೀವಿಂಗ್ ನಲ್ಲಿ ಅತ್ಯಂತ ಸೊಗಸಾಗಿ ದಿಸೈನ್ಸ್ ಗಳನ್ನು ಮಾಡುವ ತಮಿಳು ನೇಕಾರರು ಮೊದಲಿನಿಂದಲೂ ಪ್ರಸಿದ್ಧರು. ಈ ತರಹದ ನೇಕಾರರೇ ರೇಷ್ಮೆ ಬಟ್ಟೆಗಳ ಬ್ರಾಂಡ್ ರಾಯಭಾರಿಗಳಲ್ಲಿ ಒಬ್ಬರು.
ರೇಷ್ಮೆ ಉತ್ಪಾದನೆ, ಮತ್ತು ಅದರಿಂದ ತಯಾರಿಸುವ ಸೀರೆಗಳು ಮತ್ತು ಅನೇಕ ತರಹದ ಬಟ್ಟೆ ಬರೆಗಳು, ಪ. ಬಂಗಾಳ, ಆಂಧ್ರ ಪ್ರದೇಶ, ಕಾಶ್ಮೀರ, ಮಹಾರಾಷ್ಟ್ರ, ಮಣಿಪುರ ಇತ್ಯಾದಿ ಸ್ಥಳಗಳಲ್ಲಿ ಯಶಸ್ವಿಯಾಗಿ ಹಲವಾರು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಗೃಹೋದ್ಯೋಗಗಳು.
೧. ಬೆನಾರೆಸ್ ನ ಬ್ರೋಕೇಡ್ ಗಳು, ತಮ್ಮ ಬೆಳ್ಳಿ ಬಂಗಾರದ ದಾರಗಳಿಂದ ಮಾಡಿದ ಅಂಚು ಮತ್ತು
ಪಲ್ಲುಗಳಿಗೆ ಹೆಸರುವಾಸಿಯಾಗಿವೆ. 'ಬಫ್ಟಾ' ಮತ್ತು 'ಅಮೃ' ಎಂಬ ಬಗೆಯ ವೀವ್ ಗಳು ಅತಿ
ಮೆಚ್ಚುಗೆಗಳಿಸಿವೆ. ಬೆನಾರೆಸ್ ಸೀರೆ ಒಬ್ಬ ಭಾರತೀಯ ನಾರಿಯ ಮದುವೆಯ ಕನಸುಗಳಲ್ಲೊಂದು !
ಅಲ್ಲಿ ತಯಾರಾದ 'ಕಿಂಕಾಬ್' ಸೀರೆಗಳು ಬಹು ಜನಪ್ರಿಯ ವಸ್ತುಗಳು.
೨. ಒರಿಸ್ಸಾ ರಾಜ್ಯದ 'ಇಕ್ಕಟ್' ಸೀರೆಗಳು ಪ್ರಸಿದ್ಧ.,
೩. ಗುಜರಾತಿನ 'ಪಟೋಲಾ' ಸೀರೆ,
೪. ಕಛ್ ನ 'ಬಾಂಧಣಿ ' ಸೀರೆ,
೫. 'ತಾರಿನ್ ಜೋಯಿ ಬ್ರೋಕೇಡ್', ಗುಜರಾತಿನ ಪಾರ್ಸಿಗಳು ತಯಾರಿಸುವ ಅತಿ ಮುಖ್ಯವಾದ ಸೀರೆ,
೬. ತಮಿಳು ನಾಡಿನ ಕಾಂಚೀಪುರಮ್, ಮತ್ತು ಧರ್ಮಾವರಂ ಪ್ರಖ್ಯಾತ ಸೀರೆಗಳು,
೭. ಆಂಧ್ರದ ಪೋಚಂಪಲ್ಲಿ ಸೀರೆ, ನಾರಾಯನ್ ಪೇಟ್ ಸೀರೆ, ವೆಂಕಟಗಿರಿ, ಧರ್ಮಾವರಂ ಸೀರೆಗಳು
ಜಗದ್ವಿಖ್ಯಾತ.
೮. ಪಶ್ಚಿಮ ಬಂಗಾಳದ ಬಿಷ್ಣುಪುರ್, ಮುರ್ಶಿದಾಬಾದ್, ಬಿರ್ ಭೌಮ್ ಸೀರೆಗಳು.
ಕೊನೆಯದಾಗಿ, ಹಿಂಸೆ ಇಲ್ಲದ, ರೇಷ್ಮೆಯನ್ನು ತಯಾರುಮಾಡುತ್ತಿರುವ ರಾಜ್ಯ- ಅಸ್ಸಾಂ. ಇಲ್ಲಿನ ಕಾಡು ರೇಷ್ಮೆಯ ಹೆಸರು- "ಈರಿರೇಷ್ಮೆ " ಎಂದು. ಇದು ಅಲ್ಲಿನ ಕಾಡಿನ ಮರಗಳಮೇಲೆ ಬೆಳೆಯುತ್ತದೆ. ಇದರ ರೇಷ್ಮೆಗೂಡಿನ ಹುಳುಗಳನ್ನು ಕೊಲ್ಲಬೇಕಾಗಿಲ್ಲ. ಅದಕ್ಕಾಗಿಯೇ ಇದನ್ನು ' ಅಹಿಂಸಾ ರೇಷ್ಮೆ ' ಎನ್ನುತ್ತಾರೆ. ಜೈನ್ ಧರ್ಮದ ಹೆಣ್ಣುಮಕ್ಕಳಿಗೆ ಇದು ಬಲು ಪ್ರಿಯ. ಬೆಲೆಬಗ್ಗೆ ಈಗಲೇ ಕೇಳಬೇಡಿ ! ಅದು ದುಬಾರಿ. ಇದರೆ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಕೊಡೋಣ !
*ಚಿತ್ರದಲ್ಲಿ ತೋರಿಸಿರುವ ಸೀರೆ, ಜಗದ್ವಿಖ್ಯಾತ ಆಂಧ್ರದ, " ಪೋಚಂಪಲ್ಲಿ ಸೀರೆ."

- Login or register to post comments
- 454 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಥಳ ಥಳಿಸುವ ಹಳದಿ ಬಣ್ಣದ ’ಮುಗಾ ರೇಷ್ಮೆ” ಮತ್ತು ರೇಷ್ಮೆ ಹುಳುಗಳು.
- ಬೆಂಗಳೂರಿನ ರೇಷ್ಮೆ ಸಂಶೊಧನ ಕೇಂದ್ರದವರು, ರೇಷ್ಮೆ ಸೀರೆಗಳನ್ನು ಸುಲಭವಾಗಿ ನೇಯಲು, ಯಂತ್ರಮಗ್ಗದ ವಿನ್ಯಾಸವನ್ನು ಮಾಡಿದ್ದಾರೆ.
- ಇಂದಿಗೂ ಬಟ್ಟೆ ನೇಯುವವನು ಬಡವನೇ !
- ಚೋಲಿಕೇ ಪೀಛೆ ಕ್ಯಾ ಹೈ? ಜಯಲಲಿತಾ ಶಾಲಿನ ಹಿಂದೇನಿದೆ?
- ಬೆಂಗಳೂರಿನ, " ಜಾನಪದ ಕಲಾ ಕುಟೀರ," ಏರ್ಪಡಿಸಿರುವ ಆದಿವಾಸಿಗಳಿಂದ ನೇಯ್ದ ಉಡುಪುಗಳ ಪ್ರದರ್ಶನ !


RSS: