ಡಾ. ಸ್ಟೀಫನ್ ವಿಲಿಯಮ್ ಹಾಕಿಂಗ್, ಹೀಗೂ ಇದ್ದರು !

ವಿಧಿಯ ಮಾಯೆಯನ್ನು ಬಣ್ಣಿಸಲು ಸಾಧ್ಯವೆ ? ವಿಶ್ವದ ಜನ, ಸ್ಟೀಫನ್ ರನ್ನು ಕಂಡಿರುವುದು ಅವರ ವ್ಹೀಲ್ ಛೇರ್ ನಲ್ಲಿ ಕುಳಿತು, ಮುಖವನ್ನು ಪಕ್ಕಕ್ಕೆ ವಾಲಿಸಿ, ’ಕ್ಷೀಣ ನಗೆ” ಬೀರುವ ಅಸಹಾಯಕ ಸ್ಥಿತಿಯಲ್ಲಿ ! ಆದರೆ ತಮ್ಮ ೨೫ ವರ್ಷಗಳ ತನಕ, ಅವರು ಹೀಗಿರಲಿಲ್ಲ. ೨೧ ನೇ ವರ್ಷದ ಹುಟ್ಟುಹಬ್ಬದ ನಂತರ ಅವರ ಆರೋಗ್ಯದಲ್ಲಿ ಸ್ವಲ್ಪ ಎರು-ಪೇರುಗಳಾದವು. ’ ನ್ಯೂಮೋನಿಯ ಜ್ವರ” ಉಲ್ಬಣಿಸಿ, ಅವರಿಗೆ ತೀವ್ರವಾದ ತೊಂದರೆ ಕೊಟ್ಟಿತು.
ಅವರೂ ಒಬ್ಬ ಹುಡುಗಿಯನ್ನು ಮನಸಾರೆ ಪ್ರೀತಿಸಿದ್ದರು. ಸಾಹಿತ್ಯಾಭಿಲಾಷಿ ವಿದ್ಯಾರ್ಥಿನಿಯಾದ ಅವಳ ಹೆಸರು ’ಜೇನ್ ವಿಲ್ಡ್ ’ಎಂದು. ಅವರಿಬ್ಬರಿಗೂ ಸಂತಾನ ಪ್ರಾಪ್ತಿಯೂ ಆಯಿತು. ಆದರೆ ಮುಂದೆ ಸ್ಟೀಫನ್ ಕುರ್ಚಿ ಹತ್ತಿ ಕುಳಿತವರು ಮೇಲೆ ಏಳಲೇ ಇಲ್ಲ. ಇಂದಿಗೂ ಅದೇ ಸ್ಥಿತಿ. ಹಾರಿದರು... ತೇಲಿದರು...ಅದೆಲ್ಲಾ ಶೂನ್ಯ ಗುರುತ್ವಾಕರ್ಷಣೆಯ ವಲಯದಲ್ಲಿ ! ಅದೆಲ್ಲಾ ಮಾಡಿದ್ದು -ಅವರ ಆಪ್ತ ಗೆಳೆಯರ, ಹಿತೈಷಿಗಳ ನೆರವಿನಿಂದ.
ಪ್ರೊ. ಸ್ಟೀಫನ್ ವಿಲಿಯಂ ಹಾಕಿಂಗ್ , ವಿಶ್ವದ ಓರ್ವ ಸುಪ್ರಸಿದ್ಧ ಆಸ್ಟ್ರೋ ಫಿಸಿಕ್ಸ್ ವಿಜ್ಞಾನಿಗಳಾಗಿ ವಿಶ್ವಕ್ಕೆ ಒಂದು ಮಾದರಿಯಾಗಿದ್ದಾರೆ. ಇತಿಹಾಸದ ಪುಟಗಳಲ್ಲಿ ತಮಗಾಗಿಯೇ ಒಂದು ಮಹತ್ತರಸ್ಥಾನವನ್ನು ಮಾಡಿಟ್ಟಿದ್ದಾರೆ.
ಇವತ್ತೂ, ಅವರಿಗಿರುವಷ್ಟು ಜೀವನೋಲ್ಲಾಸ ನಮಗಿದ್ದರೆ ಏನೆಲ್ಲಾ ಸಾಧಿಸಬಹುದು !
-ಫೋಟೊ- ಅವರ ಜೀವನದ ಪುಟಗಳಿಂದ.

- Login or register to post comments
- 367 hits
- Email this image
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಬ್ರಿಟನ್ನಿನ ಖ್ಯಾತ ಆಸ್ಟ್ರೋ ಫಿಸಿಸ್ಟ್, ಸ್ಟೀಫನ್ ವಿಲಿಯಮ್ ಹಾಕಿಂಗ್, ’೦’ ಗ್ರಾವಿಟಿಯಲ್ಲಿ ಹಾರಿ, ತೇಲಿ ನಲಿದರು !
- ಹತ್ತಿ ಬೀಜವನ್ನು ಬಿತ್ತಿದ ಮೇಲೆ ವಾರಗಳಲ್ಲಿ ಹತ್ತಿ ಹೂವು ಕಾಟಿಸಿಕೊಳ್ಳುತ್ತದೆ ನಂತರ ಕಾಯಿ ; ಮತ್ತೆ ಅದು ಒಣಗಿ ಬಿರಿದು ಶುಭ್ರ ಹತ್ತಿ, ತಯಾರು !
- ೧೯೪೮ ರ ಮುಂಬೈ ಮಾನ್ಸೂನ್ ಪರಿಸ್ಥಿತಿ !
- ನೆನ್ನೆ ನಡೆದ ಬ್ರೆಸಿಲ್ ವಿರುಧ್ದ ಜಪಾನ್ ಮ್ಯಾಚಿನಲ್ಲಿ, (೪-೧) ಭರ್ಜರಿ ಜಯ : ರೋನೋಲ್ಡೋ ಪುನಃ ಅಗ್ರಸ್ಥಾನದಲ್ಲಿ !
- ವಿಶ್ವದ ಅತ್ಯಂತ ಉತ್ಕೃಷ್ಟವಾದ ಹತ್ತಿ- ಸೀ ಐಲೆಂಡ್ ಹತ್ತಿ ; ವಿಶ್ವದ ಹತ್ತಿ ಗುಣವನ್ನು ಸುಧಾರಿಸುವ ದಿಕ್ಕಿನಲ್ಲಿ ಇದರದು ಅಮೂಲ್ಯ ಕೊಡುಗೆ


RSS: