ಕುಂದಾಪುರದ ಕಡಲು
ನಾನು ಈ ತೈಲ ವರ್ಣಚಿತ್ರ ಬರೆದು ಸುಮಾರು ಹತ್ತು ವರುಷಗಳೇ ಆಗಿವೆ. ಆಗ ನಾನು ಉಡುಪಿ ಆಯುರ್ವೇದ ಕಾಲೇಜಿನಲ್ಲಿ ಬಹುಶಃ ಕಿರುವೈದ್ಯ.
ನನ್ನ ಮಿತ್ರರಾದ ರಾಘವೇಂದ್ರ ಉಡುಪ ಮತ್ತು ರವಿ ರಾವ್ ಅವರೊಂದಿಗೆ ಕುಂದಾಪುರಕ್ಕೆ ಹೋಗಿದ್ದೆ. ಯಾವುದೋ ಅರಿಷ್ಟ ವನ್ನೋ ಆಸವವನ್ನೋ ಉಡುಪನ ಮನೆಯಲ್ಲಿ ತಯಾರಿಸಲು ಹೋದದ್ದು ಎಂದು ನೆನಪು. ಸಂಜೆ ಕಿರಿಮಂಜೇಶ್ವರ ಕ್ಕೆ ಹೋದಾಗ ಅಲ್ಲಿಯ ಕಡಲು ಮತ್ತು ಬಂಡೆಗಳು ನನ್ನ ಮನಸೆಳೆದಿದ್ದವು. ಆಗ ಕ್ಲಿಕ್ಕಿಸಿದ ಫೋಟೋ ನೋಡಿಕೊಂಡು ನಂತರ ಪೇಪರ್ ಮೇಲೆ oil ನಲ್ಲಿ ಮಾಡಿದ ಚಿತ್ರ ಇದು.

- Login or register to post comments
- 754 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS:
ಪ್ರತಿಕ್ರಿಯೆಗಳು
ಉ: ಕುಂದಾಪುರದ ಕಡಲು
ನೀವು painting ಮಾಡುತ್ತೀರಿ ಎಂದು ನಿಮ್ಮ ಪ್ರೊಫೈಲಿನಲ್ಲಿ ಓದಿದ್ದೆ. ನಿಮ್ಮ ಹವ್ಯಾಸ ಇಷ್ಟು ಚೆನ್ನಾಗಿ ರೂಪುಗೊಂಡಿದೆ ಎಂಬುದು ಗೊತ್ತಿರಲಿಲ್ಲ.
ಪೂರ್ಣ ರೆಸಲ್ಯೂಶನ್ ಫೋಟೋ ಒಮ್ಮೆ ಅಪ್ಲೋಡ್ ಮಾಡಿ.
ನಾನು ಡೀವಿಯೆಂಟ್ ಆರ್ಟ್ ಎಂಬಲ್ಲಿ ಹಿಂದೊಮ್ಮೆ ಕಾಲೇಜು ದಿನಗಳಲ್ಲಿ ಗೀಚಿದ್ದನ್ನೆಲ್ಲ ಹಾಕುವಾಗ, ಸುಮ್ಮನೆ ಸಮಯ ಕಳೆಯುತ್ತಿರುವಾಗ ತೈಲ ಚಿತ್ರ ಬರೆಯುವವರೊಬ್ಬರ ಪರಿಚಯವಾಗಿತ್ತು. ಅವರ ಒಂದೆರಡು ತೈಲ ಚಿತ್ರಗಳಿಗೆ ಲಿಂಕು ಇಲ್ಲಿವೆ:
link 1
link 2
ಇವೆರಡೂ ಚಿತ್ರಗಳು ಹಲವು ದಿನಗಳ ಕಾಲ ನನ್ನ ಕಂಪ್ಯೂಟರಿನ ವಾಲ್ ಪೇಪರ್ ಆಗಿದ್ವು.
ಉ: ಕುಂದಾಪುರದ ಕಡಲು
ಒಂದನೇ link ತೋರಿಸುವ ಚಿತ್ರವನ್ನು ಎಲ್ಲೋ ನೋಡಿದ್ದೇನಲ್ಲಾ ಅಂದುಕೊಳ್ಳುತ್ತಿರುವಾಗ ನೆನಪಾಯಿತು:
ಸಂಪದದ help ನಲ್ಲೇ ನೋಡಿದ್ದು!! ತುಂಬ ಚೆನ್ನಾಗಿವೆ ಈ ಚಿತ್ರಗಳು.
ಉ: ಕುಂದಾಪುರದ ಕಡಲು
ಕಿಶೋರ್,
ಕಡಲಿನ ಚಿತ್ರ ತುಂಬಾ ಸುಂದರವಾಗಿ, ನೈಜವಾಗಿ, ಆಕರ್ಷಕವಾಗಿ, ಬೊಂಬಾಟಾಗಿ, ಮೈನವಿರೇಳಿಸುವಂತೆ, ಪೇಪರ್ ಮೇಲೆ ಇಳಿಸಿಬಿಟ್ಟಿದ್ದೀರಿ. [ಹೊಗಳಿಕೆ ಸಾಕೇ ?] ಮಲ್ಪೆಯ ಬಳಿಯೂ ಇಷ್ಟೇ ಭೊರ್ಗರೆಯುವ ಸಮುದ್ರವಿದೆ. ಸುಮಾರು ಹಿಂದೆ ನೋಡಿದ ನೆನಪು. ಈ ಕಡಲ ತೀರ ಅದಕ್ಕೆ ಸಮೀಪವಾಗಿದೆಯೇ, ತಿಳಿಸಿರಲ್ಲ.
ಉ: ಕುಂದಾಪುರದ ಕಡಲು
ಧನ್ಯವಾದಗಳು. ಹೊಗಳಿಕೆ ಸಾಕಷ್ಟಾಯಿತು!!
ಮಲ್ಪೆ ಇರುವುದು ಉಡುಪಿಯಲ್ಲಿ. ಇದು ಕಿರಿಮಂಜೇಶ್ವರ- ಕುಂದಾಪುರ ತಾಲೂಕಿನಲ್ಲಿರುವ ಸ್ಥಳ.
ಹಾಂ; ಉಡುಪಿ ಮತ್ತು ಕುಂದಾಪುರ ಅಕ್ಕ ಪಕ್ಕದ ತಾಲೂಕುಗಳು. ಹಾಗಾಗಿ ಸಮೀಪ ಎನ್ನಲಡ್ಡಿಯಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುವುದಾದರೆ ಸುಮಾರು ಎರಡು ಗಂಟೆಗಳ ಪ್ರಯಾಣ.
ಉ: ಕುಂದಾಪುರದ ಕಡಲು
ಕಿಶೋರ್, ನಾನು ಕಿರಿಮಂಜೇಶ್ವರದವನೇ. ನಿಮ್ಮನ್ನು ಆಕರ್ಷಿಸಿದ, ಚಿತ್ರ ರಚಿಸಲು ಸ್ಫೂರ್ತಿಯಾದ ಆ ಬಂಡೆಗಲ್ಲುಗಳಿವೆಯಲ್ಲ, ಅವುಗಳ ನೇರಕ್ಕೆ ಸಮುದ್ರ ದಡದಲ್ಲಿ ಕಾಣಿಸುವ ಮನೆಯಲ್ಲೇ ನಾನು ಹುಟ್ಟಿದ್ದು, ಬೆಳೆದಿದ್ದು, ಆಡಿದ್ದು... ಎಲ್ಲಾ.
ಬಹುಶಃ ನಿಮ್ಮ ಗಮನಕ್ಕೆ ಬಂದಿಲ್ಲದೇ ಇರಬಹುದು. ಈ ಬಂಡೆಗಲ್ಲುಗಳ ರಾಶಿ ಆರಂಭವಾಗುವ ಸ್ಥಳದಲ್ಲಿ ಸ್ವಲ್ಪ ಆಚೆ ಅಥವಾ ಈಚೆ ಶಿವಲಿಂಗದಂಥ ಒಂದು ಕಲ್ಲಿದೆ. ಬೇಸಿಗೆಯಲ್ಲಿ ಸಮುದ್ರದ ಅಲೆಗಳು ಮರಳಿನ ರಾಶಿಯನ್ನೇ ತಂದು ಹೇರುವುದರಿಂದ ಇದು ಅಷ್ಟಾಗಿ ಕಾಣಿಸುವುದಿಲ್ಲ. ಮಳೆಗಾದಲ್ಲಿ ನೀರಿನ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋದಾಗ ಈ ಶಿವಲಿಂಗದಂಥ ಕರಿಕಲ್ಲು ಪ್ರತ್ಯಕ್ಷವಾಗುತ್ತದೆ. ತಮಾಷೆಯೆಂದರೆ ಈ ಕಲ್ಲಿನ ಬುಡದಲ್ಲಿ ಅದಕ್ಕೆ ತಾಗಿಕೊಂಡು ಮಣೆಯಾಕಾರದ ಕಲ್ಲೂ ಇದ್ದು, ನಾವೆಲ್ಲ ಚಿಕ್ಕವರಿರುವಾಗ ಇದು ಅರ್ಚಕರು ಕುಳಿತುಕೊಂಡು ಪೂಜೆ ಮಾಡುವ ಮಣೆ ಎನ್ನುತ್ತಾ, ಅದರ ಮೇಲೆ ಕುಳಿತುಕೊಂಡು ಶಿವಲಿಂಗಕ್ಕೆ ಕರವೇರ ಪುಷ್ಪವೇರಿಸಿ ಪೂಜೆ ಮಾಡುವ ಆಟ ಆಡುತ್ತಿದ್ದೆವು!
ದಾಖಲಿಸಲೇಬೇಕಾದ ವಿಷಯವೆಂದರೆ ಈ ಶಿವಲಿಂಗದಂಥ ಕರಿಕಲ್ಲಿನ ನೇರದಲ್ಲೇ ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಸ್ಥಾನದ ಶಿವನ ವಿಗ್ರಹವಿದೆ. ಆದರೆ ಈ ಕರಿಕಲ್ಲಿಗೂ ಅಗಸ್ತ್ಯೇಶ್ವರನಿಗೂ ಪುರಾಣದಲ್ಲಾಗಲೀ ಇತಿಹಾಸದಲ್ಲಾಗಲೀ ಯಾವುದೇ ಸಂಬಂಧವಿದ್ದಂತಿಲ್ಲ ಎಂದು ನಮ್ಮಪ್ಪ ಹೇಳುತ್ತಿದ್ದ ನೆನಪು.
ಏನೇ ಆಗಲಿ, ನೀವು ಕಿರಿಮಂಜೇಶ್ವರಕ್ಕೆ ಹೋಗಿಬಂದಿರಿ ಎಂದಾಗ ಒಮ್ಮೆ ನಮ್ಮೂರಿನ ನೆನಪು ಕಣ್ಣ ಮುಂದೆ ಹಾದು ಹೋಯಿತು. ಹಾಗಾಗಿ ಇಷ್ಟೆಲ್ಲ ಬರೆಯಬೇಕಾಯಿತು.
ನಿಮ್ಮ ತೈಲವರ್ಣ ಚಿತ್ರ ಆ ಬಂಡೆಗಲ್ಲುಗಳು, ಭೋರ್ಗರೆಯುತ್ತಾ ಯಾವುದೋ ಧಾವಂತದಲ್ಲಿ ಮುನ್ನುಗ್ಗುತ್ತಿರುವ ಸಮುದ್ರ- ಎಲ್ಲವನ್ನೂ ಯಥಾವತ್ ಹೇಳಿದೆ. ಧನ್ಯವಾದಗಳು.
ಉ: ಕುಂದಾಪುರದ ಕಡಲು
ತುಂಬಾ ಸಂತೋಷ.
ಹೀಗೆ ಅಲ್ಲಿನ ವ್ಯಕ್ತಿಯೊಬ್ಬರು ಇಲ್ಲಿ ಸಿಗಬಹುದು ಅಂದುಕೊಂಡಿರಲಿಲ್ಲ!!
ಉ: ಕುಂದಾಪುರದ ಕಡಲು
ಕಿಶೋರ್ ಅವರೆ,
) ಎಂದುಕೊಂಡು ನನ್ನ ಪಾಪೆವಿಡಿ(ಕ್ಯಾಮೆರಾ) ಒಯ್ಯಲಿಲ್ಲ. ನಾನು ಹೋದ ಬೀಚಿನಲ್ಲಿ ಹೀಗೆ ಬಂಡೆಗಳಿರಲಿಲ್ಲವಾದರೂ, ಕುಂದಾಪುರದ ಕಡೆ ಯಾವಾಗಲಾದರೂ ಹೋದಾಗ ಖಂಡಿತವಾಗಿಯೂ ಹೋಗಿಬರುವ ಕುತೂಹಲ ಮೂಡಿಸಿದೆ ನಿಮ್ಮ ಚಿತ್ರ. ಮಂಗಳೂರಿನ ಗುಂಗಿನಿಂದ ಇನ್ನೂ ಆಚೆಬಂದಿರದಿದ್ದ ನನಗೆ ನಿಮ್ಮ ಆಯ್ಲ್ ಪೇಂಟಿಂಗ್ ತುಂಬಾ ಇಷ್ಟವಾಯಿತು. ನನ್ನ ಉತ್ಸಾಹವನ್ನು ಪುಟಿದೇಳಿಸುವಲ್ಲಿ ಸಫಲವಾಗಿದೆ ನಿಮ್ಮ ಎಣ್ಣೆವಾಪೆ(ತೈಲವರ್ಣಚಿತ್ರ=oilpainting). ನನ್ನಿ.
ಅದೇನು ಕಾಕತಾಳೀಯವೋ ಗೊತ್ತಿಲ್ಲ. ಕಳೆದ ಮೂರು ದಿನಗಳಿಂದ ಮಂಗಳೂರು ಕಡೆಗೆ ಹೋಗಿದ್ದ ನಾನು, ಸಮುದ್ರ ದಡದಲ್ಲಿ ಮನದುಂಬಿ ಆಟವನ್ನಾಡಿ ಬಂದಿದ್ದೆ. ಬೀಚಿಗೆ ಕ್ಯಾಮೆರಾ ತೊಗೊಂಡು ಹೋದರೆ ಚೆನ್ನಾಗಿ ಎಂಜಾಯ್ ಮಾಡುವುದಕ್ಕಾಗುವುದಿಲ್ಲ(