ನಾನು ತನ್ಮಯಾ....!

ಇದು ನನ್ನ ಮಗಳು `ತನ್ಮಯಿ'ಯ ಫೋಟೋ (ತನ್ಮಯಿ ಇನ್ನೂ ಈ ಪ್ರಪಂಚದಲ್ಲಿ ಕಣ್ಬಿಡುವ ಮುನ್ನ `ನನ್ನ ಮಗುವಿಗೊಂದು ಹೆಸರು ಕೊಡಿ' ಅಂತ ನಾನು `ಸಂಪದ'ವಾಸಿಗಳ ಬಳಿ ಕೇಳಿಕೊಂಡಿದ್ದೆ. ನೀವೆಲ್ಲ ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದಿರಿ. ನೆನಪಿರಬೇಕಲ್ಲ?).
ಈ ಫೋಟೋ ತೆಗೆದದ್ದು ನಾನಲ್ಲ. ನನ್ನ ಹೆಂಡತಿ. ತನ್ಮಯಿ ಏಳೋ ಎಂಟೋ ತಿಂಗಳಿನವಳಿರುವಾಗ ಅವಳದ್ದೊಂದಿಷ್ಟು ಫೋಟೋ ತೆಗೆಯಬೇಕು ಅಂತ ಗೆಳೆಯ ಪರಮೇಶ್ ಬಳಿ ಡಿಜಿಟಲ್ ಕ್ಯಾಮೆರಾ ಪಡೆದುಕೊಂಡಿದ್ದೆ. ಸಮಯ ಸಿಕ್ಕಾಗ ನನ್ನ ಹೆಂಡತಿ, ಮನೆಯಲ್ಲಿದ್ದ ಕಿಂಗ್ಫಿಶರ್ ಏರ್ಲೈನ್ಸ್ನ ಹೆಡ್ಫೋನನ್ನು ತನ್ಮಯಿಯ ಕಿವಿಗೆ ಸಿಕ್ಕಿಸಿ ಫೋಟೋ ತೆಗೆದಳಂತೆ. ಫೋಟೋ ತೆಗೆಯುವಾಗ ತನ್ಮಯಿ ಕೊಟ್ಟ ಫೋಸ್ ಇದು! ಅಪ್ಪನ ಹೊಟ್ಟೆ ಉರಿಸೋದೆಂದರೆ ಇದೇ ಇರಬೇಕು. ನಾನು ಫೋಟೋ ತೆಗೆಯುವಾಗ ಒಂದಿನವೂ ಅವಳು ಇಂಥ ಫೋಸ್ ಕೊಟ್ಟಿರಲಿಲ್ಲ!
ಈ ಫೋಟೋ ಸುಮ್ಮನೆ ಕ್ಲಿಕ್ಕಿಸಿದ್ದಾದರೂ ಅದರಲ್ಲಿ ತನ್ಮಯಿಯ ಮುಖ ಹತ್ತಾರು ಭಾವನೆಗಳನ್ನು ಪ್ರಕಟಿಸುತ್ತಿದೆ ಅಂತ ನನಗನಿಸುತ್ತಿದೆ. ನಿಮಗೆ ಹೇಗೋ?! ನಾನಂತೂ ಈ ಫೋಟೋ ನೋಡಿದಾಕ್ಷಣ ತನ್ಮಯನಾಗಿಬಿಡುತ್ತೇನೆ!

- Login or register to post comments
- 850 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail




RSS:
ಪ್ರತಿಕ್ರಿಯೆಗಳು
ಉ: ನಾನು ತನ್ಮಯಾ....!
ಆ ಲೇಖನ ಇಲ್ಲಿದೆ