ಬ್ರಿಟನ್ನಿನ ಖ್ಯಾತ ಆಸ್ಟ್ರೋ ಫಿಸಿಸ್ಟ್, ಸ್ಟೀಫನ್ ವಿಲಿಯಮ್ ಹಾಕಿಂಗ್, ’ಶೂನ್ಯ ’ ಗ್ರಾವಿಟಿಯಲ್ಲಿ ಹಾರಿ, ತೇಲಿ, ನಲಿದರು !

ಏಪ್ರಿಲ್, ಗುರುವಾರ, ೨೬ ೨೦೦೭, ೨೩.೪೪ GMT, ಒಂದು ಅವಿಸ್ಮರಣೀಯ ದಿನ !
ಬ್ರಿಟನ್ ನ ಖ್ಯಾತ ಆಸ್ಟ್ರೋ ಫಿಸಿಸ್ಟ್, ಸ್ಟೀಫೆನ್ ವಿಲಿಯಮ್ ಹಾಕಿಂಗ್ , ಸ್ಪೇಸ್ ನಲ್ಲಿ '೦' ಗ್ರಾವಿಟಿ ಕಾರ್ಪೊರೇಷನ್ ನ "Vomit Comet’ ನಲ್ಲಿ ತೇಲಾಡಿ-ಹಾರಾಡಿ, ಆನಂದಿಸಿದರು !
ಕೆಪ್ ಕನವರಾಲ್, ಫ್ಲಾರಿಡ, ಯು. ಎಸ್. ಎ, ನಲ್ಲಿರುವ ಈ ಸಂಸ್ಥೆ, ೨೦೦೪ ರಿಂದ 'Space Gravity Corporation' ಸ್ಪೇಸ್ ನ ಹಾರಾಟದ ಆಸಕ್ತರನ್ನು, '೦' Gravity ವಲಯದಲ್ಲಿ ತೇಲಾಡಲು ಸಹಾಯಮಾಡುತ್ತಿದೆ. ಅದಕ್ಕೆ ತಗಲುವ ಖರ್ಚು : ೩,೭೫೦ ಡಾಲರ್ ಗಳು. ಆದರೆ ಸ್ಟೀಫನ್ ರಿಗೆ ಅದು ಫ್ರೀ !
ಇದು ಹೇಗೆ ಸಾಧ್ಯ ? ಕುರ್ಚಿಯಿಂದ ಮೇಲಕ್ಕೇಳಕ್ಕೇ ಆಗ್ದವರು ತೇಲಾಡ್ತಾರೆ, ಹಾರಾಡ್ತಾರೆ, ಹೇಗೆ ಸಾಧ್ಯ ? ಹೌದು. ಹೀಗೆ ಕೇಳಿದವರು ನೂರಾರು ಸಾವಿರಾರು ! ಆದರೆ ಸ್ಟೀಫನ್ ತೇಲಾಡಿದ್ದು ದಿಟ. ಅದೊಂದು ವಿಕ್ರಮ ಸಾಧನೆ. ಟೀವಿ ಸೀರಿಯಲ್ ಕ್ರಿಕೆಟ್ ಗಳ ಗಲಾಟೆಯಲ್ಲಿ ಈ ಸುದ್ದಿ ತಲೆಗೆ ಬರಲಿಲ್ಲ. ಹೊಸ ಸೀರಿಯಲ್ ನಲ್ಲಿ ಪದ್ಮಿನಿ ಕೊಲ್ಹಾಪುರೆ ಮಾಡ್ತಿದಾಳಂತೆ. ಅವಳ್ಗೊಪ್ಪುತ್ತಾ ಆ ರೋಲು, ಇತ್ಯಾದಿ ತಲೆಯಲ್ಲಿರುವಾಗ, ಸ್ಟೀಫನ್ ವಿಷಯ ಗೊತ್ತಾಗೋದಾದ್ರೂ ಹೇಗೆ ? ಇಂತಹ ನೂರಾರು ಪ್ರಶ್ನೆಗಳ ಸುರಿಮಳೆಯನ್ನು ನನ್ನ ಪ್ರೀತಿಯ ಮಡದಿ ಹಾಕಿದ್ದಳು.
ಹೋಗ್ಲಿ ಬಿಡಿ, ಅವರು ಈ ದೇಶ್ದಲ್ಲಿ ಹುಟ್ಲಿಲ್ಲ. ಇಲ್ದಿದ್ರೆ , ಮರ್ಸಿ ಕಿಲ್ಲಿಂಗ್ ಪಿಟಿಶನ್ ಗೆ ಯಾಕ್ ಅಪ್ಲೈ ಮಾಡ್ಲಿಲ್ಲ ? ಅಂತ ಏನೇನೋ ಪ್ರಶ್ನೆಗಳು ಬರ್ತಿತ್ತು,- ಪತ್ರಿಕೇಲಿ. ಇಂತಹ ಪ್ರಶ್ನೆಗಳ ಸುರಿಮಳೆಯನ್ನೇ ಹಾಕುತ್ತಿದ್ದ ನನ್ನ ಮಡದಿ ಸರು, ಶೂನ್ಯ ಗುರುತ್ವಾಕರ್ಷಣೆಯ ಸುದ್ದಿಯನ್ನು ಹೆಚ್ಚಿಗೆ ಗಮನಕ್ಕೆ ತೆಗೆದುಕೊಂಡಂತಿಲ್ಲ !
ಅದ್ ನಿಜ, ಸರೂ, ಏನ್ಮಡೋದ್ ಹೇಳು ; ಬ್ರಿಟನ್ ಶ್ರೀಮಂತ್ ದೇಶ ; ಹಾಗೆ ನೀರಿನ್ ತರ್ಹ ಖರ್ಚ್ ಮಾಡಕ್ ಸಾಧ್ಯ ಅವರ್ಗೆ. ನಮಗೆ ಸಾಧ್ಯವೇ ? ಎಂದಾಗ, ಅವಳು "ಹೌದಲ್ವ" ಎಂದು ಹೂಗುಟ್ಟಿದ್ದಳು ಅಷ್ಟೆ !
ಬ್ರಿಟಿಷ್ ಆಸ್ಟ್ರೋ Physics ವಿಜ್ಞಾನಿ, "ಸ್ಟೀಫೆನ್ ವಿಲಿಯಮ್ ಹಾಕಿಂಗ್," CH ; CBE ; FRS; FRSA ; Space ನಲ್ಲಿ ತಮಗಾಗಿ ಸಿದ್ಧಪಡಿಸಿದ ವಿಶೇಷ ವಿಮಾನದಲ್ಲಿ ಹಾರಿ, ತೇಲಾಡಿದ ಆನಂದಕ್ಕೆ ಭಾಗಿಯಾದರು.
೬೫ ವರ್ಷ ಹರೆಯದ ವಿಜ್ಞಾನಿ, Stephen Hawking, Boeing ೭೨೭ ನ ಪ್ರತ್ಯೇಕ ಕ್ಯಾಬಿನ್ ನಲ್ಲಿ, ಸುಮಾರು ೩೨,೦೦೦ ಅಡಿ ಎತ್ತರದಲ್ಲಿ ಹಾರಿದಾಗ, ಅದರ ಕ್ಯಾಪ್ಟನ್ ರೋಲರ್ ಕೋಸ್ಟರ್ ತರಹ, ಮೇಲೆ -ಕೆಳಗೆ, ಅಕ್ಕ -ಪಕ್ಕಗಳಲ್ಲಿ ಬಿರುಸಿನಿಂದ ಹಾರಿಸಿಮಾಡಿದ ಸರ್ಕಸ್ಸಿನಲ್ಲಿ, ಸ್ಟೀಫನ್ ರು ೮ ಬಾರಿ ಪ್ಯಾರಾಬೊಲಗಳನ್ನು ಮಾಡಿಸಿಕೊಂಡು ಸಂತೋಷಪಟ್ಟರು. ಅವರು ಈಗಲೂ Motor Neurone” ಕಾಹಿಲೆಯಿಂದ ನರಳುತ್ತಲೇ ಇದ್ದಾರೆ. ವಿಶ್ವದ ಪ್ರಥಮ Quadriplegic ! ಮಾತಾಡಲಾರದ ಪಕ್ಕಕ್ಕೆ ಸರಿದು ಕುಳಿತುಕೊಳ್ಳಲಾಗ ಸ್ಥಿತಿಯಲ್ಲಿ, ಅವರು ತಮ್ಮ ಜೀವನದ ಅಮೂಲ್ಯ ಸಮಯವನ್ನು’ ವ್ಹೀಲ್ ಕುರ್ಚಿ” ಯಲ್ಲೇ ಕಳೆದರು. ಆದರೆ ಅವರಿಗೆ ಈಗಲೂ ಜೊತೆಯಾಗಿರುವುದು- ಅನುಪಮ ಆತ್ಮಸ್ಥೈರ್ಯ. ತಮ್ಮ ಜೀವನದಲ್ಲಿ ತಾವೇ ಸ್ವಂತವಾಗಿ ಚಲಿಸುವ ಅನುಭವವನ್ನು ಪ್ರಥಮಬಾರಿ ಪಡೆದು, ಅದರ ಆನಂದವನ್ನು ಅನುಭವಿಸಿದರು. ಮಾತಾಡಲೂ ಅಸಮರ್ಥರಾದ ಅವರು, ತಮ್ಮ ಮಿಂಚು ಕಣ್ಣಿಂದ ಅವರಿಗಾದ ಅಮೋಘ ಅನುಭವವನ್ನು ಪ್ರಕಟಿಸಿದ್ದು ಅನನ್ಯವಾಗಿತ್ತು. ತಮ್ಮ ಕಣ್ಣಿನ ಮೇಲಿನ ಹುಬ್ಬನ್ನು ಏರಿಸಿದರೆ "ಹೌದು " ಎಂದೂ, " ಬೇಡ" ಅನ್ನುವಾಗ ಅವರು, ತಮ್ಮ ಬಾಯನ್ನು ಪಕ್ಕಕ್ಕೆ ವಾಲಿಸುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಎಲೆಕ್ಟ್ರಾನಿಕ್ಸ್ ಮುಖಾಂತರ ಹಾರಾಟ ಬಹಳ ಆಹ್ಲಾದದಾಯಕವಾಗಿಯೂ ಅದ್ಭುತವಾಗಿಯೂ ಇತ್ತೆಂದರು. ಸ್ಟೀಫನ್ ಫ್ಲಾರಿಡಾಕ್ಕೆ ಪಾದಾರ್ಪಣೆ ಮಾಡಿದ ದಿನದಿಂದ ಫ್ಲಾರಿಡದ Cape Canaveral ಹಾರಾಟಕೇಂದ್ರದ, ಹೆಸರನ್ನು 'Stephen Hawking Micro Gravity Center ಎಂದು ಬದಲಾಯಿಸಲಾಗಿದೆ !
ಕೇಂಬ್ರಿಡ್ಜ್ ಪ್ರೊಫೆಸರ್, ತಮ್ಮ ಜೀವನದ ೪೦ ವರ್ಷಗಳನ್ನು Wheel Chair ನಲ್ಲಿ ಕುಳಿತು ಮಲಗೋ, ಅಥವಾ ಮಲಗಿ ಕುಳಿತೋ ಕಳೆದಿದ್ದರು. ವ್ಹೀಲ್ ಛೇರ್, ಬಿಟ್ಟು ಕೆಳಗಿಳಿಯಲು ಅವರು ಹರಸಾಹಸ ಮಾಡಿ, ಆಗದೆ ಸೋತಿದ್ದರು. ಬ್ರಿಟಿಶ್ ವೈಜ್ಞಾನಿಕ ಸಮುದಾಯ, ಅವರನ್ನು ಮೊದಲು, ದಾದಿಯರ ಸಹಾಯದಿಂದ, ವ್ಹೀಲ್ ಛೇರಿನಲ್ಲಿ ಕುಳ್ಳಿರಿಸಿಕೊಂಡು ವಿಮಾನದ ಮುಂಭಾಗದ ವರೆಗೂ ತಳ್ಳಿಕೊಂಡೇ ಬಂದರು. ಅವರ ಸಹಾಯಕರು ಅವರ ಸೀಟಿನಿಂದ ಮೇಲೆತ್ತಿ, ಸ್ಟೀಫನ್ ರನ್ನು ಅವರಿಗಾಗಿಯೇ ತಯಾರಿಸಲಾಗಿದ್ದ ವಿಶೇಷ ಫೋಮಿನ ದಿಂಬಿನಮೇಲೆ ಕುಳ್ಳಿರಿಸಿ, ವಿಮಾನದ ಕ್ಯಾಬಿನ್ ನಲ್ಲಿ ಹಾರಾಟಕ್ಕೆ ಅಣಿಮಾಡಿದರು. "ಜಮ್ನಾಸ್ಟಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ಪಡೆಯಲು ಹವಣಿಸುತ್ತಿದ್ದಾರೆ " ನಮ್ಮ ಸ್ಟೀಫೆನ್ ಎಂದು, ಪೀಟರ್ ಡಯಮ್ಯಾಂಡಿಸ್ [CEO] ನಗೆಯಾಡಿದರು. ವಿಮಾನ ಅಟ್ಲಾಂಟಿಕ್ ಸಾಗರದ ಮೇಲೆ ನಿಧಾನವಾಗಿ ಮೇಲೇರ ತೊಡಗಿತು. ೨೮,೦೦೦ ಅಡಿ, ಮತ್ತೆ ೩೨,೦೦೦ ಅಡಿ ಎತ್ತರಕ್ಕೆ ಹೋದಾಗ, ಮೇಲೆ ತಿಳಿಸಿದ ಅದ್ಭುತ ಅನುಭವವನ್ನು ಜೀವನದಲ್ಲಿ ಪ್ರಥಮಬಾರಿ ಪಡೆದು, ಅವರು ಆನಂದತುಂದಿಲರಾದರು.
ಪ್ರೊ. ಹಾಕಿಂಗ್, ಹುಟ್ಟಿದ್ದು ೮ ನೇ ಜನವರಿ, ೧೯೪೨ ರಲ್ಲಿ. ಉತ್ತರ ಲಂಡನ್ ನಲ್ಲಿ. ಗೆಲಿಲಿಯೊ ಮರಣಹೊಂದಿ ೩೦೦ ವರ್ಷಗಳಮೇಲೆ ಮತ್ತೊಬ್ಬ ಪ್ರತಿಭಾವಂತನ ಜನನವಾಯಿತು ! ತಂದೆ, ಫ್ರ್ಯಾಂಕ್ ಹಾಕಿಂಗ್ ; ಅವರು Tropical Diseases ನಲ್ಲಿ ಒಬ್ಬ ಸಂಶೋಧಕ ಬಯಾಲೊಜಿಸ್ಟ್, ಆಗಿ ಕೆಲಸ ಮಾಡುತ್ತಿದ್ದರು. ತಾಯಿ, ಇಸೊಬೆಲ್. ಅವರಿಗೆ ೨ ವರ್ಷ ವಯಸ್ಸಿನ ತಂಗಿ ಮತ್ತು ಒಬ್ಬ ದತ್ತು ಸೋದರರಿದ್ದರು. ಅವರಿಗೆ ೮ ವರ್ಷವಯಸ್ಸಾಗಿದ್ದಾಗಲೇ ಸೇಂಟ್ ಆಲ್ಬನ್ಸ್ ಗೆ ಓದಲು ಹೋದರು. ೨೧ ವರ್ಷದ ಪದವೀಧರ, ಸ್ಟೀಫನ್ ನಿಂತುಕೊಳ್ಳಲು ತೊಂದರೆ ಅನುಭವಿಸುತ್ತಿದ್ದರು. ಸ್ಟೀಫನ್ ತಮ್ಮ ವಿದ್ಯಾಭ್ಯಾಸವನ್ನು ಸೇಂಟ್ ಆಲ್ಬನ್ಸ್, ನಲ್ಲಿ ಯೂನಿವರ್ಸಟಿ ಕಾಲೇಜ್ ಆಕ್ಸ್ ಫಾರ್ಡ್ ನಲ್ಲಿ ೧೯೬೨ ರಲ್ಲಿ ಭೌತ ವಿಜ್ಞಾನದಲ್ಲಿ ಪದವಿ ಪಡೆದರು. ಆಕ್ಸ್ ಫರ್ಡ್ ನಕೆಂಬ್ರಿಡ್ಜ್ ನಲ್ಲೂ ಕಾಸ್ಮಲಜಿ ಮಾಡುವ ಆಸೆ. ಆದ್ರೆ ಯಾರೂ ವಿದ್ಯಾರ್ಥಿಗಳೇ ಇರದೆ ಅವರಿಗೆ ನಿರಾಸೆಯಾಯಿತು. ಪಿ.ಎಚ್.ಡಿ ಮಾಡಿ ಪ್ರಥಮ Research Fellow ಆದರು. Gonville and Caius College ನಲ್ಲಿ Prefessorial Fellow, ೧೯೭೩ ರಲ್ಲಿ Institute of Astronomy ಬಿಟ್ಟರು. Applied Mathematics ಮತ್ತು Department of Physics ಸೇರಿದರು. ೧೯೭೯ ನಲ್ಲಿ prestigious Lucasion Professor, ಆದರು.ಲ್ಲಿ ತಮ್ಮ ವ್ಯಾಸಂಗದ ೩ ನೆ ವರ್ಷದಲ್ಲೇ ಅವರ ಆರೋಗ್ಯ ಹದಗೆಡುತ್ತಾ ಬಂತು. ವಿನಾಕಾರಣ, ಹೋಗುತ್ತಿರುವಂತೆಯೇ ಕಳಗೆ ಆಯತಪ್ಪಿ ಬಿದ್ದುಬಿಡುತ್ತಿದ್ದರು !University College of Oxford ಅವನಿಗೆ ಮಾಥ್ಸ್ ನಲ್ಲಿ ಆಸಕ್ತಿ. ಆದರೆ ತಂದೆಗೆ ಅವರು ಡಾಕ್ಟರ್ ಆಗಲು ಹಂಬಲ. ಅದೂ ಅಲ್ಲದೆ ಯೂನಿವರ್ಸಿಟಿ ಕಾಲೇಜುಗಳಲ್ಲಿ ’ಮ್ಯಾಥ್ಸ್” ಓದಲು ಆಗ ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಹೇಳಿಕೊಡುವವರೂ ಇಲ್ಲ. ಆದ್ದರಿಂದ ಭೌತಶಾಸ್ತ್ರ ತೆಗೆದುಕೊಂಡು ಓದಿಮುಗಿಸಿದರು. ೩ ವರ್ಷಗಳಲ್ಲೇ ಪ್ರಥಮ ಶ್ರೇಣಿಯಲ್ಲಿ ಬಿ ಎ. [Natural Science] ಪಾಸ್ ಮಾಡಿದರು. ಡಾಕ್ಟರ್ ಗಳು ಅವರಿಗೆ ALS : Amyotrophic Laterlal Sclerosis ಕಾಹಿಲೆಯಿದೆತೆಂದೂ ಮತ್ತು ಏನಿದ್ದರೂ ೨ ವರ್ಷಗಳಿಗಿಂತ ಹೆಚ್ಚಿಗೆ ಜೀವಿಸಲಾರರೆಂದು ವರದಿಮಾಡಿದರು. ಅವರನ್ನು ಒಂದು ವಿದ್ಯುತ್ ಚಾಲಿತ ವ್ಹೀಲ್ ಛೇರ್ ನಲ್ಲಿ ಕೂಡಿಸಲಾಯಿತು. ಬಾಯಿ ಆಡಿದರೂ ಸ್ವರ ಬರುತ್ತಿರಲಿಲ್ಲ. ಬೇರೆಯವರಿಗೆ ಕೇಳಿಸಲಾರದಷ್ಟು ಕ್ಷೀಣ ಸ್ವರದಲ್ಲಿ ಅವರು ಸನ್ನೆಮಾಡಿ ಹೇಳುತ್ತಿದ್ದರು. ಆದರೆ ಸ್ಟೀಫನ್ ರ ಸ್ಥಿತಿ, ಅದೇ ಕಾಹಿಲೆಯಿಂದ ನರಳುತ್ತಿದ್ದ ಬೇರೆ ರೋಗಿಗಳಿಗಿಂತ ನಿಧಾನವಾಗಿತ್ತು. ಮುಂದೆ ಇನ್ನೊಂದು ವಿಪತ್ತು ಅವರಿಗೆ ಕಾದಿತ್ತು. ನ್ಯುಮೋನಿಯದಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಅವರಿಗೆ Tracheotomy ಶಸ್ತ್ರಚಿಕೆತ್ಸೆ ಮಾಡುವುದು ಅನಿವಾರ್ಯವಾಯಿತು. ಅದಾದಮೇಲೆ, ಮಾತಾಡುವ ಪರಿಪಾಠ ನಿಂತೇಹೋಯಿತು !
ಅವರಿಗೆ ಸಹಾಯಮಾಡಲು, ಒಂದು ಪ್ರೋಗ್ರಾಮರ್ ನ್ನು ಜೋಡಿಸಿಕೊಟ್ಟರು. ಅದನ್ನು Equalizer ಎನ್ನುತ್ತಾರೆ. ಅದಕ್ಕೆ ಒಂದು ಗುಂಡಿ ಇದೆ. ಅದನ್ನು ಒತ್ತಿ, ಒಂದು Personal Computer ಸಹಾಯದಿಂದ, ತಮ್ಮ ಭಾಷಣವನ್ನು ತಯಾರಿಸಿ ಅದನ್ನು ಜರ್ನಲ್ಸ್ ಮತ್ತು ಪುಸ್ತಕಗಳಲ್ಲಿ ಮುದ್ರಿಸುವಷ್ಟು ಉಪಯುಕ್ತತೆಯನ್ನು, ಆ ಈಕ್ವಲೈಸರ್ ಪಡೆಯಿತು. ಅವರು ಮತ್ತೆ ಕೇಂಬ್ರಿಡ್ಜ್ ನಲ್ಲಿ ಪಿ. ಎಚ್. ಡಿ ವಿದ್ಯಾರ್ಥಿಯಾಗಿ ಭರ್ತಿಯದರು. ತಮ್ಮ ಸಂಶೋಧನೆಗಳನ್ನು, ಅಪ್ಲೈಡ್ ಮ್ಯಾಥೆಮ್ಯಾಟಿಕ್ಸ್ ಮತ್ತು ಥಿಯರೆಟಿಕಲ್ ಫಿಸಿಕ್ಸ್ ನಲ್ಲಿ ಮುಂದುವರೆಸಿದರು. ೧೯೭೯ ನಲ್ಲಿ ಮ್ಯಾಥೆಮ್ಯಾಟೆಕ್ಸ್ ನಲ್ಲಿ 'ಲ್ಯುಕೇಶಿಯನ್ ಪ್ರೊಫೆಸರ್,' ಆಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡರು. ಇದರ Chair ನ್ನು ೧೬೬೩ ರಲ್ಲಿ ಹುಟ್ಟುಹಾಕಿದ್ದರು. ಈ ಪದವಿಯನ್ನು ಒಂದು ಕಾಲದಲ್ಲಿ, ಸರ್ ಐಸಾಕ್ ನ್ಯೂಟನ್ ನಂತಹ ಶ್ರೇಷ್ಟ ವಿಜ್ಞಾನಿಗಳು ಪಡೆದಿದ್ದರು. ೧೯೮೮ ರಲ್ಲಿ ಅವರು ಬರೆದ ಅತ್ಯಂತ ಪ್ರಸಿದ್ಧ ಪುಸ್ತಕ, 'ಎ ಬ್ರಿಫ್ ಹಿಸ್ಟರಿ ಆಫ್ ಟೈಮ್,' ವಿಶ್ವ ಮನ್ನಣೆ ಪಡೆದಿದ್ದಲ್ಲದೆ, ಇಂದಿಗೂ ಅದರ ಪ್ರತಿಗಳು ಬಿರುಸಿನಿಂದ ಖರ್ಚಾಗುತ್ತಿವೆ. 'The Origin and the Future of the Universe, ' ೨೦೦೨ ಬರೆದು ಸಿದ್ಧಪಡಿಸಿದರು. The non Linear Sequel , Universe in a Nutshel , BBC, Series on Cosmology' Production ಗೆ, ಸಹಾಯಕವಾಯಿತು. ಜೂನ್ ೨೦೦೨ ರಲ್ಲಿ ತಮ್ಮ ೬೦ ನೇವರ್ಷದ ಹುಟ್ಟುಹಬ್ಬದ ದಿನದಂದು University of Cambridge ನಲ್ಲಿ ಪ್ರಾರಂಭಿಸಿದರು.
೨೦೦೭ ರ ಜನವರಿಯಲ್ಲಿ ಅವರು ತಮ್ಮ ೬೫ ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸ್ಟೀಫನ್ ವಿಲಿಯಮ್ ಹಾಕಿಂಗ್ ರ ಜೀವನ, ಮತ್ತು ಅವರ "ಶೂನ್ಯ ಗುರುತ್ವಾಕರ್ಷಣೆಯಲ್ಲಿ ಮಾಡಿದ ತೇಲಾಟ, ಹಾರಾಟ, " ೨೧ ನೆಯ ಶತಮಾನದ ಅದ್ಭುತ ಸನ್ನಿವೇಶಗಳಲ್ಲೊಂದು ಎಂದು ಕೆಲವರ ಅಭಿಪ್ರಾಯ ! ಇದನ್ನು ಹೀಗೆ ವಿವರಿಸಬಹುದು :
೧) ಮೊದಲನೆಯದಾಗಿ ಹಾಕಿನ್ ತಮ್ಮ ದೇಹಕ್ಕಾದ ಸಂಪೂರ್ಣ ವಿಕಲಾಂಗತ್ವವನ್ನು, ತಲೆಗೆ ಅತಿಯಾಗಿ ತೆಗೆದುಕೊಳ್ಳದೆ, ಅತ್ಯಂತ ಜೀವನೋತ್ಸಾಹದ ಚಿಲುಮೆಯಾಗಿ ೪ ದಶಕಗಳನ್ನು ಅಂತಹ ಹೃದಯವಿದ್ರಾವಕವಾದ ಸನ್ನಿವೇಷದಲ್ಲೂ ಕಳ-ಕಳಿಯಿಂದ ಕಳೆಯುತ್ತಿರುವುದು !
೨) ಇನ್ನೊಂದು, ವೈಜ್ಞಾನ ತಂತ್ರಜ್ಞಾನದ ಪರಮೋಚ್ಚ ಸನ್ನಿವೇಶವನ್ನು ಬ್ರಿಟಿಶ್ ವೈಜ್ಞಾನಿಕ ಸಮುದಾಯ, ಅವರಿಗೆ ಕಲ್ಪಿಸಿಕೊಟ್ಟು ಅವರ ಅನುಭವಜ್ಞಾನದ ಉಪಯೋಗವನ್ನು ಪಡೆದಿರುವುದು. ವಿಜ್ಞಾನದ ಸಾಧನೆಯ ನೈಜ ದರ್ಶನಕ್ಕೆ, ನಾವು ಸ್ಟೀಫನ್ ರನ್ನು ಅಭಿನಂದಿಸಬೇಕು.
೨೧ ನೆಯ ಶತಮಾನದ ವೈಜ್ಞಾನಿಕ ಸಾಧನೆಗಳಲ್ಲಿ ಸ್ಟೀಫನ್ ಹಾಕಿಂಗ್ ರ ಜೀವನವೇ ಒಂದು ಅತಿ ದೊಡ್ಡ ಸಾಧನೆಯೆಂದು ಪರಿಗಣಿಸಲಾಗಿದೆ. ಸ್ಪೇಸ್ ನಲ್ಲಿ ಶೂನ್ಯ ಗುರುತ್ವಾಕರ್ಷಣೆಯನ್ನು ಅನುಭವಿಸಲು ಹಾತೊರೆದರೂ ಸಿಗದ ಅವಕಾಶವನ್ನು, ಬ್ರಿಟಿಶ್ ಜನತೆ, ಅವರಿಗೆ ಮಾಡಿಕೊಟ್ಟಿತ್ತು. ಮಾನವೀಯತೆಯ ನೈಜ ಪ್ರದರ್ಶಕ್ಕೆ ಇದು ಜೀವಂತ ಉದಾಹರಣೆಯಲ್ಲದೆ ಮತ್ತೇನು ?
ಅವರು ಮಾಡಿದ ಅದ್ಭುತ ವಿಜ್ಞಾನದ ಸಂಶೋಧನೆಗಳು :
೧. Black Holes ,
೨. Origin of Universe [' Theoritical Physics ] ನಲ್ಲಿ ಒಳ್ಳೆಯ ಹೆಸರುಮಾಡಿದ ವಿಜ್ಞಾನಿ.
ಪ್ರಕಟಿಸಿದ ಪುಸ್ತಕಗಳು :
೧.'A Brief History of Time'
೨. Black holes and Baby Universes and other Essays.
ಪದವಿ ಮತ್ತು ಗೌರವ ಪ್ರಶಸ್ತಿಗಳು :
೧) ೧೯೬೨ ರಲ್ಲಿ B. A ;
೨) ೧೩ International Awardes.
೩) ೧೧, ಗೌರವ Doctorates ಗಳು.
Jane Wilde ಎಂಬ, ಭಾಷಾ ಶಾಸ್ತ್ರದ ವಿದ್ಯಾರ್ಥಿನಿಯನ್ನು, ಮದುವೆಯಾದಾಗ ಅವರಿಗೆ ೨೫ ವರ್ಷ. ಆ ಮದುವೆಯಿಂದ ೩ ಮಕ್ಕಳನ್ನು ಪಡೆದರು. ೧೯೯೧ ರಲ್ಲಿ ಆ ಮದುವೆ ಕೊನೆಗೊಂಡಿತು.
೧೯೯೫ ರಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ದಾದಿ, Elaine Mason ಜೊತೆ ಮದುವೆ. ೨೦೦೬ ಅಕ್ಟೋಬರ್ ನಲ್ಲಿ ಕೊನೆಗೊಂಡಿತು. ಕೇಂಬ್ರಿಡ್ಜ್ ನಲ್ಲಿ " Birthday Lecture Series " ಅನ್ನು ಪ್ರಾರಂಭಿಸಿದರು.
೧೯೮೨ ರಲ್ಲಿ ದೊರೆತ CBE ; ೧೯೮೯ ರಲ್ಲಿ ದೊರೆತ Companion of Honour , ಮತ್ತು ಅನೇಕ ಮೆಡಲ್ ಮತ್ತು ಗೌರವಗಳಿಗೆ ಹಕ್ಕುದಾರರಾಗಿದ್ದು, 'Fellow of Royal Society,' ಪದವಿ, ಅತಿ ಚಿಕ್ಕವಯಸ್ಸಿನಲ್ಲಿಯೇ ದೊರೆಯಿತು. Member of the U S National Acedamy of Sciences . ಅವರ ಮಕ್ಕಳು ೩ ಜನ. ಒಂದು ಮೊಮ್ಮಗು. ಭೌತಶಾಸ್ತ್ರದಲ್ಲಿ ಸಂಶೋಧನೆ, ಮತ್ತು ಸಾರ್ವಜನಿಕ ಭಾಷಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪ್ರವಾಸ- ಹೀಗೆ ಅವರಿಗೆ ಬಿಡುವಿಲ್ಲದ ದೈನಂದಿಕ ಕೆಲಸ ಕಾರ್ಯಗಳು.
ಪ್ರೊಫೆಸರ್ ಸ್ಟೀಫನ್ ವಿಲಿಯಮ್ಸ್ ಹಾಕಿಂಗ್, ರು ಮತ್ತು ಅವರ ಜೊತೆ ಕೆಲಸಮಾಡಿದ ಗೆಳೆಯರು ಪ್ರಕಟಿಸಿದ ಸಂಶೋಧನಾ ಪ್ರಕಟಣೆಗಳ ವಿವರವನ್ನು ಓದಿದವರು, ಸ್ವಲ್ಪ ಹೊತ್ತು ಸ್ತಬ್ಧರಾಗುವುದು, ಅಥವಾ ಮೂಕವಿಸ್ಮಿತರಾಗುವುದು ಸಹಜ. ಏಕೆಂದರೆ ಕುಳಿತಲ್ಲೇ ಅವರು ಮಾಡಿರುವ ಸಾಧನೆಗಳು ಎಂತಹವರನ್ನೂ ಮೂಕರನ್ನಾಗಿಸುತ್ತದೆ ; ದಂಗುಬಡಿಸುತ್ತವೆ !
ಒಂದು ಚಿಕ್ಕ ಉದಾಹರಣೆ ಅದನ್ನು ಸಾದರ ಪಡಿಸುತ್ತದೆ.
೧ ರಿಂದ ೧೮೪ ವಿಷಯಗಳನ್ನು ದಾಖಲು ಮಾಡಿದ ೧೪ ಪುಟಗಳಲ್ಲಿ ವಿಶ್ವದ ಪ್ರಮುಖ ವೈಜ್ಞಾನಿಕ ಅಂಶಗಳಮೇಲೆ ಸಂಶೋಧನೆಯನ್ನು ನಡೆಸಿದ ವಿಶೇಷ ಲೇಖನಗಳ ವಿವರಗಳಿವೆ :
೧. On the Hoyle - Narlikar Theory of Gravitation-Proceedings. Royal
Society. A ೨೮೬. ೩೧೩.
[೧೯೬೫] ಒಟ್ಟು ೧೪ ಪುಟಗಳಲ್ಲಿ ದಾಖಲಾಗಿದೆ.
೧೮೪. ADS, CFT And Cosmology, Clay Mathematics Proceedings Vol. 1
[Nov, 26, 2002]
ಸ್ಟೀಫನ್ ಹಾಕಿಂಗ್ ರ ಮಗಳು, ಲ್ಯೂಸಿ ಹಾಕಿಂಗ್, ಕಾದಂಬರಿಗಾರ್ತಿ; ರಾಬರ್ಟ್ ಮಗ ; ಅಮೆರಿಕಾದಲ್ಲಿ ನೆಲೆಸಿದ್ದಾನೆ. ಅವನಿಗೆ ಮದುವೆಯಾಗಿ ಒಂದು ಮಗುವಿದೆ.
ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಯ ಅತ್ಯಂತ ಅದೃಷ್ಟಶಾಲಿ ವಿಜ್ಞಾನಿ ಸ್ಟೀವೆನ್. ಬ್ರಿಟನ್ ನಂತಹ ಸ್ಥಳದಲ್ಲಿ, ಜನ್ಮಿಸಿ ಕೃತಕೃತ್ಯರಾದರು.
ಅವರು ೧೯೮೮ ರಲ್ಲಿ ರಚಿಸಿದ ಪುಸ್ತಕ, " A Breif History of Time "
[ ಟೈಮ್], Sunday Times ಪತ್ರಿಕೆಯ Best seller ಲಿಸ್ಟ್ ನಲ್ಲಿ ಸತತವಾಗಿ ೨೩೭ ವಾರ ಬೆಳಕುಕಂಡ ಪುಸ್ತಕವೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಸ್ಟೀಫನ್ ಸ್ಪೇಸ್ ನಲ್ಲಿ ಜಿಗಿದ ವಿಚಾರ ಬಹಳ ಪ್ರಮುಖ ಸುದ್ದಿಗಳಲ್ಲೊಂದು ! MSNBC ವರದಿ ಪ್ರಕಾರ, ೮ ಬಾರಿ ಮಾಡಿದರು. ಏಪ್ರಿಲ್, ೨೬, ೨೦೦೭ ರಂದು ನಿಜವಾಗಿಯೂ ಅದ್ಭುತವಾಗಿತ್ತು. ಮತ್ತೆ ನನಗೆ ಯಾವತೊಂದರೆಯೂ ಆಗಲಿಲ್ಲ. ನನಗೆ ಇನ್ನೂ, ಮತ್ತೂ ಮಾಡುವ ಆಸೆ ಇತ್ತು. ಓ ಸ್ಪೇಸ್, ಇಲ್ಲಿದ್ದೇನೆ, ನಾನು ! ' ಎನ್ನುವ ಸ್ಟೀಫನ್ನ ರ ಜೀವನೋತ್ಸಾಹಕ್ಕೆ ಬಿಲಿಯನ್ ನಮಸ್ಕಾರಗಳು. ’ ನಾನು ಬಹುದಿಗಳಿಂದ ಕಾದು ಎದುರುನೋಡುತ್ತಿದ್ದ ಶೂನ್ಯ ಗುರುತ್ವಾಕರ್ಷಣೆಯ ತೇಲುವಾಟ ವಿದು ! ಇದು Space Travel ನಲ್ಲಿ, ನನ್ನ ಮೊದಲ ಹೆಜ್ಜೆ,’ ಎಂದು ವಿಮಾನದಲ್ಲಿ ಪ್ರಯಾಣಿಸುವ ಮೊದಲು ಉದ್ಗರಿಸಿದ್ದರು. ಈ ಯಾನದಿಂದ Corporation ೧,೫೦,೦೦೦ ಡಾಲರ್ ಹಣವನ್ನು ಸಂಗ್ರಹಿಸಲಾಯಿತು. ಈ ಹಣವನ್ನು ಸ್ಪೇಸ್ ಯಾನಕ್ಕೆ ಬೇಕಾಗುವ ಆವಶ್ಯಕತೆಗಳ ಪೂರೈಕೆಗೆ ಉಪಯೋಗಮಾಡುತ್ತೇವೆ, ಎಂದು ಅದರ ಅಧ್ಯಕ್ಷರು ಹೇಳಿದರು. ಇದು ಸ್ಟೀಫನ್ ರ ಜೀವನದ ಒಂದು ’ದೊಡ್ಡ ಜಿಗಿತ” ಎಂದು ಅವರು ವರ್ಣಿಸಿದರು. ೧೯೮೨ ಮಗಳನ್ನು ಸ್ಕೂಲಿಗೆ ಕಳಿಸಲು ಹಣದ ಅವಶ್ಯಕತೆ ಹೆಚ್ಚಾಗಿತ್ತು. ಅದಕ್ಕಾಗಿ ಅವರು ಬರೆದ ಪುಸ್ತಕ : A brief History of Time, ' 'From Big bang to Black hole'. ೮ ಮಿಲಿಯನ್ ಕಾಪಿಗಳು ಖರ್ಚಾಯಿತು.
ಸ್ಟೀಫೆನ್ ಹಾಕಿಂಗ್ ಮಾಡುವುದೆಲ್ಲ ಒಂದು ತರಹ ಭಿನ್ನವಾದದ್ದು. ಅವರ ಆಫೀಸಿನ ಪ್ರಮುಖ ದ್ವಾರದ ಮುಂದೆ, ದಿವಂಗತ ಅಮೆರಿಕನ್ ಹಾಲಿವುಡ್ ತಾರೆ, ಮರ್ಲಿನ್ ಮನ್ರೋಳ ಅವಳೆತ್ತರದ ಭಾರಿ ಚಿತ್ರವನ್ನು ತೂಗು ಹಾಕಿದ್ದಾರೆ.
೧೯೯೯ ರಲ್ಲಿ, Larry king show ತನ್ನ CNN-TV ಸಂದರ್ಶನ ಮಾಡಿದರು- ಅದು ಕ್ರಿಸ್ಮಸ್ ದಿನದಂದು !
- ’Daily Mail, ’ ಮತ್ತು ’MSNBC,” Online , 'Real lives' ಪತ್ರಿಕೆಗಳ ವರದಿಗಳಿಂದ.

- Login or register to post comments
- 441 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಬ್ರಿಟನ್ನಿನ ಖ್ಯಾತ ಆಸ್ಟ್ರೋ ಫಿಸಿಸ್ಟ್, ಸ್ಟೀಫನ್ ವಿಲಿಯಮ್ ಹಾಕಿಂಗ್ ’೦’ ಗ್ರಾವಿಟಿಯಲ್ಲಿ ಹಾರಿ, ತೇಲಿ ನಲಿದರು !
ಸ್ಟೀಫನ್ ಹಾಕಿಂಗ್ ಅವರ ಜೀವನೋತ್ಸಾಹ ಅದ್ಭುತ!